7 ವರ್ಷದ ಪುಟಾಣಿಯಾಗಿದ್ದಾಗ ಅಪಹರಣವಾಗಿದ್ದ ಪೂಜಾಳಿಗೆ 9 ವರ್ಷಗಳ ನಂತರ ತನ್ನ ಕುಟುಂಬದ ಜೊತೆ ಮತ್ತೆ ಸೇರುವಂತೆ ಮಾಡಿದ್ದು ಒಂದು ಪೋಸ್ಟರ್‌…!

ಮುಂಬೈ: ಪೋಸ್ಟರ್‌ನ ಡಿಜಿಟಲ್ ಪ್ರತಿಯೊಂದು  2013ರಿಂದ ಕಾಣೆಯಾಗಿದ್ದ ಹದಿಹರೆಯದ ಹುಡುಗಿಗೆ ಒಂಬತ್ತು ವರ್ಷಗಳ ನಂತರ ತನ್ನ ಕುಟುಂಬದೊಂದಿಗೆ ಮತ್ತೆ ಸೇರಲು ಸಹಾಯ ಮಾಡಿದೆ…!
ಜನವರಿ 22, 2013 ರಂದು ಬೆಳಿಗ್ಗೆ 7 ವರ್ಷ ವಯಸ್ಸಿನ ಪೂಜಾ ಮುಂಬೈನ ಅಧೇರಿ ಪ್ರದೇಶದಲ್ಲಿ ತನ್ನ ಸಹೋದರನೊಂದಿಗೆ ಶಾಲೆಗೆ ಹೋಗಿದ್ದಳು. ಶಾಲೆಗೆ ಹೋಗಿದ್ದ ಪೂಜಾಳನ್ನು ಮಕ್ಕLiಲ್ಲದ ಹೆನ್ರಿ ಜೋಸೆಫ್ ಡಿಸೋಜಾ ಎಂಬಾತ ಐಸ್ ಕ್ರೀಂ ಆಸೆ ತೋರಿಸಿ ಅಪಹರಿಸಿದ್ದ. ಆ ಸಮಯದಲ್ಲಿ ಹೆನ್ರಿ ಜೋಸೆಫ್ ಡಿಸೋಜಾ ಮಕ್ಕಳಾಗದ ಕಾರಣ ಪೂಜಾಳನ್ನು ಅಪಹರಿಸಿದ್ದಾಗಿ ಈಗ ಬಂಧಿತರಾಗಿರುವ ಡಿಸೋಜಾ ಪೊಲೀಸರಿಗೆ ಹೇಳಿಕೆ ನೀಡಿದ್ದಾನೆ.
ಹೆನ್ರಿ ಜೋಸೆಫ್ ಡಿಸೋಜಾ ಪೂಜಾಳನ್ನು ಯಾರಿಂದಲೂ ಗುರುತಿಸಲು ಆಗವಾರದು ಎಂದು ಅಪಹರಿಸಿದ ತಕ್ಷಣವೇ ಕರ್ನಾಟಕದ ಹಾಸ್ಟೆಲ್‌ಗೆ ಅವಳನ್ನು ದಾಖಲಿಸಿದ್ದ. ಹಾಗೂ ಆಕೆಯ ಹೆಸರನ್ನು ಆನಿ ಡಿಸೋಜಾ ಎಂದು ಬದಲಾಯಿಸಿದ್ದ. ಆದರೆ ಕೆಲವು ವರ್ಷಗಳ ನಂತರ ಡಿಸೋಜಾ ದಂಪತಿಗೆ ಸ್ವಂತ ಮಗುವಾದಾಗ, ಅವರು ಪೂಜಾಳನ್ನು ಮರಳಿ ಮನೆಗೆ ಕರೆತಂದರು ಹಾಗೂ ಮನೆಗೆಲಸ ಮಾಡಿಸಲು ಆರಂಭಿಸಿದರು. ಆಕೆಯನ್ನು ಚೆನ್ನಾಗಿ ನಡೆಸಿಕೊಳ್ಳಲಿಲ್ಲ ಎಂದು ತಿಳಿದು ಬಂದಿದೆ.

ಪ್ರಮುಖ ಸುದ್ದಿ :-   ದೆಹಲಿ ವಕ್ಫ್ ಬೋರ್ಡ್ ಹಗರಣ : 9 ತಾಸುಗಳ ವಿಚಾರಣೆಯ ನಂತರ ಎಎಪಿ ನಾಯಕ ಅಮಾನತುಲ್ಲಾ ಖಾನ್ ಬಂಧಿಸಿದ ಇ.ಡಿ.

ಈಗ 16 ವರ್ಷ ಆಗಿರುವ ಪೂಜಾಳಿಗೆ ತನ್ನ ಕುಟುಂಬ ಸದಸ್ಯರ ಬಗ್ಗೆ ಹೆಚ್ಚು ನೆನಪಿಲ್ಲವಾಗಿತ್ತು. ಅವಳನ್ನು ಅಪಹರಿಸಿದ್ದ ಕುಟುಂಬ ಹಾಗೂ ಪೂಜಾಳ ಕುಟುಂಬ ಕೆಲವೇ ನೂರು ಮೀಟರ್ ದೂರದಲ್ಲಿದ್ದರೂ ಅವಳನ್ನು ಅಪಹರಿಸಿದ ತಕ್ಷಣ ದೂರದ ಕರ್ನಾಟಕದ ಹಾಸ್ಟೆಲ್‌ಗೆ ಕಳಹಿಸಿದ ಕಾರಣ ಅವಳಿಗೆ ತನ್ನ ಹೆತ್ತವರ ನೆನನಪು ಮರೆತು ಹೋಗುವಂತಾಗಿತ್ತು. ಆದರೆ ಒಂದ ದಿನ ಹೆನ್ರಿ ಕುಡಿದ ಅಮಲಿನಲ್ಲಿ ಪೂಜಾ ತನ್ನ ಮಗಳಲ್ಲ ಎಂದು ಬಾಯಬಿಟ್ಟಾಗ ಪೂಜಾ ತನ್ನ ಹಿಂದಿನ ಕುಟುಂಬದ ಸುಳಿವುಗಳನ್ನು ಹುಡುಕಲು ಪ್ರಾರಂಭಿಸಿದಳು.
ಅವಳು ಮತ್ತು ಅವಳ ಸ್ನೇಹಿತ ಅಂತರ್ಜಾಲದಲ್ಲಿ “ಹುಡುಕುತ್ತಲೇ ಇದ್ದರು ಮತ್ತು ಅಂತಿಮವಾಗಿ 2013ರಲ್ಲಿ ಕಾಣೆಯಾದ ಬಗ್ಗೆ ಪ್ರಕಟಿಸಲಾದ ಪೋಸ್ಟರ್ ಅನ್ನು ಕಂಡುಕೊಂಡರು. ಅದರಲ್ಲಿ ಐದು ನಂಬರ್‌ ಗಳಿದ್ದವು, ಆದರೆ ಅವುಗಳಲ್ಲಿ ನಾಲ್ಕು ಸೇವೆಯಲ್ಲಿ ಇರಲಿಲ್ಲವಾಗಿತ್ತು ಅದೃಷ್ಟವಶಾತ್, ಮತ್ತೊಂದು ಮೊಬೈಲ್‌ ಕೆಲಸ ಮಾಡುತ್ತಿತ್ತು. ಮಾಡುತ್ತಿದ್ದವರು ಪೂಜಾ ಅವರ ಕುಟುಂಬದ ನೆರೆಹೊರೆಯವರಾದ ರಫೀಕ್‌ ಅವರ ನಂಬರ್‌ ಆಗಿತ್ತು.

ನಂತರ ಹುಡುಗಿ ರಫೀಕ್‌ ಅವರಿಗೆ ಕರೆ ಮಾಡಿ ತನ್ನ ಬಗ್ಗೆ ಹೇಳಿಕೊಂಡಳು. ಆಶ್ಚರ್ಯಗೊಂಡ ರಫೀಕ್ ನಂತರ ವೀಡಿಯೊ ಕರೆ ಮೂಲಕ ಅವಳೊಂದಿಗೆ ಮಾತನಾಡಿ ಅವಳನ್ನು ಗುರುತಿಸಿದ್ದಾರೆ. ನಂತರ್‌ ರಫೀಕ್‌ ಪೂಜಾ ಮತ್ತು ಅವಳ ತಾಯಿಯ ನಡುವೆ ವೀಡಿಯೋ ಕರೆ ಮೂಲಕ ಸಂವಹನ ಏರ್ಪಡಿಸಿದರು. ಪೂಜಾಳ ತಾಯಿ ತಕ್ಷಣ ತಮ್ಮ ಮಗಳನ್ನು ಗುರುತಿಸಿದಳು. ಮೊಬೈಲ್ ಫೋನ್‌ನ ಪರದೆಯ ಮೇಲೆ ಒಬ್ಬರನ್ನೊಬ್ಬರು ನೋಡುತ್ತಿದ್ದಂತೆ ಇಬ್ಬರು ಕಣ್ಣೀರು ಸುರಿಸಿದರು.
ಸ್ಥಳೀಯ ಪೊಲೀಸರಿಗೆ ತಕ್ಷಣವೇ ಈ ಬಗ್ಗೆ ಮಾಹಿತಿ ನೀಡಲಾಯಿತು, ಮತ್ತು 16 ವರ್ಷದ ಪೂಜಾ ಸಂತೋಷದ ಕಣ್ಣೀರಿನ ನಡುವೆ ಮತ್ತೆ ತನ್ನ ಕುಟುಂಬದೊಂದಿಗೆ ಸೇರಿದಾಗ ಪೊಲೀಸರು ಅಲ್ಲಿ ಉಪಸ್ಥಿತರಿದ್ದರು. ಈ ಸುದೀರ್ಘ ಪ್ರತ್ಯೇಕತೆಯ ಸಮಯದಲ್ಲಿ ಪೂಜಾ ತನ್ನ ತಂದೆಯನ್ನು ಕಳೆದುಕೊಂಡಿದ್ದಾಳೆ.
ಅಪಹರಣ ಮತ್ತು ಕಾನೂನುಬಾಹಿರ ದುಡಿಮೆ ಆರೋಪದಡಿ ಹೆನ್ರಿಯನ್ನು ಬಂಧಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಮಿಲಿಂದ್ ಕುರ್ದರ್ ಹೇಳಿದ್ದಾರೆ. ಈ ಪ್ರಕರಣದಲ್ಲಿ ಆತನ ಪತ್ನಿಯನ್ನೂ ಆರೋಪಿ ಎಂದು ಹೆಸರಿಸಲಾಗಿದೆ.

ಪ್ರಮುಖ ಸುದ್ದಿ :-   ರಾಜ್‌ ಕುಂದ್ರಾಗೆ ಸೇರಿದ ₹97 ಕೋಟಿ ಮೌಲ್ಯದ ಆಸ್ತಿ ಜಪ್ತಿ ಮಾಡಿದ ಇ.ಡಿ.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement