ಸಿಂಗಾಪುರದಲ್ಲಿ ಸ್ಕೂಬಾ ಡೈವಿಂಗ್ ಅಪಘಾತದಲ್ಲಿ ಖ್ಯಾತ ಗಾಯಕ ಜುಬೀನ್ ಗರ್ಗ್‌ ನಿಧನ

ನವದೆಹಲಿ: ಸಿಂಗಾಪುರದಲ್ಲಿ ಸ್ಕೂಬಾ ಡೈವಿಂಗ್ ವೇಳೆ ತೀವ್ರವಾಗಿ ಗಾಯಗೊಂಡಿದ್ದ ಖ್ಯಾತ ಅಸ್ಸಾಮಿ ಗಾಯಕ ಜುಬೀನ್ ಗರ್ಗ್‌ ಸಾವಿಗೀಡಾಗಿದ್ದಾರೆ ಎಂದು ವರದಿಗಳು ತಿಳಿಸಿವೆ. ವರದಿಗಳ ಪ್ರಕಾರ, ಸಿಂಗಾಪುರ ಪೊಲೀಸರು ಗರ್ಗ್‌ ಅವರನ್ನು ಸಮುದ್ರದಿಂದ ರಕ್ಷಿಸಿ ತಕ್ಷಣ ಹತ್ತಿರದ ಆಸ್ಪತ್ರೆಗೆ ಸಾಗಿಸಿದರು. ಅವರನ್ನು ತೀವ್ರ ನಿಗಾ ಘಟಕಕ್ಕೆ (ಐಸಿಯು) ದಾಖಲಿಸಲಾಯಿತು, ಅಲ್ಲಿ ವೈದ್ಯರು ಅವರ ಸ್ಥಿತಿಯನ್ನು ಮೇಲ್ವಿಚಾರಣೆ ಮಾಡಿ … Continued

ಕುಮಟಾ : ನಿವೃತ್ತ ಪ್ರಾಚಾರ್ಯ ಮಾದೇವ ಎಂ. ಹೆಗಡೆ ನಿಧನ

ಕುಮಟಾ : ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಹೊಲನಗದ್ದೆಯವರಾದ ನಿವೃತ್ತ ಪ್ರಾಚಾರ್ಯ ಮಾದೇವ ಎಂ ಹೆಗಡೆ (92)ಬುಧವಾರ ಮಧ್ಯಾಹ್ನ ನಿಧನರಾಗಿದ್ದಾರೆ. ದೀರ್ಘ ಕಾಲ ಶಿರಸಿಯ ಸರಕುಳಿಯ ಶಾಂತಿಕಾಂಭಾ ಪ್ರೌಢ ಶಾಲೆಯ ಮುಖ್ಯಾಧ್ಯಾಪಕರಾಗಿ ಸೇವೆಸಲ್ಲಿಸಿದ್ದರು. ಶಿರಸಿಯ ಲೈನ್ಸ್ ಕ್ಲಬ್ ಅಧ್ಯಕ್ಷರಾಗಿ, ಲಯನ್ಸ್‌ ಜೋನ್‌ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ಅವರು, ಸುಮಾರು 30 ವರ್ಷಗಳ ಲಯನ್ಸ್‌ ಸಂಸ್ಥೆಯಲ್ಲಿ … Continued

ಹೊನ್ನಾವರ : ಜಾನಪದ ತಜ್ಞ, ಸಾಹಿತಿ ಡಾ. ಎನ್.ಆರ್. ನಾಯಕ ನಿಧನ

ಹೊನ್ನಾವರ: ಖ್ಯಾತ ಜಾನಪದ ತಜ್ಞ, ನಾಟಕಕಾರ, ಕವಿ, ಸಾಹಿತಿ ಡಾ. ಎನ್.ಆರ್. ನಾಯಕ (90) (Dr. N.R. Nayak) ಅವರು ಭಾನುವಾರ ನಿಧನರಾಗಿದ್ದಾರೆ. ವಯೋಸಹಜ ಅಸ್ವಸ್ತತೆಯಿಂದ ಮೂರ್ನಾಲ್ಕು ದಿನಗಳ ಹಿಂದೆ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಇವರು ಚಿಕಿತ್ಸೆ ಫಲಿಸದೇ ಕೊನೆಯುಸಿರೆಳೆದಿದ್ದಾರೆ. ಅವರಿಗೆ ಇಬ್ಬರು ಗಂಡು ಮಕ್ಕಳು, ಒಬ್ಬರು ಮಗಳು ಇದ್ದಾರೆ. … Continued

ಹೊನ್ನಾವರ : ಉತ್ತರ ಕನ್ನಡ ಜಿಲ್ಲೆಯ ಹಿರಿಯ ರಾಜಕಾರಣಿ, ಸಾಮಾಜಿಕ ಹೋರಾಟಗಾರ ಪಿ.ಎಸ್.ಭಟ್ಟ ಉಪ್ಪೋಣಿ ನಿಧನ

ಹೊನ್ನಾವರ : ಉತ್ತರ ಕನ್ನಡ ಜಿಲ್ಲೆಯ ಹಿರಿಯ ರಾಜಕಾರಣಿ ಹಾಗೂ ಸಾಮಾಜಿಕ ಕಾರ್ಯಕರ್ತ ಪಿ.ಎಸ್‌.ಭಟ್‌ ಉಪ್ಪೋಣಿ ನಿಧನರಾಗಿದ್ದಾರೆ. ಅವರಿಗೆ 70 ವರ್ಷ ವಯಸ್ಸಾಗಿತ್ತು. ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಉಪ್ಪೋಣಿಯವರಾಗಿದ್ದ ಅವರು ಬಿಎಸ್‌ಸಿ ಪದವೀಧರರಾಗಿದ್ದರು. ವಿದ್ಯಾರ್ಥಿ ದಿಸೆಯಿಂದಲೇ ನಾಕತ್ವಗುಣ ಇದ್ದ ಅವರು ಹೊನ್ನಾವರ ಎಸ್‌ಡಿಎಂ ಕಾಲೇಜ್‌ ಯೂನಿಯನ್‌ ಕಾರ್ಯದರ್ಶಿಯಾಗಿದ್ದರು. ಜಿಲ್ಲಾ ಪಂಚಾಯತ ಹಾಗೂ ಜಿಲ್ಲಾ … Continued

ಖ್ಯಾತ ಬಾಲಿವುಡ್‌ ನಟ ಆಶಿಶ್ ವಾರಂಗ್ ನಿಧನ

ಮುಂಬೈ; ಬಾಲಿವುಡ್‌ನಲ್ಲಿ ಸ್ಮರಣೀಯ ಪೋಷಕ ಪಾತ್ರಗಳಿಗೆ ಹೆಸರುವಾಸಿಯಾಗಿದ್ದ ಹಿರಿಯ ನಟ ಆಶಿಶ್ ವಾರಂಗ್ ಶುಕ್ರವಾರ (ಸೆಪ್ಟೆಂಬರ್ 5) ತಮ್ಮ 55 ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಅವರ ಸಾವಿಗೆ ಅಧಿಕೃತವಾಗಿ ಕಾರಣವನ್ನು ದೃಢಪಡಿಸಲಾಗಿಲ್ಲವಾದರೂ, ಅವರು ಸ್ವಲ್ಪ ಸಮಯದಿಂದ ಅನಾರೋಗ್ಯದಿಂದ ಬಳಲುತ್ತಿದ್ದರು ಎಂದು ವರದಿಗಳು ಸೂಚಿಸುತ್ತವೆ. ಆಶಿಶ್ ಅವರು ಚಿತ್ರರಂಗಕ್ಕೆ ಕಾಲಿಡುವ ಮೊದಲು, ಭಾರತೀಯ ವಾಯುಪಡೆಯಲ್ಲಿ ಅಧಿಕಾರಿಯಾಗಿ ರಾಷ್ಟ್ರಕ್ಕೆ … Continued

ಕನ್ನಡದ ಖ್ಯಾತ ಪೋಷಕ ನಟ ದಿನೇಶ ಮಂಗಳೂರು ನಿಧನ

ಉಡುಪಿ : ಕೆಜಿಎಫ್‌ ಸೇರಿದಂತೆ ಅನೇಕ‌ ಸಿನಿಮಾಗಳಲ್ಲಿ ನಟಿಸಿದ್ದ ಪ್ರತಿಭಾನ್ವಿತ ನಟ, ಕಲಾನಿರ್ದೇಶಕ ದಿನೇಶ ಮಂಗಳೂರು ಇಂದು ಭಾನುವಾರ (ಆಗಸ್ಟ್‌ 25) ಬೆಳಗಿನ ಜಾವ ನಿಧನರಾಗಿದ್ದಾರೆ. ಅವರಿಗೆ 52 ವರ್ಷ ವಯಸ್ಸಾಗಿತ್ತು. ದಿನೇಶ ಮಂಗಳೂರು ಅವರು ಕಳೆದ ಐದು ದಿನಗಳಿಂದ ಪಾರ್ಶ್ವವಾಯುವಿಗೆ ಕುಂದಾಪುರದ ಸರ್ಜನ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆಗೆ ಸ್ಪಂದಿಸದೇ ಅವರು ಇಂದು … Continued

ಉದ್ಯಮಿ, ರಾಜಕೀಯ ಧುರೀಣ ಯಶೋಧರ ನಾಯ್ಕ ನಿಧನ

ಕಾರವಾರ: ಉದ್ಯಮಿ ಹಾಗೂ ಕಾಂಗ್ರೆಸ್ ಮುಖಂಡ ಯಶೋಧರ ನಾಯ್ಕ (69)  ಇಂದು, ಮಂಗಳವಾರ (ಆಗಸ್ಟ್‌ 19) ಮುಂಬೈನಲ್ಲಿ ನಿಧನರಾಗಿದ್ದಾರೆ. ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ಮುಂಬೈ ಆಸ್ಪತ್ರೆಗೆ ದಾಖಲಿಸಲಾಗಿತ್ತು, ಆದರೆ ಚಿಕಿತ್ಸೆಗೆ ಸ್ಪಂದಿಸದೆ ಅವರು ಕೊನೆಯುಸಿರೆಳೆದಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಮಾಳ್ಕೋಡು ಮೂಲದವರಾದ ಯಶೋಧರ ನಾಯ್ಕ ಅವರು ನಾಲ್ಕು ದಶಕಗಳಿಗೂ … Continued

ಖ್ಯಾತ ಬಾಲಿವುಡ್‌ ನಟ ಅಚ್ಯುತ ಪೋತದಾರ ನಿಧನ

ಮುಂಬೈ : ಹಿರಿಯ ಬಾಲಿವುಡ್‌ ಮತ್ತು ಮರಾಠಿ ಸಿನೆಮಾ ನಟ ಅಚ್ಯುತ ಪೋತದಾರ ಅವರು ಸೋಮವಾರ ರಾತ್ರಿ (ಆಗಸ್ಟ್ 18) ಥಾಣೆಯ ಜುಪಿಟರ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಅವರಿಗೆ 91 ವರ್ಷ ವಯಸ್ಸಾಗಿತ್ತು. ಅವರನ್ನು ವಯೋಸಹಜ ಆರೋಗ್ಯ ಸಮಸ್ಯೆಗಳಿಂದಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರ ಅಂತ್ಯಕ್ರಿಯೆ ಇಂದು, ಮಂಗಳವಾರ ಥಾಣೆಯಲ್ಲಿ ನಡೆಯಲಿದೆ. ಹಿರಿಯ ನಟ 125 ಕ್ಕೂ ಹೆಚ್ಚು … Continued

ಹಿರಿಯ ಹಾರ್ಮೊನಿಯಂ ವಾದಕ, ಶತಾಯುಷಿ ಶ್ರೀಕೃಷ್ಣರಾವ್‌ ಕಲ್ಗುಂಡಿಕೊಪ್ಪ ನಿಧನ

ಶಿರಸಿ : ಉತ್ತರಕನ್ನಡ ಜಿಲ್ಲೆಯ ಹಿರಿಯ ಹಾರ್ಮೊನಿಯಂ ವಾದಕ, ಅತ್ಯುತ್ತಮ ಕೃಷಿಕ ಹಾಗೂ ಶತಾಯುಷಿ ಶ್ರೀಕೃಷ್ಣ ರಾವ್ ಕಲ್ಗೊಂಡಿಕೊಪ್ಪ (100) ಅವರು, ಶನಿವಾರ (ಆಗಸ್ಟ್‌ 16) ಬೆಳಗಿನ ಜಾವ ವಯೋಸಹಜ ಕಾಯಿಲೆಯಿಂದ ನಿಧನರಾಗಿದ್ದಾರೆ. ಶಿರಸಿ ತಾಲೂಕಿನ ಸುಗಾವಿ ಗ್ರಾಮದ ಕಲ್ಗೊಂಡಿಕೊಪ್ಪದ ನಿವಾಸಿಯಾಗಿದ್ದ ಮೃತ ಶ್ರೀಕೃಷ್ಣ ರಾವ್ ಕಲ್ಗೊಂಡಿಕೊಪ್ಪ ಅವರು ಪತ್ನಿ, ನಾಲ್ವರು ಪುತ್ರರು, ಮೂವರು ಪುತ್ರಿಯರು … Continued

ನಾಗಾಲ್ಯಾಂಡ್ ರಾಜ್ಯಪಾಲ ಎಲ್‌. ಗಣೇಶನ್ ನಿಧನ

ಕೊಹಿಮಾ/ಚೆನ್ನೈ : ನಾಗಾಲ್ಯಾಂಡ್ ರಾಜ್ಯಪಾಲ ಎಲ್‌. ಗಣೇಶನ್ ಶುಕ್ರವಾರ ಚೆನ್ನೈನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ನಿಧನರಾದರು ಎಂದು ಕೊಹಿಮಾದ ರಾಜಭವನದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಅವರಿಗೆ 80 ವರ್ಷ ವಯಸ್ಸಾಗಿತ್ತು. ಆರೆಸ್ಸೆಸ್ ಮೂಲದವರಾದ ತಮಿಳುನಾಡಿನ ಖ್ಯಾತ ಬಿಜೆಪಿ ನಾಯಕ ಗಣೇಶನ್ ಅವರು 2021 ಮತ್ತು 2025 ರ ನಡುವೆ ಮಣಿಪುರ, ಪಶ್ಚಿಮ ಬಂಗಾಳ ಮತ್ತು ನಾಗಾಲ್ಯಾಂಡ್ … Continued