ಕುಮಟಾ: ಹೆಂಡತಿ, ಮಗನನ್ನು ಕೊಂದ ನಂತರ ತಾನೂ ಆತ್ಮಹತ್ಯೆ ಮಾಡಿಕೊಂಡ ಗಂಡ

ಕುಮಟಾ:  ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಬಂಗಣೆಯಲ್ಲಿ ಗುರುವಾರ ತಡರಾತ್ರಿ, ಹೆಂಡತಿ ಮತ್ತು ಮಗನನ್ನು ಕೊಂದ ನಂತರ ಗಂಡ ಆತ್ಮಹತ್ಯೆ ಮಾಡಿಕೊಂಡ ನಡೆದ ವರದಿಯಾಗಿದೆ.
ಕೊಲೆಯಾದವರನ್ನು ತಾಕಿ ಮರಾಠಿ (35) ಹಾಗೂ ಲಕ್ಷ್ಮಣ ಮರಾಠಿ (12) ಎಂದು ಗುರುತಿಸಲಾಗಿದೆ. ಕೊಲೆ ಮಾಡಿದ ಆರೋಪಿ ರಾಮ ಮರಾಠಿ (40) ನಂತರ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ರಾಮ ಮರಾಠಿ ಕೊಂಚ ಮಾನಸಿಕ ಅಸ್ವಸ್ಥನಾಗಿದ್ದು, ಕಾಯಿಲೆಗೆ ತಂದ ಔಷಧಿ ಸೇವಿಸುತ್ತಿರಲಿಲ್ಲ. ಗುರುವಾರ ಮದ್ಯ ಕುಡಿದ ಅಮಲಿನಲ್ಲಿದ್ದ ಆತ, ಮನೆಯ ಜಗುಲಿಯಲ್ಲಿ ಮಲಗಿದ್ದ ಹೆಂಡತಿಗೆ ಕತ್ತಿಯಿಂದ ಕಡಿದು ಕೊಲೆ ಮಾಡಿದ್ದಾನೆ. ಅಮ್ಮನ ಮೇಲೆ ಕತ್ತಿಯಿಂದ ಹಲ್ಲೆ ಮಾಡುತ್ತಿರುವುದನ್ನು ಕಂಡ ಕೊಲೆ ಮಾಡಿದ ದೃಶ್ಯವನ್ನ ಇಬ್ಬರು ಮಕ್ಕಳು ನೋಡಿ ಕಿರುಚಾಡಿದ್ದಾರೆ. ಈ ವೇಳೆ ಮಗ ಲಕ್ಷ್ಮಣನನ್ನು ಅಟ್ಟಿಸಿಕೊಂಡು ಹೋಗಿ ಕೊಂದಿದ್ದಾನೆ. ಹಿರಿಯ ಮಗ ಭಾಸ್ಕರ ಮರಾಠಿ (15) ತಪ್ಪಿಸಿಕೊಂಡು ಪಕ್ಕದ ಮನೆಗೆ ಓಡಿಹೋಗಿ ಅವರನ್ನು ಕರೆದುಕೊಂಡು ಬರುವಷ್ಟರಲ್ಲಿ ರಾಮಾ ಮರಾಠೆ ಮನೆಯ ಜಗಲಿಯಲ್ಲಿ ಮರದ ಪಕಾಸಿಗೆ ಕುತ್ತಿಗೆಗೆ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ವರದಿಯಾಗಿದೆ.
ಕೃತ್ಯದ ಬಗ್ಗೆ ಗೊತ್ತಾಗಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಪ್ರಮುಖ ಸುದ್ದಿ :-   ಕುಣಿಗಲ್ : ರಾಮನವಮಿ ಪಾನಕ ಸೇವಿಸಿದ 42 ಮಂದಿ ಅಸ್ವಸ್ಥ

5 / 5. 3

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement