ಗೋಕರ್ಣ ಗುಹೆಯಲ್ಲಿದ್ದ ರಷ್ಯಾ ಮಹಿಳೆ ಗೋವಾ ಗುಹೆಯಲ್ಲಿ ಮಗುವಿಗೆ ಜನ್ಮ ನೀಡಿದ್ದಳು ! ತಾನೇ ಹೆರಿಗೆ ಮಾಡಿಕೊಂಡಿದ್ದಳು..!! ಮಕ್ಕಳ ತಂದೆ ಇಸ್ರೇಲಿ ಉದ್ಯಮಿ

ಬೆಂಗಳೂರು: ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದಲ್ಲಿ ತನ್ನ ಇಬ್ಬರು ಹೆಣ್ಣುಮಕ್ಕಳೊಂದಿಗೆ ಗುಹೆಯೊಳಗೆ ವಾಸಿಸುತ್ತಿದ್ದ ರಷ್ಯಾದ ಮಹಿಳೆ ನೀನಾ ಕುಟಿನಾ, ಗೋವಾದ ಗುಹೆಯಲ್ಲಿದ್ದಾಗ ಒಬ್ಬ ಮಗಳಿಗೆ ಜನ್ಮ ನೀಡಿರುವುದಾಗಿ ಹೇಳಿಕೊಂಡಿದ್ದು, ಇಸ್ರೇಲಿ ಉದ್ಯಮಿಯೊಬ್ಬರು ಈ ಇಬ್ಬರು ಮಕ್ಕಳ ತಂದೆ ಹೇಳಿದ್ದಾರೆ ಎಂದು ವರದಿಯೊಂದು ತಿಳಿಸಿದೆ. ನೀನಾ ಕುಟಿನಾ (40) ಮತ್ತು ಆರು ಮತ್ತು ನಾಲ್ಕು ವರ್ಷ ವಯಸ್ಸಿನ … Continued

ವೀಡಿಯೊ…| ಗೋಕರ್ಣ ರಾಮತೀರ್ಥ ಗುಡ್ಡದ ಮೇಲಿನ ಗುಹೆಯಲ್ಲಿ ಉಳಿದುಕೊಂಡಿದ್ದ ವಿದೇಶಿ ಮಹಿಳೆ-ಇಬ್ಬರು ಪುಟ್ಟ ಮಕ್ಕಳ ರಕ್ಷಣೆ

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದ ರಾಮತೀರ್ಥ ಗುಡ್ಡದ ಮೇಲಿನ ಅಪಾಯಕಾರಿ ಗುಹೆಯಲ್ಲಿ ಉಳಿದುಕೊಂಡಿದ್ದ ವಿದೇಶಿ ಮಹಿಳೆ ಹಾಗೂ ಅವರ ಇಬ್ಬರು ಚಿಕ್ಕ ಹೆಣ್ಣು ಮಕ್ಕಳನ್ನು ಪೊಲೀಸರು ರಕ್ಷಣೆ ಮಾಡಿ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಮಾಡಿದ್ದಾರೆ. ಗೋಕರ್ಣ ಪಿಎಸ್‌ಐ ಶ್ರೀಧರ ಎಸ್‌.ಆರ್‌. ಹಾಗೂ ಸಿಬ್ಬಂದಿ ಪ್ರವಾಸಿಗರ ಸುರಕ್ಷತೆ ದೃಷ್ಟಿಯಿಂದ ಜುಲೈ 9ರಂದು ರಾಮತೀರ್ಥ ಗುಡ್ಡದ ಮೇಲೆ … Continued

ವೀಡಿಯೊ | ಉಕ್ರೇನ್‌ ಯುದ್ಧದಲ್ಲಿ ಮೃತ ರಷ್ಯಾದ ಸೈನಿಕನ ಅಂತಿಮ ಸಂಸ್ಕಾರವನ್ನು ಹಿಂದೂ ಧರ್ಮದ ಪದ್ಧತಿಯಂತೆ ಆನ್‌ಲೈನ್‌ಲ್ಲಿ ನೆರವೇರಿಸಿದ ಗೋಕರ್ಣ ಅರ್ಚಕರು…!

ಕಾರವಾರ : ಯುದ್ಧದಲ್ಲಿ ಮಡಿದ ರಷ್ಯಾ ಯೋಧ ಸರ್ಗೇಯ ಗಾಬ್ಲೇವ್ ಅವರ ಕೊನೆಯ ಆಸೆಯಂತೆ ಆನ್ಲೈನ್ ಮೂಲಕ ಉತ್ತರಕನ್ನಡ ಜಿಲ್ಲೆಯ ಗೋಕರ್ಣದಲ್ಲಿ ಹಿಂದೂ ಪದ್ಧತಿಯಂತೆ ಅವರ ಅಂತಿಮ ಸಂಸ್ಕಾರ ನಡೆಸಲಾಯಿತು ಎಂದು ವರದಿಯಾಗಿದೆ. ದೂರದ ರಷ್ಯಾದ ಸರ್ಗೇಯ ಗಾಬ್ಲೇವ್ ಎಂಬವರು ಯುದ್ಧದಲ್ಲಿ ಮಡಿದ ನಂತರ ಅವರ ಕೊನೆಯ ಆಸೆಯಂತೆ ಅವರ ಅಂತ್ಯಕ್ರಿಯೆಯನ್ನು ಹಿಂದೂ ಪದ್ಧತಿಯಂತೆ ಗೋಕರ್ಣದಲ್ಲಿ … Continued

ಗೋಕರ್ಣ : ಸಮುದ್ರ ಅಲೆಗಳಿಗೆ ಸಿಲುಕಿ ಕೊಚ್ಚಿ ಹೋದ ಇಬ್ಬರು ವೈದ್ಯ ವಿದ್ಯಾರ್ಥಿನಿಯರು

ಕುಮಟಾ : ಇಬ್ಬರು ವಿದ್ಯಾರ್ಥಿನಿಯರು ಸಮುದ್ರದಲ್ಲಿ ಮುಳುಗಿ ಮೃತಪಟ್ಟ ಘಟನೆ ಗುರುವಾರ ಸಂಜೆ ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದ ಜಟಾಯುತೀರ್ಥ ಗುಡ್ಡದ ಬಳಿ ನಡೆದಿದೆ. ತಮಿಳುನಾಡಿನ ತಿರುಚಿಯ ಎಸ್.ಆರ್.ಎಂ ಮೆಡಿಕಲ್ ಕಾಲೇಜಿನ ಎಂಬಿಬಿಎಸ್ ಅಂತಿಮ ವರ್ಷದ ವಿದ್ಯಾರ್ಥಿನಿಯರಾದ ಕನ್ನಿಮೋಳಿ ಈಶ್ವರನ್(23) ಮತ್ತು ಹಿಂದುಜಾ ನಟರಾಜನ್(23) ಮೃತರು ಎಂದು ಗುರುತಿಸಲಾಗಿದೆ. ತಿರುಚಿಯ ಎಸ್.ಆರ್.ಎಂ ಮೆಡಿಕಲ್ ಕಾಲೇಜಿನ 23 … Continued

ಭಾರೀ ಮಳೆ: ಗೋಕರ್ಣ ಮಹಾಬಲೇಶ್ವರ ದೇಗುಲಕ್ಕೆ ನುಗ್ಗಿದ ನೀರು; ಆತ್ಮಲಿಂಗ ಜಲಾವೃತ

ಕಾರವಾರ : ಶುಕ್ರವಾರ ಸುರಿದ ಭಾರೀ ಮಳೆಗೆ ಉತ್ತರ ಕನ್ನಡ ಜಿಲ್ಲೆಯ ಪ್ರಸಿದ್ಧ ಧಾರ್ಮಿಕ ಸ್ಥಳವಾದ ಗೋಕರ್ಣದ ಹಲವು ಕಡೆ ನೀರು ತುಂಬಿದ್ದು, ಮಹಾಬಲೇಶ್ವರ ದೇಗುಲದ ಗರ್ಭಗುಡಿಯೂ ಜಲಾವೃತವಾಗಿ ಆತ್ಮಲಿಂಗ ಗಂಟೆಗಳ ಕಾಲ ರಾಡಿ ನೀರಿನಿಂದ ಮುಳುಗುವಂತಾಯಿತು ಎಂದು ವರದಿಯಾಗಿದೆ. ಹೀಗಾಗಿ ಒಂದು ತಾಸಿಗೂ ಹೆಚ್ಚು ಕಾಲ ಭಕ್ತರಿಗೆ ಆತ್ಮಲಿಂಗದ ದರ್ಶನಕ್ಕೆ ಅವಕಾಶವನ್ನು ಸ್ಥಗಿತಗೊಳಿಸಲಾಗಿತ್ತು.ದೇವಸ್ಥಾನದ ಸಿಬ್ಬಂದಿ … Continued

ಯಕ್ಷಗಾನದ ಖ್ಯಾತ ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ಇನ್ನಿಲ್ಲ

ಬೆಂಗಳೂರು: ಬಡಗು ತಿಟ್ಟು ಯಕ್ಷಗಾನದ ಖ್ಯಾತ ಭಾಗವತ, ಅಪಾರ ಅಭಿಮಾನಿಗಳನ್ನು ಹೊಂದಿರುವ ಸುಬ್ರಹ್ಮಣ್ಯ ಧಾರೇಶ್ವರ 67ನೇ ವಯಸ್ಸಿನಲ್ಲಿ ಬೆಂಗಳೂರಿನಲ್ಲಿ ಗುರುವಾರ (ಏ.25) ಬೆಳಗ್ಗೆ ನಿಧನರಾಗಿದ್ದಾರೆ. ಬೆಂಗಳೂರಿನ ತಮ್ಮ ಪುತ್ರನ ಮನೆಯಲ್ಲಿದ್ದ ಅವರು ಅಲ್ಪಕಾಲದ ಅಸೌಖ್ಯದಿಂದಾಗಿ ಬೆಳಗ್ಗೆ 4:30ರ ಸುಮಾರಿಗೆ ನಿಧನರಾಗಿದ್ದಾರೆ ಎಂದು ವರದಿಯಾಗಿದೆ. ಅವರು, ಪತ್ನಿ, ಪುತ್ರ ಹವ್ಯಾಸಿ ಕಲಾವಿದ ಕಾರ್ತಿಕ್ ಹಾಗೂ ಪುತ್ರಿಯನ್ನು ಅಗಲಿದ್ದಾರೆ. … Continued

ಚಿತ್ರದುರ್ಗ : ಗೋಕರ್ಣಕ್ಕೆ ಹೊರಟಿದ್ದ ಬಸ್ ಪಲ್ಟಿ: ಮೂವರು ಸಾವು, ಹಲವರಿಗೆ ಗಾಯ

ಚಿತ್ರದುರ್ಗ : ಬೆಂಗಳೂರಿನಿಂದ ಶಿವಮೊಗ್ಗ ಮಾರ್ಗವಾಗಿ ಗೋಕರ್ಣಕ್ಕೆ ಹೊರಟಿದ್ದ ಖಾಸಗಿ ಬಸ್ ಪಲ್ಟಿಯಾಗಿ ಮೂವರು ಮೃತಪಟ್ಟ ಘಟನೆ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ಹನುಮಂತ ದೇವರ ಕಣಿವೆ ಪ್ರದೇಶದ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನ ಬಳಿ ಭಾನುವಾರ ಬೆಳಿಗ್ಗೆ ನಡೆದಿದೆ ಎಂದು ವರದಿಯಾಗಿದೆ. ರಾಷ್ಟ್ರೀಯ ಹೆದ್ದಾರಿ – 13ರಲ್ಲಿ ಅಪಘಾತವು ಮುಂಜಾನೆ 5 ಗಂಟೆ ಸುಮಾರಿಗೆ … Continued

ಗೋಕರ್ಣ : ಸಮುದ್ರ ಪಾಲಾದ ಇಬ್ಬರು ಪ್ರವಾಸಿಗರು

ಕಾರವಾರ : ಪ್ರವಾಸಕ್ಕೆ ಬಂದಿದ್ದ ಐವರು ಸ್ನೇಹಿತರ ಪೈಕಿ ಇಬ್ಬರು ಯುವಕರು ಸಮುದ್ರ ಪಾಲಾದ ಘಟನೆ ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದಲ್ಲಿ ನಡೆದಿದೆ ಎಂದು ವರದಿಯಾಗಿದೆ. ಕಲಬುರಗಿ ಮೂಲದ ಆಕಾಶ ಮತ್ತು ಅಭಿಷೇಕ ಎಂಬವರು ಮೃತರು ಎಂದು ಗುರುತಿಸಲಾಗಿದೆ. ಹತ್ತಿರದ ರೆಸಾರ್ಟಿಲ್ಲಿ ತಂಗಿದ್ದ ಐದು ಜನ ಪ್ರವಾಸಿಗರ ಪೈಕಿ ಮೂವರು ಭಾನುವಾರ ಸಂಜೆಯ ಸಮಯದಲ್ಲಿ ಈಜಲು … Continued

ಗೋಕರ್ಣ : ಸಮುದ್ರದಲ್ಲಿ ಮುಳುಗುತ್ತಿದ್ದ 8 ಜನರ ರಕ್ಷಣೆ

ಗೋಕರ್ಣ: ಸಮುದ್ರದಲ್ಲಿ ಮುಳುಗುತ್ತಿದ್ದ ಒಂದೇ ಕುಟುಂಬದ 7 ಜನ ಸೇರಿದಂತೆ ಒಟ್ಟು 8 ಜನ ಪ್ರವಾಸಿಗರನ್ನು ಜೀವ ರಕ್ಷಕ ಪಡೆ ಸಿಬ್ಬಂದಿ ರಕ್ಷಣೆ ಮಾಡಿದ ವಿದ್ಯಮಾನ ಉತ್ತರಕನ್ನಡ ಜಿಲ್ಲೆಯ ಗೋಕರ್ಣ(Gokarna)ದ ಮುಖ್ಯ ಕಡಲ ತೀರದಲ್ಲಿ ನಡೆದಿದೆ. ಪ್ರವಾಸಕ್ಕೆ ಬಂದ ವೇಳೆ ಒಂದೇ ಕುಟುಂಬದ ಏಳು ಪ್ರವಾಸಿಗರು ನೀರಿನಲ್ಲಿ ಇಳಿದಿದ್ದು, ಈ ವೇಳೆ ಕೊಚ್ಚಿ ಹೋಗುವ ಅಪಾಯದಲ್ಲಿದ್ದರು. … Continued

ಗೋಕರ್ಣದಲ್ಲಿ ಪಿತೃಕಾರ್ಯ ನೆರವೇರಿಸಿದ ಮುಸ್ಲಿಂ ಕುಟುಂಬ…!

ಕಾರವಾರ : ಧಾರವಾಡದ ಮುಸ್ಲಿಂ ಕುಟುಂಬವು ಹಿಂದೂ ಧರ್ಮದ ಸಂಪ್ರದಾಯದಂತೆ ಗೋಕರ್ಣದಲ್ಲಿ ಪಿತೃಕಾರ್ಯ ಮಾಡಿರುವುದು ವರದಿಯಾಗಿದೆ. ಎರಡು ದಿನಗಳ ಹಿಂದೆ ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಗೋಕರ್ಣದ ಕೋಟಿ ತೀರ್ಥದಲ್ಲಿ ಪಿತೃಪಕ್ಷದಲ್ಲಿ ಈ ಕುಟುಂಬವು ಪಿತೃಕಾರ್ಯ ನೆರವೇರಿಸಿದ್ದಾರೆ. ಮರಗೆಲಸ ಮಾಡುವ ಮಾಡುವ ಕುಟುಂಬವು ಧಾರವಾಡದ ಜ್ಯೋತಿಷಿ ಬಳಿ ಹೋದಾಗ ಅವರು ನೀಡಿದ ಸಲಹೆ ಮೇರೆಗೆ … Continued