ಜೆಡಿಎಸ್‌ ಪಂಚರತ್ನ ರಥಯಾತ್ರೆಗೆ ಮಳೆ ಅಡ್ಡಿ: ಒಂದು ವಾರ ಮುಂದೂಡಿಕೆ

posted in: ರಾಜ್ಯ | 0

ಕೋಲಾರ: ಕರ್ನಾಟಕ ರಾಜ್ಯೋತ್ಸವ ದಿನದಂದಲೇ ಪಂಚರತ್ನ ರಥಯಾತ್ರೆ ಚಾಲನೆ ನೀಡಲು ಸಿದ್ಧತೆ ನಡೆಸಿದ್ದ ಜೆಡಿಎಸ್‌ಗೆ ಮಳೆರಾಯ ಅಡ್ಡಿ ಪಡಿಸಿದ್ದಾನೆ. ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನೇತೃತ್ವದಲ್ಲಿ ಕೋಲಾರ ಜಿಲ್ಲೆ ಮುಳಬಾಗಿಲಿನ (mulabagilu) ಕುರುಡುಮಲೆಯಿಂದ ಮಂಗಳವಾರ ಆರಂಭವಾಗಬೇಕಿದ್ದ ಯಾತ್ರೆಯನ್ನು ಮಳೆಯ ಕಾರಣದಿಂದ ವಾರ ಕಾಲ ಮುಂದೂಡಲಾಗಿದೆ. ಪಂಚರತ್ನ ಸಮಾವೇಶಕ್ಕೆ ಮುಳಬಾಗಿಲು ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿರುವ ಬಾಲಾಜಿ ಭವನದ ಹತ್ತಿರ … Continued

ಮಳೆ; ಬುಧವಾರ ಬೆಂಗಳೂರು ಪೂರ್ವ ತಾಲೂಕು ವ್ಯಾಪ್ತಿಯ ಶಾಲೆಗಳಿಗೆ ರಜೆ

posted in: ರಾಜ್ಯ | 0

ಬೆಂಗಳೂರು: ನಗರದಲ್ಲಿ ಭಾರೀ ಮಳೆಯಿಂದಾಗಿ ಹಲವು ಪ್ರದೇಶಗಳು ಜಲಾವೃತಗೊಂಡಿವೆ. ಅದರಲ್ಲಿಯೂ ಬೆಂಗಳೂರು ಪೂರ್ವ ತಾಲೂಕಿನಲ್ಲಿ ಮಳೆ ಹೆಚ್ಚಾಗಿದೆ. ಹೀಗಾಗಿ ಬೆಂಗಳೂರು ಪೂರ್ವ ತಾಲೂಕಿನ ವ್ಯಾಪ್ತಿಯ ಸರ್ಕಾರಿ, ಅನುದಾನಿತ ಮತ್ತು ಅನುದಾನರಹಿತ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಿಗೆ ಬುಧವಾರ (ಸೆಪ್ಟೆಂಬರ್ 7ರಂದು) ರಜೆ ಘೋಷಿಸಲಾಗಿದೆ. ಬುಧವಾರ ಸರ್ಕಾರಿ, ಅನುದಾನಿತ, ಅನುದಾನರಹಿತ ಶಾಲೆಗಳಿಗೆ ರಜೆ ಘೋಷಣೆ ಮಾಡಿ ಕ್ಷೇತ್ರ … Continued

ನೋಡನೋಡುತ್ತಿದ್ದಂತೆಯೇ ನೀರಿನದಲ್ಲಿ ಕೊಚ್ಚಿಹೋದ ಶಾಲಾ ಬಸ್‌ | ವೀಕ್ಷಿಸಿ

ಉತ್ತರಾಖಂಡದ ಹಲವು ಪ್ರದೇಶಗಳಲ್ಲಿ ಭಾರೀ ಮಳೆ ಬೀಳುತ್ತಿದೆ. ರಾಜ್ಯದಲ್ಲಿ ಮಳೆಯಿಂದಾಗಿ ನದಿಗಳು ಮತ್ತು ಚರಂಡಿಗಳು ಉಕ್ಕಿ ಹರಿಯುತ್ತಿವೆ. ಹಲವೆಡೆ ಭೂಕುಸಿತದ ವರದಿಯಾಗಿದೆ. ಏತನ್ಮಧ್ಯೆ, ಚಂಪಾವತ್ ಪ್ರದೇಶದಲ್ಲಿ ಮಂಗಳವಾರ ಚಂಪಾವತ್‌ನಲ್ಲಿ ಭಾರಿಅನಾಹುತ ಸ್ವಲ್ಪದರಲ್ಲೇ ತಪ್ಪಿದೆ. ಶಾಲಾ ವಾಹನವೊಂದು ಬಲವಾದ ಪ್ರವಾಹಕ್ಕೆ ಕೊಚ್ಚಿ ಹೋಗಿದೆ. ತನಕ್‌ಪುರದ ಕಿರೋರಾ ಮಳೆಗಾಲದ ಹಳ್ಳದಲ್ಲಿ ಅಪಘಾತ ಸಂಭವಿಸಿದೆ ಎಂದು ಹೇಳಲಾಗುತ್ತಿದೆ. ಸ್ಥಳೀಯರ ನೆರವಿನಿಂದ … Continued

ಭಾರೀ ಮಳೆ: ಇಂದು ಧಾರವಾಡ ಜಿಲ್ಲೆಯಾದ್ಯಂತ ಶಾಲೆ-ಕಾಲೇಜುಗಳಿಗೆ ರಜೆ

posted in: ರಾಜ್ಯ | 0

ಧಾರವಾಡ: ಧಾರವಾಡ ಜಿಲ್ಲೆಯಾದ್ಯಂತ ನಿರಂತರವಾಗಿ ಸುರಿಯುತ್ತಿರುವ ಮಳೆಯ ಕಾರಣದಿಂದ ಜಿಲ್ಲೆಯ ಎಲ್ಲ ಶಾಲಾ-ಕಾಲೇಜುಗಳಿಗೆ ಇಂದು ಮೇ 20 ರಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ರಜೆ ಘೋಷಿಸಿದ್ದಾರೆ. ಹವಾಮಾನ ಇಲಾಖೆಯು ಮಳೆ ಮುಂದುವರೆಯುವ ಸಾಧ್ಯತೆಯ ಮುನ್ಸೂಚನೆ ನೀಡಿದೆ. ಹೀಗಾಗಿ ಇಂದು ಮೇ 20 ರಂದು ಜಿಲ್ಲೆಯ ಎಲ್ಲಾ ಶಾಲೆ,ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ನಿನ್ನೆ ಮೇ 19ರಂದು ಇಡೀ … Continued

ಕರ್ನಾಟಕದ ಕರಾವಳಿ, ಉತ್ತರ ಒಳನಾಡಿನಲ್ಲಿ ನಾಲ್ಕು ದಿನ ಮಳೆ: ಹವಾಮಾನ ಇಲಾಖೆ ಮುನ್ಸೂಚನೆ

posted in: ರಾಜ್ಯ | 0

ಬೆಂಗಳೂರು: ಕೆಲವು ದಿನಗಳಿಂದ ಕೊಂಚ ರಾಜ್ಯದ ಹಲವೆಡೆ ಬಿಡುವು ನೀಡಿದ್ದ ಮುಂಗಾರು ಮತ್ತೆ ಚುರುಕಾಗಿದ್ದು, ಮುಂದಿನ ಕೆಲ ದಿನ ಮಳೆಯಾಗುವ(Rainfall) ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ (IMD)ಮುನ್ಸೂಚನೆ ನೀಡಿದೆ. ವಿಶೇಷವಾಗಿ, ಕರಾವಳಿ(Coastal Karnataka) ಮತ್ತು ಉತ್ತರ ಒಳನಾಡಿನ ಕೆಲವು ಕಡೆ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ತಿಳಿಸಿದೆ. ಹವಾಮಾನ ಇಲಾಖೆಯ ಪ್ರಕಾರ, … Continued

ಕರ್ನಾಟಕದ ಕೆಲ ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್‌.. ಕರಾವಳಿ ಜಿಲ್ಲೆಗಳಲ್ಲಿ ಅಧಿಕ ಮಳೆ ಸಾಧ್ಯತೆ

posted in: ರಾಜ್ಯ | 0

ಬೆಂಗಳೂರು: ಕಳೆದ ಮೂರ್ನಾಲ್ಕು ದಿನಗಳಿಂದ ರಾಜ್ಯದ ಕೆಲವು ಭಾಗಗಳಲ್ಲಿ ಮಳೆಯಾಗಿದ್ದು, ಇನೂ ಎರಡು ದಿನ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಯುಗಾದಿಯ ಮಾರನೇ ದಿನ ಬುಧವಾರ ಪ್ಲವ ಸಂವತ್ಸರದ ಮೊದಲ ಮಳೆ ರಾಜಧಾನಿ ಬೆಂಗಳೂರಿಗೆ ತಂಪೆರೆದಿದೆ. ಬೆಳಗ್ಗೆಯಿಂದ ಮೋಡ ಮುಸುಕಿದ ವಾತವರಣವಿದ್ದು, ಮಳೆಯಾಗುವ ಬಗ್ಗೆ ಮೊದಲೇ ಹವಾಮಾನ ಇಲಾಖೆ ವರದಿ ಮಾಡಿತ್ತು. … Continued

ಹಲವೆಡೆ ಗುಡುಗು ಸಹಿತ ಆಲಿಕಲ್ಲು ಮಳೆ

posted in: ರಾಜ್ಯ | 0

ಕುಂದಾಪುರ/ಹುಬ್ಬಳ್ಳಿ/ವಿಜಯಪುರ: ಕುಂದಾಪುರ ತಾಲೂಕಿನ ಹಲವಡೆ ಭಾನುವಾರ ಸಂಜೆ ಗಾಳಿ ಮಳೆಯಾಗಿದೆ. ಕೆಲವೆಡೆ ತೋಟದಲ್ಲಿ ಅಡಿಕೆ ಮರಗಳು, ಬಾಳೆ ಗಿಡಗಳು ಉರುಳಿಬಿದ್ದು ಅಪಾರ ಹಾನಿ ಸಂಭವಿಸಿದೆ.ಹಲವೆಡೆ ಆಲಿಕಲ್ಲುಗಳೂ ಬಿದ್ದಿವೆ. ಸಿದ್ದಾಪುರ, ಹೊಸಂಗಡಿ, ಹಳ್ಳಿಹೊಳೆ, ಅಜ್ರಿ, ಶಂಕರನಾರಾಯಣ, ಹಾಲಾಡಿ, ಗೋಳಿಯಂಗಡಿ, ಉಳ್ಳೂರು ಮೊದಲಾದೆಡೆ ಗುಡುಗು ಸಿಡಿಲು ಸಹಿತ ಮಳೆಯಾಗಿದೆ.ಗೋಳಿಯಂಗಡಿ ಪೇಟೆಯಲ್ಲಿ ಧಾರಾಕಾರ ಮಳೆ ಸುರಿದು ವಾರದ ಸಂತೆಗೆ ತೊಂದರೆಯಾಗಿತ್ತು. … Continued

ಕರಾವಳಿ, ಮಲೆನಾಡಿನಲ್ಲಿ ಎರಡು ದಿನ ಗುಡುಗು ಸಹಿತ ಮಳೆ: ಮುನ್ಸೂಚನೆ

posted in: ರಾಜ್ಯ | 0

ಬೆಂಗಳೂರು: ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತ ಉಂಟಾದ ಪರಿಣಾಮ ರಾಜ್ಯದಲ್ಲಿ ಎರಡು ದಿನ ಗುಡುಗು, ಮಿಂಚು ಸಹಿತ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಏಪ್ರಿಲ್ 12 ರ ನಂತರ ಮಳೆ ಬಿರುಸುಗೊಳ್ಳಲಿದ್ದು, ಏಪ್ರಿಲ್ 14, 15 ರಂದು ದಕ್ಷಿಣ ಒಳನಾಡು ಮತ್ತು ಕರಾವಳಿ ಭಾಗದಲ್ಲಿ ಭಾರಿ ಮಳೆಯಾಗುವ ಹಿನ್ನಲೆಯಲ್ಲಿ ಯೆಲ್ಲೋ … Continued

ಕರ್ನಾಟಕದಲ್ಲಿ ಮುಂದಿನ ೨೪ ತಾಸಿನಲ್ಲಿ ಮಳೆ ಸಾಧ್ಯತೆ

posted in: ರಾಜ್ಯ | 0

ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದಾಗಿ, ಮಧ್ಯ ಮತ್ತು ದಕ್ಷಿಣ ಭಾರತದ ಕೆಲವು ಭಾಗಗಳಲ್ಲಿ ಮುಂದಿನ 24 ಗಂಟೆಗಳಲ್ಲಿ ಮಳೆಯಾಗುವ ಸಾಧ್ಯತೆಗಳಿವೆ. ಕರ್ನಾಟಕ, ಕೇರಳ, ವಿದರ್ಭ, ಛತ್ತೀಸಗಡ, ಮಧ್ಯ ಮಹಾರಾಷ್ಟ್ರ, ತಮಿಳುನಾಡು, ಪುದುಚೇರಿ ಹಲವು ಭಾಗಗಳಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಈ ಕುರಿತಂತೆ ಭಾರತೀಯ ಹವಾಮಾನ ಇಲಾಖೆ ಮಾಹಿತಿ … Continued