ಸಿದ್ದಾಪುರ | ಮಾವಿನಗುಂಡಿ ಬಳಿ ಸಾರಿಗೆ ಬಸ್‌-ಟಿಪ್ಪರ್‌ ಡಿಕ್ಕಿ : 20ಕ್ಕೂ ಹೆಚ್ಚು ಜನರಿಗೆ ಗಾಯ

ಕಾರವಾರ : ಸಾರಿಗೆ ಸಂಸ್ಥೆ ಬಸ್ಸಿಗೆ ಟಿಪ್ಪರ್ ಎದುರಿನಿಂದ ಡಿಕ್ಕಿ ಹೊಡೆದ ಪರಿಣಾಮ ಬಸ್ಸಿನಲ್ಲಿದ್ದ ಸುಮಾರು 20ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡ ಘಟನೆ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಮಾವಿನಗುಂಡಿ ಬಳಿ ಬಳಿ ನಡೆದಿದೆ ಎಂದು ವರದಿಯಾಗಿದೆ. ಭಟ್ಕಳದಿಂದ ಹಿರೇಕೆರೂರಿಗೆ ಹೋಗುತ್ತಿದ್ದ ಸಾರಿಗೆ ಬಸ್ಸಿನಲ್ಲಿ 50ಕ್ಕೂ ಹೆಚ್ಚು ಪ್ರಯಾಣಿಕರಿದ್ದರು ಎನ್ನಲಾಗಿದೆ. ಲಾರಿ ಓವರ್‌ ಟೇಕ್‌ … Continued

ಸಿದ್ದಾಪುರ : 7 ಹೋರಿಗಳು ಸಜೀವ ದಹನ

ಸಿದ್ದಾಪುರ : ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಚಂದ್ರಘಟಗಿ ಗ್ರಾಮದಲ್ಲಿ ಭಾನುವಾರ ತಡ ರಾತ್ರಿ ಸಂಭವಿಸಿದ ಬೆಂಕಿ ದುರಂತದಲ್ಲಿ 7 ಹೋರಿಗಳು ಸಜೀವ‌ದಹನವಾದ ಘಟನೆ ನಡೆದಿದೆ ಎಂದು ವರದಿಯಾಗಿದೆ. ಚಂದ್ರಘಟಗಿಯ ಮಹೇಶ ಗಣಪತಿ ಹೆಗಡೆ ಅವರ ಮನೆಯ ಹಿಂಭಾಗದಲ್ಲಿರುವ ಕೊಟ್ಟಿಗೆಗೆ ಭಾನುವಾರ ರಾತ್ರಿ ಆಕಸ್ಮಿಕವಾಗಿ ಬೆಂಕಿ ತಗುಲಿ 7 ಹೋರಿಗಳು ಜೀವಂತ ದಹನವಾಗಿವೆ. . … Continued

ಸಿದ್ದಾಪುರ ; ಪಿಗ್ಮಿ ಹಣಕ್ಕಾಗಿ ವೃದ್ದೆಯ ಕತ್ತು ಹಿಸುಕಿ ಕೊಲೆ

ಸಿದ್ದಾಪುರ: ಪಿಗ್ಮಿ ಸಂಗ್ರಹಿಸುತ್ತಿದ್ದ ಒಂಟಿ ವೃದ್ಧೆಯ ಮನೆಯ ಮೇಲ್ಛಾವಣಿಯ ಹೆಂಚು ತೆಗೆದು ಒಳ ನುಗ್ಗಿ ಆಕೆಯ ಕತ್ತು ಹಿಸುಕಿ ಕೊಲೆ ಮಾಡಿ ಹಣ ದೋಚಿಕೊಂಡು ಹೋದ ಘಟನೆ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ನಗರದ ಸೊರಬ ರಸ್ತೆಯ ಬಸವನಗಲ್ಲಿಯಲ್ಲಿ ನಡೆದಿದೆ ಎಂದು ವರದಿಯಾಗಿದೆ. ಎರಡ್ಮೂರು ದಿನಗಳ ನಂತರ ಘಟನೆ ಬೆಳಕಿಗೆ ಬಂದಿದೆ. ಸಹಕಾರಿ ಬ್ಯಾಂಕ್‌ ಒಂದರ … Continued

ವೀಡಿಯೊ..| ಸಿದ್ದಾಪುರ : ಮುಸೆಗಾರ ಗ್ರಾಮದಲ್ಲಿ ಮನೆ ಅಂಗಳಕ್ಕೆ ಬಂದ ಕರಿ ಚಿರತೆ…! ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆ

ಸಿದ್ದಾಪುರ: ಉತ್ತರ ಜಿಲ್ಲೆಯ ಸಿದ್ದಾಪುರ ತಾಲೂಕಿನ ಮುಸೆಗಾರ ಎಂಬ ಗ್ರಾಮದ ಮನೆಯೊಂದರ ಅಂಗಳದಲ್ಲಿ ಕರಿ ಚಿರತೆ ಕಾಣಿಸಿಕೊಂಡಿದೆ. ಸಿದ್ದಾಪುರ ತಾಲೂಕಿನ ಮುಸೆಗಾರಎಂಬ ಗ್ರಾಮದ ಮನೆಯೊಂದರ ಅಂಗಳಲದಲ್ಲಿ ಈ ಕಪ್ಪು ಚಿರತೆ ಕಾಣಿಸಿಕೊಂಡಿದ್ದು, ಈ ಹಿಂದೆಯೂ ಎರಡು ಕಾಣಿಸಿಕೊಂಡಿತ್ತು ಹಾಗೂ ಪ್ರತಿ ಬಾರಿ ಕಾಣಿಸಿಕೊಂಡಾಗಲೂ ನಾಯಿಯನ್ನು ಹೊತ್ತೊಯ್ದಿತ್ತು ಎಂದು ಹೇಳಲಾಗಿದೆ. ನಾಯಿ ರುಚಿ ಕಂಡಿರುವ ಚಿರತೆ ಸುಲಭ … Continued

ಸಿದ್ದಾಪುರ : ಅಖಿಲ ಭಾರತೀಯ ಸಾಹಿತ್ಯ ಪರಿಷದ್ ತಾಲೂಕು ಸಮಿತಿ ಪದಾಧಿಕಾರಿಗಳ ಪದಗ್ರಹಣ

ಸಿದ್ದಾಪುರ : ಅಖಿಲ ಭಾರತೀಯ ಸಾಹಿತ್ಯ ಪರಿಷದ್ ನ ಶಿರಸಿ ಜಿಲ್ಲೆಯ ಸಿದ್ದಾಪುರ ತಾಲೂಕು ಸಮಿತಿಯ ಪದಾಧಿಕಾರಿಗಳ ಪದಗ್ರಹಣ ಮತ್ತು ಶ್ರಾವಣ ಮಾಸದ ನಿಮಿತ್ತ ಶ್ರೀರಾಮ ಭಜನೆ ಕಾರ್ಯಕ್ರಮ ಸಿದ್ದಾಪುರದ ಶ್ರೀ ರಾಘವೇಂದ್ರ ಮಠದಲ್ಲಿ ಶನಿವಾರ (ಆಗಸ್ಟ್ 31) ಸಂಜೆ ನಡೆಯಿತು. ಜಿ . ಎಸ್.ಬಿ. ಸಮಾಜದ ಅಧ್ಯಕ್ಷರಾದ ಜಯವಂತ ಪದ್ಮನಾಭ ಶಾನಭಾಗ್, ಸಂಘಟನೆಯ ರಾಜ್ಯ … Continued

ಸಿದ್ದಾಪುರ : ಸರ್ಕುಳಿ ಸೇತವೆ ಮೇಲೆ 3 ಅಡಿಗಳಷ್ಟು ನೀರು

ಸಿದ್ದಾಪುರ : ಉತ್ತರ ಕನ್ನಡ ಜಿಲ್ಲೆಯಲ್ಲಿ ವ್ಯಾಪಕ ಮಳೆಯಾಗುತ್ತಿದ್ದು, ಅಘನಾಶಿನಿ ನದಿ ಪಾತ್ರದಲ್ಲಿ ವಿಪರೀತ ಮಳೆಯಾಗುತ್ತಿದೆ. ಸಿದ್ದಾಪುರ ತಾಲೂಕಿನ ನಿಲ್ಕುಂದ, ಹೆಗ್ಗರಣಿ, ತಟ್ಟಿಕೈ, ಬಾಳೇಸರ, ಹಾರ್ಸಿಕಟ್ಟಾ ಸುತ್ತಮುತ್ತ ವಿಪರೀತ ಮಳೆಯಾಗಿತ್ತಿದ್ದು, ಅಘನಾಶಿನಿ ನದಿ ಉಕ್ಕಿ ಹರಿಯುತ್ತಿದೆ. ಶಿರಸಿ ಸಿದ್ದಾಪುರ ತಾಲೂಕಿನ ಗಡಿ ಸರ್ಕುಳಿಯಲ್ಲಿ ಸೇತುವೆ ಮೇಲೆ 3-4 ಅಡಿಗಳಷ್ಟು ನೀರು ಹರಿಯುತ್ತಿದೆ. ಅಲ್ಲಿಯ ಮಹಿಷಾಸುರ ಮರ್ಧಿನಿ … Continued

ಅರುಂಧತಿ ಅನಂತ ಹೆಗಡೆ ಕೊಳಗಿ ನಿಧನ

ಸಿದ್ದಾಪುರ : ಖ್ಯಾತ ಯಕ್ಷಗಾನದ ಕಲಾವಿದ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ದಿವಂಗತ ಅನಂತ ಹೆಗಡೆ ಕೊಳಗಿ ಅವರ ಪತ್ನಿ ಅರುಂಧತಿ ಅನಂತ ಹೆಗಡೆ (೮೨) ತಮ್ಮ ಸ್ವಗೃಹದಲ್ಲಿ ನಿಧನರಾಗಿದ್ದಾರೆ. ಸ್ವಲ್ಪಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಶನಿವಾರ ನಿಧನರಾಗಿದ್ದಾರೆ. ಮೃತರು ಯಕ್ಷಗಾನದ ಪ್ರಸಿದ್ಧ ಭಾಗವತ ಕೇಶವ ಹೆಗಡೆ ಕೊಳಗಿ ಸೇರಿದಂತೆ ಮೂವರು ಪುತ್ರರು, ಮೂವರು … Continued

ಸಿದ್ದಾಪುರ : ಸಿಡಿಲು ಬಡಿದು 7 ಹಸುಗಳು ಸಾವು

 ಸಿದ್ದಾಪುರ: ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಕೊಂಡ್ಲಿ ಗ್ರಾಮದ ಕೊಪ್ಪ ಮಜರೆಯಲ್ಲಿ ಶನಿವಾರ (ಮೇ 18)ರಂದು ಸಿಡಿಲು ಬಡಿದು ಏಳು ಹಸುಗಳು ಸಾವಿಗೀಡಾಗಿವೆ ಎಂದು ವರದಿಯಾಗಿದೆ. ಶನಿವಾರ 4 ಗಂಟೆಗೆ ಸುಮಾರಿಗೆ ಸುರಿದ ಭಾರಿ ಮಳೆಯ ಸಮಯದಲ್ಲಿ ಕೊಂಡ್ಲಿ ಗ್ರಾಮದ ಕೊಪ್ಪ ಮಜರೆಯಲ್ಲಿ ಸಿಡಿಲು ಬಡಿದು ಬೂರಿಯಾ ಕನ್ನಾ ನಾಯ್ಕ ಎಂಬವರಿಗೆ ಸೇರಿದ 2 … Continued

ಗೋಪಾಲಕೃಷ್ಣ ಭಟ್ಟ ನಿಧನ

ಸಿದ್ದಾಪುರ: ಉತ್ತರ ಕನ್ನಡ ಜಿಲ್ಲೆಯ  ಸಿದ್ದಾಪುರ  ತಾಲೂಕಿನ ವಾಜಗದ್ದೆ ಸಮೀಪದ ಗೊಡ್ವೆಮನೆಯ ಗೋಪಾಲಕೃಷ್ಣ ಸುಬ್ರಾಯ ಭಟ್ಟ (59) ಮೇ 7ರಂದು  ನಿಧನರಾಗಿದ್ದಾರೆ. ಅವರು ಪತ್ನಿ, ಓರ್ವ ಪುತ್ರ, ತಾಯಿ, ಮೂವರು ಸಹೋದರರು,ಇಬ್ಬರು ಸಹೋದರಿಯರು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ತುಮಕೂರಿನ ಸಾಕೇತ್ ಅಟೋಮೊಬೈಲ್ಸ್‌ನಲ್ಲಿ ಹಿರಿಯ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಅವರು ಹೃದಯಸ್ಥಂಭನದಿಂದ ಹಠಾತ್ತಾಗಿ ನಿಧನರಾಗಿದ್ದಾರೆ. ಅವರ … Continued

ಸಿದ್ದಾಪುರ : ಮಂಗನಕಾಯಿಲೆಗೆ ಒಂದೇ ದಿನ ಇಬ್ಬರು ಸಾವು

ಸಿದ್ದಾಪುರ : ಉತ್ತರ ಕನ್ನಡ ಜಿಲ್ಲೆಯಲ್ಲಿ ಸಿದ್ದಾಪುರ ತಾಲೂಕಿನಲ್ಲಿ ಮಂಗನಕಾಯಿಲೆ(ಕೆಎಫ್‌ಡಿ)ಗೆ ಒಂದೇ ದಿನ ಇಬ್ಬರು ಸಾವಿಗೀಡಾಗಿದ್ದಾರೆ ಎಂದು ವರದಿಯಾಗಿದೆ. ಸಿದ್ದಾಪುರ ತಾಲೂಕಿನ ಹೆಗ್ಗೆಕೊಪ್ಪ ಗ್ರಾಮದ 88 ವರ್ಷದ ವೃದ್ಧ ಮತ್ತು ಕಲ್ಲೂರು ಗ್ರಾಮದ 65 ವರ್ಷದ ವೃದ್ಧ ಮಂಗನ ಕಾಯಿಲೆಯಿಂದ ಮೃತಪಟ್ಟಿದ್ದಾರೆ ಎಂದು ಹೇಳಲಾಗಿದೆ. ಇಬ್ಬರು ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ಎನ್ನಲಾಗಿದೆ. ಮಂಗನ ಕಾಯಿಲೆಯಿಂದ … Continued