ಶಿರಸಿ, ಕುಮಟಾ ತಾಲೂಕಿನ ಪಶ್ಚಿಮ ಘಟ್ಟದ ಭಾಗದಲ್ಲಿ ಭೂಕಂಪನದ ಅನುಭವ

ಕಾರವಾರ : ಉತ್ತರ ಕನ್ನಡ (Uttar Kannada) ಜಿಲ್ಲೆಯಲ್ಲಿ ಕೆಲವಡೆ ಭೂ ಕಂಪನದ ಅನುಭವವಾಗಿದೆ ಎಂದು ವರದಿಯಾಗಿದೆ. ಜಿಲ್ಲೆಯ ಶಿರಸಿ ಹಾಗೂ ಕುಮಟಾ ತಾಲೂಕಿನ ದೇವಿಮನೆ ಘಟ್ಟ ಪ್ರದೇಶದ ಸುತ್ತಮುತ್ತ ಭೂಕಂಪನದ ಅನುಭವವಾಗಿದೆ ಎಂದು ಹೇಳಲಾಗಿದೆ. ಮೂರ್ನಾಲ್ಕು ಸೆಕೆಂಡುಗಳ ಕಾಲ​ ಭೂಮಿ ಕಂಪಿಸಿದ ಅನುಭವಾಗಿದೆ ಎಂದು ಹೇಳಲಾಗಿದೆ. ಶಿರಸಿ (Sirasi) ತಾಲೂಕಿನ ರಾಗಿಹೊಸಳ್ಳಿ, ಕಸಗೆ, ಬಂಡಲದಲ್ಲಿ … Continued

ಡಿಸೆಂಬರ್ 2ರಿಂದ ಶಿರಸಿ-ಕುಮಟಾ ರಸ್ತೆಯಲ್ಲಿ ವಾಹನ ಸಂಚಾರ ಬಂದ್‌

ಕಾರವಾರ: ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ರಾಷ್ಟ್ರೀಯ ಹೆದ್ದಾರಿ-766 ಕುಮಟಾ-ಶಿರಸಿ ರಸ್ತೆ ಅಗಲೀಕರಣ ಕಾಮಗಾರಿಯ ಕಾರಣದಿಂದ ಡಿಸೆಂಬರ್ 2 ರಿಂದ ಫೆಬ್ರವರಿ 25ರ ವರೆಗೆ ವಾಹನ ಸಂಚಾರ ಬಂದ್ ಆಗಲಿದೆ ಎಂದು ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ತಿಳಿಸಿದ್ದಾರೆ. ಕಾಮಗಾರಿಯನ್ನು ನಿಗದಿತ ಸಮಯದೊಳಗೆ ಪೂರ್ಣ ಮಾಡಬೇಕಾಗಿರುವುದರಿಂದ ಅಗಲೀಕರಣ ನಡೆದಿರುವ ಹೆದ್ದಾರಿಯಲ್ಲಿ ವಾಹನ ಸಂಚಾರವನ್ನು ಬಂದ್‌ ಮಾಡಿ ಬದಲಿ ಮಾರ್ಗದಲ್ಲಿ ಸಂಚರಿಸಲು … Continued

ವೀಡಿಯೊ…| ಕುಮಟಾ : ಬರ್ಗಿ ಬಳಿ ಬೃಹತ್‌ ಗಾತ್ರದ ಕಾಳಿಂಗ ಸರ್ಪ ಸೆರೆ

ಕುಮಟಾ : ಮನೆ ಆವರಣದ ಬಳಿಯೇ ಇದ್ದ ಮಾವಿನ ಗಿಡ ಏರಿ ಕುಳಿತು ಕೆಲಕಾಲ ಆತಂಕ ಉಂಟು ಮಾಡಿದ್ದ ಬೃಹತ್‌ ಕಾಳಿಂಗ ಸರ್ಪವನ್ನು ಯಶಸ್ವಿಯಾಗಿ ಸೆರೆ ಹಿಡಿಯಲಾಗಿದೆ ಎಂದು ವರದಿಯಾಗಿದೆ. ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಬರ್ಗಿ ಗ್ರಾಮದ ಮನೆಯೊಂದರ ಆವರಣದಲ್ಲಿದ್ದ ಮಾವಿನ ಗಿಡದ ಏರಿದ್ದ ಬೃಹತ್‌ ಕಾಳಿಂಗ ಸರ್ಪವನ್ನು ಉರಗ ತಜ್ಞ ಅಶೋಕ … Continued

ವೀಡಿಯೊಗಳು..| ಕುಮಟಾ : ಹಣ್ಣೇಮಠದಲ್ಲಿ ಮನೆಗೇ ಬಂದ ಬೃಹತ್‌ ಹೆಬ್ಬಾವು…!

ಕುಮಟಾ : ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಹಣ್ಣೇಮಠದ ಸಂಕನ ಕೇರಿಯ ಗೋಪಾಲ ಪಟಗಾರ ಎನ್ನುವವರ ಮನೆಗೆ ಭಾನುವಾರ ಮುಂಜಾನೆ ಬಂದಿದ್ದ ಹೆಬ್ಬಾವನ್ನು ಸ್ಥಳೀಯ ಉರಗ ತಜ್ಞ ಪವನ ನಾಯ್ಕ ಅವರು ಹಿಡಿದು ಸುರಕ್ಷಿತವಾಗಿ ಕಾಡಿಗೆ ಬಿಟ್ಟಿದ್ದಾರೆ. ಹೆಬ್ಬಾವು ಸುಮಾರು 12-13 ಅಡಿ ಉದ್ದ ಇದೆ. ಭಾನುವಾರ ಮುಂಜಾನೆ ಈ ಹಾವು ಹಣ್ಣೇಮಠದ ಸಂಕನ … Continued

ಕುಮಟಾ | ಲಾರಿಯಲ್ಲಿ ಸಾಗಿಸುತ್ತಿದ್ದ 27 ಕೋಣಗಳ ರಕ್ಷಣೆ ; ನಾಲ್ವರ ಬಂಧನ

ಕುಮಟಾ : ಲಾರಿಯೊಂದರಲ್ಲಿ ಹಿಂಸಾತ್ಮಕವಾಗಿ ಸಾಗಾಟ ಮಾಡುತ್ತಿದ್ದ ಸುಮಾರು 27 ಕೋಣಗಳನ್ನು ಉತ್ತರ ಕನ್ನಡ ಜಿಲ್ಲೆಯ ಕುಮಟಾ ಎಪಿಎಂಸಿ ಬಳಿ ರಕ್ಷಣೆ ಮಾಡಿರುವ ಪೊಲೀಸರು ಈ ಸಂಬಂಧ ನಾಲ್ವರನ್ನು ಬಂಧಿಸಿದ್ದಾರೆ ಎಂದು ವರದಿಯಾಗಿದೆ. ಮಹಾರಾಷ್ಟ್ರದ ಕೊಲ್ಲಾಪುರದಿಂದ ಕೇರಳದ ಕಸಾಯಿಖಾನೆಗೆ ಸಾಗಾಟ ಮಾಡಲಾಗುತ್ತಿತ್ತು ಎಂದು ಹೇಳಲಾಗಿದೆ. ಖಚಿತ ಮಾಹಿತಿ ಮೇರೆಗೆ ಪೊಲೀಸರು ವಾಹವನ್ನು ನಿಲ್ಲಿಸಿ ತಪಾಸಣೆ ಮಾಡಿದಾಗ … Continued

ಕಾರವಾರ : ರೈಲ್ವೆ ಟ್ರ್ಯಾಕ್​​ಮ್ಯಾನ್ ಸಮಯ ಪ್ರಜ್ಞೆಯಿಂದ ತಪ್ಪಿತು ಸಂಭಾವ್ಯ ರೈಲು ದುರಂತ…!

ಕಾರವಾರ: ರೈಲ್ವೆ ಟ್ರ್ಯಾಕ್ ಮ್ಯಾನ್ ಮಹಾದೇವ  ನಾಯ್ಕ ಅವರ ಸಮಯ ಪ್ರಜ್ಞೆಯಿಂದ ಸಂಭನೀಯ ರೈಲು ದುರಂತವೊಂದು ತಪ್ಪಿದೆ. ಟ್ರ್ಯಾಕ್ ಮ್ಯಾನ್ ಮಹಾದೇವ ಅವರ ಕಾರ್ಯಕ್ಕೆ ಕೊಂಕಣ ರೈಲ್ವೆ ವಲಯದ ಅಧಿಕಾರಿಗಳು ಶ್ಲಾಘಿಸಿದ್ದಾರೆ. ಮಹಾದೇವ ಅವರ ಕಾರ್ಯವನ್ನು ಕೊಂಕಣ ರೈಲ್ವೆ ವಲಯ ಟ್ವೀಟ್ ಮಾಡಿ ಅಭಿನಂದಿಸಿದೆ. ಕೊಂಕಣ ರೈಲ್ವೆಯ ಕುಮಟಾ-ಹೊನ್ನಾವರ ನಡುವೆ ಹಳಿಗಳ ಜೋಡಣೆಯ ವೆಲ್ಡಿಂಗ್ ಬಿಟ್ಟುಹೋಗಿತ್ತು. … Continued

ಕುಮಟಾ : ಮೀನು ಹಿಡಿಯಲು ಹೋದ ಗ್ರಾಪಂ ಸದಸ್ಯ ನದಿಯಲ್ಲಿ ಮುಳುಗಿ ಸಾವು

ಕಾರವಾರ: ನದಿಯಲ್ಲಿ ಮುಳುಗಿ ಗ್ರಾಮ ಪಂಚಾಯತ ಸದಸ್ಯರೊಬ್ಬರು ಮೃತಪಟ್ಟ ಘಟನೆ ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಬೆಟ್ಕುಳಿ ಸಮೀಪ ಅಘನಾಶಿನಿ ನದಿ ಹಿನ್ನೀರಿನಲ್ಲಿ ನಡೆದಿದೆ ಎಂದು ವರದಿಯಾಗಿದೆ. ಮೀನು ಹಿಡಿಯಲು ಹೋಗಿದ್ದಾಗ ಈ ಅವಘಡ ಸಂಭವಿಸಿದ್ದು, ಮೃತರನ್ನು ದಾವುದ್ ಘಾರಿಯಾ (67) ಎಂದು ಗುರುತಿಸಲಾಗಿದೆ. ಮೃತರು ಬರ್ಗಿ ಗ್ರಾಮ ಪಂಚಾಯತ ಹಿರಿಯ ಸದಸ್ಯರಾಗಿದ್ದರು, ಮೀನು … Continued

ಉತ್ತರ ಕನ್ನಡ ಜಿಲ್ಲೆ : ಗುಡ್ಡ ಕುಸಿದು ಬಂದ್‌ ಆಗಿದ್ದ ಕುಮಟಾ-ಸಿದ್ದಾಪುರ ಮಾರ್ಗ ಸಂಚಾರಕ್ಕೆ ಮುಕ್ತ

ಕುಮಟಾ : ಗುಡ್ಡ ಕುಸಿದು ಎರಡು ದಿನಗಳಿಂದ ಬಂದ್ ಆಗಿದ್ದ ಉತ್ತರ ಕನ್ನಡ ಜಿಲ್ಲೆಯ ಕುಮಟಾ-ಸಿದ್ದಾಪುರ ಮಾರ್ಗ ಈಗ ವಾಹನ ಸಂಚಾರಕ್ಕೆ ಮುಕ್ತವಾಗಿದೆ. ಕುಮಟಾ-ಸಿದ್ದಾಪುರ ರಸ್ತೆಯ ಉಳ್ಳೂರುಮಠ ಕ್ರಾಸ್‌ ಸಮೀಪ ಭಾರೀ ಪ್ರಮಾಣದಲ್ಲಿ ಗುಡ್ಡ ಕುಸಿದು ಮಣ್ಣು ರಸ್ತೆಯ ಮೇಲೆ ಬಂದು ಬಿದ್ದಿತ್ತು. ರಸ್ತೆಯ ಮೇಲೆ ಬಿದ್ದಿದ್ದ ಮರ ಹಾಗೂ ಮಣ್ಣನ್ನು ತೆರವುಗೊಳಿಸಲಾಗಿದ್ದು, ಕುಮಟಾ-ಸಿದ್ದಾಪುರ ನಡುವಿನ … Continued

ಭಾರಿ ಮಳೆ : ಉತ್ತರ ಕನ್ನಡ ಜಿಲ್ಲೆ ಎರಡು ತಾಲೂಕಗಳಿಗೆ ಜುಲೈ 9ರಂದು ರಜೆ ಘೋಷಣೆ

ಭಾರಿ ಮಳೆಯ ಕಾರಣದಿಂದ ವಿದ್ಯಾರ್ಥಿಗಳ ಸುರಕ್ಷತೆಗಾಗಿ ಉತ್ತರ ಕನ್ನಡ ಜಿಲ್ಲೆಯ ಎರಡು ತಾಲೂಕುಗಳ ಶಾಲಾ-ಪದವಿ ಪೂರ್ವ ಕಾಲೇಜುಗಳಿಗೆ ಜುಲೈ 9ರಂದು ರಜೆ ಘೋಷಣೆ ಮಾಡಲಾಗಿದೆ. ಕಳೆದ ಕೆಲವು ದಿನಗಳಿಂದ ಜಿಲ್ಲೆಯಲ್ಲಿ ಅದರಲ್ಲಿಯೂ ಹೊನ್ನಾವರ ಹಾಗೂ ಕುಮಟಾ ತಾಲೂಕಿನಲ್ಲಿ ವಿಪರೀತ ಮಳೆ ಮುಂದುವರಿದಿದೆ. ಈ ಹಿನ್ನೆಲೆಯಲ್ಲಿ ಕುಮಟಾ ಹಾಗೂ ಹೊನ್ನಾವರ ತಾಲೂಕಿನ ಎಲ್ಲ ಎಲ್ಲಾ ಸರ್ಕಾರಿ, ಅನುದಾನಿತ, … Continued

ಭಾರಿ ಮಳೆ : ಜುಲೈ 6ರಂದು ಉತ್ತರ ಕನ್ನಡ ಜಿಲ್ಲೆ 5 ತಾಲೂಕುಗಳ ಶಾಲೆ-ಪದವಿಪೂರ್ವ ಕಾಲೇಜುಗಳಿಗೆ ರಜೆ ಘೋಷಣೆ

ಕಾರವಾರ : ಉತ್ತರ ಕನ್ನಡ ಜಿಲ್ಲೆಯಲ್ಲಿ ಕಳೆದ ಎರಡು ದಿನಗಳಿಂದ ಭಾರೀ ಪ್ರಮಾಣದಲ್ಲಿ ಸುರಿಯುತ್ತಿದ್ದು, ಹಲವೆಡೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿದೆ. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಸುರಕ್ಷತೆಯ ದೃಷ್ಟಿಯಿಂದ ಮುಂಜಾಗ್ರತಾ ಕ್ರಮವಾಗಿ ಶನಿವಾರ (ಜುಲೈ 6) ಜಿಲ್ಲೆಯ ಕರಾವಳಿ ಭಾಗದ ಐದು ತಾಲೂಕಿನ ಶಾಲೆ- ಪದವಿ ಪೂರ್ವ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಉತ್ತರ ಕನ್ನಡ … Continued