ಗೋಕರ್ಣ : ಸಮುದ್ರದ ಅಲೆಗಳ ಸೆಳೆತಕ್ಕೆ ಸಿಲುಕಿದ ಇಬ್ಬರು ಪ್ರವಾಸಿಗರ ರಕ್ಷಣೆ

ಕಾರವಾರ : ಸಮುದ್ರಕ್ಕೆ ಇಳಿದಿದ್ದ ವೇಳೆ ಅಪಾಯಕಾರಿ ಅಲೆಗಳ ಸೆಳೆತಕ್ಕೆ ಸಿಲುಕಿ ದಡ ಸೇರಲಾಗದೆ ಪರದಾಡುತ್ತಿದ್ದ ಬೆಂಗಳೂರಿನ ಇಬ್ಬರು ಪ್ರವಾಸಿಗರನ್ನು ಕೂಡ್ಲೆ ಬೀಚ್‌ನ ಜೀವ ರಕ್ಷಕ ಸಿಬ್ಬಂದಿ ಹಾಗೂ ವಾಟರ್‌ ಸ್ಪೋರ್ಟ್ಸ್ ಸಿಬ್ಬಂದಿ ಕ್ಷಿಪ್ರ ಕಾರ್ಯಾಚರಣೆ ನಡೆಸಿ ಸುರಕ್ಷಿತವಾಗಿ ಪಾರಾ ಮಾಡಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಗೋಕರ್ಣದಲ್ಲಿ ನಡೆದಿದೆ ಎಂದುವರದಿಯಾಗಿದೆ. ಈ … Continued

ಗೋಕರ್ಣ ಕಡಲ ತೀರದಲ್ಲಿ ವ್ಯಕ್ತಿಯ ಮೃತದೇಹ ಪತ್ತೆ

ಕಾರವಾರ : ಉತ್ತರ ಕನ್ನಡ ಜಿಲ್ಲೆಯ ಗೋಕರ್ಣಕ್ಕೆ ಬಂದಿದ್ದ ಹಿರಿಯ ನಾಗರಿಕರೊಬ್ಬರ ಮೃತದೇಹ ಬುಧವಾರ ಇಲ್ಲಿನ ಮುಖ್ಯ ಕಡಲತೀರಕ್ಕೆ ತೇಲಿಬಂದಿದೆ ಎಂದು ವರದಿಯಾಗಿದೆ. ರಾಮತೀರ್ಥ ಭಾಗದ ಸಮುದ್ರದ ನೀರಿನಲ್ಲಿ ಬುಧವಾರ ಅಪರಿಚಿತ ವ್ಯಕ್ತಿಯ ದೇಹ ತೇಲುತ್ತಿರುವುದನ್ನು ಕಂಡ ಸ್ಥಳೀಯ ಮೀನುಗಾರರು ತಕ್ಷಣವೇ ಕಡಲತೀರದ ಜಾಗೃತ ಸಿಬ್ಬಂದಿಗೆ ಮಾಹಿತಿ ರವಾನಿಸಿದ್ದಾರೆ.. ಬೀಚ್ ಸೂಪರ್‌ವೈಸರ್ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. … Continued

ಗೋಕರ್ಣ ಮಹಾಗಣಪತಿ ದೇವರ ಸ್ಪರ್ಶ ದರ್ಶನಕ್ಕೆ ನಿರ್ಬಂಧ

ಕಾರವಾರ : ಪುರಾಣ ಪ್ರಸಿದ್ದ ಗೋಕರ್ಣ ಮಹಾಗಣಪತಿ ಮಂದಿರದ ಪ್ರಾಚೀನ ಶಿಲಾಮೂರ್ತಿ ಸವಕಳಿಯ ಹಿನ್ನೆಲೆಯಲ್ಲಿ ಭಕ್ತರಿಗೆ ಸ್ಪರ್ಶ ದರ್ಶನ, ಪೂಜಾ ಸೇವೆಗಳನ್ನ ಬಂದ್ ಮಾಡಿ ಹಿಂದು ಧಾರ್ಮಿಕ ದತ್ತಿ ಇಲಾಖೆಯ ಸಹಾಯಕ ಆಯುಕ್ತರು ಆದೇಶಿಸಿದ್ದಾರೆ. ಬುಧವಾರ ಸಂಜೆ ದೇವಾಲಯ ಆವಾರದಲ್ಲಿ ಕಾರವಾರದ ಹಿಂದೂ ಧಾರ್ಮಿಕ ದತ್ತಿ ಇಲಾಖೆಯ ಸಹಾಯಕ ಆಯುಕ್ತೆ ಸುಧಾ ತಳವಾರ ನೇತೃತ್ವದಲ್ಲಿ ನಡೆದ … Continued

ಕುಮಟಾ: ಭಾರಿ ಮಳೆಗೆ ಗೋಕರ್ಣ–ತದಡಿ ರಸ್ತೆಯಲ್ಲಿ ಗುಡ್ಡ ಕುಸಿತ

ಕಾರವಾರ : ಗುರುವಾರ ಸಂಜೆಯಿಂದ ಸುರಿಯುತ್ತಿರುವ ಭಾರೀ ಮಳೆಯ ಪರಿಣಾಮ ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಗೋಕರ್ಣ–ತದಡಿ ರಸ್ತೆಯ ಬದಿಯ ಗುಡ್ಡ ಕುಸಿದಿದ್ದು, ರಸ್ತೆ ಸಂಚಾ ಸದ್ಯಕ್ಕೆ ಸ್ಥಗಿತಗೊಂಡಿದೆ. ಗುಡ್ಡ ಕುಸಿತದಿಂದ ರಸ್ತೆಯ ಮೇಲೆ ಅಪಾರ ಪ್ರಮಾಣದ ಮಣ್ಣು ಹಾಗೂ ಬೃಹತ್ ಕಲ್ಲುಗಳು ಬಿದ್ದಿದ್ದರಿಂದ ಸುರಕ್ಷತಾ ಕ್ರಮವಾಗಿ ಈ ಮಾರ್ಗದಲ್ಲಿ ವಾಹನಗಳ ಸಂಚಾರವನ್ನು ತಾತ್ಕಾಲಿಕವಾಗಿ … Continued

ಗೋಕರ್ಣ ; ಭಾರಿ ಮಳೆಗೆ ಮಹಾಬಲೇಶ್ವರ ದೇಗುಲದ ಗರ್ಭಗುಡಿಗೆ ನೀರು

ಕಾರವಾರ : ಉತ್ತರ ಕನ್ನಡ ಜಿಲ್ಲೆಯ ಕೆಲವು ತಾಲೂಕುಗಳಲ್ಲಿ ಭಾನುವಾರ ಬೆಳಿಗ್ಗೆಯಿಂದ ರಾತ್ರಿಯವರೆಗೆ ಸುರಿದ ಧಾರಾಕಾರ ಮಳೆ ಸುರಿದಿದೆ. ವಿಶೇಷವಾಗಿ ಸಿದ್ದಾಪುರ, ಹೊನ್ನಾವರ, ಕುಮಟಾ ತಾಲೂಕಿನಲ್ಲಿ ಭಾರಿ ಮಳೆಯಾಗಿದ್ದು, ಕುಮಟಾ ತಾಲೂಕಿನ ಗೋಕರ್ಣ ಭಾಗದಲ್ಲಿ ಸತತ ನಾಲ್ಕು ಗಂಟೆಗಳ ಕಾಲ ಸುರಿದ ಮಳೆಯಿಂದಾಗಿ ಪುರಾಣ ಪ್ರಸಿದ್ಧ ಗೋಕರ್ಣ ಮಹಾಬಲೇಶ್ವರ ದೇವಸ್ಥಾನದ ಗರ್ಭಗುಡಿಗೂ ನೀರು ಪ್ರವೇಶಿಸಿದೆ ಎಂದು … Continued

ನನ್ನ-ಸಿಎಂ ಸಿದ್ದರಾಮಯ್ಯ ನಡುವೆ ಒಪ್ಪಂದವಾಗಿದೆ : ಅಧಿಕಾರ ಹಂಚಿಕೆ ಬಗ್ಗೆ ಮಾರ್ಮಿಕವಾಗಿ ಹೇಳಿದ ಡಿ.ಕೆ ಶಿವಕುಮಾರ

ಕಾರವಾರ: ನನ್ನ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ನಡುವೆ ಒಂದು ಒಪ್ಪಂದವಾಗಿದೆ. ಹೈಕಮಾಂಡ್ ಒಂದು ಒಪ್ಪಂದಕ್ಕೆ ತಂದಿದೆ. ಆ ಪ್ರಕಾರ ನಾವಿಬ್ಬರೂ ಮುಂದೆ ಹೋಗುತ್ತೇವೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ  ಹೇಳಿದ್ದಾರೆ. ಗೋಕರ್ಣದಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಶುಕ್ರವಾರ ಪ್ರತಿಕ್ರಿಯೆ ನೀಡಿದ ಅವರು,  ನಾನು ಅವರು ಐದು ವರ್ಷ ಇರಲ್ಲ ಎಂದು ಎಲ್ಲಿಯೂ ಹೇಳಿಲ್ಲ. ಎಲ್ಲವೂ ಹೈಕಮಾಂಡ್ ನಿರ್ಧಾರದಂತೆ … Continued

ಗೋಕರ್ಣ : ಕುಡ್ಲೇ ಬೀಚ್‌ನಲ್ಲಿ ಸಮುದ್ರದಲ್ಲಿ ಮುಳುಗುತ್ತಿದ್ದ ವಿದೇಶಿ ಮಹಿಳೆಯ ರಕ್ಷಣೆ

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಗೋಕರ್ಣದ ಕುಡ್ಲೇ ಬೀಚ್‌ನಲ್ಲಿ (Kudle Beach) ಸೋಮವಾರ ಸಮುದ್ರದಲ್ಲಿ ಮುಳುಗಿತ್ತಿದ್ದ ವಿದೇಶಿ ಮಹಿಳೆಯನ್ನು (Woman) ರಕ್ಷಣಾ ಸಿಬ್ಬಂದಿ ರಕ್ಷಿಸಿದ್ದಾರೆ. ರಕ್ಷಣೆ ಮಾಡಲಾದ ಮಹಿಳೆಯನ್ನು ಕಜಕಿಸ್ತಾನ ಮೂಲದ (Kazakhstan) ಐದಾಲಿ (25) ಎಂದು ಗುರುತಿಸಲಾಗಿದೆ. ಕಜಕಿಸ್ತಾನ ಮೂಲದ ದಂಪತಿ ಕುಡ್ಲೆ ಬೀಚ್‌ನಲ್ಲಿ ಈಜಲು ಹೋದಾಗ ಮಹಿಳೆ ಸಮುದ್ರದ ಅಲೆಗೆ … Continued

ವೀಡಿಯೊ…| ಗೋಕರ್ಣ ಕಡಲತೀರದಲ್ಲಿ ಡಾಲ್ಫಿನ್‌ ರಕ್ಷಣೆ

ಕುಮಟಾ : ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಗೋಕರ್ಣ ಕಡಲತೀರದಲ್ಲಿ ನಡೆದ ಅಪರೂಪದ ವಿದ್ಯಮಾನದಲ್ಲಿ, ಇಬ್ಬರು ಯುವಕರು ದಡಕ್ಕೆ ಕೊಚ್ಚಿ ಬಂದಿದ್ದ ಡಾಲ್ಫಿನ್‌ನ ಜೀವವನ್ನು ಉಳಿಸುವ ಮೂಲಕ ಗಮನ ಸೆಳೆದಿದ್ದಾರೆ. ಗೋಕರ್ಣದ ಕರಾವಳಿಯಲ್ಲಿರುವ ಸೂರ್ಯ ರೆಸಾರ್ಟ್ ಬಳಿ ಕಡಲತೀರಕ್ಕೆ , ಸುಮಾರು ಐದರಿಂದ ಆರು ಅಡಿ ಉದ್ದದ ಡಾಲ್ಫಿನ್ ಮೀನು ಬಂದಿತ್ತು, ಅದು ನೀರಿನ … Continued

ಗೋಕರ್ಣದ ಬೆಟ್ಟದ ಗುಹೆಯಲ್ಲಿ ಪತ್ತೆಯಾಗಿದ್ದ ರಷ್ಯಾದ ಮಹಿಳೆ-ಮಕ್ಕಳನ್ನ ವಾಪಸ್ ರಷ್ಯಾಕ್ಕೆ ಕಳುಹಿಸಲು ಹೈಕೋರ್ಟ್ ಗ್ರೀನ್‌ ಸಿಗ್ನಲ್

ಬೆಂಗಳೂರು: ಜುಲೈನಲ್ಲಿ ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದ ಕಾಡಿನ ಗುಹೆಯಲ್ಲಿ ವಾಸಿಸುತ್ತಿದ್ದ ರಷ್ಯಾದ ಮಹಿಳೆ ಮತ್ತು ಅವರ ಇಬ್ಬರು ಹೆಣ್ಣುಮಕ್ಕಳಿಗೆ ಅವರ ದೇಶ ರಷ್ಯಾಕ್ಕೆ ಮರಳಲು ಅನುಮತಿ ನೀಡಲು ಕರ್ನಾಟಕ ಹೈಕೋರ್ಟ್ ಕೇಂದ್ರ ಸರ್ಕಾರಕ್ಕೆ ಅನುಮತಿ ನೀಡಿದೆ. ನೀನಾ ಕುಟಿನಾ ಅವರ ಮಾಜಿ ಪತಿ ಮತ್ತು ಮಕ್ಕಳ ತಂದೆ ಇಸ್ರೇಲಿ ಪ್ರಜೆ ಡ್ರೋರ್ ಶ್ಲೋಮೋ ಗೋಲ್ಡ್‌ಸ್ಟೈನ್ … Continued

ಗೋಕರ್ಣದ ಗುಹೆಯಲ್ಲಿ ವಾಸಿಸುತ್ತಿದ್ದ ರಷ್ಯಾ ಮಹಿಳೆ-ಮಕ್ಕಳನ್ನು ನೋಡಲು ತುಮಕೂರಿಗೆ ಬಂದ ಪತಿಗೆ ನಿರಾಸೆ

ಬೆಂಗಳೂರು : ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದ ಅರಣ್ಯ ಗುಹೆಯಿಂದ ರಷ್ಯಾದ ಮಹಿಳೆ ಮತ್ತು ಆಕೆಯ ಇಬ್ಬರು ಚಿಕ್ಕ ಹೆಣ್ಣುಮಕ್ಕಳನ್ನು ಪೊಲೀಸರು ರಕ್ಷಿಸಿದ ಕೆಲವು ದಿನಗಳ ನಂತರ, ತುಮಕೂರಿನ ಅಕ್ರಮ ವಲಸಿಗರ ಬಂಧನ ಕೇಂದ್ರದಲ್ಲಿರುವ ಅವರನ್ನು ಭೇಟಿ ಮಾಡಲು ಬಂದ ಆಕೆಯ ಪತಿಗೆ ಅನುಮತಿ ನಿರಾಕರಿಸಲಾಗಿದೆ. ಮೇಲಧಿಕಾರಿಗಳ ಅನುಮತಿ ಪಡೆದು ಬರುವಂತೆ ಸೂಚನೆ ನೀಡಲಾಗಿದೆ ಎಂದು … Continued