ವಿಡಿಯೋ | ನೇಪಾಳ ಮಹಾವಿನಾಶಕ್ಕೆ ಕಾರಣವಾದ ಪರ್ವತದಿಂದ ಹಿಮನದಿ ಕುಸಿದ ಕ್ಷಣದ ದೃಶ್ಯ ಡ್ರೋನ್‌ನಲ್ಲಿ ಸೆರೆ

ನವದೆಹಲಿ: ಕಳೆದ ವಾರ ನೇಪಾಳ ಮತ್ತು ಟಿಬೆಟ್‌ನಲ್ಲಿ ಸಂಭವಿಸಿದ ಭೀಕರ ಪ್ರವಾಹ ದುರಂತಕ್ಕೆ ಕಾರಣವಾದ ಹಿಮನದಿ ಕುಸಿತದ ಕ್ಷಣಗಳು ಆಕಸ್ಮಿಕವಾಗಿ ಡ್ರೋನ್ ಕ್ಯಾಮೆರಾದಲ್ಲಿ ಸೆರೆಯಾಗಿವೆ. ಈ ದುರಂತದಲ್ಲಿ ನೂರಾರು ಜನರು ಮೃತಪಟ್ಟಿದ್ದು, ಸಾವಿರಾರು ಮಂದಿ ಇನ್ನೂ ನಾಪತ್ತೆಯಾಗಿದ್ದಾರೆ. ಚೀನಾದ ಛಾಯಾಗ್ರಾಹಕರೊಬ್ಬರು ಸೆರೆಹಿಡಿದಿರುವ ಈ ದೃಶ್ಯಗಳಲ್ಲಿ, ಸಮುದ್ರಮಟ್ಟದಿಂದ 7,200 ಮೀಟರ್‌ಗಿಂತಲೂ ಹೆಚ್ಚು ಎತ್ತರದಲ್ಲಿರುವ ಲಾಂಗ್‌ಟಾಂಗ್ ಲಿರುಂಗ್ (Langtang … Continued

ಪ್ಲೇಸ್ಕೂಲ್‌ನಲ್ಲಿ 3 ವರ್ಷದ ಮಗುವನ್ನು ಕುರ್ಚಿಗೆ ಕಟ್ಟಿ ಕಪಾಳಮೋಕ್ಷ, ಥಳಿತ ; ದೃಶ್ಯ ಸಿಸಿಟಿವಿಯಲ್ಲಿ ಸೆರೆ

ನವದೆಹಲಿ: ದೆಹಲಿಯ ಈಶಾನ್ಯ ಭಾಗದ ಮೌಜ್‌ಪುರ ಪ್ರದೇಶದಲ್ಲಿರುವ ಖಾಸಗಿ ಪ್ಲೇಸ್ಕೂಲ್‌ನಲ್ಲಿ ಮೂರು ವರ್ಷದ ಮಗುವಿನ ಮೇಲೆ ಅಮಾನವೀಯವಾಗಿ ಹಲ್ಲೆ ನಡೆಸಿರುವ ಆರೋಪ ಕೇಳಿಬಂದಿದ್ದು, ಈ ಸಂಬಂಧ ದೆಹಲಿ ಪೊಲೀಸರು ಪೋಕ್ಸೊ (POCSO) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಘಟನೆಯ ಕುರಿತು ಹೊರಬಂದಿರುವ ಆಘಾತಕಾರಿ ಸಿಸಿಟಿವಿ ದೃಶ್ಯಗಳಲ್ಲಿ, ಪುಟ್ಟ ಮಗು ಕುಳಿತಿದ್ದ ಹಳದಿ ಬಣ್ಣದ ಸಣ್ಣ ಪ್ಲಾಸ್ಟಿಕ್ ಕುರ್ಚಿಯನ್ನು … Continued

ವಿಡಿಯೋ | ನೇಪಾಳ ಪ್ರವಾಹ : ಬೆಕ್ಕು ಎಂದುಕೊಂಡು ಮಣ್ಣು ತೆಗೆದಾಗ ಅವಶೇಷಗಳಡಿ ಜೀವಂತವಾಗಿ ಸಿಕ್ಕಳು 5 ವರ್ಷದ ಬಾಲಕಿ !

ಕಠ್ಮಂಡು: ನೇಪಾಳದಲ್ಲಿ ಸಂಭವಿಸಿದ ಭೀಕರ ಹಠಾತ್‌ ಪ್ರವಾಹದಿಂದ ಉಂಟಾದ ದುರಂತದ ನಡುವೆ ಆಶಾಕಿರಣವಾಗಿ ಮೂಡಿಬಂದ ಘಟನೆಯಲ್ಲಿ, ಮೂರು ದಿನಗಳ ಕಾಲ ಮಣ್ಣು ಮತ್ತು ಅವಶೇಷಗಳಡಿ ಸಿಲುಕಿದ್ದರೂ ಐದು ವರ್ಷದ ಬಾಲಕಿ ಜೀವಂತವಾಗಿ ಪತ್ತೆಯಾಗಿದ್ದಾಳೆ. ಶುಕ್ರವಾರ ರಸುವಾ ಜಿಲ್ಲೆಯ ಸ್ಯಾಬ್ರುಬೆಸಿ ಸಮೀಪದಲ್ಲಿ ರಕ್ಷಣಾ ಸಿಬ್ಬಂದಿ ಆಕೆಯನ್ನು ರಕ್ಷಿಸಿದ್ದು, ಬಳಿಕ ಕಠ್ಮಂಡುವಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಆಕೆ ಆರೋಗ್ಯ … Continued

ಮೈ ಜುಂ ಎನ್ನುವ ವಿಡಿಯೋ : ಸುತ್ತಲಿನ ಕಟ್ಟಡಗಳನ್ನು ನುಂಗಿದ ನೇಪಾಳದ ರಕ್ಕಸ ಪ್ರವಾಹ ; ಆದ್ರೆ ಅಚಲವಾಗಿ ನಿಂತ ಒಂದು ಮನೆ…!

ಕಠ್ಮಂಡು: ಪ್ರಕೃತಿ ವಿಕೋಪಗಳು ಸಾಮಾನ್ಯವಾಗಿ ಕಣ್ಣೀರು, ನೋವು ಮತ್ತು ವಿನಾಶದ ಕಥೆಗಳನ್ನೇ ಬಿಟ್ಟುಹೋಗುತ್ತವೆ. ಆದರೆ ಕೆಲವೊಮ್ಮೆ ಅವುಗಳ ಭೀಕರತೆಯ ಮಧ್ಯೆಯೇ ಬದುಕಿನ ಮೇಲಿನ ನಂಬಿಕೆಯನ್ನು ಮತ್ತೊಮ್ಮೆ ಗಟ್ಟಿಗೊಳಿಸುವ ಅಚ್ಚರಿಯ ಕಥೆಗಳೂ ಹೊರಹೊಮ್ಮುತ್ತವೆ. ನೇಪಾಳದಲ್ಲಿ ಸಂಭವಿಸಿದ ಭೀಕರ ಹಠಾತ್‌ ಪ್ರವಾಹದ ದುರಂತದ ನಡುವೆ ಅಂತಹದ್ದೇ ಒಂದು ಪವಾಡದ ರೀತಿಯಲ್ಲಿ ಪಾರಾದವರ ಕಥೆ ಇದೀಗ ಜಗತ್ತಿನಾದ್ಯಂತ ಜನರ ಹೃದಯ … Continued

ನೇಪಾಳ ಪ್ರವಾಹದ ಬೆಚ್ಚಿ ಬೀಳಿಸುವ ದೃಶ್ಯ ವಿಡಿಯೊದಲ್ಲಿ ಸೆರೆ : ಕ್ಷಣಾರ್ಧದಲ್ಲಿ ಗ್ರಾಮವನ್ನೇ ನುಂಗಿದ ಮಹಾಪ್ರವಾಹ…!

ಕಠ್ಮಂಡು : ನೇಪಾಳ–ಟಿಬೆಟ್ ಗಡಿಭಾಗದಲ್ಲಿ ಬುಧವಾರ ಸಂಭವಿಸಿದ ಭೀಕರ ಹಠಾತ್ ಪ್ರವಾಹದ ವಿಡಿಯೊಗಳು ಇದೀಗ ದುರಂತದ ಭೀಕರತೆಯನ್ನು ಬಯಲಿಗೆಳೆಯುತ್ತಿವೆ. ಭಾರೀ ಪ್ರಮಾಣದ ಮಣ್ಣು, ಕಲ್ಲು ಮತ್ತು ನೀರಿನ ಪ್ರವಾಹವು ನದಿತೀರದಲ್ಲಿ ಮನೆಗಳಿರುವ ಸಂಪೂರ್ಣ ವಸತಿ ಪ್ರದೇಶವನ್ನೇ ನಾಶಮಾಡಿರುವ ದೃಶ್ಯಗಳು ವಿಡಿಯೊದಲ್ಲಿ ಸೆರೆಯಾಗಿವೆ. ಈ ಮಹಾದುರಂತದಲ್ಲಿ ಇದುವರೆಗೆ 538 ಮಂದಿ ಸಾವಿಗೀಡಾಗಿರುವುದು ದೃಢಪಟ್ಟಿದ್ದು, 1,400ಕ್ಕೂ ಹೆಚ್ಚು ಮಂದಿ … Continued

ಚಿಕ್ಕಮಗಳೂರಿನಲ್ಲಿ ಟಿಪ್ಪು ಕಟೌಟ್ ವಿಡಿಯೊಕ್ಕೆ ಪಾಕಿಸ್ತಾನ ಪರ ಹಾಡು ಬಳಕೆ; ಎಫ್‌ಐಆರ್‌ ದಾಖಲು

ಚಿಕ್ಕಮಗಳೂರು: ಈದ್ ಮಿಲಾದ್ ಹಬ್ಬದ ಅಂಗವಾಗಿ ಚಿಕ್ಕಮಗಳೂರು ನಗರದ ಟಿಪ್ಪು ನಗರದಲ್ಲಿ ಅಳವಡಿಸಲಾಗಿದ್ದ ಟಿಪ್ಪು ಸುಲ್ತಾನ್ ಅವರ 40 ಅಡಿ ಎತ್ತರದ ಕಟೌಟ್‌ ಸಂಬಂಧ ಹೊಸ ವಿವಾದವೊಂದು ಭುಗಿಲೆದ್ದಿದೆ. ಕಟೌಟ್‌ ಒಳಗೊಂಡ ವಿಡಿಯೋಗೆ ದೇಶವಿರೋಧಿ ಹಾಗೂ ಹಿಂಸಾಚಾರ ಪ್ರಚೋದಿಸುವ ಹಾಡನ್ನು ಹಿನ್ನೆಲೆಯಾಗಿ ಬಳಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.ಈ ಪ್ರಕರಣಕ್ಕೆ … Continued

ವಿಡಿಯೋ | ಹಫೀಜ್ ಸಯೀದ್ ಕಾಶ್ಮೀರಕ್ಕೆ 10 ಸಾವಿರ ಉಗ್ರರನ್ನು ಕಳುಹಿಸಿದ್ದಾನೆ : ಪಾಕಿಸ್ತಾನದ ನಸೀರ್ ಮದನಿ ಬಹಿರಂಗ ಹೇಳಿಕೆ

ಬಹವಾಲನಗರ: ಈ ತಿಂಗಳ ಆರಂಭದಲ್ಲಿ ಶುಕ್ರವಾರದ ಧಾರ್ಮಿಕ ಪ್ರವಚನ ನೀಡುತ್ತಿದ್ದ ವೇಳೆ ಗಂಭೀರ ಹೃದಯ ಸಂಬಂಧಿತ ತೊಂದರೆಗೆ ಒಳಗಾಗಿದ್ದಾಗಿ ವರದಿಯಾಗಿದ್ದ ಪಾಕಿಸ್ತಾನದ ನಸೀರ್ ಮದನಿ ಮತ್ತೆ ಸಾರ್ವಜನಿಕ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದಾನೆ. ಆಗಸ್ಟ್ 14ರಂದು ಬಹವಾಲನಗರದಲ್ಲಿ ನಡೆದ ನಿಷೇಧಿತ ಭಯೋತ್ಪಾದಕ ಸಂಘಟನೆಗೆ ಸಂಬಂಧಿಸಿದ ಸಭೆಯಲ್ಲಿ ಮಾತನಾಡಿದ ಮದನಿ, ಲಷ್ಕರ್-ಎ-ತೊಯ್ಬಾ (LeT) ಸಂಸ್ಥಾಪಕ ಹಫೀಜ್ ಸಯೀದ್ ಕುರಿತು ಗಂಭೀರ … Continued

ಹನೂರು ಗುಂಡಿನ ಚಕಮಕಿ ಪ್ರಕರಣ : ಅಜ್ಞಾತ ಸ್ಥಳದಿಂದ ವಿಡಿಯೋ ಬಿಡುಗಡೆ ಮಾಡಿದ ಬದುಕುಳಿದ ವ್ಯಕ್ತಿ ಹೇಳಿದ್ದೇನು ?

ಚಾಮರಾಜನಗರ : ಕಾವೇರಿ ವನ್ಯಜೀವಿಧಾಮದಲ್ಲಿ ಶಂಕಿತ ಬೇಟೆಗಾರರು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ನಡುವೆ ನಡೆದ ಗುಂಡಿನ ಚಕಮಕಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಥಳದಿಂದ ಪರಾರಿಯಾಗಿದ್ದಾನೆ ಎನ್ನಲಾದ ನಾಲ್ಕನೇ ವ್ಯಕ್ತಿಯ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಕಾವೇರಿ ವನ್ಯಜೀವಿಧಾಮದಲ್ಲಿ ಆಗಸ್ಟ್ 15ರ ಶನಿವಾರ ಮುಂಜಾನೆ ನಡೆದಿದ್ದಾಗಿ ವರದಿಯಾದ ಶೂಟೌಟ್‌ ಘಟನೆಯಲ್ಲಿ, ಬೇಟೆಯಾಡಲು … Continued

ವಿಡಿಯೋ | ಮೇಕೆ ಬೇಟೆಗೆ ಮಾಂಸದ ಅಂಗಡಿಗೆ ನುಗ್ಗಿದ ಹೆಬ್ಬಾವು; ಕುತ್ತಿಗೆಗೆ ಸುತ್ತಿಕೊಂಡು ಆಟವಾಡಿದ ಕುಡುಕ!

ಮೇಕೆ ಹಿಡಿಯಲು ಸುಮಾರು 15 ಅಡಿ ಉದ್ದದ ಬೃಹತ್ ಹೆಬ್ಬಾವೊಂದು ಮಾಂಸದ ಅಂಗಡಿಯೊಳಗೆ ನುಗ್ಗಿದಾಗ ಕುಡಿದ ಅಮಲಿನಲ್ಲಿದ್ದ ವ್ಯಕ್ತಿಯೊಬ್ಬ ಹೆಬ್ಬಾವನ್ನು ಬರಿಗೈಯಲ್ಲಿ ಹಿಡಿದು, ಅದನ್ನು ಮೈಗೆ ಸುತ್ತಿಕೊಂಡು ಅದರೊಂದಿಗೆ ಆಟವಾಡಿದ ಘಟನೆ ಸ್ಥಳೀಯರನ್ನು ಬೆಚ್ಚಿಬೀಳಿಸಿದೆ. ಈ ಘಟನೆ ಉತ್ತರ ಪ್ರದೇಶದ ಬಾರಾಬಂಕಿಯಲ್ಲಿ ಶುಕ್ರವಾರ ರಾತ್ರಿ ನಡೆದಿದೆ. 15 ಅಡಿ ಉದ್ದದ ಬೃಹತ್ ಹೆಬ್ಬಾವು ಅಂಗಡಿ ನುಗ್ಗಿದಾಗ … Continued

ಚೀನಾದ ಪ್ರಾಯೋಗಿಕ ಬುಲೆಟ್ ರೈಲಿನಿಂದ ವಿಶ್ವದಾಖಲೆ : ಕೇವಲ 5.3 ಸೆಕೆಂಡ್‌ಗಳಲ್ಲಿ 800 ಕಿಮೀ ವೇಗ ತಲುಪಿದ ರೈಲು !

ಹುಬೈ: ಚೀನಾದಲ್ಲಿ ಅಭಿವೃದ್ಧಿಪಡಿಸಲಾಗುತ್ತಿರುವ ಪ್ರಾಯೋಗಿಕ ಮ್ಯಾಗ್ಲೆವ್ ರೈಲು ( experimental maglev train) ಅತಿ ಕಡಿಮೆ ಅವಧಿಯಲ್ಲಿ ಅತ್ಯಂತ ವೇಗವನ್ನು ತಲುಪಿದ್ದು, ತನ್ನದೇ ದಾಖಲೆಯನ್ನು ಮತ್ತೊಮ್ಮೆ ಮುರಿದಿದೆ. ಕೇವಲ 5.3 ಸೆಕೆಂಡ್‌ಗಳಲ್ಲಿ ಶೂನ್ಯದಿಂದ ಅದು ಗಂಟೆಗೆ 800 ಕಿಲೋಮೀಟರ್ ವೇಗಕ್ಕೆ ತಲುಪುವ ಮೂಲಕ ನೂತನ ಸಾಧನೆ ಮಾಡಿದೆ. ಕಳೆದ ಆರು ತಿಂಗಳಲ್ಲಿ ಇದು ಮೂರನೇ ಬಾರಿಗೆ … Continued