ವೀಡಿಯೊ..| ಅರಬ್ಬಿ ಸಮುದ್ರದಲ್ಲಿ ಕಡಲ್ಗಳ್ಳರಿಂದ 23 ಪಾಕಿಸ್ತಾನಿಗಳನ್ನು ರಕ್ಷಿಸಿದ ಭಾರತದ ನೌಕಾಪಡೆ : ‘ಇಂಡಿಯಾ ಜಿಂದಾಬಾದ್’ ಘೋಷಣೆ ಕೂಗಿದ ಪಾಕಿಸ್ತಾನಿಗಳು | ವೀಕ್ಷಿಸಿ

ಕಡಲ್ಗಳ್ಳರಿಂದ ತಮ್ಮ ಮೀನುಗಾರಿಕಾ ಹಡಗಿನ ಅಪಹರಣ ಯತ್ನದ ನಂತರ ಶುಕ್ರವಾರ ಭಾರತೀಯ ನೌಕಾಪಡೆಯಿಂದ ರಕ್ಷಿಸಲ್ಪಟ್ಟ 23 ಪಾಕಿಸ್ತಾನಿ ಪ್ರಜೆಗಳನ್ನು ಒಳಗೊಂಡ ಹಡಗಿನ ಸಿಬ್ಬಂದಿ ನೌಕಾಪಡೆಗೆ ಧನ್ಯವಾದಗಳನ್ನು ಅರ್ಪಿಸಿದ್ದಾರೆ ಮತ್ತು ‘ಇಂಡಿಯಾ ಜಿಂದಾಬಾದ್’ ಎಂಬ ಘೋಷಣೆಗಳನ್ನು ಕೂಗಿದ್ದಾರೆ. ಭಾರತೀಯ ನೌಕಾಪಡೆಯ ವಿಶೇಷ ತಂಡವು ಪಾಕಿಸ್ತಾನಿ ಪ್ರಜೆಗಳನ್ನು ಒಂಬತ್ತು ಶಸ್ತ್ರಸಜ್ಜಿತ ಕಡಲ್ಗಳ್ಳರಿಂದ ರಕ್ಷಿಸಿತು ಮತ್ತು ಅಲ್-ಕಮರ್ ಎಂಬ ಮೀನುಗಾರಿಕಾ … Continued

ವೀಡಿಯೊ….| ಕುಮಟಾ : ಕಡ್ಲೆಯ ಸಮುದ್ರ ತೀರದಲ್ಲಿ ಬೃಹತ್‌ ಆಮೆ ಕಳೇಬರ ಪತ್ತೆ

ಕುಮಟಾ : ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಹೊಲನ ಗದ್ದೆಯ ಕಡ್ಲೆಯ ಅರಬ್ಬಿ ಸಮುದ್ರ ತೀರದಲ್ಲಿ ಆಲಿವರ್ ರಿಡ್ಲೆ ತಳಿಯ ಬೃಹತ್‌ ಆಮೆಯ ಕಳೇಬರ ಪತ್ತೆಯಾಗಿದೆ. ಆಮೆಯು ಮೂರು ಅಡಿಗಿಂತ ಹೆಚ್ಚು ( 96 ಸೆಂಮೀ) ಉದ್ದವಿದೆ. ಇದರ ವಯಸ್ಸು 30 ರಿಂದ 40 ವರ್ಷ ಆಗಿರಬಹುದು. ಈ ಜಾತಿಯ ಬೃಹತ್‌ ಆಮೆಗಳು ಸಾಮಾನ್ಯವಾಗಿ … Continued

ಶಿರೂರು : ಸಮುದ್ರದಲ್ಲಿ ಮಗುಚಿದ ದೋಣಿ, ಇಬ್ಬರು ಮೀನುಗಾರರು ಸಾವು

ಉಡುಪಿ: ಮೀನುಗಾರಿಕೆಗೆ ತೆರಳಿ ವಾಪಾಸ್ಸು ಬರುವ ವೇಳೆ ದೋಣಿ ಮಗುಚಿ ಇಬ್ಬರು ಮೀನುಗಾರರು ಪ್ರಾಣ ಕಳೆದುಕೊಂಡ ಘಟನೆ ಬೈಂಂದೂರು ತಾಲೂಕು ಶಿರೂರು ಕಳುವಿತ್ಲುವಿನಲ್ಲಿ ನಡೆದಿದೆ. ಮೃತರನ್ನು ಶಿರೂರಿನ ಹಡವಿನಕೋಣೆಯ ನನ್ನು ಅಬ್ಸುಲ್ ಸತ್ತರ್ (45 ) ಹಾಗೂ ಕುದ್ವಾಯಿ ರೋಡ್‌ ಭಟ್ಕಳದ ಮಿಸ್ಬಾ ಯೂಸುಫ್ (48) ಎಂದು ಗುರುತಿಸಲಾಗಿದೆ. ಭಾನುವಾರ ರಾತ್ರಿ 10 ಗಂಟೆಗೆ ಶಿರೂರು … Continued

ಭಾರತದ ಅಕ್ಕಪಕ್ಕದ ಸಮುದ್ರದಲ್ಲಿ ರೂಪುಗೊಳ್ಳಲಿದೆ ಅವಳಿ ಚಂಡಮಾರುತಗಳು : ಐಎಂಡಿ

ನವದೆಹಲಿ: ಹವಾಮಾನ ತಜ್ಞರು ಅರಬ್ಬಿ ಸಮುದ್ರ ಮತ್ತು ಬಂಗಾಳ ಕೊಲ್ಲಿಯಲ್ಲಿ ಅವಳಿ ಚಂಡಮಾರುತಗಳ ರಚನೆಯನ್ನು ಊಹಿಸಿದ್ದಾರೆ, ಈ ಹಿಂದೆ 2018 ರಲ್ಲಿ ಅಪರೂಪದ ವಿದ್ಯಮಾನ ಸಂಭವಿಸಿತ್ತು. ‘ತೇಜ್’ ಚಂಡಮಾರುತವು ಅರೇಬಿಯನ್ ಸಮುದ್ರದಲ್ಲಿ ತೀವ್ರ ಚಂಡಮಾರುತವಾಗಿ ಬದಲಾಗಲಿದೆ, ಇದೇ ವೇಳೆ ‘ಹಾಮೂನ್’ ಚಂಡಮಾರುತ ‘ಬಂಗಾಳ ಕೊಲ್ಲಿಯಲ್ಲಿ ಅಕಾಲಿಕ ಹಂತದಲ್ಲಿದೆ. ನೈಋತ್ಯ ಅರಬ್ಬಿ ಸಮುದ್ರದಲ್ಲಿ ರೂಪುಗೊಂಡಿರುವ ‘ತೇಜ್’ ಚಂಡಮಾರುತ … Continued

ಅರಬ್ಬಿ ಸಮುದ್ರದಲ್ಲಿ ಅಬ್ಬರಿಸಲಿದೆ ‘ತೇಜ್’ ಚಂಡಮಾರುತ : ಇದರಿಂದ ಭಾರತಕ್ಕೇನು ತೊಂದರೆ ?

ನವದೆಹಲಿ : ಅರಬ್ಬಿ ಸಮುದ್ರದಲ್ಲಿ ಈ ವರ್ಷದ 2ನೇ ಚಂಡ ಮಾರುತ ಅಬ್ಬರಿಸಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಅರಬ್ಬಿ ಸಮುದ್ರದ ನೈರುತ್ಯ ಹಾಗೂ ಆಗ್ನೇಯ ಭಾಗಗಳಲ್ಲಿ ಶುರುವಾಗಿರುವ ಈ ಚಂಡಮಾರುತಕ್ಕೆ ‘ತೇಜ್’ ಎಂದು ಹೆಸರಿಡಲಾಗಿದೆ. ಅರಬ್ಬಿ ಸಮುದ್ರದ ನೈರುತ್ಯ ಹಾಗೂ ಆಗ್ನೇಯ ಭಾಗಗಳಲ್ಲಿ ವಾಯುಭಾರ ಕುಸಿತ ಉಂಟಾದ ಹಿನ್ನೆಲೆಯಲ್ಲಿ ಈ ಚಂಡಮಾರುತ ಸೃಷ್ಟಿಯಾಗಿದೆ. … Continued

ಗೋಕರ್ಣ : ಸಮುದ್ರದಲ್ಲಿ ಮುಳುಗುತ್ತಿದ್ದ 8 ಜನರ ರಕ್ಷಣೆ

ಗೋಕರ್ಣ: ಸಮುದ್ರದಲ್ಲಿ ಮುಳುಗುತ್ತಿದ್ದ ಒಂದೇ ಕುಟುಂಬದ 7 ಜನ ಸೇರಿದಂತೆ ಒಟ್ಟು 8 ಜನ ಪ್ರವಾಸಿಗರನ್ನು ಜೀವ ರಕ್ಷಕ ಪಡೆ ಸಿಬ್ಬಂದಿ ರಕ್ಷಣೆ ಮಾಡಿದ ವಿದ್ಯಮಾನ ಉತ್ತರಕನ್ನಡ ಜಿಲ್ಲೆಯ ಗೋಕರ್ಣ(Gokarna)ದ ಮುಖ್ಯ ಕಡಲ ತೀರದಲ್ಲಿ ನಡೆದಿದೆ. ಪ್ರವಾಸಕ್ಕೆ ಬಂದ ವೇಳೆ ಒಂದೇ ಕುಟುಂಬದ ಏಳು ಪ್ರವಾಸಿಗರು ನೀರಿನಲ್ಲಿ ಇಳಿದಿದ್ದು, ಈ ವೇಳೆ ಕೊಚ್ಚಿ ಹೋಗುವ ಅಪಾಯದಲ್ಲಿದ್ದರು. … Continued

ಹೊನ್ನಾವರ: ಮತ್ತೊಂದು ಬೃಹತ್‌ ಮೀನಿನ ಕಳೆಬರ ಪತ್ತೆ.. ಇದು ಡಾಲ್ಫಿನ್‌ ಮೀನು…!

ಹೊನ್ನಾವರ: ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಕಾಸರಕೋಡ ಟೊಂಕದ ಸಮುದ್ರ ದಂಡೆಯಲ್ಲಿ ಅಳವಿನಂಚಿನಲ್ಲಿರುವ ಮತ್ತೊಂದು ಮೀನಿನ ಕಳೆಬರ ಭಾನುವಾರ ಪತ್ತೆಯಾಗಿದೆ. ಈ ಬಾರಿ ತಿಮಿಂಗಿಲವಲ್ಲ, ಬದಲಿಗೆ ಅಳಿವಿನಂಚಿನಲ್ಲಿರುವ  ಡಾಲ್ಫಿನ್‌ನ ಮೃತ ದೇಹ ಭಾನುವಾರ ಪತ್ತೆಯಾಗಿದೆ. ಡಾಲ್ಫಿನ್‌ ಮೀನು ಸುಮಾರು ಮೂರು ಮೀಟರ್ ಗಳಷ್ಟು ಉದ್ದವಿದ್ದು 75-80 ಕೆ.ಜಿ.ಯಷ್ಟು ತೂಕವಿರಬಹುದೆಂದು ಅಂದಾಜಿಸಲಾಗಿದೆ. ಮರಣೋತ್ತರ ಪರೀಕ್ಷೆ ಸೋಮವಾರ … Continued