ಕುಮಟಾ : ನಿವೃತ್ತ ಮುಖ್ಯಾಧ್ಯಾಪಕ ಹೊಲನಗದ್ದೆ ಆರ್.ಎನ್.ಹೆಗಡೆ ನಿಧನ

ಕುಮಟಾ : ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಹೊಲನಗದ್ದೆಯ ಆರ್.ಎನ್.ಹೆಗಡೆ (66) ಅವರು ಮಂಗಳವಾರ ಬೆಳಗಿನ ಜಾವ ನಿಧನರಾಗಿದ್ದಾರೆ. ಆರ್.ಎನ್.ಹೆಗಡೆ ಅವರು ಪ್ರಾಥಮಿಕ ಶಾಲಾ ಮುಖ್ಯಧ್ಯಾಪಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು. ಸಮಾಜ ಕಾರ್ಯದಲ್ಲಿಯೂ ಗುರುತಿಸಿ ಕೊಂಡಿದ್ದ ಅವರು ಕಾಂಚಿಕಾಂಬಾ ಹವ್ಯಕ ವಲಯದ ಅಧ್ಯಕ್ಷರಾಗಿ ಸೇವೆಸಲ್ಲಿಸಿದ್ದರು. ಕುಮಟಾ ಕನ್ನಡ ಸಂಘದ ಸದಸ್ಯರಾಗಿದ್ದ ಅನೇಕ ಸಾಮಾಜಿಕ ಕಾರ್ಯದಲ್ಲಿ … Continued

ದ್ವಿತೀಯ ಪಿಯುಸಿ ಪರೀಕ್ಷೆ: ಕುಮಟಾ ಸರಸ್ವತಿ ಪಿಯು ಕಾಲೇಜು ಶೇ.100 ಫಲಿತಾಂಶ; ನಾಲ್ವರು ವಿದ್ಯಾರ್ಥಿಗಳಿಂದ ರಾಜ್ಯಮಟ್ಟದ ಸಾಧನೆ

ಕುಮಟಾ: ವಿಧಾತ್ರಿ ಅಕಾಡೆಮಿಯ ಸಹಭಾಗಿತ್ವದ ಕೊಂಕಣ ಎಜುಕೇಶನ್ ಟ್ರಸ್ಟ್ ನ ಬಿ. ಕೆ. ಭಂಡಾರಕರ್ಸ್‌ ಸರಸ್ವತಿ ಪದವಿಪೂರ್ವ ಕಾಲೇಜಿನ ವಿಜ್ಞಾನ ಹಾಗೂ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳು 2023-24ನೇ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕಗಳಿಸಿ ರಾಜ್ಯ ಮಟ್ಟದಲ್ಲಿ ನಾಲ್ಕು ಸ್ಥಾನ ಪಡೆದಿದ್ದಾರೆ. ವಿಜ್ಞಾನ ವಿಭಾಗದಲ್ಲಿ ಶ್ರಾವ್ಯ ಭಟ್ಟ 592 ಅಂಕಗಳಿಸಿ ರಾಜ್ಯ ಮಟ್ಟದಲ್ಲಿ … Continued

ದ್ವಿತೀಯ ಪಿಯು : ಕುಮಟಾ ಡಾ. ಬಾಳಿಗಾ ವಾಣಿಜ್ಯ ಕಾಲೇಜ್‌ ಫಲಿತಾಂಶ ಶೇ.92, ಅನನ್ಯ ಕಾಮತ್‌ (ಶೇ.98) ಪ್ರಥಮ

ಕುಮಟಾ : ಉತ್ತರ ಕನ್ನಡ ಜಿಲ್ಲೆಯ ಡಾ. ಎ. ವಿ. ಬಾಳಿಗಾ ವಾಣಿಜ್ಯ ಮಹಾವಿದ್ಯಾಲಯದ ದ್ವಿತೀಯ ಪಿಯುಸಿ ಫಲಿತಾಂಶ ಶೇ.92 ಆಗಿದ್ದು ಪರೀಕ್ಷೆಗೆ ಕುಳಿತವರಲ್ಲಿ 17 ವಿದ್ಯಾರ್ಥಿಗಳು ಉನ್ನತ ಶ್ರೇಣಿಯಲ್ಲಿ ಹಾಗೂ 40 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಕಾಲೇಜು ವಿದ್ಯಾರ್ಥಿನಿ ಅನನ್ಯ ಕಾಮತ್ ಶೇ.98 (588)ಅಂಕ ಪಡೆದು ಕಾಲೇಜಿಗೆ ಪ್ರಥಮ ಸ್ಥಾನ ಪಡೆದಿದ್ದಾರೆ. ಇವರು … Continued

ಕುಮಟಾ: ಜಿಲ್ಲಾ ಮಟ್ಟದ ಭಜನಾ ಸ್ಪರ್ಧೆಯಲ್ಲಿ ಕೂಜಳ್ಳಿಯ ಭಾವಧಾರಾ ಭಜನಾ ಮಂಡಳಿ ಪ್ರಥಮ

ಕುಮಟಾ: ಯುಗಾದಿ ಉತ್ಸವ ಸಮಿತಿ ಕುಮಟಾ ವತಿಯಿಂದ ಆಯೋಜಿಸಲಾಗಿದ್ದ ಜಿಲ್ಲಾ ಮಟ್ಟದ ಭಜನಾ ಸ್ಪರ್ಧೆಯಲ್ಲಿ ಕೂಜಳ್ಳಿಯ ಭಾವಧಾರಾ ಭಜನಾ ಮಂಡಳಿ ಪ್ರಥಮ ಸ್ಥಾನ ಪಡೆದಿದೆ. ಕುಮಟಾದ ನೆಲ್ಲಿಕೇರಿಯ ಮಹಾಸತಿ ದೇವಸ್ಥಾನದಲ್ಲಿ ಶನಿವಾರ (ಏಪ್ರಿಲ್‌ 6) ಜಿಲ್ಲಾ ಮಟ್ಟದ ಭಜನಾ ಸ್ಪರ್ಧೆ ನಡೆಯಿತು. ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳೇ ಇದ್ದ ಕೂಜಳ್ಳಿಯ ಭಾವಧಾರಾ ಭಜನಾ ಮಂಡಳಿ ಪ್ರಥಮ ಸ್ಥಾನ … Continued

ವೀಡಿಯೊ..| ಕುಮಟಾ : ಅಘನಾಶಿನಿ ನದಿಗೆ ಅಡ್ಡವಾಗಿ ನಿರ್ಮಾಣವಾಗುತ್ತಿದ್ದ ಸೇತುವೆಯ ಸ್ಲ್ಯಾಬ್‌ ಕುಸಿತ

ಕುಮಟಾ: ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಮಿರ್ಜಾನ ‌ತಾರೀಬಾಗಿನಲ್ಲಿ ನಿರ್ಮಾಣ ಹಂತದ ಸೇತುವೆಯ ಸ್ಲ್ಯಾಬ್ ಕುಸಿದು ಬಿದ್ದ ಘಟನೆ ಬುಧವಾರ ನಡೆದಿದೆ ಎಂದು ವರದಿಯಾಗಿದೆ. ಕುಸಿದ ಸ್ಲ್ಯಾಬ್‌ ಅಡಿ ಸಿಲುಕಿ ಹಿಟಾಚಿ, ಕ್ರೇನ್ ಜಖಂಗೊಂಡಿದೆ. ಕಾರ್ಮಿಕರಿಗೆ ಯಾವುದೇ ಅಪಾಯವಾಗಿಲ್ಲ ಎಂದು ವರದಿಯಾಗಿದೆ. ಕುಮಟಾದ ತಾರೀಬಾಗಿಲಿನಲ್ಲಿ ಅಘನಾಶಿನಿ ನದಿಗೆ ಅಡ್ಡಲಾಗಿ ಕೋಟ್ಯಾಂತರ ರೂಪಾಯಿ ವೆಚ್ಚದಲ್ಲಿ ಮಿರ್ಜಾನ್‌-ಹೆಗಡೆ … Continued

ವೀಡಿಯೊ…| ಕುಮಟಾ: ಆತಂಕ ಮೂಡಿಸಿದ್ದ ಚಿರತೆ ಕೊನೆಗೂ ಬೋನಿಗೆ ಬಿತ್ತು…!

ಕುಮಟಾ : ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಹೊಲನಗದ್ದೆ, ಹಳಕಾರ, ಚಿತ್ರಗಿ ಮೊದಲಾದ ಪ್ರದೇಶಗಳಲ್ಲಿ ರಾತ್ರಿ ಅವಧಿಯಲ್ಲಿ ಆಗಾಗ ಜನರಿಗೆ ಕಾಣಿಸಿಕೊಂಡು ಜನರಿಗೆ ಆತಂಕ ಮೂಡಿಸಿದ್ದ ಚಿರತೆಯೊಂದು ಶುಕ್ರವಾರ ರಾತ್ರಿ ಬೋನಿಗೆ ಬಿದ್ದಿದೆ. ಕುಮಟಾ ತಾಲೂಕಿನ ಚಿತ್ರಗಿಯ ಶೇಷಾದ್ರಿ ಗುಡ್ಡದಲ್ಲಿ ಅರಣ್ಯ ಇಲಾಖೆಯವರು ಇಟ್ಟಿರುವ ಬೋನಿನಲ್ಲಿ ಈ ಚಿರತೆ ಸೆರೆಯಾಗಿದೆ. ಈ ಭಾಗದ ಜನರು … Continued

ವೀಡಿಯೊ….| ಕುಮಟಾ : ಕಡ್ಲೆಯ ಸಮುದ್ರ ತೀರದಲ್ಲಿ ಬೃಹತ್‌ ಆಮೆ ಕಳೇಬರ ಪತ್ತೆ

ಕುಮಟಾ : ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಹೊಲನ ಗದ್ದೆಯ ಕಡ್ಲೆಯ ಅರಬ್ಬಿ ಸಮುದ್ರ ತೀರದಲ್ಲಿ ಆಲಿವರ್ ರಿಡ್ಲೆ ತಳಿಯ ಬೃಹತ್‌ ಆಮೆಯ ಕಳೇಬರ ಪತ್ತೆಯಾಗಿದೆ. ಆಮೆಯು ಮೂರು ಅಡಿಗಿಂತ ಹೆಚ್ಚು ( 96 ಸೆಂಮೀ) ಉದ್ದವಿದೆ. ಇದರ ವಯಸ್ಸು 30 ರಿಂದ 40 ವರ್ಷ ಆಗಿರಬಹುದು. ಈ ಜಾತಿಯ ಬೃಹತ್‌ ಆಮೆಗಳು ಸಾಮಾನ್ಯವಾಗಿ … Continued

ಕುಮಟಾ: ಮಿರ್ಜಾನ-ಕೋಡ್ಕಣಿಯ ವೈದ್ಯ ಡಾ. ರತ್ನಾಕರ ಶಾನಭಾಗ ನಿಧನ

ಕುಮಟಾ: ಉತ್ತರ ಕನ್ನಡ ಜಿಲ್ಲೆಯ ಮಿರ್ಜಾನ-ಕೋಡ್ಕಣಿಯ ಹೆಸರಾಂತ ವೈದ್ಯರಾಗಿದ್ದ ಡಾ. ರತ್ನಾಕರ ರಾಮ ಶಾನಭಾಗ (77) ಗುರುವಾರ ತಡರಾತ್ರಿ ನಿಧನರಾಗಿದ್ದಾರೆ. ಕಳೆದ ವಾರ ಮಿರ್ಜಾನ ಬಳಿ ನಡೆದ ರಿಕ್ಷಾ ಅಪಘಾತದಲ್ಲಿ ಗಾಯಗೊಂಡ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ. ಮೃತರು ಪತ್ನಿ, ಓರ್ವ ಪುತ್ರ, ಓರ್ವ ಪುತ್ರಿ, ಅಪಾರ … Continued

ಚಂದಾವರ : ಮಾರ್ಚ್‌ 16ರಿಂದ ಹನುಮಂತ ದೇವರ ಮೂಲ ಮೂರ್ತಿ ಪುನರ್ ಪ್ರತಿಷ್ಠಾ ಮಹೋತ್ಸವ

ಕುಮಟಾ: ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಚಂದಾವರದ ಸುಪ್ರಸಿದ್ಧ ಹನುಮಂತ ದೇವರ ಮೂಲ ಮೂರ್ತಿ ಪುನರ್ ಪ್ರತಿಷ್ಠಾಪನೆ ಕಾರ್ಯಕ್ರಮ ಮಾರ್ಚ್ 16ರಿಂದ 18ರ ವರೆಗೆ ನಡೆಯಲಿದೆ. ಹೊನ್ನಾವರ, ಕುಮಟಾ ತಾಲೂಕಿನ ಅನೇಕ ಗ್ರಾಮಗಳು ಸೇರಿದಂತೆ ಚಂದಾವರ ಸೀಮೆಯಷ್ಟೇ ಅಲ್ಲದೆ ಉತ್ತರ ಕನ್ನಡ ಜಿಲ್ಲೆ ಹಾಗೂ ನಾಡಿನ ವಿವಿಧೆಡೆಯ ಭಕ್ತರ ಆರಾಧ್ಯ ದೈವವಾಗಿರುವ ಚಂದಾವರದ ಹನುಮಂತ … Continued

ವೀಡಿಯೊ..| ಕುಮಟಾ : ಮನೆ ಬಾಗಿಲಿಗೇ ಬಂದು ನಾಯಿ ಹೊತ್ತೊಯ್ದ ಚಿರತೆ…!

ಕುಮಟಾ : ಮನೆಯಂಗಳಕ್ಕೇ ಬಂದ ಚಿರತೆಯೊಂದು ನಾಯಿಯನ್ನು ಹೊತ್ತೊಯ್ದ ಘಟನೆ ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಹೊಲನಗದ್ದೆಯಲ್ಲಿ ನಡೆದಿದೆ. ಕುಮಟಾ ತಾಲೂಕಿನ ಹೊಲನಗದ್ದೆಯ ಬೆಳ್ಳಕ್ಕಿ ಎಂಬಲ್ಲಿ ದತ್ತಾತ್ರೇಯ ಭಟ್ಟ ಎಂಬವರ ಮನೆಯಲ್ಲಿ ಬುಧವಾರ ರಾತ್ರಿ ಈ ಘಟನೆ ನಡೆದಿದ್ದು, ಮನೆಯವರು ಹಾಗೂ ಅಕ್ಕಪಕ್ಕದ ಮನೆಯವರು ಭಯಬೀತರಾಗಿದ್ದಾರೆ. ರಾತ್ರಿ ಮನೆಯ ಅಂಗಳಕ್ಕೇ ಬಂದ ಚಿರತೆ ನಾಯಿ … Continued