ಅಂಕೋಲಾ| ಹಾಡು ನಿಲ್ಲಿಸಿದ ಜಾನಪದ ಕೋಗಿಲೆ ; ಪದ್ಮಶ್ರೀ ಪುರಸ್ಕೃತೆ ಸುಕ್ರಿ ಬೊಮ್ಮಗೌಡ ಇನ್ನಿಲ್ಲ

ಅಂಕೋಲಾ : ಜಾನಪದ ಕೋಗಿಲೆ, ಪದ್ಮಶ್ರೀ‌ ಪುರಸ್ಕೃತರಾದ 91 ವರ್ಷದ ಸುಕ್ರಿ ಬೊಮ್ಮ ಗೌಡ ಅವರು ಗುರುವಾರ (ಫೆಬ್ರವರಿ 13) ಮುಂಜಾನೆ ನಿಧನರಾಗಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಸುಕ್ರಿ ಬೊಮ್ಮ ಗೌಡ ಇಂದು, ಗುರುವಾರ ಮುಂಜಾನೆ 3:30ಕ್ಕೆ ಇಹಲೋಕ ತ್ಯಜಿಸಿದ್ದಾರೆ. ಸುಕ್ರಜ್ಜಿ ಎಂದೇ ಖ್ಯಾತಿ ಪಡೆದಿದ್ದ ಅವರು, ಕೆಲವು ತಿಂಗಳುಗಳಿಂದ ವಯೋಸಹಜ ಅನಾರೋಗ್ಯಕ್ಕೆ ಒಳಗಾಗಿದ್ದರು. ಸುಕ್ರಜ್ಜಿ ಅಂತ್ಯಕ್ರಿಯೆ … Continued

ಯಲ್ಲಾಪುರ : ಕಣ್ಣಿಗೇರಿ ಬಳಿ ಬಸ್ ಪಲ್ಟಿಯಾಗಿ 17 ಪ್ರಯಾಣಿಕರಿಗೆ ಗಾಯ

ಯಲ್ಲಾಪುರ : ಚಾಲಕನ ನಿಯಂತ್ರಣ ತಪ್ಪಿ ರಾಜ್ಯ ಸಾರಿಗೆ ಸಂಸ್ಥೆ (KSRTC) ಬಸ್ ಪಲ್ಟಿಯಾಗಿ 17 ಕ್ಕೂ ಹೆಚ್ಚು ಜನ ಪ್ರಯಾಣಿಕರಿಗೆ ಗಾಯಗಳಾದ ಘಟನೆ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಕಣ್ಣಿಗೇರಿ ಬಳಿ ಮಂಗಳವಾರ ಬೆಳಿಗ್ಗೆ ನಡೆದಿದೆ ಎಂದು ವರದಿಯಾಗಿದೆ. ಶಿರಸಿಯಿಂದ ಬೆಳಗಾವಿಗೆ ಹೋಗುತ್ತಿದ್ದ ಈ ಬಸ್ ಯಲ್ಲಾಪುರದಿಂದ ಬೆಳಿಗ್ಗೆ 8ರ ಸುಮಾರಿಗೆ ಹೊರಟಿತ್ತು … Continued

ಬಿಜೆಪಿ ಮುಖಂಡ ಅನಂತಮೂರ್ತಿ ಹೆಗಡೆ ವಿರುದ್ಧ ಪ್ರಕರಣ : ಹೈಕೋರ್ಟ್‌ ತಡೆಯಾಜ್ಞೆ

ಶಿರಸಿ: ಬಿಜೆಪಿ ಮುಖಂಡ ಅನಂತಮೂರ್ತಿ ಹೆಗಡೆ ಮೇಲೆ ಶಿರಸಿಯ ಕಾಂಗ್ರೆಸ್ ಮುಖಂಡರು ದಾಖಲಿಸಿದ್ದ ಪ್ರಕರಣದ ತನಿಖೆಗೆ ಶುಕ್ರವಾರ ಧಾರವಾಡದ ಹೈಕೋರ್ಟ್‌ ಪೀಠವು ಮಧ್ಯಂತರ ತಡೆಯಾಜ್ಞೆ ನೀಡಿದೆ. ಈ ಬಗ್ಗೆ ಅನಂತಮೂರ್ತಿ ಹೆಗಡೆಯವರು ಮಾಹಿತಿ ನೀಡಿದ್ದಾರೆ. ತಮ್ಮ ವಿರುದ್ಧ ಪ್ರಕರಣ ದಾಖಲಿಸಿರುವುದನ್ನು ಪ್ರಶ್ನಿಸಿ ಅನಂತಮೂರ್ತಿ ಹೆಗಡೆಯವರು ಕೋರ್ಟ್‌ ಮೆಟ್ಟಿಲೇರಿದ್ದರು. ಶಿರಸಿಯಲ್ಲಿ ಇತ್ತೀಚಿಗೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ್ದ ಅನಂತಮೂರ್ತಿ ಹೆಗಡೆ, … Continued

ಶಿರಸಿ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ : ಉತ್ತರ ನೀಡಲು ಶಾಸಕರಿಗೆ ಫೆ.20ರ ವರೆಗೆ ಗಡುವು, ಕೊಡದಿದ್ರೆ ಹೋರಾಟ ಅನಿವಾರ್ಯ : ಅನಂತಮೂರ್ತಿ ಹೆಗಡೆ

ಶಿರಸಿ: ಬಡವರ ಹೆಸರು ಹೇಳಿ ಅಧಿಕಾರಕ್ಕೆ ಬಂದ ನಿಮಗೆ ಹಾಗೂ ನಿಮ್ಮ ಸರ್ಕಾರಕ್ಕೆ ಬಡವರ ಬಗ್ಗೆ ಕಾಳಜಿ ಇದ್ದರೆ ಸುಳ್ಳು ಹೇಳುವುದನ್ನು, ಸುಳ್ಳು ಭರವಸೆಗಳನ್ನು ನೀಡುವುದನ್ನು ಬಿಟ್ಟು ಶಿರಸಿಯಲ್ಲಿ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆಯನ್ನು (super-speciality hospital) ಮೊದಲು ನಿರ್ಮಿಸಿ ಎಂದು ಶಾಸಕ ಭೀಮಣ್ಣ ನಾಯ್ಕ ಅವರಿಗೆ ಸಾಮಾಜಿಕ ಹೋರಾಟಗಾರ ಅನಂತ ಮೂರ್ತಿ ಹೆಗಡೆ ಸವಾಲು ಹಾಕಿದ್ದಾರೆ. … Continued

ಸಿದ್ದಾಪುರ | ಮಾವಿನಗುಂಡಿ ಬಳಿ ಸಾರಿಗೆ ಬಸ್‌-ಟಿಪ್ಪರ್‌ ಡಿಕ್ಕಿ : 20ಕ್ಕೂ ಹೆಚ್ಚು ಜನರಿಗೆ ಗಾಯ

ಕಾರವಾರ : ಸಾರಿಗೆ ಸಂಸ್ಥೆ ಬಸ್ಸಿಗೆ ಟಿಪ್ಪರ್ ಎದುರಿನಿಂದ ಡಿಕ್ಕಿ ಹೊಡೆದ ಪರಿಣಾಮ ಬಸ್ಸಿನಲ್ಲಿದ್ದ ಸುಮಾರು 20ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡ ಘಟನೆ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಮಾವಿನಗುಂಡಿ ಬಳಿ ಬಳಿ ನಡೆದಿದೆ ಎಂದು ವರದಿಯಾಗಿದೆ. ಭಟ್ಕಳದಿಂದ ಹಿರೇಕೆರೂರಿಗೆ ಹೋಗುತ್ತಿದ್ದ ಸಾರಿಗೆ ಬಸ್ಸಿನಲ್ಲಿ 50ಕ್ಕೂ ಹೆಚ್ಚು ಪ್ರಯಾಣಿಕರಿದ್ದರು ಎನ್ನಲಾಗಿದೆ. ಲಾರಿ ಓವರ್‌ ಟೇಕ್‌ … Continued

ಬಿಜೆಪಿಯ ಉತ್ತರ ಕನ್ನಡ ಜಿಲ್ಲಾಧ್ಯಕ್ಷರಾಗಿ ಎನ್.ಎಸ್. ಹೆಗಡೆ ಕರ್ಕಿ ಆಯ್ಕೆ

ಶಿರಸಿ : ಬಿಜೆಪಿಯ ಉತ್ತರ ಕನ್ನಡ ಜಿಲ್ಲಾಧ್ಯಕ್ಷರಾಗಿ ಎನ್.ಎಸ್. ಹೆಗಡೆ ಕರ್ಕಿ ಆಯ್ಕೆಯಾಗಿದ್ದಾರೆ. ಬಿಜೆಪಿಯ ಉತ್ತರ ಕನ್ನಡ ಜಿಲ್ಲೆ ಚುನಾವಣಾಧಿಕಾರಿ ಆರ್.ಕೆ. ಸಿದ್ದರಾಮಣ್ಣ ಅವರು ಈ ಬಗ್ಗೆ ಮಾಹಿತಿ ನೀಡಿದ್ದಾರೆ ದೀನದಯಾಳ ಭವನದಲ್ಲಿ ಮಾತನಾಡಿದ ಅವರು, ಎಲ್ಲರ ಅಭಿಪ್ರಾಯವನ್ನು ಪಡೆದ ನಂತರ ಸಹಮತದಿಂದಲೇ ಎನ್ ಎಸ್ ಹೆಗಡೆ ಕರ್ಕಿ ಅವರನ್ನು ಮುಂದಿನ ಮೂರು ವರ್ಷದ ಅವಧಿಗೆ … Continued

ಯಲ್ಲಾಪುರ | ಲಾರಿ ಅಪಘಾತದಲ್ಲಿ ಮೃತರ ಕುಟುಂಬದವರಿಗೆ ತಲಾ 3 ಲಕ್ಷ ರೂ. ಪರಿಹಾರ ಘೋಷಣೆ

ಬೆಂಗಳೂರು : ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಗುಳ್ಳಾಪುರ ಹಾಗೂ ರಾಯಚೂರಿನ ಸಿಂಧನೂರಿನಲ್ಲಿ ಸಂಭವಿಸಿದ ಪ್ರತ್ಯೇಕ ಅಪಘಾತಗಳಲ್ಲಿ ಮೃತಪಟ್ಟವರ ಕುಟುಂಬದವರಿಗೆ ತಲಾ 3 ಲಕ್ಷ ರೂ. ಪರಿಹಾರ ನೀಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಕಟಿಸಿದ್ದಾರೆ. ಅಲ್ಲದೆ, ಗಾಯಾಳುಗಳ ಉಚಿತ ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗುವುದು ಎಂದು ಅವರು ತಿಳಿಸಿದ್ದಾರೆ. ಇದನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಮುಖ್ಯಮಂತ್ರಿಗಳ ಅಧಿಕೃತ ಟ್ವಿಟರ್ … Continued

ಯಕ್ಷಗಾನ ಶಾಸ್ತ್ರೀಯ ಕಲೆ ಎಂದು ಪರಿಗಣಿತವಾಗುವ ನಿಟ್ಟಿನಲ್ಲಿ ನಮ್ಮ ಪ್ರಯತ್ನವಾಗಬೇಕಿದೆ ; ವಿಮರ್ಶಕ ಡಾ.ನರಹಳ್ಳಿ ಬಾಲಸುಬ್ರಹ್ಮಣ್ಯ

ಶಿರಸಿ : ನೂರಾರು ವರ್ಷಗಳಿಂದ ಜನರೇ ಬೆಳೆಸಿಕೊಂಡು ಬರುತ್ತಿರುವ ಕಲೆ ದೇಶದಲ್ಲಿ ಯಾವುದಾದರೂ ಇದ್ದರೆ ಅದು ಯಕ್ಷಗಾನ ಕಲೆ ಎಂದು ಖ್ಯಾತ ವಿಮರ್ಶಕ ಡಾ.ನರಹಳ್ಳಿ ಬಾಲಸುಬ್ರಹ್ಮಣ್ಯ ಅಭಿಪ್ರಾಯಪಟ್ಟರು. ಉತ್ತರ ಕನ್ನಡ ಜಿಲ್ಲೆಯ ಶಿರಸಿ ನಗರದ ನೆಮ್ಮದಿ ರಂಗಧಾಮದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಶೋಕ ಹಾಸ್ಯಗಾರ ಅವರು ಬರೆದ ಯಕ್ಷಗಾನ ಸಂಶೋಧನಾ ಗ್ರಂಥ ದಶರೂಪಕಗಳ ದಶಾವತಾರ ಕೃತಿಯನ್ನು ಬಿಡುಗಡೆಗೊಳಿಸಿ … Continued

ಯಲ್ಲಾಪುರ | ಗುಳ್ಳಾಪುರದಲ್ಲಿ ತರಕಾರಿ ತುಂಬಿದ ಲಾರಿ ಪಲ್ಟಿ ;10 ಮಂದಿ ಸಾವು

ಯಲ್ಲಾಪುರ : ಬುಧವಾರ ಬೆಳ್ಳಂಬೆಳಗ್ಗೆ ತರಕಾರಿ ತುಂಬಿದ್ದ ಲಾರಿ ಪಲ್ಟಿಯಾಗಿ10 ಜನರು ಸಾವಿಗೀಡಾಗಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಗುಳ್ಳಾಪುರದಲ್ಲಿ ನಡೆದಿದೆ ಎಂದು ವರದಿಯಾಗಿದೆ. ರಾಷ್ಟ್ರೀಯ ಹೆದ್ದಾರಿ 63ರಲ್ಲಿ ಗುಳ್ಳಾಪುರದ ಬಳಿ ಈ ಅಪಘಾತ ಸಂಭವಿಸಿದ್ದು 15ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಮೃತಪಟ್ಟವರನ್ನು ಫಯಾಜ್‌ ಜಮಖಂಡಿ (45), ವಾಸಿಮ್‌ ಮುಡಿಗೇರಿ (25), ಇಜಾಜ್‌ … Continued

ಸಿದ್ದಾಪುರ : 7 ಹೋರಿಗಳು ಸಜೀವ ದಹನ

ಸಿದ್ದಾಪುರ : ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಚಂದ್ರಘಟಗಿ ಗ್ರಾಮದಲ್ಲಿ ಭಾನುವಾರ ತಡ ರಾತ್ರಿ ಸಂಭವಿಸಿದ ಬೆಂಕಿ ದುರಂತದಲ್ಲಿ 7 ಹೋರಿಗಳು ಸಜೀವ‌ದಹನವಾದ ಘಟನೆ ನಡೆದಿದೆ ಎಂದು ವರದಿಯಾಗಿದೆ. ಚಂದ್ರಘಟಗಿಯ ಮಹೇಶ ಗಣಪತಿ ಹೆಗಡೆ ಅವರ ಮನೆಯ ಹಿಂಭಾಗದಲ್ಲಿರುವ ಕೊಟ್ಟಿಗೆಗೆ ಭಾನುವಾರ ರಾತ್ರಿ ಆಕಸ್ಮಿಕವಾಗಿ ಬೆಂಕಿ ತಗುಲಿ 7 ಹೋರಿಗಳು ಜೀವಂತ ದಹನವಾಗಿವೆ. . … Continued