ಕುಮಟಾ: ಭಕ್ತರನ್ನು ವಿಸ್ಮಯಗೊಳಿಸಿದ ಚಂದಾವರ ಹನುಮಂತ ದೇವರು

ಕುಮಟಾ: ಉತ್ತರ ಕನ್ನಡ ಜಿಲ್ಲೆಯ ಚಂದಾವರದ ಹನುಮಂತ ದೇವರು ವಾರ್ಷಿಕ ಸವಾರಿ ಹೋಗುವುದು ಸಂಪ್ರದಾಯ. ಈ ವರ್ಷದ ಸವಾರಿ ಅನೇಕ ವಿಸ್ಮಯಕ್ಕೆ ಕಾರಣವಾಗಿದೆ.
ಸುಮಾರು ಒಂದು ತಿಂಗಳ ಸವಾರಿ ಕಾಲದಲ್ಲಿ ಚಂದಾವರದ ಶ್ರೀ ಹನುಮಂತ ದೇವರು ಅನೇಕ ವಿಸ್ಮಯಕ್ಕೆ ಕಾರಣವಾಗಿದ್ದಾರೆ ಎಂದು ಜನರು ಹೇಳುತ್ತಿದ್ದಾರೆ.

ಚಂದಾವರದಿಂದ ಸವಾರಿ ಹೊರಟ ಶ್ರೀಹನುಮಂತ ದೇವರು ಕುಮಟಾದ ತಂಡ್ರಕುಳಿಯಲ್ಲಿ ತಂಗಿ ನಂತರ ದಿವಗಿ ರಾಮಾನಂದ ಸ್ವಾಮೀಜಿ ಮಠದಲ್ಲಿ ಕೆಲವು ದಿನ ಇದ್ದು ಭಕ್ತರನ್ನು ಬೆರಗುಗೊಳಿಸಿದ್ದಾರೆ ಹನುಮಂತ ದೇವರು.. ನಂತರ ಹೆಗಡೆಯ ಶ್ರೀ ಶಾಂತಿಕಾಂಬಾ ದೇವಾಲಯದಲ್ಲಿ ಸುಮಾರು ಹತ್ತೊಂಬತ್ತು ದಿನಗಳ ಕಾಲ ತಂಗಿದ್ದು ಅಲ್ಲಿಯ ವಿಸ್ಮಯ ಭಕ್ತರನ್ನು ಭಾವಪರವಶಗೊಳಿಸಿತು.
ಪಲ್ಲಕ್ಕಿ ಹೊತ್ತವರು ಕಾಲು ನೆಲಕ್ಕೆ ತಾಗದ ರೀತಿ ಮೇಲಕ್ಕೆ ನೆಗೆದು ಗಿರಗಿಟಿ ಹೊಡೆಸಿದ್ದ ದೃಶ್ಯ ನಂಬಲಸಾಧ್ಯದಂತಿತ್ತು ಎಂದು ಅಲ್ಲಿನವರು ಹೇಳಿದ್ದಾರೆ. ಅಲ್ಲಿ ಇಂದು, ಶನಿವಾರ ಶ್ರೀ ದೇವರ ಪೂಜೆ ನಂತರ ಅನ್ನ ಸಂತರ್ಪಣೆ ನಡೆಯಿತು. ನಂತರ ಸಂಜೆ ಶಾಸಕ ದಿನಕರ ಶೆಟ್ಟಿ ಪೂಜೆ ಸಲ್ಲಿಸಿ ಪಲ್ಲಕ್ಕಿಗೆ ಹೆಗಲು ಕೊಟ್ಟ ನಂತರ ಹನುಮಂತ ದೇವರ ಸವಾರಿ ಚಂದಾವರಕ್ಕೆ ಪ್ರಯಾಣ ಬೆಳೆಸಿತ್ತು.

ಈ ಸಮಯದಲ್ಲಿ ಮತ್ತೊಂದು ವಿಸ್ಮಯ ನಡೆಯಿತು. ರಾಷ್ಟ್ರೀಯ ಹೆದ್ದಾರಿ ೬೬ರ ಮೂರೂರು ಕ್ರಾಸ್‌ ತಿರುವಿನಲ್ಲಿ ಹನುಮಂತ ದೇವರ ಪಲ್ಲಕ್ಕಿ ಬಂದು ನಿಂತಿತ್ತು. ಅಲ್ಲಿಂದ ಮುಂದಕ್ಕೆ ಚಲಿಸಲಿಲ್ಲ. ಅಷ್ಟರಲ್ಲಿ  ಶ್ರೀ ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಶ್ರೀಗಳ ವಾಹನ ಬಂತು ಸ್ವಾಮೀಜಿಗಳು ತಮ್ಮ ವಾಹನದಿಂದ ಇಳಿದು ಬಂದು ಶ್ರೀ ದೇವರಿಗೆ ನಮಿಸಿ ಪ್ರಾರ್ಥಿಸಿದ ನಂತರವೇ ಹನುಮಂತ ದೇವರ ಪಲ್ಲಕ್ಕಿ ಅಲ್ಲಿಂದ ಚಲಿಸಿತು. ಅಲ್ಲಿಯವರೆಗೆ ಅದು ಆ ಜಾಗ ಬಿಟ್ಟು ಕದಲಲಿಲ್ಲ ಎಂದು ಅಲ್ಲಿದ್ದ ಅನೇಕ ಪ್ರತ್ಯಕ್ಷದರ್ಶಿಗಳು ಹೇಳಿದರು. ಇದು ಅಲ್ಲಿದ್ದವರಿಗೆ ಆಶ್ಚರ್ಯ ಉಂಟುಮಾಡಿತು.
ಶನಿವಾರ ಹೆಗಡೆಯ ಶ್ರೀ ಶಾಂತಿಕಾ ಪರಮೇಶ್ವರಿ ದೇವಾಲಯದಿಂದ ಚಂದಾವರದ ತನ್ನ ಮೂಲ ಸ್ಥಳಕ್ಕೆ ತೆರಳುವ ಸವಾರಿಯಲ್ಲಿ ೧೫ ಸಾವಿರಕ್ಕೂ ಹೆಚ್ಚು ಭಕ್ತರು ಶ್ರೀ ದೇವರ ಸವಾರಿ ಸಂಗಡ ಸಾಗಿದ್ದು ವಿಶೇಷವಾಗಿತ್ತು. ಸುಮಾರು ೧೮ ಕಿ.ಮೀ ವರೆಗೆ ಸಾವಿರಾರು ಭಕ್ತರು ನಡೆದುಕೊಂಡೇ ಸವಾರಿ ಸಂಗಡ ಚಂದಾವರ ಹನುಮಂತ ದೇವರ ದೇವಾಲಯಕ್ಕೆ ತೆರಳಿದರು.

 

 

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement