ಕೇರಳದಲ್ಲಿ ಸೋಮವಾರ 20,000ಕ್ಕಿಂತ ಕಡಿಮೆ ಹೊಸ ಕೊರೊನಾ ಪ್ರಕರಣಗಳು ದಾಖಲು

ತಿರುವನಂತಪುರಂ: ಕೇರಳದಲ್ಲಿ ಸೋಮವಾರ (ಸಪ್ಟೆಂಬರ್ 6) 19,688 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿದೆ. ಕಳೆದ ಹತ್ತು ದಿನಗಳ ನಂತರ ಇಂದು (ಸೋಮವಾರ)ಮೊದಲ ಬಾರಿಗೆ 20,000 ಕ್ಕಿಂತ ಕಡಿಮೆ ಕೊರೊನಾ ಪ್ರಕರಣಗಳು ವರದಿಯಾಗಿವೆ. ಇದೇ ಅವಧಿಯಲ್ಲಿ ಕೇರಳದಲ್ಲಿ 135 ಮಂದಿ ಮೃತಪಟ್ಟಿದ್ದಾರೆ. ರಾಜ್ಯದಲ್ಲಿ ಒಟ್ಟು ಕೊರೊನಾ ಪ್ರಕರಣಗಳ ಸಂಖ್ಯೆ 42,27,526 ಆಗಿದೆ. ಕೊರೊನಾದಿಂದ ಈವರೆಗೆ 21,631 ಜನ … Continued

ಕೇರಳದಲ್ಲಿ ಜೀಕಾ ವೈರಸ್‍ ಪ್ರಕರಣಗಳ ಸಂಖ್ಯೆ 48ಕ್ಕೆ ಏರಿಕೆ

ತಿರುವನಂತಪುರಂ: ಕೇರಳದಲ್ಲಿ ಭಾನುವಾರ ಇನ್ನೂ ಇಬ್ಬರಿಗೆ ಜೀಕಾ ವೈರಸ್ ಧೃಢಪಡುವುದರೊಂದಿಗೆ ರಾಜ್ಯದಲ್ಲಿ ಈ ಸೋಂಕಿನ ಒಟ್ಟು ಪ್ರಕರಣಗಳ ಸಂಖ್ಯೆ 48ಕ್ಕೆ ಏರಿದೆ ಎಂದು ಆರೋಗ್ಯ ಸಚಿವೆ ವೀಣಾ ಜಾರ್ಜ್ ಭಾನುವಾರ ತಿಳಿಸಿದ್ದಾರೆ. ಭಾನುವಾರ ತಿರುವನಂತಪುರಂ ಜಿಲ್ಲೆಯಲ್ಲಿ 37 ವರ್ಷದ ವ್ಯಕ್ತಿಗೆ ಮತ್ತು ಕಳಕೊಟ್ಟಂ ನಲ್ಲಿ 27 ವರ್ಷದ ಮಹಿಳೆಗೆ ವೈರಸ್ ದೃಢಪಟ್ಟಿದೆ. ಒಟ್ಟು 48 ಪ್ರಕರಣಗಳ … Continued

ಸಂಭವನೀಯ ಡ್ರೋನ್ ದಾಳಿ ಬಗ್ಗೆ ಗುಪ್ತಚರ ಮಾಹಿತಿ ನಂತರ ಕೇರಳ, ತಮಿಳುನಾಡು ಹೈ ಅಲರ್ಟ್: ವರದಿ

ನವದೆಹಲಿ: ಸಂಭವನೀಯ ಡ್ರೋನ್ ದಾಳಿಯ ಬಗ್ಗೆ ಗುಪ್ತಚರ ಮಾಹಿತಿಗಳನ್ನು ಅನುಸರಿಸಿ ಕೇರಳ ಮತ್ತು ತಮಿಳುನಾಡು ಹೆಚ್ಚಿನ ಎಚ್ಚರಿಕೆ ವಹಿಸಿವೆ. ಬಿಸಿನೆಸ್ ಸ್ಟ್ಯಾಂಡರ್ಡ್ ವರದಿಯ ಪ್ರಕಾರ, ಕೇಂದ್ರ ಗುಪ್ತಚರ ಸಂಸ್ಥೆಗಳು ಕೇರಳ ಮತ್ತು ತಮಿಳುನಾಡು ರಾಜ್ಯ ಪೊಲೀಸರನ್ನು ಹೆಚ್ಚು ಸಜ್ಜಾಗಿರುವಂತೆ ಕೇಳಿಕೊಂಡಿವೆ. ಜೂನ್ 27 ರಂದು ಜಮ್ಮುವಿನ ವಾಯುಪಡೆ ನಿಲ್ದಾಣದಲ್ಲಿ ಅವಳಿ ಡ್ರೋನ್ ದಾಳಿಯ ನಂತರ ಈ … Continued

ಕೇರಳದಲ್ಲಿ ಕೊರೊನಾ ಉಲ್ಬಣ.. 35 ಸಾವಿರಕ್ಕೂ ಹೆಚ್ಚು ದಾಖಲೆಯ ದೈನಂದಿನ ಸೋಂಕು ದಾಖಲು

ತಿರುವನಂತಪುರಂ: ಕೇರಳದಲ್ಲಿ ಬುಧವಾರ 35,000 ಕ್ಕೂ ಹೆಚ್ಚು ಕೊರೊನಾ ಪ್ರಕರಣಗಳು ದಾಖಲಾಗಿವೆ. ರಾಜ್ಯದಲ್ಲಿ 35,013 ಕೋವಿಡ್‌ -19 ಪ್ರಕರಣಗಳು ದಾಖಲಾಗಿದ್ದರೆ, 2.66 ಲಕ್ಷಕ್ಕೂ ಹೆಚ್ಚು ಜನರು ಪ್ರಸ್ತುತ ಸೋಂಕಿಗೆ ಚಿಕಿತ್ಸೆ ಪಡೆಯುತ್ತಿದ್ದಾರೆ, 41 ಜನರು ಸೋಂಕಿನಿಂದ ಮೃತಪಟ್ದಿದ್ದಾರೆ. ಒಟ್ಟು ಸಂಖ್ಯೆ 5,211ಕ್ಕೆ ಏರಿದೆ ಎಂದು ರಾಜ್ಯ ಸರ್ಕಾರ ತಿಳಿಸಿದೆ. ಹೊಸ ಪ್ರಕರಣಗಳ ಸೇರ್ಪಡೆಯೊಂದಿಗೆ, ಸೋಂಕಿನ ಸಂಖ್ಯೆ … Continued

ಹುಡುಗಿಯರೇ ‘ಅವಿವಾಹಿತ’ ರಾಹುಲ್ ಬಗ್ಗೆ ಜಾಗರೂಕರಾಗಿರಿ: ವಿವಾದಿತ ಹೇಳಿಕೆ ನೀಡಿದ ಕಮ್ಯುನಿಸ್ಟ್‌ ನಾಯಕ

ಮಾಜಿ ಎಡಪಂಥೀಯ ಬೆಂಬಲಿಗ ಜಾಯ್ಸ್ ಜಾರ್ಜ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಅವರ ವಿರುದ್ಧ ಮಾಡಿದ ಹೇಳಿಕ ಈಗ ವಿವಾದಕ್ಕೆ ಕಾರಣವಾಗಿದೆ. ರಾಹುಲ್ ಗಾಂಧಿ ಅವರು ಮದುವೆಯಾಗಬೇಕಾಗಿರುವುದರಿಂದ ಹುಡುಗಿಯರು ಜಾಗರೂಕರಾಗಿರಬೇಕು ಎಂದು ಜಾರ್ಜ್ ಹೇಳಿದ್ದು ಈಗ ವಿವಾದಕ್ಕೆ ಕಾರಣವಾಗಿದೆ. . ಸಿಪಿಐ (ಎಂ) ಮುಖಂಡ ಮತ್ತು ಸಚಿವ ಎಂ.ಎಂ.ಮಣಿ ಅವರನ್ನು ಬೆಂಬಲಿಸಿ ನಡೆದ ಸಮಾವೇಶದಲ್ಲಿ … Continued

ಟೈಮ್‌ ನೌ-ಸಿ ವೋಟರ್ ಸಮೀಕ್ಷೆ: ಪಿಣರಾಯಿಗೆ ಮತದಾರ ಜೈ..ಕಾಂಗ್ರೆಸ್‌ಗೆ ಕೈ

ನವ ದೆಹಲಿ: ಕೇರಳ ವಿಧಾನಸಭೆ ಚುನಾವಣೆಯಲ್ಲಿ ಕೇರಳದಲ್ಲಿ ಮತ್ತೆ ಆಡಳಿತಾರೂಢ ರಂಗವೇ ಅಧಿಕಾರಕ್ಕೆ ಬರಲಿದೆ ಎಂದು ಟೈಮ್‌ ನೌ – ಸಿ ವೋಟರ್ ಸಮೀಕ್ಷೆಯು ಹೇಳಿದೆ. ಕೇರಳದಲ್ಲಿ ವಿಧಾನಸಭಾ ಚುನಾವಣೆ ಏಪ್ರಿಲ್ 6 ರಿಂದ ಒಂದೇ ಹಂತದಲ್ಲಿ ನಡೆಯಲಿದ್ದು, ಹಲವು ದಶಕಗಳಿಂದ ರಾಜಕೀಯ ಶಕ್ತಿ ಎಲ್‌ಡಿಎಫ್ ಮತ್ತು ಯುಡಿಎಫ್ ನಡುವೆ ಹಣಾಹಣಿ ನಡೆಯುತ್ತದೆ. 2016 ರ … Continued

ಚುನಾವಣೆ: ಸಾರ್ವಜನಿಕ ಅಭಿಪ್ರಾಯ ರೂಪಿಸಲು ಬಂಗಾಳ, ತಮಿಳುನಾಡು, ಕೇರಳದಲ್ಲಿ ಬೌದ್ಧಿಕ ಮುಖಗಳಿಗೆ ಬಿಜೆಪಿ ಮಣೆ

  ನಟರು, ಬುದ್ಧಿಜೀವಿಗಳು, ನಿವೃತ್ತ ಪೊಲೀಸ್ ಅಧಿಕಾರಿಗಳು – ಹೀಗೆ ಸಾಮಾಜಿ ಸ್ತರದಲ್ಲಿ ಗುರುತಿಸಲ್ಪಟ್ಟವರನ್ನು ಪಶ್ಚಿಮ ಬಂಗಾಳ, ಕೇರಳ ಮತ್ತು ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಕಣಕ್ಕಿಳಿಸಿದೆ. ತೃಣ ಮೂಲ ಕಾಂಗ್ರೆಸ್‌ ಜೊತೆ ತೀವ್ರ ಸ್ಪರ್ಧೆ ಇರುವ ಬಂಗಾಳ ಚುನಾವಣೆಯಲ್ಲಿ ಸಾಧನೆಗೈದ ಸಾರ್ವಜನಿಕ ವ್ಯಕ್ತಿಗಳನ್ನು ಬಿಜೆಪಿ ಹೆಚ್ಚು ಕಣಕ್ಕಿಳಿಸಿದೆ.ತಮಿಳುನಾಡು ಮತ್ತು ಕೇರಳದಲ್ಲಿ ಪಕ್ಷವನ್ನು ವಿಸ್ತರಿಸಲು ಇದೇ … Continued

ಕೇರಳ ವಿಧಾನಸಭಾ ಚುನಾವಣೆ: ಜೆಡಿಎಸ್‌ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ

ಜನತಾದಳ (ಜಾತ್ಯತೀತ) ೨೦೨೧ರ ಕೇರಳ ವಿಧಾನಸಭಾ ಚುನಾವಣೆಯಲ್ಲಿ ನಾಲ್ಕು ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ನಿರ್ಧರಿಸಿದ್ದು, ಪಕ್ಷವು ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಮಂಗಳವಾರ ಬಿಡುಗಡೆ ಮಾಡಿದೆ. ಕೋವಲಂ, ಅಂಕಮಲಿ, ಚಿತ್ತೂರು ಮತ್ತು ತಿರುವಲ್ಲಾ ವಿಧಾನಸಭಾ ಕ್ಷೇತ್ರಗಳ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಪಕ್ಷ ನಿರ್ಧರಿಸಿದೆ. ಅಭ್ಯರ್ಥಿಗಳ ಪಟ್ಟಿಯನ್ನು ಮಾಜಿ ಪ್ರಧಾನಿ ಮತ್ತು ಜೆಡಿಎಸ್ ಮುಖ್ಯಸ್ಥ ಎಚ್.ಡಿ.ದೇವೇಗೌಡ ಅನುಮೋದಿಸಿದ್ದಾರೆ. ಅಭ್ಯರ್ಥಿಗಳ ಪಟ್ಟಿಯಲ್ಲಿ ಮಾಜಿ … Continued

ಶ್ರೀಧರನ್‌ ಕೇರಳದ ಬಿಜೆಪಿ ಸಿಎಂ ಅಭ್ಯರ್ಥಿ: ಸುಬ್ರಮಣಿಯನ್‌ಸ್ವಾಮಿ ಅಪಶ್ರುತಿ

ತಿರುವನಂತಪುರಂ: ಮುಂದಿನ ತಿಂಗಳು ಕೇರಳ ವಿಧಾನಸಭೆಗೆ ಚುನಾವಣೆಗೆ ಬಿಜೆಪಿ ತನ್ನ ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಮೆಟ್ರೊ ಮ್ಯಾನ್ ಇ ಶ್ರೀಧರನ್ ಅವರನ್ನು ಘೋಷಿಸಿದ ಬೆನ್ನಲ್ಲೇ ಬಿಜೆಪಿ ನಾಯಕ ಸುಬ್ರಮಣಿಯನ್‌ ಸ್ವಾಮಿ ಇದಕ್ಕೆ ಅಪಶ್ರುತಿ ಎತ್ತಿದ್ದಾರೆ. ಶ್ರೀಧರನ್ ಅವರು ಕೇರಳ ಬಿಜೆಪಿ ಸಿಎಂ ಅಭ್ಯರ್ಥಿ ಆಗುವುದಕ್ಕೆ ಸ್ವಾಮಿ ತೀವ್ರ ಅಸಮಾಧಾನ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದಾರೆ. ಅವರು ಶ್ರೀಧರನ್‌ ವಯಸ್ಸಿನ … Continued