ನಾಳೆ ಕೂಜಳ್ಳಿಯಲ್ಲಿ ಪಂ.ಷಡಕ್ಷರಿ ಗವಾಯಿಗಳ ಪುಣ್ಯ ಸ್ಮರಣೆ ಸಂಗೀತೋತ್ಸವ

ಕುಮಟಾ : ಪಂಡಿತ ಷಡಕ್ಷರಿ ಗವಾಯಿಗಳ ಪುಣ್ಯಸ್ಮರಣೆ ಸಂಗೀತೋತ್ಸವ ಡಿಸೆಂಬರ್‌ 24ರಂದು ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಕೂಜಳ್ಳಿಯ ಕುಳಿಹಕ್ಕಲಿನ ಶ್ರೀ ಶಾಂತಿಕಾ ಪರಮೇಶ್ವರಿ ದೇವಾಲಯದ ಸಭಾಭವನದಲ್ಲಿ ನಡೆಯಲಿದೆ. ಡಿಸೆಂಬರ್‌ 24ರಂದು ಭಾನುವಾರ ಬೆಳಿಗ್ಗೆ 9:30 ರಿಂದ ಸಂಗೀತೋತ್ಸವ ಆರಂಭವಾಗಲಿದ್ದು, ದಿನವಿಡೀ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಈ ವರ್ಷದ ಷಡಕ್ಷರಿ ರಾಷ್ಟ್ರೀಯ ಪುರಸ್ಕಾರವನ್ನು ಖ್ಯಾತ … Continued

ಕುಮಟಾ: ಕೂಜಳ್ಳಿಯಲ್ಲಿ ಡಿಸೆಂಬರ್‌ 24ರಂದು ಪಂ.ಷಡಕ್ಷರಿ ಗವಾಯಿ ಪುಣ್ಯಸ್ಮರಣೆ ಸಂಗೀತೋತ್ಸವ, ಪಂ.ವಿಶ್ವನಾಥ ಕಾನ್ಹರೆಗೆ ಷಡಕ್ಷರಿ ರಾಷ್ಟ್ರೀಯ ಪುರಸ್ಕಾರ ಪ್ರದಾನ

ಕುಮಟಾ : ಪಂಡಿತ ಷಡಕ್ಷರಿ ಗವಾಯಿ ಪುಣ್ಯಸ್ಮರಣೆ ಸಂಗೀತೋತ್ಸವ ಡಿಸೆಂಬರ್‌ 24ರಂದು ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಕೂಜಳ್ಳಿಯ ಕುಳಿಹಕ್ಕಲಿನ ಶ್ರೀ ಶಾಂತಿಕಾ ಪರಮೇಶ್ವರಿ ದೇವಾಲಯದಲ್ಲಿ ನಡೆಯಲಿದೆ. ಡಿಸೆಂಬರ್‌ 24ರಂದು ಭಾನುವಾರ ಬೆಳಿಗ್ಗೆ 9:30 ರಿಂದ ಸಂಗೀತೋತ್ಸವ ಆರಂಭವಾಗಲಿದ್ದು, ದಿನವಿಡೀ ಸಂಗೀತೋತ್ಸವ ನಡೆಯಲಿದೆ. ಈ ವರ್ಷದ ಈ ವರ್ಷದ ಷಡಕ್ಷರಿ ರಾಷ್ಟ್ರೀಯ ಪುರಸ್ಕಾರವನ್ನು ಮುಂಬೈನ … Continued

ಕುಮಟಾ: ಮಹಿಳೆ ಸಮುದ್ರಕ್ಕೆ ಹಾರಿದ್ದ ಪ್ರಕರಣಕ್ಕೆ ಬಿಗ್‌ ಟ್ವಿಸ್ಟ್‌ ; ಮಹಿಳೆ ಪತ್ತೆ ಹಚ್ಚಿದ ಪೊಲೀಸರು, ಸಾವಿನ ನಾಟಕವಾಡಿದ್ದು ಬಯಲಾಯ್ತು…!

ಕುಮಟಾ: ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಸಾಂತಗಲ್ ಗ್ರಾಮದ ಮಹಿಳೆಯೊಬ್ಬಳು ಆತ್ಮಹತ್ಯೆ ಮಾಡಿಕೊಳ್ಳಲು ಕುಮಟಾದ ಹೆಡ್‌ಬಂದರಿನಲ್ಲಿ ಸಮುದ್ರಕ್ಕೆ ಹಾರಿದ್ದಳು ಎಂಬ ಪ್ರಕರಣಕ್ಕೆ ಈಗ ದೊಡ್ಡ ಟ್ವಿಸ್ಟ್‌ ಸಿಕ್ಕಿದೆ. ತನ್ನ ಎರಡು ಮಕ್ಕಳನ್ನ ನಡು ರಸ್ತೆಯಲ್ಲಿ ಬಿಟ್ಟು ಸಮುದ್ರದಲ್ಲಿ ಮುಳುಗಿದ ನಾಟಕವಾಡಿದ್ದ ಸಾಂತಗಲ್ ಗ್ರಾಮದ ನಿವೇದಿತಾ ಭಂಡಾರಿ ಹೊನ್ನಾವರದ ಬಾಡಿಗೆ ಮನೆಯಲ್ಲಿರುವಾಗ ಪೊಲೀಸರ ಕೈಗೆ ಸಿಕ್ಕಿ … Continued

ಕುಮಟಾ : ಇಬ್ಬರು ಮಕ್ಕಳನ್ನು ಬಸ್ ನಿಲ್ದಾಣದಲ್ಲಿ ಬಿಟ್ಟು ಬಂದು ಸಮುದ್ರಕ್ಕೆ ಜಿಗಿದು ಆತ್ಮಹತ್ಯೆ ಮಾಡಿಕೊಂಡ ಮಹಿಳೆ

ಕುಮಟಾ : ಉತ್ತರ ಕನ್ನಡ ಜಿಲ್ಲೆಯ ಕುಮಟಾ ಪಟ್ಟಣದ ಹೆಡ್‌ಬಂದರ್ ಬಳಿ ಸಮುದ್ರಕ್ಕೆ ಹಾರಿ ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಶನಿವಾರ ಸಂಜೆ ನಡೆದಿದೆ ಎಂದು ವರದಿಯಾಗಿದೆ. ಮೃತರನ್ನು ಕುಮಟಾ ತಾಲೂಕಿನ ಸಾಂತಗಲ್ ನಿವಾಸಿ ನಿವೇದಿತಾ ನಾಗರಾಜ ಭಂಡಾರಿ (46) ಎಂದು ಗುರುತಿಸಲಾಗಿದೆ. ಸಾಂತಗಲ್ ನಿವಾಸಿ ಯಾಗಿದ್ದ ಮಹಿಳೆ ನಿವೇದಿತಾ ಊರಿನಲ್ಲಿ ಕಿರಾಣಿ ಅಂಗಡಿ ನಡೆಸುತ್ತಿದ್ದರು … Continued

ಪ್ರಖ್ಯಾತ ಯಕ್ಷಗಾನ ಸ್ತ್ರೀ ವೇಷಧಾರಿ ಮುರೂರು ವಿಷ್ಣು ಭಟ್‌ ವಿಧಿವಶ

ಕುಮಟಾ : ಯಕ್ಷಗಾನದ ಬಡಗುತಿಟ್ಟಿನ ಖ್ಯಾತ ಸ್ತ್ರೀವೇಷಧಾರಿ ವಿಷ್ಣು ಗಜಾನನ ಭಟ್ಟ ಮೂರೂರು (65) ಇಂದು, ಭಾನುವಾರ (ಅಕ್ಟೋಬರ್‌ ೮) ನಿಧನರಾಗಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಮುರೂರಿನ ಹೊನ್ನೆಕುಳಿಯವರಾದ ವಿಷ್ಣು ಭಟ್ಟರು ಸಿದ್ದಾಪುರದಲ್ಲಿ ನಿಧನರಾಗಿದ್ದಾರೆ. ಅವರು  ಪತ್ನಿ,ಪುತ್ರನನ್ನು ಅಗಲಿದ್ದಾರೆ. ಯಕ್ಷಗಾನ ಸ್ತ್ರೀ ವೇಷಧಾರಿಕೆಯಲ್ಲಿ ತಮ್ಮ ಭಾವಪೂರ್ಣ ಅಭಿನಯದ ಮೂಲಕ ಹೆಸರು ಪಡೆದಿದ್ದ ಅವರು ಮೂರೂರು ರಾಮ … Continued

ಗೋಕರ್ಣದಲ್ಲಿ ಪಿತೃಕಾರ್ಯ ನೆರವೇರಿಸಿದ ಮುಸ್ಲಿಂ ಕುಟುಂಬ…!

ಕಾರವಾರ : ಧಾರವಾಡದ ಮುಸ್ಲಿಂ ಕುಟುಂಬವು ಹಿಂದೂ ಧರ್ಮದ ಸಂಪ್ರದಾಯದಂತೆ ಗೋಕರ್ಣದಲ್ಲಿ ಪಿತೃಕಾರ್ಯ ಮಾಡಿರುವುದು ವರದಿಯಾಗಿದೆ. ಎರಡು ದಿನಗಳ ಹಿಂದೆ ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಗೋಕರ್ಣದ ಕೋಟಿ ತೀರ್ಥದಲ್ಲಿ ಪಿತೃಪಕ್ಷದಲ್ಲಿ ಈ ಕುಟುಂಬವು ಪಿತೃಕಾರ್ಯ ನೆರವೇರಿಸಿದ್ದಾರೆ. ಮರಗೆಲಸ ಮಾಡುವ ಮಾಡುವ ಕುಟುಂಬವು ಧಾರವಾಡದ ಜ್ಯೋತಿಷಿ ಬಳಿ ಹೋದಾಗ ಅವರು ನೀಡಿದ ಸಲಹೆ ಮೇರೆಗೆ … Continued

ಕುಮಟಾ: ರಾಷ್ಟ್ರಧ್ವಜದಂತೆ ಕಾಣುವ ಧ್ವಜದಲ್ಲಿ ಬೇರೆ ಚಿಹ್ನೆ, ಗುರುತು ಬಳಸಿ ಈದ್ ಮಿಲಾದ್ ಮೆರವಣಿಗೆ, ಪ್ರಕರಣ ದಾಖಲು

 ಕುಮಟಾ : ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಮಿರ್ಜಾನ್‌ ಸಮೀಪ ತ್ರಿವರ್ಣ ಧ್ವಜಕ್ಕೆ ಅಪಮಾನ ಮಾಡಿದ ಶಂಕೆ ವ್ಯಕ್ತವಾಗಿದ್ದು ಈ ಕುರಿತು ಎಫ್‌ಐಆರ್‌ ದಾಖಲಾಗಿದೆ. ಈದ್‌ ಮಿಲಾದ್‌ ದಿನ ಕುಮಟಾ ತಾಲೂಕಿನ ಮಿರ್ಜಾನ್‌ ಸಮೀಪ ರಾಷ್ಟ್ರ ಧ್ವಜದಂತೆ ಹೋಲುತ್ತಿರುವ ರೀತಿಯ ಧ್ವಜದ ಮೇಲೆ ಅರ್ಧ ಚಂದ್ರ, ಸ್ಟಾರ್, ಇತ್ಯಾದಿ ಗುರುತನ್ನು ಪ್ರದರ್ಶಿಸಲಾಗಿತ್ತು. ಈ ಘಟನೆ … Continued

ಕುಮಟಾ: ಹೆಗಡೆಯಲ್ಲಿ ಅತಿ ದೊಡ್ಡ ಬಿಳಿ ಹೆಬ್ಬಾವು ಪ್ರತ್ಯಕ್ಷ – ರಕ್ಷಣೆ

ಕುಮಟಾ : ಸಮೀಪದ ಹೆಗಡೆ ಗ್ರಾಮದ ಗಾಂಧಿ ನಗರದ ಮನೆಯಂಗಳದಲ್ಲಿ ಬಿಳಿ ಹೆಬ್ಬಾವು ಕಾಣಿಸಿಕೊಂಡಿದ್ದು, ಅದನ್ನು ರಕ್ಷಣೆ ಮಾಡಲಾಗಿದೆ. ಆರ್ ಟಿ ಒ ಕಚೇರಿ ಹೋಮ್ ಗಾರ್ಡ್ ಗಣೇಶ ಮುಕ್ರಿ ಅವರ ಮನೆಯ ಅಂಗಳದಲ್ಲಿ ಕಾಣಿಸಕೊಂಡ ಹೆಬ್ಬಾವನ್ನು ಪವನ್ ನಾಯ್ಕ ರಕ್ಷಣೆ ಮಾಡಿದ್ದಾರೆ. ಗಣೇಶ ಮುಕ್ರಿ ಅವರು ಉರಗ ತಜ್ಞ ಪವನ್‌ ನಾಯ್ಕ ಅವರಿಗೆ ಮಾಹಿತಿ … Continued

ಕುಮಟಾ: ಸ್ವಾತಂತ್ರ್ಯೋತ್ಸವ ಧ್ವಜಾರೋಹಣಕ್ಕೆ ಹೊರಟ ಶಿಕ್ಷಕ ಅಪಘಾತದಲ್ಲಿ ಸಾವು

ಕುಮಟಾ : ಉತ್ತರ ಕನ್ನಡ ಜಿಲ್ಲೆಯ ತಾಲೂಕಿನ ಗುಡೆ ಅಂಗಡಿಯ ಪ್ರಾಥಮಿಕ ಶಾಲಾ ಶಿಕ್ಷಕ ಗೋಪಾಲ ಪಟಗಾರ (50) ಅಪಘಾತದಲ್ಲಿ ನಿಧನರಾಗಿದ್ದಾರೆ. ಆಗಸ್ಟ್‌ ೧೫ರಂದು ಮುಂಜಾನೆ 7 ಗಂಟೆಗೆ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸುವುದಕ್ಕಾಗಿ ಗುಡೆ ಅಂಗಡಿ ಶಾಲೆಗೆ ತಮ್ಮ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದಾಗ ಅಘನಾಶನಿ ರಸ್ತೆಯ ಹಳಕಾರ ತಿರುವಿನ ಸಮೀಪ ಬೊಲೆರೊ ವಾಹನ ದ್ವಿಚಕ್ರ ವಾಹನಕ್ಕೆ … Continued

ಶ್ರೀ ಲಕ್ಷ್ಮೀ ನರಸಿಂಹ ದೇವರಿಗೆ ಲಕ್ಷಾಧಿಕ ತುಳಸಿ ದಳದಿಂದ ಅರ್ಚನೆ

ಕುಮಟಾ : ತಾಲೂಕಿನ ಹೊಲನಗದ್ದೆ ತೆಪ್ಪದಮಠದ ಶ್ರೀ ಲಕ್ಷ್ಮೀನರಸಿಂಹ ದೇವಾಲಯದಲ್ಲಿ ಭಾನುವಾರ ಲಕ್ಷಾಧಿಕ ತುಳಸಿ ದಳದಿಂದ ಪೂಜೆ ನಡೆಯಿತು. ಸತತವಾಗಿ 10 ವರ್ಷದಿಂದ ಪ್ರತಿವರ್ಷ ವಾರ್ಷಿಕವಾಗಿ ಲಕ್ಷಾಧಿಕ ತುಳಸಿದಳದಿಂದ ಪೂಜೆ ನಡೆಸಿಕೊಂಡು ಬರಲಾಗುತ್ತಿದೆ. ಈವರ್ಷ ಅಧಿಕ ಮಾಸ ಇರುವುದರಿಂದ ಈ ಸಂದರ್ಭದಲ್ಲಿ ನಾಡಿನ ಕ್ಷೇಮಕ್ಕಾಗಿ ನಡೆಸುವ ಈ ಪೂಜೆಯಿಂದ ಜನರಿಗೆ ಅಧಿಕ ಫಲ ಪ್ರಾಪ್ತಿಯಾಗುವದು ಎಂದು … Continued