ಫೆಂಗಲ್ ಚಂಡಮಾರುತದಿಂದ ಭಾರಿ ಮಳೆ ; ಮಂಗಳೂರು-ಉಡುಪಿ ರಾಷ್ಟ್ರೀಯ ಹೆದ್ದಾರಿ ಕುಸಿತ

ಮಂಗಳೂರು : ಫೆಂಗಲ್ ಚಂಡಮಾರುತ ಪರಿಣಾಮದಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರಿ ಮಳೆಯಾಗುತ್ತಿದ್ದು, ನಿರಂತರ ಮಳೆಯಿಂದಾಗಿ ಮಂಗಳೂರು- ಉಡುಪಿ ರಾಷ್ಟ್ರೀಯ ಹೆದ್ದಾರಿಯ ಕೂಳೂರು ರಸ್ತೆ ಕುಸಿದಿದೆ. ರಸ್ತೆ ಅಗೆದ ಕಾರಣದಿಂದ ಗುಂಡಿಯಲ್ಲಿ ಮಳೆ ನೀರು ಶೇಖರಣೆಯಾಗಿ ಹೆದ್ದಾರಿ ಕುಸಿದಿದೆ ಎಂದು ಹೇಳಲಾಗಿದೆ. ಬೈಕ್, ಕಾರು, ಲಾರಿಗಳು ಸಂಚರಿಸುತ್ತಿದ್ದಂತೆಯೇ ಕ್ಷಣಾರ್ಧದಲ್ಲಿ ರಸ್ತೆ ಕುಸಿದಿದೆ. ಭಾರೀ ಅನಾಹುತ ತಪ್ಪಿದೆ … Continued

ಮಂಗಳೂರು: ಪೊಲೀಸ್‌-ಸಿಬಿಐ ಅಧಿಕಾರಿಗಳ ಹೆಸರಿನಲ್ಲಿ ಕರೆ ಮಾಡಿ ಬೆದರಿಕೆ ; 1.71 ಕೋಟಿ ರೂ.ವಂಚನೆ..!

ಮಂಗಳೂರು : ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ನಿಂದ ಕರೆ ಮಾಡಲಾಗಿದೆ ಎಂದು ತಿಳಿಸಿ, ನಿಮ್ಮ ಮೊಬೈಲ್ ನಂಬರ್‌ ಅನ್ನು ಕಾನೂನು ಬಾಹಿರ ಚಟುವಟಿಕೆಗಳಿಗೆ ಬಳಸಲಾಗುತ್ತಿದೆ, ಈ ಬಗ್ಗೆ ಎಫ್‌ಐಆರ್‌ ದಾಖಲಿಸಲಾಗಿದೆ ಎಂದು ಬೆದರಿಸಿ ವ್ಯಕ್ತಿಯೊಬ್ಬರಿಂದ 1.71 ಕೋಟಿ ರೂ. ಹಣ ವಂಚನೆ ಮಾಡಿರುವ ಮಂಗಳೂರಿನ ಬಗ್ಗೆ ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನವೆಂಬರ್‌ … Continued

ಮಂಗಳೂರು: ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರು ಸಾವು

ಮಂಗಳೂರು : ಸೋಮೇಶ್ವರ ಉಚ್ಚಿಲದ ಖಾಸಗಿ ರೆಸಾರ್ಟ್ ನ ಸ್ವಿಮ್ಮಿಂಗ್ ಪೂಲ್ ನಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರು ಮೃತಪಟ್ಟ ಘಟನೆ ಭಾನುವಾರ (ನ.17) ಬೆಳಿಗ್ಗೆ ನಡೆದಿದೆ ಎಂದು ವರದಿಯಾಗಿದೆ. ಮೃತರನ್ನು ಮೈಸೂರು ಮೂಲದ ಮೂವರು ವಿದ್ಯಾರ್ಥಿನಿಯರಾದ ಕೀರ್ತನಾ ಎನ್. (21), ನಿಶಿತಾ ಎಂ. ಡಿ. (21) ಮತ್ತು ಪಾರ್ವತಿ ಎಸ್. (20) ಎಂದು ಗುರುತಿಸಲಾಗಿದೆ. ಈ … Continued

ಮೂಲ್ಕಿ ಬಳಿ ಘೋರ ದುರಂತ: ಪತ್ನಿ, ಮಗುವನ್ನು ಕೊಲೆಗೈದು ಆತ್ಮಹತ್ಯೆಗೆ ಶರಣಾದ ಪತಿ

ಮಂಗಳೂರು : ಕಿನ್ನಿಗೋಳಿ ಪಕ್ಷಿಕೆರೆಯ ಮನೆಯೊಂದರಲ್ಲಿ ತನ್ನ ಪತ್ನಿ, ಮಗುವನ್ನು ಕೊಲೆಗೈದು ನಂತರ ತಾನೂ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡ ಘಟನೆ ಶನಿವಾರ (ನ.9) ಮಧ್ಯಾಹ್ನ ಬೆಳಕಿಗೆ ಬಂದಿದೆ ಎಂದು ವರದಿಯಾಗಿದೆ. ಪಕ್ಷಿಕೆರೆ ನಿವಾಸಿ ಕಾರ್ತಿಕ್ ಭಟ್ (32) ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದು, ಇದಕ್ಕೂ ಮೊದಲು ಆತ ಪತ್ನಿ ಪ್ರಿಯಾಂಕ (28), ಮಗ ಹೃದಯ್ (4) … Continued

ಮಂಗಳೂರು | ಆರ್ಡರ್ ನೆಪದಲ್ಲಿ ಅಮೆಜಾನ್ ಸಂಸ್ಥೆಗೆ ವಂಚನೆ : ಇಬ್ಬರು ಆರೋಪಿಗಳ ಬಂಧನ

ಮಂಗಳೂರು: ನಕಲಿ ವಿಳಾಸ ನೀಡುವ ಮೂಲಕ ಭಾರೀ ಮೌಲ್ಯದ ಸೊತ್ತುಗಳನ್ನು ಆರ್ಡರ್ ಮಾಡಿ ಅಮೆಝಾನ್ ಕಂಪೆನಿಗೆ ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜಸ್ಥಾನ ಮೂಲದ ಇಬ್ಬರು ಆರೋಪಿಗಳನ್ನು ಮಂಗಳೂರಿನಲ್ಲಿ ಬಂಧಿಸಲಾಗಿದೆ. . ವಂಚನೆ ಮಾಡಿದ ಪ್ರಕರಣದಲ್ಲಿ ಇಬ್ಬರು ಆರೋಪಿಗಳನ್ನು ಮಂಗಳೂರಿನ ಉರ್ವ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ರಾಜಸ್ಥಾನ ಮೂಲದ ರಾಜಕುಮಾರ ಮೀನಾ (23) ಮತ್ತು ಸುಭಾಷ ಗುರ್ಜರ್ … Continued

ವಿಧಾನ ಪರಿಷತ್​ ಉಪಚುನಾವಣೆ ; ಬಿಜೆಪಿಗೆ ಭರ್ಜರಿ ಗೆಲುವು

ಮಂಗಳೂರು : ದಕ್ಷಿಣ ಕನ್ನಡ ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ತಿನ ಒಂದು ಸ್ಥಾನಕ್ಕೆ ಸೋಮವಾರ ನಡೆದ ಉಪಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಜಯ ಸಾಧಿಸಿದೆ ಕೋಟ ಶ್ರೀನಿವಾಸ ಪೂಜಾರಿ ಅವರು ಲೋಕಸಭೆಗೆ ಸ್ಪರ್ಧಿಸಿ ಆಯ್ಕೆಯಾದ ಹಿನ್ನೆಲೆಯಲ್ಲಿ ಈ ಕ್ಷೇತ್ರ ತೆರವಾಗಿದ್ದರಿಂದ ಅಕ್ಟೋಬರ್ 21 ರಂದು ಚುನಾವಣೆ ನಡೆದಿತ್ತು. ಇಂದು (ಅ.24) ಮತ ಎಣಿಕೆ ಪ್ರಕ್ರಿಯೆ ನಡೆಯಿತು. ಚುನಾವಣೆಯಲ್ಲಿ … Continued

ಸತತ 28 ಗಂಟೆಗಳ ಕಾರ್ಯಾಚರಣೆ ಬಳಿಕ ಉದ್ಯಮಿ ಮುಮ್ತಾಜ್ ಅಲಿ ಮೃತದೇಹ ಪತ್ತೆ

ಮಂಗಳೂರು: ನಾಪತ್ತೆಯಾಗಿದ್ದ ಮಾಜಿ ಶಾಸಕ ಮೊಯಿದ್ದೀನ್ ಬಾವಾ ಅವರ ಸಹೋದರ ಹಾಗೂ ಉದ್ಯಮಿ ಮುಮ್ತಾಜ್ ಅಲಿ ಅವರ ಮೃತದೇಹ ನದಿಯಲ್ಲಿ ಪತ್ತೆಯಾಗಿದೆ. ಸತತ 28 ಗಂಟೆಗಳ ಕಾರ್ಯಾಚರಣೆ ಬಳಿಕ ಮುಮ್ತಾಝ್ ಅಲಿ ಅವರ ಮೃತದೇಹ ಕೂಳೂರಿನ ಫಲ್ಗುಣಿ ನದಿಯಲ್ಲಿ ಇಂದು ಸೋಮವಾರ ಬೆಳಗ್ಗೆ ಪತ್ತೆಯಾಗಿದೆ. ಭಾನುವಾರ ಮುಂಜಾನೆ ಮೂರು ಗಂಟೆಗೆ ಸುಮಾರಿಗೆ ಮನೆಯಿಂದ ಹೋಗಿದ್ದ ಮುಮ್ತಾಜ್ … Continued

ಸಂಬಂಧಿಕರಿಗೆ ಲಿವರ್ ದಾನ ಮಾಡಿದ್ದ ಉಪನ್ಯಾಸಕಿ ಅಸ್ವಸ್ಥಗೊಂಡು ಸಾವು

ಮಂಗಳೂರು : ಸಂಬಂಧಿ ಮಹಿಳೆಯೊಬ್ಬರಿಗೆ ಲಿವರ್ ದಾನ ಮಾಡಿ ಅವರ ಜೀವ ಉಳಿಸಿದ್ದ ನಗರದ ಉಪನ್ಯಾಸಕಿಯೊಬ್ಬರು ಕೆಲದಿನಗಳ ನಂತರ ನಿಧನರಾಗಿದ್ದಾರೆ ಎಂದು ವರದಿಯಾಗಿದೆ. ಉಪನ್ಯಾಸಕಿಯಾಗಿದ್ದ ಅರ್ಚನಾ ಕಾಮತ್ (33) ಅವರು ತಮ್ಮ ಸಂಬಂಧಿಕರಿಗೆ ಪಿತ್ತಜನಕಾಂಗ (ಲಿವರ್‌) ದಾನ ಮಾಡಿದ ನಂತರ ಹಠಾತ್‌ ಆರೋಗದಯಲ್ಲಿ ಏರುಪೇರಾಗಿ ಮೃತಪಟ್ಟಿದ್ದಾರೆ. ತನ್ನ ಪತಿಯ ಸಂಬಂಧಿ ಮಹಿಳೆಗೆ ಅನಾರೋಗ್ಯ ಉಂಟಾಗಿದ್ದು, ಅವರಿಗೆ … Continued

ಹಳೆ ಮನೆ ಕೆಡವುತ್ತಿದ್ದಾಗ ಅವಘಡ : ಇಬ್ಬರು ಸಾವು

ಮಂಗಳೂರು: ಜೆಸಿಬಿಯಿಂದ ಹಳೆ ಮನೆ ಕೆಡವುತ್ತಿದ್ದಾಗ ಕಾಂಕ್ರೀಟ್ ಬೀಮ್ ಕುಸಿದು ಬಿದ್ದು ಅಲ್ಲಿಯೇ ಕೆಳಗೆ ನಿಂತು ನೋಡುತ್ತಿದ್ದ ಇಬ್ಬರು ಮೃತಪಟ್ಟ ಘಟನೆ ಮಂಗಳೂರಿನಲ್ಲಿ ಗುರುವಾರ ನಡೆದಿದೆ ಎಂದು ವರದಿಯಾಗಿದೆ. ಮನೆ ಮಾಲೀಕ ಜೇಮ್ಸ್ ಜತ್ತನ್ನ (56) ಹಾಗೂ ಅಡ್ವಿನ್ ಹೆರಾಲ್ಡ್ ಮಾಬೇನ್ (54) ಮೃತಪಟ್ಟವರು ಎಂದು ಗುರುತಿಸಲಾಗಿದೆ. ಗಂಭೀರ ಗಾಯಗೊಂಡ ಇವರನ್ನು ಆಸ್ಪತ್ರೆಗೆ ದಾಖಲಿಸುವಷ್ಟರಲ್ಲಿ ಮೃತಪಟ್ಟಿದ್ದಾರೆ … Continued

ಕನ್ನಡದ ಹಿರಿಯ ನಟಿ ಪದ್ಮಜಾ ರಾವ್ ​ಗೆ ಮೂರು ತಿಂಗಳು ಜೈಲು ಶಿಕ್ಷೆ

ಮಂಗಳೂರು : ಚೆಕ್ ಬೌನ್ಸ್ ಪ್ರಕರಣದಲ್ಲಿ ಕನ್ನಡ ಸಿನಿಮಾ ಮತ್ತು ಕಿರುತೆರೆ ನಟಿ ಪದ್ಮಜಾ ರಾವ್ ಅವರಿಗೆ ನಗರದ ಎಂಟನೇ ಜೆಎಂಎಫ್‌ಸಿ ನ್ಯಾಯಾಲಯ ಮೂರು ತಿಂಗಳ ಸಾದಾ ಜೈಲು ಶಿಕ್ಷೆ ಹಾಗೂ 40.20 ಲಕ್ಷ ರೂ. ದಂಡ ವಿಧಿಸಿದೆ. ನಟಿ ಪದ್ಮಜಾ ರಾವ್ ಅವರು ಜೂನ್ 17, 2020 ರಂದು 40 ಲಕ್ಷ ರೂ.ಗಳ ಕೈ … Continued