ಜೂಜಾಟದ ವ್ಯಸನದಿಂದ ಖತರ್ನಾಕ್‌ ಸರಗಳ್ಳನಾಗಿ ಬದಲಾದ ಉದ್ಯಮಿಯ ಬಂಧನಕ್ಕೆ ಶೂಗಳು ಕಾರಣವಾಗಿದ್ದು ಹೇಗೆ…?

ಮುಂಬೈ: ಮುಂಬೈ ಮತ್ತು ನವಿ ಮುಂಬೈ ವ್ಯಾಪ್ತಿಯಲ್ಲಿ ಸರಣಿ ಸರಗಳ್ಳತನದ ಮೂಲಕ ಭೀತಿ ಸೃಷ್ಟಿಸಿದ್ದ ಕಳ್ಳನನ್ನು ಪೊಲೀಸರು ಬಂಧಿಸಿದ್ದಾರೆ. ವೇಷ ಮರೆಸುವಲ್ಲಿ ನಿಪುಣನಾಗಿದ್ದ ಈ ಆರೋಪಿಯನ್ನು ಪತ್ತೆ ಹಚ್ಚಲು ಆತ ಧರಿಸುತ್ತಿದ್ದ ಒಂದೇ ಜೋಡಿ ‘ಶೂ’ಗಳು ಪ್ರಮುಖ ಸುಳಿವು ನೀಡಿದ್ದು ಕಳ್ಳನನ್ನು ಪತ್ತೆ ಹಚ್ಚಲು ಸಹಾಯ ಮಾಡಿದೆ. ಬಂಧಿತ ಆರೋಪಿ ಸಿಯಾನ್ ನಿವಾಸಿ ಮೋಹನ್ ಕೋಕಟೆ, … Continued

ಅಂಗಲ ವೈಕಲ್ಯ ಗರ್ಭಿಣಿ ಮಹಿಳೆ ಮೇಲೆ ಅತ್ಯಾಚಾರ ಪ್ರಕರಣ : 17 ಜನರ ಡಿಎನ್‌ಎ ಪರೀಕ್ಷೆ ; ತಂದೆ ಡಿಎನ್‌ಎ ಹೊಂದಾಣಿಕೆ

ಮುಂಬೈ : 20 ವರ್ಷದ ಅಂಗವಿಕಲ ಮಹಿಳೆಯೊಬ್ಬಳ ಡಿಎನ್ಎ ಪರೀಕ್ಷೆಗಳು ಭ್ರೂಣದೊಂದಿಗಿನ ಸಂಬಂಧವನ್ನು ದೃಢಪಡಿಸಿದ ನಂತರ, ತಂದೆಯೇ ಆಕೆಯ ಸಾಮೂಹಿಕ ಅತ್ಯಾಚಾರದ ಪ್ರಮುಖ ಆರೋಪಿ ಎಂದು ಗುರುತಿಸಲಾಗಿದೆ. ಈ ಘಟನೆ ಕಳೆದ ವರ್ಷ ಮಾರ್ಚ್‌ನಲ್ಲಿ ಮುಂಬೈನಲ್ಲಿ ನಡೆದಿದ್ದು, ಸೆಪ್ಟೆಂಬರ್‌ನಲ್ಲಿ ಮಹಿಳೆ ಐದು ತಿಂಗಳ ಗರ್ಭಿಣಿಯಾಗಿದ್ದಾಗ ಈ ಘಟನೆ ಬೆಳಕಿಗೆ ಬಂದಿದೆ. NDTV ಪ್ರಕಾರ, ಪೊಲೀಸರು ಈ … Continued

ಮೈ ಜುಂ ಎನ್ನುವ ವೀಡಿಯೊ..| ಮುಂಬೈ : ಲಿಫ್ಟ್‌ನಲ್ಲಿ ಅನಿಲ ತುಂಬಿದ ಬಲೂನ್‌ಗಳು ಸ್ಫೋಟ; ಇಬ್ಬರಿಗೆ ಗಂಭೀರ ಗಾಯ

 ಮುಂಬೈ: ಲಿಫ್ಟ್‌ನಲ್ಲಿ ಅನಿಲ ತುಂಬಿದ ಬಲೂನ್‌ಗಳು ಸ್ಫೋಟ; ಇಬ್ಬರಿಗೆ ಗಂಭೀರ ಗಾಯ ಮುಂಬೈ: ಮುಂಬೈನ ಗೋರೆಗಾಂವ್ ಪ್ರದೇಶದ ಬಹುಮಹಡಿ ಕಟ್ಟಡವೊಂದರ ಲಿಫ್ಟ್‌ನಲ್ಲಿ ಅನಿಲ ತುಂಬಿದ ಬಲೂನ್‌ಗಳ ಕಟ್ಟು ಸ್ಫೋಟಗೊಂಡ ಪರಿಣಾಮ ಇಬ್ಬರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಪೊಲೀಸರ ಮಾಹಿತಿ ಪ್ರಕಾರ, ಈ ಘಟನೆಯು ಫೆಬ್ರವರಿ … Continued

ಮುಂಬೈ: ನಿರ್ದೇಶಕ ರೋಹಿತ್ ಶೆಟ್ಟಿ ನಿವಾಸದ ಹೊರಗೆ ಗುಂಡಿನ ದಾಳಿ

ಮುಂಬೈ : ಮುಂಬೈನ ಜುಹು ಪ್ರದೇಶದಲ್ಲಿರುವ ಖ್ಯಾತ ಚಲನಚಿತ್ರ ನಿರ್ದೇಶಕ ರೋಹಿತ್ ಶೆಟ್ಟಿ ಅವರ ಮನೆಯ ಹೊರಗೆ ಅಪರಿಚಿತ ದುಷ್ಕರ್ಮಿಗಳು ಐದು ಸುತ್ತು ಗುಂಡು ಹಾರಿಸಿದ್ದಾರೆ ಎಂದು ವರದಿಯಾಗಿದೆ.  ಈ ಘಟನೆಯ ನಂತರ ಅವರ ನಿವಾಸದ ಸುತ್ತ ಭಾರಿ ಪೊಲೀಸ್ ಭದ್ರತೆ  ನಿಯೋಜಿಸಲಾಗಿದೆ. ಮುಂಬೈ ಪೊಲೀಸರು ಸ್ಥಳಕ್ಕೆ ಧಾವಿಸಿದ್ದು, ತನಿಖೆ ಚುರುಕುಗೊಳಿಸಿದ್ದಾರೆ. ಆರೋಪಿಗಳನ್ನು ಪತ್ತೆಹಚ್ಚಲು ಎಲ್ಲ … Continued

ಕೇವಲ 400 ಮೀಟರ್‌ ದೂರ ಕರೆದೊಯ್ದಿಕ್ಕೆ ವಿದೇಶಿ ಮಹಿಳೆಯಿಂದ 18,000 ರೂ.ಬಾಡಿಗೆ ವಸೂಲಿ ಮಾಡಿದ ಟ್ಯಾಕ್ಸಿ ಚಾಲಕ…!

ಮುಂಬೈ: ವಿಮಾನ ನಿಲ್ದಾಣದಿಂದ ಕೇವಲ 400 ಮೀಟರ್ ದೂರದಲ್ಲಿರುವ ಹೋಟೆಲ್‌ಗೆ ಕರೆದೊಯ್ಯಲು ಅಮೆರಿಕದ ಪ್ರಜೆಯೊಬ್ಬರಿಂದ ಬರೋಬ್ಬರಿ 18,000 ರೂಪಾಯಿ ($200) ವಸೂಲಿ ಮಾಡಿದ್ದ ಟ್ಯಾಕ್ಸಿ ಚಾಲಕನನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ. ಜನವರಿ 12 ರಂದು ಈ ಘಟನೆ ನಡೆದಿದ್ದು, ಮುಂಬೈ ವಿಮಾನ ನಿಲ್ದಾಣದ ಟರ್ಮಿನಲ್-2ಕ್ಕೆ ಬಂದಿಳಿದ ಅಮೆರಿಕದ ಮಹಿಳೆಯೊಬ್ಬರು ಹತ್ತಿರದ ‘ಹಿಲ್ಟನ್ ಹೋಟೆಲ್’ಗೆ ಹೋಗಲು ಟ್ಯಾಕ್ಸಿ … Continued

ಮನೆ ಕೆಲಸದಾಕೆ ಮೇಲೆ ಅತ್ಯಾಚಾರ ಆರೋಪ; ‘ಧುರಂಧರ್’ ನಟನ ಬಂಧನ

ಮುಂಬೈ: ಮದುವೆಯಾಗುವುದಾಗಿ ನಂಬಿಸಿ ಕಳೆದ ಹತ್ತು ವರ್ಷಗಳಿಂದ ಮನೆಗೆಲಸದ ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ಬಾಲಿವುಡ್ ನಟ ನದೀಮ್ ಖಾನ್ ಅವರನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ. ಇತ್ತೀಚೆಗೆ ಬಿಡುಗಡೆಯಾದ ಸೂಪರ್ ಹಿಟ್ ಚಿತ್ರ ‘ಧುರಂಧರ್’ ನಲ್ಲಿ ನಟಿಸಿದ್ದ ನದೀಮ್ ಖಾನ್ ಅವರನ್ನು ಜನವರಿ 22 ರಂದು ಬಂಧಿಸಲಾಗಿದ್ದು, ಸದ್ಯ ಅವರು ಪೊಲೀಸ್ ಕಸ್ಟಡಿಯಲ್ಲಿದ್ದಾರೆ … Continued

ರೈಲು ಹತ್ತುವಾಗ ಸಣ್ಣ ಜಗಳಕ್ಕೆ ಕಾಲೇಜು ಪ್ರೊಫೆಸರ್‌ ಗೆ ಚಾಕುವಿನಿಂದ ಇರಿದು ಹತ್ಯೆ

  ಮುಂಬೈ: ಮುಂಬೈನ ರೈಲಿನಲ್ಲಿ  ಸಣ್ಣ ವಿಷಯಕ್ಕೆ ನಡೆದ ಜಗಳ ಭೀಕರ ಕೊಲೆಯಲ್ಲಿ ಅಂತ್ಯವಾಗಿದೆ. ಮಾಲಾಡ್ ರೈಲ್ವೆ ನಿಲ್ದಾಣದಲ್ಲಿ ಕಾಲೇಜು ಪ್ರೊಫೆಸರ್ ಒಬ್ಬರನ್ನು ಬರ್ಬರವಾಗಿ ಹತ್ಯೆ ಮಾಡಿದ ಆರೋಪದ ಮೇಲೆ ಸರ್ಕಾರಿ ರೈಲ್ವೆ ಪೊಲೀಸರು (GRP) 27 ವರ್ಷದ ಓಂಕಾರ ಶಿಂಧೆ ಎಂಬಾತನನ್ನು ಬಂಧಿಸಿದ್ದಾರೆ. ಹತ್ಯೆಗೀಡಾದವರನ್ನು ವಿಲೆ ಪಾರ್ಲೆಯ ಪ್ರಮುಖ ಕಾಲೇಜೊಂದರ ಪ್ರೊಫೆಸರ್ ಅವರನ್ನು ಅಲೋಕ ಸಿಂಗ್ … Continued

ಸುಳ್ಳು ಲೈಂಗಿಕ ಕಿರುಕುಳ ಪ್ರಕರಣ ದಾಖಲಿಸಿ 10 ಕೋಟಿ ರೂ.ಗಳಿಗೆ ಬೇಡಿಕೆ ಇಟ್ಟಿದ್ದ ಇಬ್ಬರು ಮಹಿಳೆಯರ ಬಂಧನ

ಮುಂಬೈ: ಉದ್ದೇಶಪೂರ್ವಕವಾಗಿ ಲೈಂಗಿಕ ಕಿರುಕುಳದ ಸುಳ್ಳು ಪ್ರಕರಣ ದಾಖಲಿಸಿ, ಉದ್ಯಮಿಯೊಬ್ಬರಿಂದ 10 ಕೋಟಿ ರೂಪಾಯಿ ಹಣ ನೀಡುವಂತೆ ಬೇಡಿಕೆಯಿಟ್ಟಿದ್ದ ಇಬ್ಬರು ಮಹಿಳೆಯರನ್ನು ಮುಂಬೈ ಪೊಲೀಸರ ಸುಲಿಗೆ ವಿರೋಧಿ ದಳ (AEC) ಬಂಧಿಸಿದೆ ಎಂದು ವರದಿಯಾಗಿದೆ. ಎನ್‌ಡಿಟಿವಿ ವರದಿ ಪ್ರಕಾರ, ಬಂಧಿತರನ್ನು ಹೇಮಲತಾ ಪಾಟ್ಕರ (39) ಮತ್ತು ಅಮ್ರೀನಾ ಇಕ್ಬಾಲ್ ಜವೇರಿ (33) ಎಂದು ಗುರುತಿಸಲಾಗಿದೆ. ಉದ್ಯಮಿಯೊಬ್ಬರು … Continued

‘ಇದು ಪ್ರವಾಸಿ ಪಕ್ಷ…’: ಮಹಾರಾಷ್ಟ್ರ ಸ್ಥಳೀಯ ಸಂಸ್ಥೆಗಳ ಚುನಾವಣೆ ಸೋಲಿನ ನಂತರ ಕಾಂಗ್ರೆಸ್ ವಿರುದ್ಧ ಶಿವಸೇನೆ (ಯುಬಿಟಿ) ವಾಗ್ದಾಳಿ

ಮುಂಬೈ: ಮುಂದಿನ ತಿಂಗಳು ನಡೆಯಲಿರುವ ಪ್ರತಿಷ್ಠಿತ ಬೃಹನ್ಮುಂಬೈ ಮಹಾನಗರ ಪಾಲಿಕೆ (ಬಿಎಂಸಿ) ಚುನಾವಣೆಯ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ರಾಜಕೀಯ ಕಳೆಗಟ್ಟಿದೆ. ಈ ನಡುವೆ, “ನೈಜ ಶಿವಸೇನೆ” ಕಳೆದ 30 ವರ್ಷಗಳಿಂದ ಮುಂಬೈನಲ್ಲಿ ತನ್ನ ಹಿಡಿತ ಸಾಧಿಸಿದ್ದು, ಈ ಬಾರಿಯೂ ಜಯಭೇರಿ ಬಾರಿಸಲಿದೆ ಎಂದು ಶಿವಸೇನೆ (ಯುಬಿಟಿ) ನಾಯಕ ಆನಂದ ದುಬೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಚುನಾವಣೆಯಲ್ಲಿ ಕಾಂಗ್ರೆಸ್ ಪ್ರಸ್ತುತತೆಯನ್ನು … Continued

ಕಾರು ಅಪಘಾತ ; ಖ್ಯಾತ ಬಾಲಿವುಡ್ ನಟಿ ನೋರಾ ಫತೇಹಿಗೆ ಗಾಯ

ಮುಂಬೈ: ಖ್ಯಾತ ಬಾಲಿವುಡ್ ನಟಿ ನೋರಾ ಫತೇಹಿ ಅವರು ಪ್ರಯಾಣಿಸುತ್ತಿದ್ದ ಕಾರು ಮುಂಬೈನಲ್ಲಿ ಭೀಕರ ರಸ್ತೆ ಅಪಘಾತಕ್ಕೀಡಾಗಿದ್ದಾರೆ. ಶನಿವಾರ ಮಧ್ಯಾಹ್ನ ಸನ್‌ಬರ್ನ್ ಫೆಸ್ಟಿವಲ್‌ಗೆ ತೆರಳುತ್ತಿದ್ದಾಗ, ಮದ್ಯದ ಅಮಲಿನಲ್ಲಿದ್ದ ಚಾಲಕನೊಬ್ಬ ಅವರ ಕಾರಿಗೆ ಡಿಕ್ಕಿ ಹೊಡೆದಿದ್ದಾನೆ. ಶನಿವಾರ ಮಧ್ಯಾಹ್ನ ಸುಮಾರು 3 ಗಂಟೆಯ ಸುಮಾರಿಗೆ ಈ ಅಪಘಾತ ಸಂಭವಿಸಿದೆ. ಮದ್ಯಪಾನ ಮಾಡಿದ್ದ ಚಾಲಕನೊಬ್ಬ ಚಲಾಯಿಸುತ್ತಿದ್ದ ವಾಹನವು ನೋರಾ … Continued