ಪ್ರವಾಸಿಗರು ಸಮುದ್ರಕ್ಕೆ ಇಳಿಯದಂತೆ ಬೀಚ್‌ ರೆಸಾರ್ಟ್‌ ಮಾಲಕರು ಸೂಕ್ತ ಕ್ರಮ ಕೈಗೊಳ್ಳಬೇಕು: ಎಸ್‌ಪಿ ಖಡಕ್‌ ಸೂಚನೆ

ಕುಮಟಾ: ಕುಮಟಾ: ಉತ್ತರಕನ್ನಡ ಜಿಲ್ಲೆಯ ಅರಬ್ಬಿ ಸಮುದ್ರ ತೀರದಲ್ಲಿ ಪ್ರವಾಸಿಗರು ಸುಮುದ್ರದ ಅಲೆಗೆ ಸಿಲುಕಿ ಅಪಾಯಕ್ಕೆ ಒಳಗಾಗುತ್ತಿರುವುದು ಹೆಚ್ಚುತ್ತಿದೆ. ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆಯು ಸೂಕ್ತ ಕ್ರಮ ಕೈಗೊಳ್ಳುತ್ತಿದೆ. ಮಳೆಗಾಲದಲ್ಲಿ ಪ್ರವಾಸಿಗರು ಸಮುದ್ರಕ್ಕೆ ಇಳಿಯದಂತೆ ಬೀಚ್‌ಗೆ ಹೊಂದಿಕೊಂಡಿರುವ ರೇಸಾರ್ಟ್‌ ಮಾಲಕರು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಹೇಳಿದ್ದಾರೆ.
ಇದರ ಬಗ್ಗೆ ರೆಸಾರ್ಟ್‌ ಮಾಲೀಕರೊಂದಿಗೆ ಸಭೆ ನಡೆಸಿದ್ದೇವೆ. ಸಂಬಂಧಿಸಿದ ಎಲ್ಲ ಮಾಲೀಕರು ಪೊಲೀಸ್ ಇಲಾಖೆಯ ಸೂಚನೆಯನ್ನು ಪಾಲಿಸುವುದಕ್ಕೆ ಒಪ್ಪಿದ್ದಾರೆ. ಅಗತ್ಯ ಇರುವಲ್ಲಿ ಸೂಚನಾ ಫಲಕ ಅಳವಡಿಸಲಾಗುವುದು ಎಂದು ತಿಳಿಸಿದ್ದಾರೆ.
ಮಳೆಗಾಲದಲ್ಲಿ ಸಮುದ್ರ ಹೆಚ್ಚು ಭೀಕರವಾಗಿರುತ್ತದೆ. ಈ ಸಂದರ್ಭದಲ್ಲಿ ಜನರು ನೀರಿಗೆ ಇಳಿಯ ಕೂಡದು. ಜಿಲ್ಲೆಯಲ್ಲಿ ಸಾಕಷ್ಟು ಪ್ರವಾಸಿ ಸ್ಥಳಗಳಿವೆ. ಅವುಗಳನ್ನು ಪ್ರವಾಸಿಗರು ಸಂದರ್ಶಿಸಬೇಕು. ಮಳೆಗಾಲದ ನಂತರ ಅರಬ್ಬಿ ಸಮುದ್ರ ತೀರ ಸಂದರ್ಶಿಸುವುದು ಹೆಚ್ಚು ಸೂಕ್ತ ಎಂದರು.

ರೆಸಾರ್ಟ್‌ ಗಳು ,ಹೊಟೇಲ್‌ಗಳು, ಹೋಮ್ ಸ್ಟೇಗಳ ಮಾಲೀಕರು ಅರಬ್ಬಿ ಸಮುದ್ರದ ಅಪಾಯದ ಬಗ್ಗೆ ಪ್ರವಾಸಿಗರಿಗೆ ತಿಳಿಹೇಳಿ ನೀರಿಗೆ ಇಳಿಯದಂತೆ ಸೂಕ್ತ ಮಾಹಿತಿ ನೀಡಬೇಕು. ಅಗತ್ಯ ಇರುವಲ್ಲಿ ಸೂಚನಾ ಫಲಕ ಅಳವಡಿಸಿರಬೇಕು. ಅಪಾಯಕರ ಸನ್ನಿವೇಶ ಎದುರಿಸಲು ಲೈಫ್ ಜಾಕೆಟ್‌ನಂತಹ ಪರಿಕರವನ್ನು ಹೊಂದಿರಬೇಕು ಎಂದು ಸಂಬಂಧಿಸಿದ ಮಾಲೀಕರಿಗೆ ಖಡಕ್ ಎಚ್ಚರಿಕೆ ನೀಡಿದ್ದೆವೆ. ಕುಮಟಾದ ಅರಬ್ಬಿ ಸಮುದ್ರದ ತೀರದಲ್ಲಿ ಪ್ರವಾಸಿಗರು ಮಳೆಗಾಲದಲ್ಲಿ ಸಮುದ್ರಕ್ಕೆ ಇಳಿಯದಂತೆ ಕೋಸ್ಟಲ್ ಗಾರ್ಡ್‌ಗಳನ್ನು ನೇಮಿಸಲಾಗುವುದು.ಈ ರೀತಿಯ ವ್ಯವಸ್ಥೆಯನ್ನು ಹೊನ್ನಾವರ ಮತ್ತು ಭಟ್ಕಳ ಸಮುದ್ರ ತೀರದಲ್ಲೂ ಹಂತ-ಹಂತವಾಗಿ ಅಳವಡಿಸಲಾಗುವುದು ಎಂದು ಅವರು ಮಾಹಿತಿ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಸಿಪಿಐ ತಿಮ್ಮಪ್ಪ ನಾಯಕ, ಪಿಎಸ್ಐ ನವೀನ್‌ ನಾಯ್ಕ ಮತ್ತಿತರರು ಇದ್ದರು.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement