ಕುಮಟಾ: ಜಿಲ್ಲಾ ಮಟ್ಟದ ಭಜನಾ ಸ್ಪರ್ಧೆಯಲ್ಲಿ ಕೂಜಳ್ಳಿಯ ಭಾವಧಾರಾ ಭಜನಾ ಮಂಡಳಿ ಪ್ರಥಮ

ಕುಮಟಾ: ಯುಗಾದಿ ಉತ್ಸವ ಸಮಿತಿ ಕುಮಟಾ ವತಿಯಿಂದ ಆಯೋಜಿಸಲಾಗಿದ್ದ ಜಿಲ್ಲಾ ಮಟ್ಟದ ಭಜನಾ ಸ್ಪರ್ಧೆಯಲ್ಲಿ ಕೂಜಳ್ಳಿಯ ಭಾವಧಾರಾ ಭಜನಾ ಮಂಡಳಿ ಪ್ರಥಮ ಸ್ಥಾನ ಪಡೆದಿದೆ. ಕುಮಟಾದ ನೆಲ್ಲಿಕೇರಿಯ ಮಹಾಸತಿ ದೇವಸ್ಥಾನದಲ್ಲಿ ಶನಿವಾರ (ಏಪ್ರಿಲ್‌ 6) ಜಿಲ್ಲಾ ಮಟ್ಟದ ಭಜನಾ ಸ್ಪರ್ಧೆ ನಡೆಯಿತು. ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳೇ ಇದ್ದ ಕೂಜಳ್ಳಿಯ ಭಾವಧಾರಾ ಭಜನಾ ಮಂಡಳಿ ಪ್ರಥಮ ಸ್ಥಾನ … Continued

ವೀಡಿಯೊ..| ಕುಮಟಾ : ಅಘನಾಶಿನಿ ನದಿಗೆ ಅಡ್ಡವಾಗಿ ನಿರ್ಮಾಣವಾಗುತ್ತಿದ್ದ ಸೇತುವೆಯ ಸ್ಲ್ಯಾಬ್‌ ಕುಸಿತ

ಕುಮಟಾ: ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಮಿರ್ಜಾನ ‌ತಾರೀಬಾಗಿನಲ್ಲಿ ನಿರ್ಮಾಣ ಹಂತದ ಸೇತುವೆಯ ಸ್ಲ್ಯಾಬ್ ಕುಸಿದು ಬಿದ್ದ ಘಟನೆ ಬುಧವಾರ ನಡೆದಿದೆ ಎಂದು ವರದಿಯಾಗಿದೆ. ಕುಸಿದ ಸ್ಲ್ಯಾಬ್‌ ಅಡಿ ಸಿಲುಕಿ ಹಿಟಾಚಿ, ಕ್ರೇನ್ ಜಖಂಗೊಂಡಿದೆ. ಕಾರ್ಮಿಕರಿಗೆ ಯಾವುದೇ ಅಪಾಯವಾಗಿಲ್ಲ ಎಂದು ವರದಿಯಾಗಿದೆ. ಕುಮಟಾದ ತಾರೀಬಾಗಿಲಿನಲ್ಲಿ ಅಘನಾಶಿನಿ ನದಿಗೆ ಅಡ್ಡಲಾಗಿ ಕೋಟ್ಯಾಂತರ ರೂಪಾಯಿ ವೆಚ್ಚದಲ್ಲಿ ಮಿರ್ಜಾನ್‌-ಹೆಗಡೆ … Continued

ವೀಡಿಯೊ…| ಕುಮಟಾ: ಆತಂಕ ಮೂಡಿಸಿದ್ದ ಚಿರತೆ ಕೊನೆಗೂ ಬೋನಿಗೆ ಬಿತ್ತು…!

ಕುಮಟಾ : ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಹೊಲನಗದ್ದೆ, ಹಳಕಾರ, ಚಿತ್ರಗಿ ಮೊದಲಾದ ಪ್ರದೇಶಗಳಲ್ಲಿ ರಾತ್ರಿ ಅವಧಿಯಲ್ಲಿ ಆಗಾಗ ಜನರಿಗೆ ಕಾಣಿಸಿಕೊಂಡು ಜನರಿಗೆ ಆತಂಕ ಮೂಡಿಸಿದ್ದ ಚಿರತೆಯೊಂದು ಶುಕ್ರವಾರ ರಾತ್ರಿ ಬೋನಿಗೆ ಬಿದ್ದಿದೆ. ಕುಮಟಾ ತಾಲೂಕಿನ ಚಿತ್ರಗಿಯ ಶೇಷಾದ್ರಿ ಗುಡ್ಡದಲ್ಲಿ ಅರಣ್ಯ ಇಲಾಖೆಯವರು ಇಟ್ಟಿರುವ ಬೋನಿನಲ್ಲಿ ಈ ಚಿರತೆ ಸೆರೆಯಾಗಿದೆ. ಈ ಭಾಗದ ಜನರು … Continued

ವೀಡಿಯೊ….| ಕುಮಟಾ : ಕಡ್ಲೆಯ ಸಮುದ್ರ ತೀರದಲ್ಲಿ ಬೃಹತ್‌ ಆಮೆ ಕಳೇಬರ ಪತ್ತೆ

ಕುಮಟಾ : ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಹೊಲನ ಗದ್ದೆಯ ಕಡ್ಲೆಯ ಅರಬ್ಬಿ ಸಮುದ್ರ ತೀರದಲ್ಲಿ ಆಲಿವರ್ ರಿಡ್ಲೆ ತಳಿಯ ಬೃಹತ್‌ ಆಮೆಯ ಕಳೇಬರ ಪತ್ತೆಯಾಗಿದೆ. ಆಮೆಯು ಮೂರು ಅಡಿಗಿಂತ ಹೆಚ್ಚು ( 96 ಸೆಂಮೀ) ಉದ್ದವಿದೆ. ಇದರ ವಯಸ್ಸು 30 ರಿಂದ 40 ವರ್ಷ ಆಗಿರಬಹುದು. ಈ ಜಾತಿಯ ಬೃಹತ್‌ ಆಮೆಗಳು ಸಾಮಾನ್ಯವಾಗಿ … Continued

ಕುಮಟಾ: ಮಿರ್ಜಾನ-ಕೋಡ್ಕಣಿಯ ವೈದ್ಯ ಡಾ. ರತ್ನಾಕರ ಶಾನಭಾಗ ನಿಧನ

ಕುಮಟಾ: ಉತ್ತರ ಕನ್ನಡ ಜಿಲ್ಲೆಯ ಮಿರ್ಜಾನ-ಕೋಡ್ಕಣಿಯ ಹೆಸರಾಂತ ವೈದ್ಯರಾಗಿದ್ದ ಡಾ. ರತ್ನಾಕರ ರಾಮ ಶಾನಭಾಗ (77) ಗುರುವಾರ ತಡರಾತ್ರಿ ನಿಧನರಾಗಿದ್ದಾರೆ. ಕಳೆದ ವಾರ ಮಿರ್ಜಾನ ಬಳಿ ನಡೆದ ರಿಕ್ಷಾ ಅಪಘಾತದಲ್ಲಿ ಗಾಯಗೊಂಡ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ. ಮೃತರು ಪತ್ನಿ, ಓರ್ವ ಪುತ್ರ, ಓರ್ವ ಪುತ್ರಿ, ಅಪಾರ … Continued

ಚಂದಾವರ : ಮಾರ್ಚ್‌ 16ರಿಂದ ಹನುಮಂತ ದೇವರ ಮೂಲ ಮೂರ್ತಿ ಪುನರ್ ಪ್ರತಿಷ್ಠಾ ಮಹೋತ್ಸವ

ಕುಮಟಾ: ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಚಂದಾವರದ ಸುಪ್ರಸಿದ್ಧ ಹನುಮಂತ ದೇವರ ಮೂಲ ಮೂರ್ತಿ ಪುನರ್ ಪ್ರತಿಷ್ಠಾಪನೆ ಕಾರ್ಯಕ್ರಮ ಮಾರ್ಚ್ 16ರಿಂದ 18ರ ವರೆಗೆ ನಡೆಯಲಿದೆ. ಹೊನ್ನಾವರ, ಕುಮಟಾ ತಾಲೂಕಿನ ಅನೇಕ ಗ್ರಾಮಗಳು ಸೇರಿದಂತೆ ಚಂದಾವರ ಸೀಮೆಯಷ್ಟೇ ಅಲ್ಲದೆ ಉತ್ತರ ಕನ್ನಡ ಜಿಲ್ಲೆ ಹಾಗೂ ನಾಡಿನ ವಿವಿಧೆಡೆಯ ಭಕ್ತರ ಆರಾಧ್ಯ ದೈವವಾಗಿರುವ ಚಂದಾವರದ ಹನುಮಂತ … Continued

ವೀಡಿಯೊ..| ಕುಮಟಾ : ಮನೆ ಬಾಗಿಲಿಗೇ ಬಂದು ನಾಯಿ ಹೊತ್ತೊಯ್ದ ಚಿರತೆ…!

ಕುಮಟಾ : ಮನೆಯಂಗಳಕ್ಕೇ ಬಂದ ಚಿರತೆಯೊಂದು ನಾಯಿಯನ್ನು ಹೊತ್ತೊಯ್ದ ಘಟನೆ ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಹೊಲನಗದ್ದೆಯಲ್ಲಿ ನಡೆದಿದೆ. ಕುಮಟಾ ತಾಲೂಕಿನ ಹೊಲನಗದ್ದೆಯ ಬೆಳ್ಳಕ್ಕಿ ಎಂಬಲ್ಲಿ ದತ್ತಾತ್ರೇಯ ಭಟ್ಟ ಎಂಬವರ ಮನೆಯಲ್ಲಿ ಬುಧವಾರ ರಾತ್ರಿ ಈ ಘಟನೆ ನಡೆದಿದ್ದು, ಮನೆಯವರು ಹಾಗೂ ಅಕ್ಕಪಕ್ಕದ ಮನೆಯವರು ಭಯಬೀತರಾಗಿದ್ದಾರೆ. ರಾತ್ರಿ ಮನೆಯ ಅಂಗಳಕ್ಕೇ ಬಂದ ಚಿರತೆ ನಾಯಿ … Continued

ಸಿಎಂ ಸಿದ್ದರಾಮಯ್ಯ ವಿರುದ್ಧ ಸಂಸದ ಅನಂತಕುಮಾರ ಹೆಗಡೆ ಬಳಸಿದ ಭಾಷೆ ಶೋಭೆ ತರುವಂಥದ್ದಲ್ಲ : ಹೈಕೋರ್ಟ್‌ ಅಸಮಾಧಾನ

ಬೆಂಗಳೂರು : “ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಬಿಜೆಪಿ ಸಂಸದ ಅನಂತಕುಮಾರ ಹೆಗಡೆ ಅವರು ಬಳಕೆ ಮಾಡಿರುವ ಭಾಷೆ ಶೋಭೆ ತರುವಂಥದ್ದಲ್ಲ. ಭಾಷೆ ಬಳಕೆ ಮೇಲೆ ನಿಯಂತ್ರಣ ಇರಬೇಕು ಎಂಬುದನ್ನು ನಿಮ್ಮ ಕ್ಷಕಿದಾರರಿಗೆ ಹೇಳಿ” ಎಂದು ಹೈಕೋರ್ಟ್‌ ಶುಕ್ರವಾರ ಮೌಖಿಕವಾಗಿ ಎಚ್ಚರಿಕೆ ನೀಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ರಾಮಮಂದಿರ ವಿಚಾರದ ಕುರಿತು ಆಕ್ಷೇಪಾರ್ಹ ಹೇಳಿಕೆ … Continued

ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗೆ ಫೆ.೧೬ರ ಬಜೆಟ್‌ ನಲ್ಲೇ ಹಣ ನೀಡಿ : ಪಾದಯಾತ್ರೆಯಲ್ಲಿ ಸಾಗಿ ಸಚಿವರಿಗೆ ಮನವಿ ನೀಡಿ ಅನಂತಮೂರ್ತಿ ಹೆಗಡೆ ಒತ್ತಾಯ

ಭಟ್ಕಳ: ಉತ್ತರ ಕನ್ನಡ ಜಿಲ್ಲೆಯಲ್ಲಿ ಅತ್ಯಗತ್ಯವಾದ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯನ್ನು ಅತಿ ಶೀಘ್ರದಲ್ಲಿ ಆರಂಭಿಸಬೇಕು, ಆಸ್ಪತ್ರೆ ನಿರ್ಮಾಣಕ್ಕೆ ಈ ವರ್ಷದ ಬಜೆಟ್‌ನಲ್ಲಿ ಹಣ ಮೀಸಲಿಡಬೇಕು ಎಂದು ಆಗ್ರಹಿಸಿ ಕುಮಟಾದಿಂದ ಭಟ್ಕಳದಲ್ಲಿರುವ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯ ಅವರ ಕಚೇರಿ ವರೆಗೆ ಮೂರು ದಿನಗಳ ಕಾಲ ಪಾದಯಾತ್ರೆ ನಡೆಸಿದ ಸಾಮಾಜಿಕ ಹೋರಾಟಗಾರ ಬುಧವಾರ ಸಚಿವರಿಗೆ ಮನವಿ … Continued

ಬಜೆಟ್‌ ಅಧಿವೇಶನದಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗೆ ಹಣ ಬಿಡುಗಡೆ ಮಾಡದಿದ್ರೆ ಉಸ್ತುವಾರಿ ಸಚಿವರ ಕಚೇರಿ ಮುಂದೆಯೇ ಆಮರಣಾಂತ ಉಪವಾಸ : ಸರ್ಕಾರಕ್ಕೆ ಅನಂತಮೂರ್ತಿ ಹೆಗಡೆ ಎಚ್ಚರಿಕೆ

 ಕುಮಟಾ : ಭೌಗೋಳಿಕ ಪರಿಸ್ಥಿತಿ ಹಾಗೂ ಜಿಲ್ಲೆಯ ವಿಸ್ತಾರ ಗಮನಿಸಿದರೆ ಉತ್ತರ ಕನ್ನಡ ಜಿಲ್ಲೆಗೆ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ತುರ್ತು ಅಗತ್ಯವಿದ್ದು, ಒಂದು ವೇಳೆ ಫೆಬ್ರವರಿ ೧೬ರಿಂದ ನಡೆಯುವ ಬಜೆಟ್ ಅಧಿವೇಶನದಲ್ಲಿ ನಮ್ಮ ಜಿಲ್ಲೆಯ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗೆ ಹಣ ಬಿಡುಗಡೆ ಮಾಡದಿದ್ದರೆ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯರ ಕಚೇರಿ ಮುಂದೆ ಕುಳಿತು ಆಮರಣಾಂತ … Continued