ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕೆ ಭಾರತ ತೊರೆಯುವಂತೆ ನೋಟಿಸ್ : ಬಾಂಬೆ ಹೈಕೋರ್ಟ್‌ ಮೊರೆ ಹೋದ ನಟ ಇಮ್ರಾನ್ ಖಾನ್

ಮುಂಬೈ: ರಾಜಕೀಯ ಪ್ರತಿಭಟನೆಯಲ್ಲಿ ಭಾಗವಹಿಸುವ ಮೂಲಕ ನಿಯಮ ಉಲ್ಲಂಘಿಸಿದ್ದಾರೆ ಎಂಬ ಆರೋಪದ ಮೇಲೆ ಅಕ್ಟೋಬರ್ 28ರೊಳಗೆ ಭಾರತ ತೊರೆಯುವಂತೆ ಮುಂಬೈ ಪೊಲೀಸರು ನೀಡಿರುವ ನೋಟಿಸ್ ಅನ್ನು ಪ್ರಶ್ನಿಸಿ ಬಾಲಿವುಡ್ ನಟ ಇಮ್ರಾನ್ ಖಾನ್ ಬಾಂಬೆ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಅಮೆರಿಕದ ಪ್ರಜೆಯಾಗಿರುವ ಹಾಗೂ ಭಾರತದ ಸಾಗರೋತ್ತರ ನಾಗರಿಕ (OCI) ಕಾರ್ಡ್ ಹೊಂದಿರುವ 43 ವರ್ಷದ ನಟ … Continued

ಎಸ್‌ಐಆರ್‌ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಬಾಲಿವುಡ್‌ ನಟ ಇಮ್ರಾನ್ ಖಾನ್‌ಗೆ ಭಾರತ ತೊರೆಯಲು ಸೂಚನೆ

ಮುಂಬೈ: ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶಕುಮಾರ ವಿರುದ್ಧದ ಪ್ರತಿಭಟನೆಯಲ್ಲಿ ಪಾಲ್ಗೊಂಡ ಕೆಲವೇ ದಿನಗಳಲ್ಲಿ ಬಾಲಿವುಡ್ ನಟ ಇಮ್ರಾನ್ ಖಾನ್ ಅವರಿಗೆ ಭಾರತ ತೊರೆಯುವಂತೆ ಮುಂಬೈ ಪೊಲೀಸರು ನೋಟಿಸ್ ನೀಡಿದ್ದಾರೆ. ಬಾಲಿವುಡ್ ನಟ ಆಮಿರ್ ಖಾನ್ ಅವರ ಸಂಬಂಧಿಯಾಗಿರುವ ಇಮ್ರಾನ್ ಖಾನ್, ಭಾರತೀಯ ಪ್ರಜೆಯಲ್ಲದಿದ್ದರೂ ದೇಶದಲ್ಲಿ ರಾಜಕೀಯ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಕ್ಕಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸರು … Continued

ಪರೀಕ್ಷೆಯಲ್ಲಿ ಉತ್ತರ ಪಡೆಯಲು ಚಾಟ್‌ಜಿಪಿಟಿ ಬಳಕೆ: ಪ್ರಾಧ್ಯಾಪಕರಿಗೆ ಸಿಕ್ಕಿಬಿದ್ದ ಐಐಟಿ ಬಾಂಬೆ ವಿದ್ಯಾರ್ಥಿ ಆತ್ಮಹತ್ಯೆ

ಮುಂಬೈ: ಪರೀಕ್ಷೆಯ ವೇಳೆ ಮೊಬೈಲ್‌ ಫೋನ್‌ ಬಳಸಿ ಚಾಟ್‌ಜಿಪಿಟಿ (ChatGPT) ಮೂಲಕ ಉತ್ತರಗಳನ್ನು ಪಡೆಯಲು ಯತ್ನಿಸಿದ ಆರೋಪಕ್ಕೆ ಒಳಗಾಗಿದ್ದ ಭಾರತೀಯ ತಾಂತ್ರಿಕ ಸಂಸ್ಥೆ (ಐಐಟಿ) ಬಾಂಬೆಯ ದ್ವಿತೀಯ ವರ್ಷದ ವಿದ್ಯಾರ್ಥಿಯೊಬ್ಬರು ಶುಕ್ರವಾರ ಸಂಜೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಕಳೆದ ಏಳು ತಿಂಗಳ ಅವಧಿಯಲ್ಲಿ ಐಐಟಿ ಪವಾಯಿ ಕ್ಯಾಂಪಸ್‌ನಲ್ಲಿ ವರದಿಯಾದ ಮೂರನೇ ಆತ್ಮಹತ್ಯೆ ಪ್ರಕರಣ ಇದಾಗಿದೆ. … Continued

ಮುಂಬೈ ರಸ್ತೆಗಳಲ್ಲಿ ಭಿಕ್ಷೆ ಬೇಡಿದ ಮಹಾರಾಷ್ಟ್ರದ ಅತ್ಯಂತ ಶ್ರೀಮಂತ ಶಾಸಕ ; ₹3,383 ಕೋಟಿ ಒಡೆಯ ಭಿಕ್ಷಕನಾಗಿದ್ದು ಹೇಗೆ?

ಮುಂಬೈ: ಸುಮಾರು ₹3,400 ಕೋಟಿ ಆಸ್ತಿ ಹೊಂದಿರುವ ಮಹಾರಾಷ್ಟ್ರದ ಅತ್ಯಂತ ಶ್ರೀಮಂತ ಶಾಸಕ ಎಂದೇ ಗುರುತಿಸಿಕೊಂಡಿರುವ ಪರಾಗ್ ಶಾ ಅವರು ಮುಂಬೈನ ಘಾಟ್ಕೋಪರ್‌ ಬೀದಿಗಳಲ್ಲಿ ಭಿಕ್ಷೆ ಬೇಡಿರುವ ಘಟನೆ ಇದೀಗ ಭಾರಿ ಚರ್ಚೆಗೆ ಕಾರಣವಾಗಿದೆ. ಭಿಕ್ಷುಕನಾಗಿ ರಸ್ತೆಯಲ್ಲಿ ಅಲೆದಾಡುತ್ತಿರುವ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಮುಂಬೈನ ಘಾಟ್ಕೋಪರ್ ಈಸ್ಟ್ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕರಾಗಿರುವ ಪರಾಗ್ … Continued

ಪ್ರಧಾನಿ ಮೋದಿ ಮುಂಬೈ ಕಾರ್ಯಕ್ರಮಕ್ಕೂ ಮುನ್ನ ಬಂದೂಕು, ಪ್ರಧಾನಿ ಕಚೇರಿ ನಕಲಿ ಐಡಿ ಹೊಂದಿದ್ದ ಇಬ್ಬರ ಬಂಧನ

ಮುಂಬೈ: ಪ್ರಧಾನಿ ನರೇಂದ್ರ ಮೋದಿ ಅವರ ಮುಂಬೈ ಭೇಟಿಗೆ ಒಂದು ದಿನ ಮೊದಲು ಮಂಗಳವಾರ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್‌ (ಬಿಕೆಸಿ)‌ನಲ್ಲಿರುವ ಜಿಯೋ ವರ್ಲ್ಡ್ ಪ್ಲಾಜಾಕ್ಕೆ ನಕಲಿ ಪ್ರಧಾನ ಮಂತ್ರಿ ಕಚೇರಿ (ಪಿಎಂಒ) ಗುರುತಿನ ಚೀಟಿ ಬಳಸಿ ಪ್ರವೇಶಿಸಲು ಯತ್ನಿಸಿದ ಪ್ರಕರಣ ಬೆಳಕಿಗೆ ಬಂದಿದ್ದು, ಇಬ್ಬರನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ. ಸೆಪ್ಟೆಂಬರ್ 7ರಂದು ನಡೆದ ಈ ಘಟನೆ … Continued

ಸಮುದ್ರ ಮಟ್ಟ ಏರಿಕೆಯಿಂದ ಮುಂಬೈ, ಕೋಲ್ಕತ್ತಾದ 1.4 ಕೋಟಿ ಜನರು ಮನೆ ಕಳೆದುಕೊಳ್ಳಬಹುದು : ವಿಶ್ವಸಂಸ್ಥೆ ವರದಿ

ಸಮುದ್ರ ಮಟ್ಟ ಏರಿಕೆ ಮತ್ತು ಶಾಶ್ವತ ಜಲಾವೃತದ ಪರಿಣಾಮವಾಗಿ ಕೋಲ್ಕತ್ತಾ ಮತ್ತು ಮುಂಬೈನ ಲಕ್ಷಾಂತರ ಜನರು ತಮ್ಮ ಮನೆಗಳನ್ನು ಕಳೆದುಕೊಳ್ಳುವ ತಕ್ಷಣದ ಅಪಾಯ ಎದುರಿಸುತ್ತಿದ್ದಾರೆ ಎಂದು ವಿಶ್ವಸಂಸ್ಥೆಯ ವರದಿಯೊಂದು ಎಚ್ಚರಿಸಿದೆ. ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿಯವರ ಕಚೇರಿ ಬಿಡುಗಡೆ ಮಾಡಿರುವ ‘ಸಮುದ್ರ ಮಟ್ಟದ ಏರಿಕೆಗೆ ಸಂಬಂಧಿಸಿದ ಸವಾಲುಗಳು ಮತ್ತು ಅದನ್ನು ಎದುರಿಸುವ ಮಾರ್ಗಗಳು’ (‘Challenges Related to … Continued

ಅಣ್ಣಾ ಹಜಾರೆ ಮುಂಬೈ ಆಸ್ಪತ್ರೆಯ ಐಸಿಯುಗೆ ದಾಖಲು

ಮುಂಬೈ: ತೀವ್ರ ವೈರಲ್ ಸೋಂಕಿನಿಂದ  ಬಳಲುತ್ತಿರುವ ಸಾಮಾಜಿಕ ಕಾರ್ಯಕರ್ತ, ಭ್ರಷ್ಟಾಚಾರದ ವಿರೋಧಿ ಹೋರಾಟಗಾರ ಅಣ್ಣಾ ಹಜಾರೆ (Anna Hazare) ಅವರನ್ನು ಸೋಮವಾರ ಮುಂಬೈನ  ಬಾಂಬೆ ಆಸ್ಪತ್ರೆಯ ತೀವ್ರ ನಿಗಾ ಘಟಕಕ್ಕೆ ದಾಖಲಿಸಲಾಗಿದೆ. ಹಜಾರೆ ಅವರು ಪ್ರಸ್ತುತ ಗೌತಮ್ ಬನ್ಸಾಲಿ ಅವರ ನಿರಂತರ ನಿಗಾದಲ್ಲಿದ್ದಾರೆ. ವೈದ್ಯಕೀಯ ತಜ್ಞರು ವಿವರವಾದ ರೋಗನಿರ್ಣಯ ಪರೀಕ್ಷೆಗಳನ್ನು ನಡೆಸುತ್ತಿದ್ದಾರೆ ಮತ್ತು ವರದಿಗಳ ಆಧಾರದ … Continued

ಆಕೆ ಪಾಸ್‌, ಈತ ಫೇಲ್‌; ಪ್ರೇಮ ಸಂಬಂಧ ಮುರಿದುಬಿದ್ದ ಬೆನ್ನಲ್ಲೇ ಪ್ರಶ್ನೆಪತ್ರಿಕೆ ಲೀಕ್‌ ಆಗಿದ್ದನ್ನು ಬಯಲಿಗೆಳೆದ ಪ್ರಿಯಕರ…!

ಮುಂಬೈ : ಮಹಾರಾಷ್ಟ್ರ ಲೋಕಸೇವಾ ಆಯೋಗದ (MPSC) ಡ್ರಗ್‌ ಇನ್ಸ್‌ಪೆಕ್ಟರ್‌ ನೇಮಕಾತಿ ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆ ಹಗರಣವು ಪ್ರೇಮ ವೈಫಲ್ಯದ ಕಾರಣಕ್ಕೆ ಬೆಳಕಿಗೆ ಬಂದಿದ್ದು, ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪಿಗಳಲ್ಲೊಬ್ಬನೇ ಪೊಲೀಸರಿಗೆ ಮಾಹಿತಿ ನೀಡಿ, ನಂತರ ಆತನೇ ಬಂಧನಕ್ಕೊಳಗಾಗಿದ್ದಾನೆ. ಪೊಲೀಸರ ತನಿಖೆಯ ಪ್ರಕಾರ, ಅಭ್ಯರ್ಥಿ ರಿತುಜಾ ಪಾಟೀಲ ಅವರ ತಂದೆ ಅಮೃತ್‌ ಪಾಟೀಲ ಅವರು ನಂದುರ್ಬಾರ್‌ನ ಕೋಚಿಂಗ್‌ … Continued

ಬೆಂಗಳೂರು–ಮುಂಬೈ ನಡುವೆ ವಂದೇ ಭಾರತ್ ಸ್ಲೀಪರ್ ರೈಲು ಆರಂಭಕ್ಕೆ ಸಿದ್ಧತೆ : ಪ್ರಯಾಣದ ಅವಧಿ 16 ತಾಸು

ಬೆಂಗಳೂರು: ಬೆಂಗಳೂರು–ಮುಂಬೈ ನಡುವೆ ವಂದೇ ಭಾರತ ಸ್ಲೀಪರ್ ರೈಲು ಸೇವೆ ಆರಂಭಿಸಲು ದಕ್ಷಿಣ ಪಶ್ಚಿಮ ರೈಲ್ವೆ (SWR) ಸಿದ್ಧತೆ ನಡೆಸಿದೆ. ಬೆಂಗಳೂರು ಮೂಲದ ರೈಲ್ವೆ ವಲಯಕ್ಕೆ ಬಿಇಎಂಎಲ್ ನಿರ್ಮಿಸಿರುವ ಎರಡು 16 ಬೋಗಿಗಳ ವಂದೇ ಭಾರತ ಸ್ಲೀಪರ್ ರೈಲು ಸೆಟ್‌ಗಳು ತಲುಪಿದ್ದು, ಅವುಗಳನ್ನು ಸೇವೆಗೆ ನಿಯೋಜಿಸಲಾಗಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ. ಚೆನ್ನೈನ ಇಂಟಿಗ್ರಲ್ ಕೋಚ್ … Continued

ನಟಿಯ ಮೇಲೆ ಅತ್ಯಾಚಾರ ; 73 ವರ್ಷದ ಸಿನೆಮಾ ನಿರ್ದೇಶಕನ ಬಂಧನ

ಮುಂಬೈ: 33 ವರ್ಷದ ನಟಿಯ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇರೆಗೆ ಖ್ಯಾತ ಚಿತ್ರ ನಿರ್ದೇಶಕ ಹಾಗೂ ನಿರ್ಮಾಪಕ ಶಕೀಲ್ ನೂರಾನಿ (73) ಅವರನ್ನು ಮುಂಬೈನ ಮಾಲ್ವಾಣಿ ಪೊಲೀಸರು ಆಗಸ್ಟ್ 8ರ ಮುಂಜಾನೆ ಬಂಧಿಸಿದ್ದಾರೆ. ‘ಬಡೆ ದಿಲ್ ವಾಲಾ’ (1999) ಹಾಗೂ ‘ಜೋರು ಕಾ ಗುಲಾಮ್’ (2000) ಸೇರಿದಂತೆ ಚಿತ್ರಗಳನ್ನು ನಿರ್ಮಿಸಿ, ನಿರ್ದೇಶಿಸಿರುವ ನೂರಾನಿ ಅವರನ್ನು … Continued