ಬ್ಯಾಂಕಿನಲ್ಲಿದ್ದ ಹಣ ಪಡೆಯಲು ಮೃತ ಅಕ್ಕನ ಅಸ್ಥಿಪಂಜರವನ್ನೇ ಹೊತ್ತು 3 ಕಿಮೀ ನಡೆದು ಬ್ಯಾಂಕಿಗೆ ಬಂದ ಅಸಹಾಯಕ ತಮ್ಮ…!

ಕಿಯೋಂಜರ್ (ಒಡಿಶಾ): ಹಸಿವು ಮತ್ತು ಬಡತನ ಮನುಷ್ಯನನ್ನು ಎಂತಹ ಪರಿಸ್ಥಿತಿಗೆ ತಳ್ಳುತ್ತದೆ ಎನ್ನುವುದಕ್ಕೆ ಒಡಿಶಾದ ಕಿಯೋಂಜರ್ ಜಿಲ್ಲೆಯಲ್ಲಿ ನಡೆದ ಈ ಘಟನೆ ಸಾಕ್ಷಿಯಾಗಿದೆ. ಮೃತಪಟ್ಟ ತನ್ನ ಅಕ್ಕನ ಬ್ಯಾಂಕ್ ಖಾತೆಯಲ್ಲಿದ್ದ ಹಣವನ್ನು ಪಡೆಯಲು, ವ್ಯಕ್ತಿಯೊಬ್ಬ ಅಕ್ಕನ ಅಸ್ಥಿಪಂಜರವನ್ನೇ ಹೆಗಲ ಮೇಲೆ ಹೊತ್ತು ಸುಡುವ ಬಿಸಿಲಿನಲ್ಲಿ 3 ಕಿಲೋಮೀಟರ್ ನಡೆದುಕೊಂಡು ಬ್ಯಾಂಕ್‌ಗೆ ಬಂದಿರುವ ಘಟನೆ ನಾಗರಿಕ ಸಮಾಜವನ್ನು … Continued

ಬಡ ರೈತನ ಪತ್ನಿ ಖಾತೆಗೆ ಬಂತು ಬರೋಬ್ಬರಿ ₹10 ಕೋಟಿ: ಇದು ನನ್ನದಲ್ಲ, ವಾಪಸ್‌ ತೆಗೆದುಕೊಳ್ಳಿ ಎಂದ ಮಹಾತಾಯಿ…!

ಉತ್ತರ ಪ್ರದೇಶದ ಮೈನ್‌ಪುರಿ ಜಿಲ್ಲೆಯಲ್ಲಿ ನಡೆದ ಅಚ್ಚರಿಯ ಘಟನೆಯೊಂದರಲ್ಲಿ, ಬಡ ರೈತನೊಬ್ಬನ ಪತ್ನಿಯ ಬ್ಯಾಂಕ್ ಖಾತೆಗೆ ರಾತ್ರೋರಾತ್ರಿ ಬರೋಬ್ಬರಿ 10 ಕೋಟಿ ರೂಪಾಯಿ ಜಮೆಯಾಗಿದೆ! ಇಷ್ಟೊಂದು ದೊಡ್ಡ ಮೊತ್ತವನ್ನು ಕಂಡರೂ ಆಸೆಪಡದೆ ಆಕೆ ತೋರಿದ ಪ್ರಾಮಾಣಿಕತೆ ಈಗ ದೇಶಾದ್ಯಂತ ಮೆಚ್ಚುಗೆಗೆ ಪಾತ್ರವಾಗಿದೆ. ಮೈನ್‌ಪುರಿ ಜಿಲ್ಲೆಯ ಬಿಚ್ವಾನ್ ಪ್ರದೇಶದ ದೇವಗಂಜ್ ಗ್ರಾಮದ ಕೃಷಿ ಕಾಯಕದ ಮೂಲಕ ಜೀವನ … Continued

₹10 ಸಾವಿರ ವಿತ್‌ಡ್ರಾ ಮಾಡಲು ಹೋದವನಿಗೆ ಸಿಕ್ಕಿತು ₹3 ಲಕ್ಷ ! ಇದು ಎಟಿಎಂ ಮ್ಯಾಜಿಕ್ ಅಲ್ಲ, ಬ್ಯಾಂಕ್‌ ಕೊಡಬೇಕಾದ ಪರಿಹಾರ

ಸೂರತ್: ಗುಜರಾತ್‌ನ ಸೂರತ್‌ನಲ್ಲಿ 10,000 ರೂಪಾಯಿ ವಿತ್‌ಡ್ರಾ ಮಾಡಲು ಹೋದ ಗ್ರಾಹಕನೊಬ್ಬನಿಗೆ ಎದುರಾದ ತಾಂತ್ರಿಕ ದೋಷ, ಈಗ ಬ್ಯಾಂಕ್‌ಗೆ ಅತಿ ದೊಡ್ಡ ಮೊತ್ತದ ದಂಡವಾಗಿ ಪರಿಣಮಿಸಿದೆ. ಸುಮಾರು 9 ವರ್ಷಗಳ ಸುದೀರ್ಘ ಹೋರಾಟದ ನಂತರ, ಬ್ಯಾಂಕ್ ಆಫ್ ಬರೋಡಾ (BoB) ಈಗ ಅಸಲು ಮೊತ್ತಕ್ಕಿಂತ ಸುಮಾರು 30 ಪಟ್ಟು ಹೆಚ್ಚು ಹಣವನ್ನು ಗ್ರಾಹಕನಿಗೆ ಪಾವತಿಸಬೇಕಾದ ಪರಿಸ್ಥಿತಿ … Continued

ಅಂಕೋಲಾ : ಬ್ಯಾಂಕ್‌ ದರೋಡೆಗೆ ಯತ್ನ

ಅಂಕೋಲಾ: ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಸುಂಕಸಾಳದಲ್ಲಿರುವ ಬ್ಯಾಂಕ್ ಆಫ್ ಬರೋಡಾ ಶಾಖೆಯಲ್ಲಿ ದರೋಡೆಗೆ ವಿಫಲ ಯತ್ನ ನಡೆಸಲಾಗಿದೆ. ಬ್ಯಾಂಕಿನ ಹಿಂಬದಿಯ ಶೌಚಾಲಯದ ಗೋಡೆಗೆ ಕನ್ನ ಕೊರೆದು ಒಳನುಗ್ಗುವ ಪ್ರಯತ್ನ ಮಾಡಲಾಗಿದೆ. ಬ್ಯಾಂಕಿನ ಸ್ಟ್ರಾಂಗ್ ರೂಮ್ ಗೋಡೆಯನ್ನು ಸಹ ಒಡೆಯುವ ಪ್ರಯತ್ನ ನಡೆದಿದೆ. ಬ್ಯಾಂಕ್ ಆಫ್ ಬರೋಡಾದ ಸುಂಕಸಾಳ ಶಾಖೆ ರಾಷ್ಟ್ರೀಯ ಹೆದ್ದಾರಿ 63 … Continued

ಮಂಗಳೂರು | ಬಂದೂಕು ತೋರಿಸಿ ಬ್ಯಾಂಕ್‌ ದರೋಡೆ ; ₹10 ಕೋಟಿಗೂ ಹೆಚ್ಚು ಮೌಲ್ಯದ ಚಿನ್ನಾಭರಣ, ನಗದು ದೋಚಿ ಪರಾರಿ

ಮಂಗಳೂರು : ಬೀದರಿನಲ್ಲಿ ಗುರುವಾರ ನಡೆದಿರುವ ಎಟಿಎಂ ವ್ಯಾನ್ ದರೋಡೆ ಪ್ರಕರಣ ನಡೆದ ಮಾರನೇ ದಿನ ಶುಕ್ರವಾರ ಮಂಗಳೂರಿನಲ್ಲೂ ಬ್ಯಾಂಕ್ ದರೋಡೆ ನಡೆದಿದೆ ಎಂದು ವರದಿಯಾಗಿದೆ. ಮಂಗಳೂರು ಹೊರವಲಯದ ಉಳ್ಳಾಲ ತಾಲೂಕಿನ ಕೆ.ಸಿ ರೋಡ್ ಜಂಕ್ಷನ್ ನಲ್ಲಿರುವ ಕೋಟೆಕಾರು ವ್ಯವಸಾಯ ಸೇವಾ ಸಹಕಾರಿ ಸಂಘದ ಶಾಖೆಯಲ್ಲಿ ಹಾಡಹಾಗಲೇ ದರೋಡೆ ನಡೆದಿದ್ದು, ಬ್ಯಾಂಕ್ ಶಾಖೆಗೆ ನುಗ್ಗಿದ ಐವರು … Continued

ಜನವರಿಯಿಂದ 1ರಿಂದ ನೌಕರರ ಪಿಂಚಣಿ ಯೋಜನೆ(EPS)ಯಲ್ಲಿ ಮಹತ್ವದ ಬದಲಾವಣೆ

ನವದೆಹಲಿ: ನೂತನ ವರ್ಷ 2025ರ ಜನವರಿ 1ರಿಂದ ದೇಶದಾದ್ಯಂತದ ಜನರ ಮೇಲೆ ಪರಿಣಾಮ ಬೀರುವ ಹಣಕಾಸಿನ ಬದಲಾವಣೆಗಳು ಜಾರಿಗೆ ಬರಲಿವೆ. ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್‌ಒ) ಕಾರ್ಯವಿಧಾನಗಳಲ್ಲಿನ ಬದಲಾವಣೆಗಳಿಂದ ಹಿಡಿದು ಎಲ್‌ಪಿಜಿ ಬೆಲೆ ಮತ್ತು ಯುನಿಫೈಡ್ ಪೇಮೆಂಟ್ಸ್ ಇಂಟರ್‌ಫೇಸ್ (ಯುಪಿಐ) ವರೆಗೆ ಹೊಸ ವರ್ಷವು ಪರಿಣಾಮ ಬೀರಬಹುದು. ಇಪಿಎಫ್‌ಒ (EPFO) ಹೊಸ ನಿಯಮ ಕೇಂದ್ರೀಕೃತ … Continued

‌ಪರಾರಿಯಾಗಿರುವ ವಿಜಯ ಮಲ್ಯ, ನೀರವ್ ಮೋದಿಯಿಂದ 15,000 ಕೋಟಿ ರೂ.ಗಳಿಗೂ ಅಧಿಕ ಮೌಲ್ಯದ ಆಸ್ತಿ ವಸೂಲಿ ಮಾಡಿದ ಇ.ಡಿ.

ನವದೆಹಲಿ: ಪರಾರಿಯಾಗಿರುವ ಉದ್ಯಮಿ ವಿಜಯ ಮಲ್ಯಗೆ ಸೇರಿದ್ದ ₹ 14,131 ಕೋಟಿ ಮೌಲ್ಯದ ಆಸ್ತಿಯನ್ನು ವಶಪಡಿಸಿಕೊಂಡು ಸಾರ್ವಜನಿಕ ಮತ್ತು ಖಾಸಗಿ ವಲಯದ ಬ್ಯಾಂಕ್‌ಗಳಿಗೆ ಹಸ್ತಾಂತರಿಸಲಾಗಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸಂಸತ್ತಿಗೆ ತಿಳಿಸಿದ್ದಾರೆ. ಮಲ್ಯ, ಮೆಹುಲ್ ಚೋಕ್ಸಿ ಮತ್ತು ನೀರವ್ ಮೋದಿಯಂತಹ ವಾಂಟೆಡ್ ವ್ಯಕ್ತಿಗಳ ಸಾಲವನ್ನು ಮರುಪಾವತಿಸಲು ಜಾರಿ ನಿರ್ದೇಶನಾಲಯವು ಒಟ್ಟು ₹ 22,280 … Continued

ಬ್ಯಾಂಕ್‌ಗಳ ಖಾಸಗೀಕರಣ ಮಾಡಿದರೂ ನೌಕರರ ಹಿತ ಕಾಪಾಡಲು ಬದ್ಧ: ನಿರ್ಮಲಾ

ನವದೆಹಲಿ: ಎಲ್ಲ ಬ್ಯಾಂಕ್‌ಗಳನ್ನು ಖಾಸಗೀಕರಣಗೊಳಿಸುವುದಿಲ್ಲ, ಒಂದು ವೇಳೆ ಖಾಸಗೀಕರಣ ಮಾಡಿದರೂ ಬ್ಯಾಂಕ್‌ ನೌಕರರ ಹಿತಾಸಕ್ತಿ ಕಾಪಾಡಲಾಗುವುದು ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಭರವಸೆ ನೀಡಿದ್ದಾರೆ. ಬ್ಯಾಂಕ್‌ಗಳ ಖಾಸಗೀಕರಣ ಖಂಡಿಸಿ ರಾಷ್ಟ್ರವ್ಯಾಪಿ ಬ್ಯಾಂಕ್‌ ನೌಕರರು ೨ ದಿನಗಳ ಧರಣಿ ನಡೆಸಿದ ನಂತರ ಸಚಿವೆ ಈ ಹೇಳಿಕೆ ನೀಡಿದ್ದಾರೆ. ಖಾಸಗೀಕರಣಗೊಳ್ಳುವ ಸಾಧ್ಯತೆ ಇರುವ ಬ್ಯಾಂಕುಗಳ ಪ್ರತಿಯೊಬ್ಬ ಸಿಬ್ಬಂದಿಯ … Continued