ಸಿಎಂಆರ್‌ಎಲ್‌–ಎಕ್ಸಾಲೋಜಿಕ್ ಪ್ರಕರಣ: ಮಾಜಿ ಸಿಎಂ ಪಿಣರಾಯಿ ವಿರುದ್ಧ ಎಫ್‌ಐಆರ್‌ ದಾಖಲಿಸಲು ಕೇರಳ ಹೈಕೋರ್ಟ್ ಆದೇಶ

ತಿರುವನಂತಪುರಂ: ಕೇರಳದ ಮಾಜಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಅವರ ಪುತ್ರಿ ವೀಣಾ ಸೇರಿದಂತೆ ಸಿಎಂಆರ್‌ಎಲ್‌–ಎಕ್ಸಾಲೋಜಿಕ್ ಪ್ರಕರಣದಲ್ಲಿ ಶಂಕಿತ ಆರೋಪಿಗಳ ವಿರುದ್ಧ ಪ್ರಥಮ ಮಾಹಿತಿ ವರದಿ (ಎಫ್‌ಐಆರ್‌) ದಾಖಲಿಸಿ ಕಾನೂನು ಪ್ರಕಾರ ತನಿಖೆ ಮುಂದುವರಿಸುವಂತೆ ರಾಜ್ಯದ ಜಾಗೃತ ಮತ್ತು ಭ್ರಷ್ಟಾಚಾರ ನಿಗ್ರಹ ದಳದ (ವಿಜಿಲೆನ್ಸ್ ಆ್ಯಂಡ್ ಆ್ಯಂಟಿ ಕರಪ್ಷನ್ ಬ್ಯೂರೊ–ವಿಎಸಿಬಿ) ನಿರ್ದೇಶಕರಿಗೆ ಕೇರಳ ಹೈಕೋರ್ಟ್ ಶುಕ್ರವಾರ ಆದೇಶಿಸಿದೆ. … Continued

ಎಫ್‌ಐಆರ್‌ ದಾಖಲಿಸುವ ತನಕ ಕದಲಲ್ಲ : ಮುಖ್ಯ ಚುನಾಧಿಕಾರಿ ಕಚೇರಿ ಮುಂದೆ ಸಿಎಂ ಶಿವಕುಮಾರ, ಸಚಿವರಿಂದ ಧರಣಿ

ಬೆಂಗಳೂರು: ಅಭೂತಪೂರ್ವ ಬೆಳವಣಿಗೆಯೊಂದರಲ್ಲಿ, ಕರ್ನಾಟಕ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರು ಮುಖ್ಯ ಚುನಾವಣಾಧಿಕಾರಿ ವಿ. ಅನ್ಬುಕುಮಾರ ಅವರ ಕಚೇರಿಯಲ್ಲಿ ಧರಣಿ ಸತ್ಯಾಗ್ರಹ ನಡೆಸುತ್ತಿದ್ದಾರೆ. ಬೂತ್ ಮಟ್ಟದ ಅಧಿಕಾರಿಗಳು ಮತ್ತು ಜಿಲ್ಲಾಧಿಕಾರಿಗಳೊಂದಿಗೆ ಸಂಜೆ 5 ಗಂಟೆಯ ವೀಡಿಯೊ ಕಾನ್ಫರೆನ್ಸ್ ನಂತರ ಮುಂದಿನ ಕ್ರಮದ ಬಗ್ಗೆ ಸಿಇಒ ನಿರ್ಧರಿಸುವವರೆಗೆ ಅವರು ಅಲ್ಲಿಯೇ ಇರಲಿದ್ದಾರೆ. ಬಿಜೆಪಿ, ಜೆಡಿಎಸ್ ನಾಯಕರು ಹಾಗೂ … Continued

ಸಿಜೆಪಿ ಪ್ರತಿಭಟನಾಕಾರರ ವಿರುದ್ಧದ ಎಲ್ಲ ಎಫ್‌ಐಆರ್‌ ರದ್ದು ಮಾಡಿದ ಸುಪ್ರೀಂ ಕೋರ್ಟ್‌ ; ಆದರೆ ಕೆಲವರಿಗೆ ವಿನಾಯಿತಿ ಇಲ್ಲ…

ನವದೆಹಲಿ: ಜುಲೈ 20ರಂದು ನಡೆದ ಕಾಕ್ರೋಚ್‌ ಜನತಾ ಪಾರ್ಟಿ (CJP) ಪ್ರತಿಭಟನೆಗಳ ಬಳಿಕ ವಿದ್ಯಾರ್ಥಿ ಪ್ರತಿಭಟನಾಕಾರರ ವಿರುದ್ಧ ದೇಶದ ವಿವಿಧ ಭಾಗಗಳಲ್ಲಿ ದಾಖಲಿಸಲಾಗಿದ್ದ ಎಫ್‌ಐಆರ್‌ಗಳಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಮಂಗಳವಾರ ಮಹತ್ವದ ಆದೇಶ ಮಾಡಿದ್ದು, ಜುಲೈ 20ರಿಂದ 25ರವರೆಗೆ ವಿದ್ಯಾರ್ಥಿಗಳ ವಿರುದ್ಧ ದಾಖಲಾದ ಎಲ್ಲಾ ಪ್ರಕರಣಗಳನ್ನು ರದ್ದುಗೊಳಿಸಿದೆ. ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ ನೇತೃತ್ವದ ಪೀಠವು, ದೇಶದ … Continued

ಚಿಕ್ಕಮಗಳೂರಿನಲ್ಲಿ ಟಿಪ್ಪು ಕಟೌಟ್ ವಿಡಿಯೊಕ್ಕೆ ಪಾಕಿಸ್ತಾನ ಪರ ಹಾಡು ಬಳಕೆ; ಎಫ್‌ಐಆರ್‌ ದಾಖಲು

ಚಿಕ್ಕಮಗಳೂರು: ಈದ್ ಮಿಲಾದ್ ಹಬ್ಬದ ಅಂಗವಾಗಿ ಚಿಕ್ಕಮಗಳೂರು ನಗರದ ಟಿಪ್ಪು ನಗರದಲ್ಲಿ ಅಳವಡಿಸಲಾಗಿದ್ದ ಟಿಪ್ಪು ಸುಲ್ತಾನ್ ಅವರ 40 ಅಡಿ ಎತ್ತರದ ಕಟೌಟ್‌ ಸಂಬಂಧ ಹೊಸ ವಿವಾದವೊಂದು ಭುಗಿಲೆದ್ದಿದೆ. ಕಟೌಟ್‌ ಒಳಗೊಂಡ ವಿಡಿಯೋಗೆ ದೇಶವಿರೋಧಿ ಹಾಗೂ ಹಿಂಸಾಚಾರ ಪ್ರಚೋದಿಸುವ ಹಾಡನ್ನು ಹಿನ್ನೆಲೆಯಾಗಿ ಬಳಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.ಈ ಪ್ರಕರಣಕ್ಕೆ … Continued

ಸರ್ಕಾರಿ ಶಾಲೆಗೆ ಅನುಮತಿ ಇಲ್ಲದೆ ಪ್ರವೇಶ: ಸಿಜೆಪಿ ಸಂಚಾಲಕ ಅಭಿಜೀತ ದಿಪ್ಕೆ ವಿರುದ್ಧ ಎಫ್‌ಐಆರ್

 ಲಾತೂರ್:  ಅನುಮತಿ ಇಲ್ಲದೆ ಸರ್ಕಾರಿ ಶಾಲೆ ಪ್ರವೇಶಿಸಿ, ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸುವುದರ ಜೊತೆಗೆ ಶಿಕ್ಷಕರಿಗೆ ಬೆದರಿಕೆ ಹಾಕಿದ ಆರೋಪದ ಮೇರೆಗೆ ಕಾಕ್ರೋಚ್‌ ಜನತಾ ಪಾರ್ಟಿ (CJP) ಸಂಚಾಲಕ ಅಭಿಜೀತ ದಿಪ್ಕೆ ಹಾಗೂ ಇತರರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಲಾತೂರ್ ಜಿಲ್ಲೆಯ ಔಸಾ ಪೊಲೀಸ್ ಠಾಣೆಯಲ್ಲಿ ಜಿಲ್ಲಾ ಪರಿಷತ್ ಉರ್ದು ಶಾಲೆಯ ಶಿಕ್ಷಕಿ ಸಯ್ಯದ್ ಶಮ್ಶದ್‌ಬಾನೋ … Continued

ಪೆಲೆಟ್ ಗನ್ ಪ್ರಕರಣದಲ್ಲಿ ದೆಹಲಿ ಪೊಲೀಸರಿಂದ ಎಫ್‌ಐಆರ್‌ ದಾಖಲು ; ರಾಹುಲ್ ಗಾಂಧಿಯ 7 ತಾಸುಗಳ ಧರಣಿ ಅಂತ್ಯ

ನವದೆಹಲಿ: ಜುಲೈ 20ರಂದು ಜಂತರ್ ಮಂತರ್‌ನಲ್ಲಿ ನಡೆದ ಪ್ರತಿಭಟನೆಯ ವೇಳೆ ಪ್ರತಿಭಟನಾಕಾರರ ಮೇಲೆ ಪೆಲೆಟ್ ಗನ್‌ಗಳನ್ನು ಬಳಸಲಾಗಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಕೊನೆಗೂ ಎಫ್‌ಐಆರ್‌ (FIR) ದಾಖಲಿಸಿದ್ದಾರೆ. ಪ್ರಕರಣವನ್ನು ಭಾರತೀಯ ನ್ಯಾಯ ಸಂಹಿತೆ (BNS)ಯ ಸೆಕ್ಷನ್ 118 ಮತ್ತು 125ರ ಅಡಿಯಲ್ಲಿ ದಾಖಲಿಸಲಾಗಿದೆ. ಎಫ್‌ಐಆರ್‌ ದಾಖಲಿಸುವಂತೆ ಒತ್ತಾಯಿಸಿ ಲೋಕಸಭೆ ವಿಪಕ್ಷ ನಾಯಕ ರಾಹುಲ್ … Continued

“ಕಣ್ಣಿನಲ್ಲಿ 3, ದೇಹದಲ್ಲಿ 200 ಪೆಲೆಟ್‌ಗಳು”..: ಎಫ್‌ಐಆರ್‌ ದಾಖಲಿಸಲು ಒತ್ತಾಯಿಸಿ ಠಾಣೆ ಮುಂದೆ ರಾಹುಲ್ ಗಾಂಧಿ ಧರಣಿ

ನವದೆಹಲಿ: ವಿದ್ಯಾರ್ಥಿಗಳ ಮೇಲೆ ಪೆಲೆಟ್‌ ಗನ್‌ ಬಳಸಿ ಗುಂಡಿನ ದಾಳಿ ನಡೆಸಲು ಆದೇಶ ನೀಡಿದ್ದು ಯಾರು ಎಂಬುದಕ್ಕೆ ಉತ್ತರ ನೀಡಬೇಕು ಎಂದು ಆಗ್ರಹಿಸುತ್ತಿರುವ ಲೋಕಸಭೆಯ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ, ಪೆಲೆಟ್‌ ಗನ್‌ ದಾಳಿಗೆ ಒಳಗಾದ ವಿದ್ಯಾರ್ಥಿ ಸಾಹಿಲ್ ಲೋಚಬ್‌ ಅವರನ್ನು ಜೊತೆಯಲ್ಲಿ ಕರೆದುಕೊಂಡು ಇಂದು, ಶುಕ್ರವಾರ ಸಂಸತ್‌ ಸ್ಟ್ರೀಟ್‌ ಪೊಲೀಸ್ ಠಾಣೆಗೆ ತೆರಳಿ ಎಫ್‌ಐಆರ್‌ … Continued

ಬೆಂಗಳೂರು : ಬೆಳ್ಳಂದೂರು ಪೊಲೀಸರಿಂದ 800 ಕೆಜಿ ಜೆಲಟಿನ್ ವಶ

ಬೆಂಗಳೂರು: ಬೆಂಗಳೂರಿನ ಭೋಗನಹಳ್ಳಿ ಸಮೀಪದ ನಿರ್ಮಾಣ ಸ್ಥಳದಲ್ಲಿ ಬಂಡೆಗಳನ್ನು ಸ್ಫೋಟಿಸಲು ಅಕ್ರಮವಾಗಿ ಬಳಸಲಾಗುತ್ತಿತ್ತು ಎನ್ನಲಾದ 800 ಕೆಜಿಗೂ ಹೆಚ್ಚು ಜೆಲಟಿನ್‌ನ್ನು ಬೆಳ್ಳಂದೂರು ಪೊಲೀಸರು ಭಾನುವಾರ (ಆಗಸ್ಟ್ 16) ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ ಎಫ್‌ಐಆರ್ ದಾಖಲಿಸಿಕೊಂಡಿರುವ ಪೊಲೀಸರು, ಸ್ಫೋಟಕ ವಸ್ತುಗಳ ಮೂಲ, ಅವುಗಳ ಸಂಗ್ರಹಣೆ ಹಾಗೂ ಬಳಕೆಗೆ ಅಗತ್ಯ ಅನುಮತಿಗಳನ್ನು ಪಡೆಯಲಾಗಿತ್ತೇ ಎಂಬುದರ ಕುರಿತು ತನಿಖೆ ಆರಂಭಿಸಿದ್ದಾರೆ. … Continued

ನಕಲಿ ಹೆಸರಿನಲ್ಲಿ 25 ಮದುವೆ ; ತಮ್ಮ ಅಳಿಯನ ವಿರುದ್ಧವೇ ದೂರು ದಾಖಲಿಸಿದ ಬಿಜೆಪಿ ಶಾಸಕ : ಇಬ್ಬರ ಬಂಧನ

ಲಕ್ನೋ: ತಮ್ಮ ಪುತ್ರಿಯನ್ನು ವಿವಾಹವಾದ ವ್ಯಕ್ತಿ ಹಾಗೂ ಆತನ ಕುಟುಂಬ ತಮ್ಮನ್ನು ವಂಚಿಸಿದೆ ಎಂದು ಉತ್ತರ ಪ್ರದೇಶದ ಸೆವತಾ ಕ್ಷೇತ್ರದ ಬಿಜೆಪಿ ಶಾಸಕ ಜ್ಞಾನ ತಿವಾರಿ ಆರೋಪಿಸಿದ್ದಾರೆ. ನಕಲಿ ಹೆಸರು ಬಳಸಿಕೊಂಡು ವಿವಿಧ ರಾಜ್ಯಗಳ ಹಲವು ಮಹಿಳೆಯರನ್ನು ವಂಚಿಸಿರುವ ತಮ್ಮ ಮಗಳ ಗಂಡ ಪ್ರಖರ್ ತ್ರಿವೇದಿ, ಸುಮಾರು 25 ಮದುವೆ ಮಾಡಿಕೊಂಡಿದ್ದಾನೆ ಎಂದು ಆರೋಪಿಸಿದ್ದಾರೆ.  ಈ … Continued

ನಿತಿನ್ ಗಡ್ಕರಿ ವಿರುದ್ಧ ಅಪಪ್ರಚಾರ ಆರೋಪ; ನಾಲ್ವರು ಇನ್‌ಫ್ಲುವೆನ್ಸರ್‌ಗಳ ವಿರುದ್ಧ ಎಫ್‌ಐಆರ್

ನಾಗ್ಪುರ: ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರ ವಿರುದ್ಧ ಸಂಚು ರೂಪಿಸಿ ಅಪಪ್ರಚಾರ ನಡೆಸಿದ ಆರೋಪದಡಿ ಬಿಹಾರದ ಖ್ಯಾತ ಯೂಟ್ಯೂಬರ್ ಮಣೀಶ ಕಶ್ಯಪ್ ಸೇರಿದಂತೆ ನಾಲ್ವರು ಸಾಮಾಜಿಕ ಜಾಲತಾಣ ಇನ್‌ಫ್ಲುವೆನ್ಸರ್‌ಗಳ ವಿರುದ್ಧ ನಾಗ್ಪುರ ಸೈಬರ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಮಣೀಶ ಕಶ್ಯಪ್ ಹೊರತುಪಡಿಸಿ, ದೇಸಿ ಬಾಯ್ಸ್ ಎನ್‌ಸಿಆರ್ (Desi … Continued