ನಿವೃತ್ತ ಪೊಲೀಸ್‌ ಮಹಾನಿರ್ದೇಶಕ ಓಂ ಪ್ರಕಾಶ ಹತ್ಯೆ ಪ್ರಕರಣ : ಪತ್ನಿ-ಪುತ್ರಿ ವಿರುದ್ಧ ದೂರು ದಾಖಲು, ಪತ್ನಿಯ ಬಂಧನ

ಬೆಂಗಳೂರು : ನಿವೃತ್ತ ಪೊಲೀಸ್‌ ಮಹಾನಿರ್ದೇಶಕ ಓಂ ಪ್ರಕಾಶ ಅವರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪತ್ನಿ ಮತ್ತು ಪುತ್ರಿಯ ಮೇಲೆ ಎಫ್‌ಐಆರ್‌ ದಾಖಲಾಗಿದ್ದು, ನಂತರ ಪತ್ನಿ ಪಲ್ಲವಿಯನ್ನು ಬಂಧಿಸಲಾಗಿದೆ ಎಂದು ತಿಳಿದುಬಂದಿದೆ. ಓಂ ಪ್ರಕಾಶ ಅವರ ಪುತ್ರ ಕಾರ್ತಿಕೇಶ ನೀಡಿದ ದೂರಿನ ಮೇರೆಗೆ ತಾಯಿ ಪಲ್ಲವಿ, ಸಹೋದರಿ ಕೃತಿ ವಿರುದ್ಧ ಹೆಚ್‌ಎಸ್‌ಆರ್‌ ಲೇಔಟ್‌ ಠಾಣೆಯಲ್ಲಿ ಬಿಎನ್‌ಎಸ್‌ … Continued

ಮಾಜಿ ಪೊಲೀಸ್‌ ಮುಖ್ಯಸ್ಥ ಓಂ ಪ್ರಕಾಶ ಕೊಲೆ ಪ್ರಕರಣ : ತನಿಖಾಧಿಕಾರಿಗಳ ಎದುರು ಕೊಲೆಯ ವಿವರ ಬಾಯ್ಬಿಟ್ಟ ಪತ್ನಿ…!?

ಬೆಂಗಳೂರು : ಭಾನುವಾರ ಬೆಂಗಳೂರಿನ ಎಚ್‌ಎಸ್‌ ಆರ್‌ ಲೇಔಟ್‌ನ ತಮ್ಮ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದ ಕರ್ನಾಟಕದ ಮಾಜಿ ಪೊಲೀಸ್ ಮುಖ್ಯಸ್ಥ ಓಂ ಪ್ರಕಾಶ, ಅಂದು ಮಧ್ಯಾಹ್ನ ತಮ್ಮ ಪತ್ನಿಯೊಂದಿಗೆ ಜಗಳವಾಡಿದ್ದರು. ಅದು ವಿಕೋಪಕ್ಕೆ ಹೋಗಿ ಈ ಘಟನೆ ಸಂಭವಿಸಿದೆ ಎಂದು ಹೇಳಲಾಗಿದೆ. ಈ ಜಗಳದಲ್ಲಿ, ಅವರು ಓಂ ಪ್ರಕಾಶ ಅವರ ಮೇಲೆ ಮೆಣಸಿನ ಪುಡಿ ಎಸೆದು, … Continued

ವಾಯು ವಿಹಾರಕ್ಕೆ ಹೋಗಿದ್ದ ಕಾರವಾರ ನಗರಸಭೆ ಮಾಜಿ ಸದಸ್ಯನ ಹತ್ಯೆ

ಕಾರವಾರ: ನಗರಸಭೆಯ ಮಾಜಿ ಸದಸ್ಯ ಸತೀಶ ಕೊಳಂಬಕರ ಅವರನ್ನು ನಡು ರಸ್ತೆಯಲ್ಲಿ ಚಾಕುವಿನಿಂದ ಇರಿದು ಹತ್ಯೆ ಮಾಡಿದ ಘಟನೆ ಭಾನುವಾರ ನಗರದಲ್ಲಿ ಸಂಭವಿಸಿದೆ. ಸತೀಶ ಅವರು ಭಾನುವಾರ ಬೆಳಿಗ್ಗೆ ವಾಯು ವಿಹಾರಕ್ಕೆ ಮಾರುಕಟ್ಟೆ ಬಳಿ ಆಗಮಿಸಿದ್ದರು. ಇದನ್ನು ಗಮನಿಸಿದ ಹಂತಕ ನಗರದ ಬಿಎಸ್ ಎನ್ ಎಲ್ ಕಚೇರಿ ಸಮೀಪ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ. ಇಬ್ಬರು … Continued

ಬಾಂಗ್ಲಾದೇಶದಲ್ಲಿ ಹಿಂದೂ ನಾಯಕನ ಅಪಹರಣ ಮಾಡಿ ಬಡಿದು ಕೊಂದರು…!

ಢಾಕಾ: ಬಾಂಗ್ಲಾದೇಶದ ದಿನಾಜಪುರ ಜಿಲ್ಲೆಯಲ್ಲಿ ಹಿಂದೂ ಸಮುದಾಯದ ಪ್ರಮುಖ ನಾಯಕನೊಬ್ಬನನ್ನು ಅವರ ಮನೆಯಿಂದ ಅಪಹರಿಸಿ ಥಳಿಸಿ ಹತ್ಯೆ ಮಾಡಲಾಗಿದೆ ಎಂದು ಶುಕ್ರವಾರ ಮಾಧ್ಯಮ ವರದಿಯೊಂದು ತಿಳಿಸಿದೆ. ಢಾಕಾದಿಂದ ವಾಯುವ್ಯಕ್ಕೆ ಸುಮಾರು 330 ಕಿಲೋಮೀಟರ್ ದೂರದಲ್ಲಿರುವ ದಿನಾಜಪುರದ ಬಸುದೇಬಪುರ ಗ್ರಾಮದ ನಿವಾಸಿ ಭಬೇಶಚಂದ್ರ ರಾಯ್ (58) ಅವರ ಶವ ಗುರುವಾರ ರಾತ್ರಿ ಪತ್ತೆಯಾಗಿದೆ ಎಂದು ಪೊಲೀಸರು ಮತ್ತು … Continued

ಹುಬ್ಬಳ್ಳಿಯಲ್ಲಿ 5 ವರ್ಷದ ಬಾಲಕಿ ಕೊಲೆ : ಪೊಲೀಸರ ಗುಂಡೇಟಿಗೆ ಆರೋಪಿ ಸಾವು

ಹುಬ್ಬಳ್ಳಿ: ನಗರದಲ್ಲಿ 5 ವರ್ಷದ ಬಾಲಕಿಯನ್ನು ಅಪಹರಿಸಿ ಲೈಂಗಿಕ ದೌರ್ಜನ್ಯ ಎಸಗಿ ನಂತರ ಆಕೆಯನ್ನು ಕೊಲೆ ಮಾಡಿದ್ದ ಬಿಹಾರ ಮೂಲದ ಆರೋಪಿ ಪೊಲೀಸರ ಎನ್‌ಕೌಂಟರ್‌ನಲ್ಲಿ ಸಾವಿಗೀಡಾಗಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ. ಐದು ವರ್ಷದ ಬಾಲಕಿಯ ಕೊಲೆ ಪ್ರಕರಣದ ಆರೋಪಿ ಪತ್ತೆಗಾಗಿ ಹುಬ್ಬಳ್ಳಿ ಪೊಲೀಸರು ಹಲವು ತಂಡಗಳನ್ನು ರಚಿಸಿದ್ದರು. ಆರೋಪಿ ಬಿಹಾರ ಮೂಲದ ರಿತೇಶಕುಮಾರ ಎನ್ನಲಾಗಿದ್ದು, ಈತ … Continued

ಶವದ ಮೇಲಿನ ಮೂಗುತಿಯಿಂದ ಬಯಲಾಯ್ತು ಮಹಿಳೆಯ ಕೊಲೆಯ ರಹಸ್ಯ

ನವದೆಹಲಿ: ಶವದ ಮೇಲಿನ ಮೂಗುತಿ ನೀಡಿದ ಸುಳಿವಿನಿಂದ ಕೊಲೆ ಪ್ರಕರಣವೊಂದನ್ನು ಪೊಲೀಸರು ಭೇದಿಸಿದ್ದಾರೆ. ಮೂಗುತಿಯ ಸಹಾಯದಿಂದ ಚರಂಡಿಯಲ್ಲಿ ಶವವಾಗಿ ಪತ್ತೆಯಾಗಿದ್ದ ಮಹಿಳೆಯ ಕೊಲೆಗಾರನನ್ನು ದೆಹಲಿ ಪೊಲೀಸರು ಪತ್ತೆ ಮಾಡಿದ್ದಾರೆ. ಪತಿಯೇ ತನ್ನ ಹೆಂಡತಿಯನ್ನು ಕೇಬಲ್ ವೈರ್‌ನಿಂದ ಕತ್ತು ಹಿಸುಕಿ ಕೊಲೆ ಮಾಡಿ, ನಂತರ ಆಕೆಯ ದೇಹವನ್ನು ಬೆಡ್‌ಶೀಟ್‌ನಲ್ಲಿ ಸುತ್ತಿ ಚರಂಡಿಗೆ ಎಸೆದಿದ್ದ ಎಂದು ಪೊಲೀಸರು ಶುಕ್ರವಾರ … Continued

ಚಿಕ್ಕಮಗಳೂರು| ಪತ್ನಿ ಬಿಟ್ಟು ಹೋದ ಕೋಪಕ್ಕೆ ಗುಂಡು ಹಾರಿಸಿ ಕುಟುಂಬದ ಮೂವರ ಹತ್ಯೆ; ನಂತರ ತಾನೂ ಆತ್ಮಹತ್ಯೆ..

ಚಿಕ್ಕಮಗಳೂರು: ಹೆಂಡತಿ ಮನೆ ಬಿಟ್ಟು ಹೋಗಿದ್ದಕ್ಕೆ ಮನನೊಂದು ಅತ್ತೆ, ನಾದಿನಿ ಹಾಗೂ 7 ವರ್ಷದ ಮಗುವನ್ನು ಗುಂಡುಹಾರಿಸಿ ಕೊಲೆ ಮಾಡಿ ನಂತರ ತಾನೂ ಆತ್ಮಹತ್ಯೆಗೆ ಶರಣಾದ ಘಟನೆ ಜಿಲ್ಲೆಯ ಬಾಳೆಹೊನ್ನೂರು ಸಮೀಪದ ಖಾಂಡ್ಯ ಬಳಿ ನಡೆದಿದೆ ಎಂದು ವರದಿಯಾಗಿದೆ. ರತ್ನಾಕರ ಎಂಬಾತ ಅತ್ತೆ ಜ್ಯೋತಿ (50), ನಾದಿನಿ ಸಿಂಧು (26) ಹಾಗೂ 7 ವರ್ಷದ ಮಗು … Continued

ಕೊಡಗು : ಪೊನ್ನಂಪೇಟೆ ಬಳಿ ಒಂದೇ ಕುಟುಂಬದ ‌ನಾಲ್ವರ ಭೀಕರ ಹತ್ಯೆ

ಮಡಿಕೇರಿ : ಒಂದೇ ಕುಟುಂಬದ ನಾಲ್ವರನ್ನು ಮಾರಕಾಸ್ತ್ರದಿಂದ ಭೀಕರವಾಗಿ ಕೊಲೆ ಮಾಡಿರುವ ಘಟನೆ ಕೊಡಗು ಜಿಲ್ಲೆಯ ಪೊನ್ನಂಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ ಎಂದು ವರದಿಯಾಗಿದೆ. ಬೇಗೂರು ಗ್ರಾಮದ ಕರಿಯ(75), ಗೌರಿ (70) ದಂಪತಿ ಹಾಗೂ ನಾಗಿ (30) ಮತ್ತು ಮಗಳು ಕಾವೇರಿ(5) ಕೊಲೆಯಾದವರು ಎಂದು ಗುರುತಿಸಲಾಗಿದೆ. ಇಂದು, ಗುರುವಾರ ರಾತ್ರಿ ಸಮಯದಲ್ಲಿ ಈ ಘಟನೆ … Continued

ಬೆಂಗಳೂರು | ಬೆಚ್ಚಿ ಬೀಳಿಸುವ ಘಟನೆ : ಪತ್ನಿಯನ್ನು ಕೊಂದು ಸೂಟ್ ಕೇಸಿನಲ್ಲಿ ತುಂಬಿ ಆಕೆಯ ತವರು ಮನೆಗೆ ಫೋನ್‌ ಕರೆ ಮಾಡಿ ಪರಾರಿಯಾದ ಗಂಡ..

ಬೆಂಗಳೂರು: ಗೌರಿ ಖೇಡೇಕರ ಅಲಿಯಾಸ್ ಗೌರಿ ಅನಿಲ ಸಾಂಬ್ರೇಕರ (32) ಎಂಬ ಮಹಿಳೆಯನ್ನು ಆಕೆಯ ಪತಿ ರಾಕೇಶ ರಾಜೇಂದ್ರ ಖೇಡೇಕರ (36) ಎಂಬಾತ ದೊಡ್ಡಕಮ್ಮನಹಳ್ಳಿಯ ತಮ್ಮ ಮನೆಯಲ್ಲಿ ಕೊಲೆ ಮಾಡಿದ್ದಾನೆ ಎಂದು ವರದಿಯಾಗಿದೆ. ಪತ್ನಿಯನ್ನು ಚಾಕುವಿನಿಂದ ಇರಿದು ಕೊಂದ ನಂತರ ಆರೋಪಿ ರಾಕೇಶ ಆಕೆಯ ಶವವನ್ನು ಸೂಟ್‌ಕೇಸ್‌ನಲ್ಲಿ ತುಂಬಿ ಮನೆಯಲ್ಲಿದ್ದ ರಕ್ತದ ಕಲೆಗಳನ್ನು ಸ್ವಚ್ಛಗೊಳಿಸಿದ್ದಾನೆ. ಮತ್ತು … Continued

ಬಾಡಿಗೆಗೆ ಇದ್ದ ಯೋಗ ಶಿಕ್ಷಕನನ್ನು ಜೀವಂತವಾಗಿ ಹೂತು ಹಾಕಿದ ಮನೆ ಮಾಲೀಕ

ರೋಹ್ಟಕ್‌ :  ಯೋಗ ಶಿಕ್ಷಕರೊಬ್ಬರು ತಮ್ಮ ಪತ್ನಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಾರೆ ಎಂದು ಅನುಮಾನಿಸಿ ಮನೆಯ ಮಾಲೀಕ ಬಾಡಿಗೆದಾರರನ್ನು ಜೀವಂತವಾಗಿ ಹೂತು ಹಾಕಿದ ಘಟನೆ  ಹರಿಯಾಣದ ರೋಹ್ಟಕ್‌ನ ಚರ್ಕಿ ದಾದ್ರಿಯಲ್ಲಿ ಬೆಳಕಿಗೆ ಬಂದಿದೆ. ತನ್ನ ಸ್ನೇಹಿತರ ಸಹಾಯವನ್ನು ಪಡೆದು ಯೋಗ ಶಿಕ್ಷಕನನ್ನು ಅಪಹರಿಸಿ ನಂತರ ಹೊಲದಲ್ಲಿ 7 ಅಡಿ ಆಳದ ಗುಂಡಿಯಲ್ಲಿ ಜೀವಂತವಾಗಿ ಹೂತುಹಾಕಿದ್ದಾನೆ ಎಂದು … Continued