ಕನ್ನಡದ ಖ್ಯಾತ ಸಾಹಿತಿ ಎಚ್‌.ಎಸ್. ವೆಂಕಟೇಶಮೂರ್ತಿ ಇನ್ನಿಲ್ಲ

ಬೆಂಗಳೂರು: ಕನ್ನಡದ ಖ್ಯಾತ ಕವಿ, ನಾಟಕ ರಚನೆ ಕಾರರು, ಸಾಹಿತಿಯಾಗಿರುವ ಎಚ್‌ ಎಸ್ ವೆಂಕಟೇಶ ಮೂರ್ತಿ ನಿಧನರಾಗಿದ್ದಾರೆ. ಕವಿ, ನಾಟಕಕಾರ, ವಿಮರ್ಶಕ, ಪ್ರಾಧ್ಯಾಪಕ, ಭಾವಗೀತ ರಚನಕಾರ, ಚಲನಚಿತ್ರ ನಿರ್ದೇಶಕ, ಕತೆಗಾರ, ಚಿತ್ರಗೀತ ರಚನೆಕಾರ ಆಗಿದ್ದ ಅವರು ಅಲ್ಪಕಾಲದ ಅಸೌಖ್ಯದ ಬಳಿಕ ಇಂದು, ಶುಕ್ರವಾರ (ಮೇ 30) ನಿಧನರಾಗಿದ್ದಾರೆ. 81 ವರ್ಷ ವಯಸ್ಸಿನ ಎಚ್‌ಎಸ್‌ವಿ ಎಂದೇ ಕರೆಯಲ್ಪಡುತ್ತಿದ್ದ … Continued

ಕನ್ನಡದ ಖ್ಯಾತ ಕಿರುತೆರೆ ನಟ ಶ್ರೀಧರ ನಾಯಕ ನಿಧನ

ಬೆಂಗಳೂರು: ಕನ್ನಡ ಕಿರುತೆರೆಯ (Kannada Serial) ಖ್ಯಾತ ನಟ ಶ್ರೀಧರ್ ನಾಯಕ (47) ಮೇ 26ರ ರಾತ್ರಿ ನಿಧನರಾಗಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಶ್ರೀಧರ್ ನಾಯಕ ಅವರು ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರು ಎಳೆದಿದ್ದಾರೆ. ಬೆಂಗಳೂರಿನ ಹೆಬ್ಬಾಳದ ಬ್ಯಾಪ್ಟಿಸ್ಟ್ ಆಸ್ಪತ್ರೆಯಲ್ಲಿ ಅವರ ಮೃತ ಶರೀರವನ್ನು ಇಡಲಾಗಿದೆ. ‘ವಧು’ ಸೀರಿಯಲ್‌ನಲ್ಲಿ ನಟಿಸುತ್ತಿದ್ದ ಶ್ರೀಧರ ಅವರು ಏಕಾಏಕಿ ಅನಾರೋಗ್ಯಕ್ಕೀಡಾಗಿದ್ದರು. ಇನ್‌ಫೆಕ್ಷನ್‌ನಿಂದ ತೀವ್ರ … Continued

ಬಹುಭಾಷಾ ನಟ ಮುಕುಲ್‌ ದೇವ ನಿಧನ

ಮುಂಬೈ : ಸನ್‌ ಆಫ್‌ ಸರ್ದಾರ್‌ ಸಿನೆಮಾ ಖ್ಯಾತಿಯ ಬಹುಭಾಷಾ ನಟ ಮುಕುಲ್ ದೇವ್ (54) ನಿಧನರಾಗಿದ್ದಾರೆ. ಮುಕುಲ್‌ ಅವರ ಸಾವಿನ ಸುದ್ದಿಯನ್ನು ಅವರ ಸಹೋದರ ರಾಹುಲ್‌ ದೇವ್‌ (Rahul Dev) ಖಚಿತ ಪಡಿಸಿದ್ದಾರೆ ಹಿಂದಿ, ಪಂಜಾಬಿ ಸೇರಿದಂತೆ ವಿವಿಧ ಭಾಷೆಗಳ ಸಿನೆಮಾಗಳು ಚಲನಚಿತ್ರಗಳು ಮತ್ತು ಕಿರುತೆರೆಯಲ್ಲಿ ನಟಿಸಿದ್ದ ಅವರು, ಸ್ವಲ್ಪ ಸಮಯದಿಂದ ಅನಾರೋಗ್ಯದಿಂದ ಬಳಲುತ್ತಿದ್ದರು … Continued

140 ಕೋಟಿ ಕ್ಯಾಥೊಲಿಕರ ಪರಮೋಚ್ಚ ಧಾರ್ಮಿಕ ನಾಯಕ-ಧರ್ಮ ಗುರು ಪೋಪ್ ಫ್ರಾನ್ಸಿಸ್ ಈಸ್ಟರ್ ಸೋಮವಾರ ನಿಧನ

ಡಬಲ್ ನ್ಯುಮೋನಿಯಾದಿಂದ ಚೇತರಿಸಿಕೊಳ್ಳುತ್ತಿದ್ದ 88 ವರ್ಷದ ಪೋಪ್ ಫ್ರಾನ್ಸಿಸ್, ಸೋಮವಾರ ಕಾಸಾ ಸಾಂತಾ ಮಾರ್ತಾದಲ್ಲಿರುವ ತಮ್ಮ ನಿವಾಸದಲ್ಲಿ ನಿಧನರಾದರು ಎಂದು ವ್ಯಾಟಿಕನ್ ವೀಡಿಯೊ ಹೇಳಿಕೆಯಲ್ಲಿ ತಿಳಿಸಿದೆ. ಬೆನೆಡಿಕ್ಟ್ XVI ರಾಜೀನಾಮೆ ನೀಡಿದ ನಂತರ 2013 ರಲ್ಲಿ ಅವರು ಪೋಪ್ ಆಗಿದ್ದರು. ಈಸ್ಟರ್ ಭಾನುವಾರದಂದು ವ್ಯಾಟಿಕನ್‌ನಲ್ಲಿ ಭಕ್ತರ ಸಮೂಹವನ್ನು ಸಂತ ಪೀಟರ್ಸ್ ಬೆಸಿಲಿಕಾದ ಬಾಲ್ಕನಿಯಲ್ಲಿ ಕಾಣಿಸಿಕೊಂಡು ಆಶೀರ್ವದಿಸಿದ … Continued

ಹಿರಿಯ ಪತ್ರಕರ್ತ ಶ್ಯಾಮಸುಂದರ ನಿಧನ

ಬೆಂಗಳೂರು : ಹಿರಿಯ ಪತ್ರಕರ್ತ ಎಸ್.ಕೆ. ಶ್ಯಾಮಸುಂದರ (೭೨) ಸೋಮವಾರ ರಾತ್ರಿ ನಿಧನರಾಗಿದ್ದಾರೆ. ಕೆಲ ದಿನಗಳ ಹಿಂದೆ ಅನಾರೋಗ್ಯಕ್ಕೆ ತುತ್ತಾಗಿದ್ದ ಅವರನ್ನು ವಿದ್ಯಾಪೀಠ ಸರ್ಕಲ್‌ನಲ್ಲಿರುವ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಸೋಮವಾರ ರಾತ್ರಿ ಚಿಕಿತ್ಸೆ ಫಲಿಸದೆ ಅವರು ಮೃತಪಟ್ಟಿದ್ದಾರೆ. ಕನ್ನಡ ಪತ್ರಿಕೋದ್ಯಮದಲ್ಲಿ ಸುಮಾರು 39 ವರ್ಷಗಳಿಗೂ ಹೆಚ್ಚಿನ ಅನುಭವ ಹೊಂದಿದ್ದರು. ಈ ಅವಧಿಯಲ್ಲಿ ಅವರು ವಿಶೇಷವಾಗಿ ಡಿಜಿಟಲ್ … Continued

ಕನ್ನಡದ ಹಿರಿಯ ನಟ ಬ್ಯಾಂಕ್‌ ಜನಾರ್ಧನ ನಿಧನ

ಬೆಂಗಳೂರು: 500 ಕ್ಕೂ ಹೆಚ್ಚು ಕನ್ನಡ ಸಿನಿಮಾಗಳಲ್ಲಿ ಜನರನ್ನು ನಕ್ಕು-ನಲಿಸಿದ ಹಾಸ್ಯ ನಟ ಬ್ಯಾಂಕ್‌ ಜನಾರ್ಧನ  (76) ನಿಧನರಾಗಿದ್ದಾರೆ. ಮಧ್ಯರಾತ್ರಿ 2:30ರ ಸುಮಾರಿಗೆ ಬೆಂಗಳೂರಿನ ಮಣಿಪಾಲ ಆಸ್ಪತ್ರೆಯಲ್ಲಿ ನಟ ಬ್ಯಾಂಕ್‌ ಜನಾರ್ಧನ್‌ ನಿಧನರಾಗಿದ್ದಾರೆ. ಸುಲ್ತಾನ್‌ ಪಾಳ್ಯದ ನಿವಾಸದಲ್ಲಿರುವ ಅವರ ನಿವಾಸದಲ್ಲಿ ಪಾರ್ಥೀವ ಶರೀರ ಇಡಲಾಗಿದ್ದು, ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಮಧ್ಯಾಹ್ನ 3 – 4 … Continued

ಹಿಂದಿ ಸಿನೆಮಾದ ಖ್ಯಾತ ನಟ-ನಿರ್ದೇಶಕ ಮನೋಜಕುಮಾರ ನಿಧನ

ಮುಂಬೈ: ದಾದಾ ಸಾಹೇಬ ಪ್ರಶಸ್ತಿ ಪುರಸ್ಕೃತ ಹಿಂದಿ ಚಿತ್ರರಂಗದ ಹಿರಿಯ ನಟ ಮತ್ತು ಚಲನಚಿತ್ರ ನಿರ್ದೇಶಕರಾದ ಮನೋಜಕುಮಾರ ನಿಧನರಾಗಿದ್ದಾರೆ. ಅವರಿಗೆ 87 ವರ್ಷ ವಯಸ್ಸಾಗಿತ್ತು. ಮುಂಬೈನ ಕೋಕಿಲಾಬೆನ್ ಧೀರೂಭಾಯಿ ಅಂಬಾನಿ ಆಸ್ಪತ್ರೆಯಲ್ಲಿ ನಟ ಕೊನೆಯುಸಿರೆಳೆದಿದ್ದಾರೆ ಎಂದು ವರದಿಯಾಗಿದೆ. ಮನೋಜಕುಮಾರ ಅವರು ನಿಧನರಾಗಿದ್ದನ್ನು ಅವರ ಪುತ್ರ ಕುನಾಲ್ ಗೋಸ್ವಾಮಿ ದೃಢಪಡಿಸಿದ್ದಾರೆ ಎಂದು ಎಎನ್‌ಐಗೆ ಸುದ್ದಿ ವರದಿ ಮಾಡಿದೆ. … Continued

ಹಿರಿಯ ಸಾಹಿತಿ, ಬಹು ಭಾಷಾ ಪಂಡಿತ ಡಾ. ಪಂಚಾಕ್ಷರಿ ಹಿರೇಮಠ ವಿಧಿವಶ

ಧಾರವಾಡ : ಹೈದರಾಬಾದ್ ಕರ್ನಾಟಕ ವಿಮೋಚನಾ ಹೋರಾಟಗಾರ, ಬಹು ಭಾಷಾ ಪಂಡಿತ, ಹಿರಿಯ ಸಾಹಿತಿ, ವಿದ್ಯಾವಾಚಸ್ಪತಿ ಡಾ. ಪಂಚಾಕ್ಷರಿ ಹಿರೇಮಠ (92) ) ಶುಕ್ರವಾರ (ಮಾರ್ಚ್ 14) ನಗರದಲ್ಲಿ ನಿಧನರಾದರು. ಮೃತರು ಪತ್ನಿ, ಇಬ್ಬರು ಪುತ್ರರು, ಓರ್ವ ಪುತ್ರಿ ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಕೊಪ್ಪಳ ಜಿಲ್ಲೆಯ ಬಿಸರಹಳ್ಳಿಯಲ್ಲಿ 1933 ಜನವರಿ 6ರಂದು ಜನಿಸಿದರು. … Continued

ಅಂಕೋಲಾ| ಹಾಡು ನಿಲ್ಲಿಸಿದ ಜಾನಪದ ಕೋಗಿಲೆ ; ಪದ್ಮಶ್ರೀ ಪುರಸ್ಕೃತೆ ಸುಕ್ರಿ ಬೊಮ್ಮಗೌಡ ಇನ್ನಿಲ್ಲ

ಅಂಕೋಲಾ : ಜಾನಪದ ಕೋಗಿಲೆ, ಪದ್ಮಶ್ರೀ‌ ಪುರಸ್ಕೃತರಾದ 91 ವರ್ಷದ ಸುಕ್ರಿ ಬೊಮ್ಮ ಗೌಡ ಅವರು ಗುರುವಾರ (ಫೆಬ್ರವರಿ 13) ಮುಂಜಾನೆ ನಿಧನರಾಗಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಸುಕ್ರಿ ಬೊಮ್ಮ ಗೌಡ ಇಂದು, ಗುರುವಾರ ಮುಂಜಾನೆ 3:30ಕ್ಕೆ ಇಹಲೋಕ ತ್ಯಜಿಸಿದ್ದಾರೆ. ಸುಕ್ರಜ್ಜಿ ಎಂದೇ ಖ್ಯಾತಿ ಪಡೆದಿದ್ದ ಅವರು, ಕೆಲವು ತಿಂಗಳುಗಳಿಂದ ವಯೋಸಹಜ ಅನಾರೋಗ್ಯಕ್ಕೆ ಒಳಗಾಗಿದ್ದರು. ಸುಕ್ರಜ್ಜಿ ಅಂತ್ಯಕ್ರಿಯೆ … Continued

ಅಯೋಧ್ಯೆ ರಾಮ ಮಂದಿರದ ಪ್ರಧಾನ ಅರ್ಚಕ ಆಚಾರ್ಯ ಸತ್ಯೇಂದ್ರ ದಾಸ್ ನಿಧನ

ಲಕ್ನೋ: ಅಯೋಧ್ಯೆ ರಾಮಮಂದಿರದ ಪ್ರಧಾನ ಅರ್ಚಕ ಆಚಾರ್ಯ ಸತ್ಯೇಂದ್ರ ದಾಸ್ ಅವರು 85 ನೇ ವಯಸ್ಸಿನಲ್ಲಿ ಲಕ್ನೋ ಆಸ್ಪತ್ರೆಯಲ್ಲಿ ಬುಧವಾರ ನಿಧನರಾಗಿದ್ದಾರೆ. ಫೆಬ್ರವರಿ 3 ರಂದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಪಾರ್ಶ್ವವಾಯುವಿಗೆ ಒಳಗಾದ ನಂತರ ಅವರನ್ನು ಲಕ್ನೋದ ಎಸ್‌ಜಿಪಿಜಿಐ ಆಸ್ಪತ್ರೆಯ ನ್ಯೂರಾಲಜಿ ವಾರ್ಡ್ ಎಚ್‌ಡಿಯುಗೆ ಸ್ಥಳಾಂತರಿಸಲಾಯಿತು. ಲಕ್ನೋದ ಸಂಜಯ್ ಗಾಂಧಿ ಪೋಸ್ಟ್ ಗ್ರಾಜುಯೇಟ್ ಇನ್‌ಸ್ಟಿಟ್ಯೂಟ್ ಆಫ್ … Continued