ಮ್ಯೂಸಿಕ್ ಕಂಪನಿ ಸಿಇಒ ಕಿಡ್ನಾಪ್ ಮಾಡಿದ ಶಿವಸೇನಾ ಶಾಸಕನ ಪುತ್ರನ ವಿರುದ್ಧ ಎಫ್‌ ಐಆರ್ | ವೀಡಿಯೊ

ಮುಂಬೈ : ಬುಧವಾರ (ಆಗಸ್ಟ್‌ 9) ಗೋರೆಗಾಂವ್ ಪೂರ್ವ ಪ್ರದೇಶದಿಂದ ಸುಲಿಗೆ ಮಾಡಲು ಉದ್ಯಮಿ ರಾಜಕುಮಾರ ಸಿಂಗ್ ಅವರನ್ನು ಅಪಹರಿಸಿದ ಆರೋಪದಲ್ಲಿ ಶಿವಸೇನಾ (ಶಿಂಧೆ ಬಣ) ಶಾಸಕ ಪ್ರಕಾಶ ಸುರ್ವೆ ಅವರ ಪುತ್ರ ರಾಜ್ ಸುರ್ವೆ ಮತ್ತು ಇತರರ ವಿರುದ್ಧ ಮುಂಬೈ ಪೊಲೀಸರು ವನರಾಯ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ ಎಂದು ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ. ರಾಜಕುಮಾರ ಸಿಂಗ್ ಸಂಗೀತ ಕಂಪನಿಯೊಂದರ ಸಿಇಒ.
ಎಫ್‌ಐಆರ್‌ನಲ್ಲಿ ರಾಜ್ ಸೇರಿದಂತೆ ಐವರು ಆರೋಪಿಗಳನ್ನು ಪೊಲೀಸರು ಹೆಸರಿಸಿದ್ದಾರೆ. 10-12 ಅಪರಿಚಿತ ಆರೋಪಿಗಳ ಬಗ್ಗೆಯೂ ಪ್ರಥಮ ಮಾಹಿತಿ ವರದಿಯಲ್ಲಿ ಉಲ್ಲೇಖಿಸಲಾಗಿದೆ.
ದೂರಿನ ಪ್ರಕಾರ, ದೂರುದಾರರನ್ನು ಅಪಹರಿಸಿ ಶಾಸಕರ ಕಚೇರಿಗೆ ಕರೆದೊಯ್ದು ಕೆಲವು ದಾಖಲೆಗಳಿಗೆ ಸಹಿ ಹಾಕುವಂತೆ ಗನ್‌ಪಾಯಿಂಟ್‌ ಒತ್ತಾಯಿಸಲಾಗಿದೆ. ಪೊಲೀಸರು ಮಧ್ಯಪ್ರವೇಶಿಸಿ ದೂರುದಾರರನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ, ನಂತರ ಅಪಹರಣ ಮತ್ತು ಶಸ್ತ್ರಾಸ್ತ್ರ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.

ಮುಂಬೈನ ಉಪನಗರ ಗೋರೆಗಾಂವ್‌ನ ಚಿಂತಾಮಣಿ ಕ್ಲಾಸಿಕ್ ಕಾಂಪ್ಲೆಕ್ಸ್‌ನಲ್ಲಿರುವ ಸಿಇಒ ಕಚೇರಿಗೆ ಅಪರಿಚಿತ ವ್ಯಕ್ತಿಗಳು ನುಗ್ಗಿ ರಾಜಕೀಯ ಮುಖಂಡ ಮತ್ತು ಹಣಕಾಸಿನ ವಿವಾದ ಹೊಂದಿರುವ ವ್ಯಕ್ತಿಯ ಹೆಸರನ್ನು ಹೇಳಿ ಬೆದರಿಸಿ ಕರೆದೊಯ್ದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
10-15 ಜನರ ಗುಂಪೊಂದು ಕಚೇರಿಗೆ ಬಲವಂತವಾಗಿ ನುಗ್ಗಿ ಸಿಬ್ಬಂದಿಯ ಮೇಲೆ ಹಲ್ಲೆ ನಡೆಸಿ ಒಬ್ಬ ವ್ಯಕ್ತಿಯನ್ನು ಬಲವಂತವಾಗಿ ಕರೆದೊಯ್ದಿರುವ ದೃಶ್ಯ ಸಿಸಿಟಿವಿಯಲ್ಲಿ ದಾಖಲಾಗಿದೆ. ನಂತರ ಅಪಹರಣಕಾರರು ರಾಜಕುಮಾರ ಸಿಂಗ್‌ ಅವರೊಂದಿಗೆ ಎರಡು ಕಾರುಗಳಲ್ಲಿ ಹೊರಟರು. ಕಚೇರಿ ಸಿಬ್ಬಂದಿ ತಕ್ಷಣ ಪೊಲೀಸ್ ನಿಯಂತ್ರಣ ಕೊಠಡಿಗೆ ಕರೆ ಮಾಡಿ ಘಟನೆಯ ಬಗ್ಗೆ ಮಾಹಿತಿ ನೀಡಿದ್ದಾರೆ.
ಪೊಲೀಸರು ತಕ್ಷಣ ಕಾರ್ಯಪ್ರವೃತ್ತರಾದರು, ಹಾಗೂ ವಾಹನ ಬೆನ್ನಟ್ಟಿದ ನಂತರ ಉತ್ತರ ಮುಂಬೈನ ದಹಿಸರ್ (ಪೂರ್ವ) ನಲ್ಲಿ ವಾಹನವನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾದರು.
ಆದಿಶಕ್ತಿ ಫಿಲ್ಮ್ಸ್ ಹೆಸರಿನ ಯೂಟ್ಯೂಬ್ ಚಾನೆಲ್‌ನ ಮಾಲೀಕರಿಗೆ ಕಂಟೆಂಟ್ ರಚಿಸಲು ಬಳಸುವ ಒಪ್ಪಂದೊಂದಿಗೆ ₹ 8 ಕೋಟಿ ಸಾಲವನ್ನು ನೀಡಲಾಗಿತ್ತು. ಮಾಲೀಕರು ಹಣವನ್ನು ಹಿಂತಿರುಗಿಸದೆ ಮತ್ತು ಒಪ್ಪಂದವನ್ನು ರದ್ದುಗೊಳಿಸಲು ಘಟನೆಯನ್ನು ನೆಪವಾಗಿ ಬಳಸಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ.

ಪ್ರಮುಖ ಸುದ್ದಿ :-   'ಯಾರೂ ಮೋದಿಗೆ ಮತ ಹಾಕಬೇಡಿ' ಎಂದು ತರಗತಿಯೊಳಗೆ ಹೇಳುತ್ತಿದ್ದ ಸರ್ಕಾರಿ ಶಾಲಾ ಶಿಕ್ಷಕನ ಬಂಧನ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement