ವಿಡಿಯೋ | ಥಾರ್‌ಗೆ ಹಗ್ಗಕಟ್ಟಿ ಎಟಿಎಂ ಎಳೆದೊಯ್ದು ಹಣ ದೋಚಿ ರಸ್ತೆಯಲ್ಲೇ ಯಂತ್ರ ಎಸೆದು ಕಳ್ಳರು ಪರಾರಿ

ಬಾಲಾಸೋರ್ : ಒಡಿಶಾದ ಬಾಲಾಸೋರ್ ಜಿಲ್ಲೆಯ ಖೈರಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಶನಿವಾರ ಮುಂಜಾನೆ ಎಟಿಎಂ ದರೋಡೆ ಪ್ರಕರಣವೊಂದು ಬೆಳಕಿಗೆ ಬಂದಿದೆ. ದುಷ್ಕರ್ಮಿಗಳ ತಂಡ ಎಟಿಎಂ ಯಂತ್ರವನ್ನು ಕಪ್ಪು ಬಣ್ಣದ ಥಾರ್ (Thar) ವಾಹನಕ್ಕೆ ಹಗ್ಗ ಕಟ್ಟಿ ಎಳೆದಿದ್ದಾರೆ. ಅದು ಕಿತ್ತುಬಂದ ನಂತರ ಅದರೊಳಗಿನ ಹಣವನ್ನು ದೋಚಿ ಪರಾರಿಯಾಗಿದೆ. ಇಡೀ ಘಟನೆ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, … Continued

₹6,000ಕ್ಕೆ ಕೆಲಸಕ್ಕೆ ಸೇರಿದ್ದ ಸರ್ಕಾರಿ ಇಂಜಿನಿಯರ್ ಬ್ಯಾಂಕ್ ಲಾಕರ್‌ನಲ್ಲಿ ₹2 ಕೋಟಿ ನಗದು ಪತ್ತೆ ; 13 ಸೈಟು, 5 ಬಹುಮಹಡಿ ಕಟ್ಟಡ ಜಪ್ತಿ !

ಭುವನೇಶ್ವರ: ಆದಾಯಕ್ಕಿಂತ ಹೆಚ್ಚಿನ ಆಸ್ತಿ ಗಳಿಕೆ ಆರೋಪದ ಹಿನ್ನೆಲೆಯಲ್ಲಿ ಒಡಿಶಾ ಜಾಗೃತ ದಳ (ವಿಜಿಲೆನ್ಸ್) ಶನಿವಾರ ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಸರ್ಕಾರಿ ಇಂಜಿನಿಯರ್ ಒಬ್ಬರಿಗೆ ಸೇರಿದ 9 ಸ್ಥಳಗಳ ಮೇಲೆ ಏಕಕಾಲದಲ್ಲಿ ದಾಳಿ ನಡೆಸಿದೆ. ಈ ವೇಳೆ ಇಂಜಿನಿಯರ್ ಕುಟುಂಬಕ್ಕೆ ಸೇರಿದ ಬ್ಯಾಂಕ್ ಲಾಕರ್‌ಗಳಿಂದ ಬರೋಬ್ಬರಿ 2 ಕೋಟಿ ರೂಪಾಯಿ ನಗದು ಹಣವನ್ನು ಪತ್ತೆಹಚ್ಚಿ ವಶಪಡಿಸಿಕೊಳ್ಳಲಾಗಿದೆ. … Continued

ಬ್ಯಾಂಕಿನಲ್ಲಿದ್ದ ಹಣ ಪಡೆಯಲು ಮೃತ ಅಕ್ಕನ ಅಸ್ಥಿಪಂಜರವನ್ನೇ ಹೊತ್ತು 3 ಕಿಮೀ ನಡೆದು ಬ್ಯಾಂಕಿಗೆ ಬಂದ ಅಸಹಾಯಕ ತಮ್ಮ…!

ಕಿಯೋಂಜರ್ (ಒಡಿಶಾ): ಹಸಿವು ಮತ್ತು ಬಡತನ ಮನುಷ್ಯನನ್ನು ಎಂತಹ ಪರಿಸ್ಥಿತಿಗೆ ತಳ್ಳುತ್ತದೆ ಎನ್ನುವುದಕ್ಕೆ ಒಡಿಶಾದ ಕಿಯೋಂಜರ್ ಜಿಲ್ಲೆಯಲ್ಲಿ ನಡೆದ ಈ ಘಟನೆ ಸಾಕ್ಷಿಯಾಗಿದೆ. ಮೃತಪಟ್ಟ ತನ್ನ ಅಕ್ಕನ ಬ್ಯಾಂಕ್ ಖಾತೆಯಲ್ಲಿದ್ದ ಹಣವನ್ನು ಪಡೆಯಲು, ವ್ಯಕ್ತಿಯೊಬ್ಬ ಅಕ್ಕನ ಅಸ್ಥಿಪಂಜರವನ್ನೇ ಹೆಗಲ ಮೇಲೆ ಹೊತ್ತು ಸುಡುವ ಬಿಸಿಲಿನಲ್ಲಿ 3 ಕಿಲೋಮೀಟರ್ ನಡೆದುಕೊಂಡು ಬ್ಯಾಂಕ್‌ಗೆ ಬಂದಿರುವ ಘಟನೆ ನಾಗರಿಕ ಸಮಾಜವನ್ನು … Continued

30 ಪುಟ್ಟ ಮಕ್ಕಳ ಪ್ರಾಣ ಉಳಿಸಲು ವಿಷಪೂರಿತ ಹಾವಿನೊಂದಿಗೆ ಹೋರಾಡಿ ಪ್ರಾಣ ತ್ಯಾಗ ಮಾಡಿದ ಬೀದಿ ನಾಯಿ…!

ಮಯೂರ್‌ಭಂಜ್ (ಒಡಿಶಾ) : ಅಪ್ರತಿಮ ನಿಷ್ಠೆ ಮತ್ತು ತ್ಯಾಗದ ಅಪರೂಪದ ನಿದರ್ಶನದಲ್ಲಿ ಬೀದಿ ನಾಯಿಯೊಂದು, ಶಾಲಾ ಮಕ್ಕಳನ್ನು ವಿಷಪೂರಿತ ಹಾವಿನಿಂದ ರಕ್ಷಿಸಲು ತನ್ನ ಪ್ರಾಣವನ್ನೇ ಬಲಿಕೊಟ್ಟ ಹೃದಯ ಹಿಂಡುವ ಘಟನೆ ಒಡಿಶಾದ ಮಯೂರಭಂಜ್ ಜಿಲ್ಲೆಯ ಉದಲಾ ಬ್ಲಾಕ್‌ನ ಧೀರಕುಲ ಗ್ರಾಮದಲ್ಲಿ ನಡೆದಿದೆ ಎಂದು ವರದಿಯಾಗಿದೆ. ಬೆಳಿಗ್ಗೆ ಸುಮಾರು 8:30ರ ಸಮಯದಲ್ಲಿ ಜಗನ್ನಾಥ ಶಿಶು ವಿದ್ಯಾ ಮಂದಿರದ … Continued

ಮೈಮೇಲೆ ಎರಗಿದ ಕರಡಿಯ ವಿರುದ್ಧ ಹೋರಾಡಿ ಪತಿಯ ಪ್ರಾಣ ಉಳಿಸಿದ ಪತ್ನಿ…!

ಮಯೂರ್‌ಭಂಜ್ (ಒಡಿಶಾ): ದಟ್ಟ ಅಡವಿಯಲ್ಲಿ ಆಹಾರಕ್ಕಾಗಿ ತೆರಳಿದ್ದ ದಂಪತಿಯ ಮೇಲೆ ಕರಡಿಗಳ ಗುಂಪು ದಾಳಿ ಮಾಡಿದಾಗ, ತನ್ನ ಪ್ರಾಣದ ಹಂಗು ತೊರೆದು ಕೊಡಲಿಯೊಂದಿಗೆ ಹೋರಾಡಿ ಪತಿಯನ್ನು ಸಾವಿನ ದವಡೆಯಿಂದ ಪಾರು ಮಾಡಿದ ಪತ್ನಿಯ ಸಾಹಸಗಾಥೆ ಈಗ ಒಡಿಶಾದಲ್ಲಿ ಚರ್ಚೆಯಾಗುತ್ತಿದೆ. ಒಡಿಶಾದ ಕರಂಜಿಯಾ ಅರಣ್ಯ ವ್ಯಾಪ್ತಿಯ ಮಿಲು ಗ್ರಾಮದ ಬಳಿಯಿರುವ ಹಾತಿಸಾಲಬೇಡ ಕಾಡಿನಲ್ಲಿ ಮಂಗಳವಾರ ಈ ಘಟನೆ … Continued

ತನ್ನ ಮೇಲೆ ದಾಳಿ ಮಾಡಿದ ಚಿರತೆ ಜೊತೆ ವೀರಾವೇಶದಿಂದ ಹೋರಾಡಿ ಕೊಂದು ಹಾಕಿದ ವ್ಯಕ್ತಿ…!

ಕಟಕ್: ಕತ್ತಲ ರಾತ್ರಿ, ಸುತ್ತಲೂ ನಿಶ್ಯಬ್ದ. ಆ ಫಾರ್ಮ್‌ಹೌಸ್‌ನಲ್ಲಿ ಇದ್ದಕ್ಕಿದ್ದಂತೆ ನಾಯಿಗಳ ಮೌನ ಮುರಿದು ಬೊಗಳುವ ಶಬ್ದ ಕೇಳಿಸಿತು. ಏನಾಗುತ್ತಿದೆ ಎಂದು ನೋಡುವಷ್ಟರಲ್ಲಿ ಸಾಕ್ಷಾತ್ ‘ಸಾವೇ’ ಎದುರಿಗೆ ಬಂದು ನಿಂತಿತ್ತು! ಅದು ಹಸಿದ ಚಿರತೆಯ ರೂಪದಲ್ಲಿತ್ತು. ಇದು ಒಡಿಶಾದ ಕಟಕ್ ಜಿಲ್ಲೆಯ ನರಸಿಂಹಪುರ ಅರಣ್ಯ ವ್ಯಾಪ್ತಿಯ ಹಳ್ಳಿಯೊಂದರಲ್ಲಿ ನಡೆದ ಎದೆನಡುಗಿಸುವ ಘಟನೆ ಒಡಿಶಾದ ಕಟಕ್ ಜಿಲ್ಲೆಯಲ್ಲಿ … Continued

ಪಾರ್ಶ್ವವಾಯು ಪೀಡಿತ ಪತ್ನಿಯನ್ನು ಆಸ್ಪತ್ರೆಗೆ ದಾಖಲಿಸಲು 350 ಕಿಮೀ ಸೈಕಲ್‌ ರಿಕ್ಷಾ ತುಳಿದು ಕರೆದೊಯ್ದ 75ರ ವೃದ್ಧ

 ಕಟಕ್: ಪ್ರೀತಿ ಎಂದರೆ ಕೇವಲ ಮಾತುಗಳಲ್ಲ, ಅದು ಅಚಲವಾದ ನಂಬಿಕೆ ಮತ್ತು ತ್ಯಾಗ ಎಂಬದಕ್ಕೆ ಒಡಿಶಾದ ಸಂಬಲಪುರದ 75 ವರ್ಷದ ವೃದ್ಧ ಬಾಬು ಲೋಹರ್ ಸಾಕ್ಷಿಯಾಗಿದ್ದಾರೆ. ಪಾರ್ಶ್ವವಾಯುವಿನಿಂದ ಬಳಲುತ್ತಿರುವ ತನ್ನ 70 ವರ್ಷದ ಪತ್ನಿ ಜ್ಯೋತಿ ಅವರನ್ನು ಗುಣಪಡಿಸಲು, ಹಣದ ಕೊರತೆಯ ನಡುವೆಯೂ ದೃತಿಗೆಡದ ಈ ವೃದ್ಧ ಪತಿಯ ಸಾಹಸಗಾಥೆ ಈಗ ದೇಶದಾದ್ಯಂತ ಚರ್ಚೆಯಾಗುತ್ತಿದೆ. ಸಂಬಲಪುರ … Continued

ಒಡಿಶಾದಲ್ಲಿ 10,000 ವರ್ಷ ಹಳೆಯ ನಾಗರಿಕತೆ ಪತ್ತೆ ? ಪುರಾತತ್ವ ಇಲಾಖೆಯಿಂದ ಉತ್ಖನನ ; ಮಹತ್ವದ ಅಂಶಗಳು ಬಹಿರಂಗ

ಭುವನೇಶ್ವರ: ಒಡಿಶಾದ ಮಣ್ಣಿನ ಅಡಿಯಲ್ಲಿ 10,000 ವರ್ಷಗಳಷ್ಟು ಹಳೆಯದಾದ ನಾಗರಿಕತೆಯೊಂದು ಅಡಗಿದೆಯೇ? ಇಂತಹದೊಂದು ಗಂಭೀರ ಪ್ರಶ್ನೆ ಈಗ ಸಂಶೋಧಕರಲ್ಲಿ ಕುತೂಹಲ ಮೂಡಿಸಿದೆ. ಸಂಬಲ್ಪುರ ಜಿಲ್ಲೆಯ ರೆಢಾಖೋಲ್‌ನಲ್ಲಿರುವ ಭೀಮಮಂಡಲಿ ಪರ್ವತ ಶ್ರೇಣಿಗಳಲ್ಲಿ ಶಿಲಾಯುಗದ ನಾಗರಿಕತೆಯ ಕುರುಹುಗಳು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಭಾರತೀಯ ಪುರಾತತ್ವ ಇಲಾಖೆ (ASI) ಸಂಶೋಧನೆಯನ್ನು ತೀವ್ರಗೊಳಿಸಿದೆ. ಹರಪ್ಪ, ಮೊಹೆಂಜೋದಾರೋಗಿಂತಲೂ ಹಳೆಯದೇ? ಈ ಭಾಗದಲ್ಲಿ ಶಿಲಾ ಕೆತ್ತನೆಗಳು, … Continued

ಮೃತ ತಂದೆ- ಪ್ರಜ್ಞಾಹೀನ ತಾಯಿಯ ಕಾಯುತ್ತ ಇಡೀ ರಾತ್ರಿ ಕಾಡಿನಲ್ಲಿ ಕಳೆದ ಐದು ವರ್ಷದ ಪುಟಾಣಿ…!

ದೇವಗಢ (ಒಡಿಶಾ): ಕೌಟುಂಬಿಕ ಕಲಹವೊಂದು ಸುಂದರ ಸಂಸಾರವನ್ನು ಹೇಗೆ ಛಿದ್ರಗೊಳಿಸಬಹುದು ಎನ್ನುವುದಕ್ಕೆ ಈ ಘಟನೆಯೇ ಸಾಕ್ಷಿ. ಕ್ಷಣಿಕ ಕೋಪಕ್ಕೆ ಬಲಿಯಾದ ದಂಪತಿ ಕಾಡಿನ ನಡುವೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದು, ಅವರ ಐದು ವರ್ಷದ ಪುಟ್ಟ ಮಗ ಇಡೀ ರಾತ್ರಿ ಅಪ್ಪ-ಅಮ್ಮನ ಪಕ್ಕದಲ್ಲೇ ಕುಳಿತು, ಅವರು ಏಳಬಹುದು ಎಂದು ಕಾಯುತ್ತಾ ದಟ್ಟ ಕಾಡಿನ ಕತ್ತಲಲ್ಲಿ ಕಳೆದಿದ್ದಾನೆ. … Continued

1.1 ಕೋಟಿ ರೂ. ಬಹುಮಾನ ಹೊಂದಿದ್ದ ಟಾಪ್ ನಕ್ಸಲ್ ನಾಯಕ ಗಣೇಶ ಉಯಿಕೆ ಹತ

ಭುವನೇಶ್ವರ/ಹೈದರಾಬಾದ್: ಒಡಿಶಾದಲ್ಲಿ ನಕ್ಸಲ್ ನಿಗ್ರಹ ಕಾರ್ಯಾಚರಣೆಯಲ್ಲಿ ಭದ್ರತಾ ಪಡೆಗಳು ಗುರುವಾರ ಐತಿಹಾಸಿಕ ಯಶಸ್ಸು ಸಾಧಿಸಿವೆ. ಸಿಪಿಐ (ಮಾವೋವಾದಿ) ಸಂಘಟನೆಯ ಕೇಂದ್ರ ಸಮಿತಿ ಸದಸ್ಯ ಹಾಗೂ ಒಡಿಶಾ ಕಾರ್ಯಾಚರಣೆಗಳ ಮುಖ್ಯಸ್ಥ, 69 ವರ್ಷದ ಗಣೇಶ ಉಯಿಕೆ ಅಲಿಯಾಸ್ ಪಕ್ಕಾ ಹನುಮಂತು ಎಂಬಾತನನ್ನು ಬಿಎಸ್ಎಫ್ (BSF) ಮತ್ತು ಸಿಆರ್‌ಪಿಎಫ್ (CRPF) ಪಡೆಗಳು ಎನ್ಕೌಂಟರ್‌ನಲ್ಲಿ ಹೊಡೆದುರುಳಿಸಿವೆ. ಕಂಧಮಾಲ್ ಮತ್ತು ಗಂಜಾಂ … Continued