ಸೌದಿ ಜೈಲಿನಲ್ಲಿ 20 ವರ್ಷ, ಮಲಯಾಳಿಗಳಿಂದ 34 ಕೋಟಿ ರೂ. ‘ಬ್ಲಡ್ ಮನಿ’ ಸಂಗ್ರಹ :ಗಲ್ಲು ಶಿಕ್ಷೆಯಿಂದ ಪಾರಾಗಿ ತಾಯ್ನಾಡಿಗೆ ಮರಳಿದ ವ್ಯಕ್ತಿ !

ಕೋಝಿಕ್ಕೋಡ್ : ವಿದೇಶಿ ಜೈಲಿನಲ್ಲಿ ಸುದೀರ್ಘ 20 ವರ್ಷಗಳ ಕಾಲ ಮರಣದಂಡನೆ ಭೀತಿಯಲ್ಲಿ ದಿನದೂಡುತ್ತಿದ್ದ ಕೇರಳದ ಕೋಝಿಕ್ಕೋಡ್ ಮೂಲದ ವ್ಯಕ್ತಿ ಕೊನೆಗೂ ಗುರುವಾರ ತಾಯ್ನಾಡಿಗೆ ಮರಳಿದ್ದಾರೆ. ಸೌದಿ ಅರೇಬಿಯಾದ ಜೈಲಿನಿಂದ ಬಿಡುಗಡೆಯಾಗಿ ಬಂದ ಅಬ್ದುಲ್ ರಹೀಮ್ಅವರನ್ನು ಕರಿಪುರ ವಿಮಾನ ನಿಲ್ದಾಣದಲ್ಲಿ ಅವರ ಕುಟುಂಬಸ್ಥರು, ಆಪ್ತರು ಹರ್ಷೋದ್ಗಾರಗಳೊಂದಿಗೆ ಬರಮಾಡಿಕೊಂಡರು. ಸೌದಿ ನಿಯಮಾವಳಿಗಳ ಪ್ರಕಾರ ಬರೋಬ್ಬರಿ 34 ಕೋಟಿ … Continued

ತಂದೆ-ಮಗ ಲಾಕಪ್ ಡೆತ್ ಪ್ರಕರಣ : ತಮಿಳುನಾಡಿನ 9 ಪೊಲೀಸ್ ಸಿಬ್ಬಂದಿಗೆ ಮರಣದಂಡನೆ

ಮಧುರೈ: ಇಡೀ ದೇಶವನ್ನೇ ಬೆಚ್ಚಿಬೀಳಿಸಿದ್ದ ತಮಿಳುನಾಡಿನ ಶಾಂತಕುಲಂ ಪೊಲೀಸ್‌ ಕಸ್ಟಡಿಯಲ್ಲಿದ್ದಾಗಲೇ ತಂದೆ-ಮಗ ಸಾವಿಗೀಡಾದ ಪ್ರಕರಣಕ್ಕೆ ಸಂಬಂಧಿಸಿದಂತೆ, ಮಧುರೈನ ಒಂದನೇ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯವು 9 ಪೊಲೀಸರಿಗೆ ಮರಣ ದಂಡನೆ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ಕೊಲೆ ಮತ್ತು ಸಾಕ್ಷ್ಯ ನಾಶದ ಆರೋಪದಡಿ ಈ ಸಿಬ್ಬಂದಿಯನ್ನು ನ್ಯಾಯಾಧೀಶರು ಮಾರ್ಚ್ 23 ರಂದು ದೋಷಿಗಳೆಂದು ಪ್ರಕಟಿಸಿದ್ದರು. ಇಂದು, ಸೋಮವಾರ … Continued

ವಿದೇಶಿ ಮಹಿಳೆ ಸೇರಿ ಇಬ್ಬರ ಮೇಲೆ ಅತ್ಯಾಚಾರ ಪ್ರಕರಣ ; ಮೂವರು ಅಪರಾಧಿಗಳಿಗೆ ಮರಣದಂಡನೆ

ಕೊಪ್ಪಳ:  ಗಂಗಾವತಿಯ ಒಂದೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು  ಇಸ್ರೇಲಿ ಮಹಿಳೆ ಸೇರಿದಂತೆ ಇಬ್ಬರು ಮಹಿಳೆಯರ ಮೇಲೆ ಸಾಮೂಹಿಕ ಅತ್ಯಾಚಾರ ಮತ್ತು ಓರ್ವ ಪ್ರವಾಸಿಗನ ಕೊಲೆ ಪ್ರಕರಣದಲ್ಲಿ ಮೂವರು ಆರೋಪಿಗಳಿಗೆ ಸೋಮವಾರ ಮರಣದಂಡನೆ ವಿಧಿಸಿದೆ. ಮಲ್ಲೇಶ್ ಅಲಿಯಾಸ್ ಹಂದಿಮಲ್ಲ, ಸಾಯಿ ಮತ್ತು ಶರಣಪ್ಪ ಎಂಬುವವರೇ ಮರಣದಂಡನೆಗೆ ಗುರಿಯಾದ ಅಪರಾಧಿಗಳು. ಕಳೆದ ವರ್ಷ ಮಾರ್ಚ್‌ನಲ್ಲಿ ನಡೆದಿದ್ದ … Continued

ಬಾಂಗ್ಲಾದೇಶದ ಪದಚ್ಯುತ ಪ್ರಧಾನಿ ಶೇಖ್ ಹಸೀನಾಗೆ ಗಲ್ಲು ಶಿಕ್ಷೆ

ಢಾಕಾ: ಕಳೆದ ವರ್ಷ ನಡೆದ ವಿದ್ಯಾರ್ಥಿ ಬಂಡಾಯದಲ್ಲಿ ಹಲವರ ಹತ್ಯೆ ಸೇರಿದಂತೆ ಮಾನವೀಯತೆ ವಿರುದ್ಧದ ಅಪರಾಧಗಳನ್ನು ಎಸಗಿದ ಆರೋಪದ ಮೇಲೆ, ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರಿಗೆ ದೇಶದ ಅಂತಾರಾಷ್ಟ್ರೀಯ ಅಪರಾಧಗಳ ನ್ಯಾಯಮಂಡಳಿ (ICT) ಗಲ್ಲು ಶಿಕ್ಷೆ ವಿಧಿಸಿದೆ. ವಿದ್ಯಾರ್ಥಿ ದಂಗೆಯೇ ಅಂತಿಮವಾಗಿ ಅವರ ಸರ್ಕಾರದ ಪತನಕ್ಕೆ ಕಾರಣವಾಗಿತ್ತು. ತಿಂಗಳುಗಳ ಕಾಲ ಹಸೀನಾ ಅವರ … Continued

ನಿಮಿಷಾ ಪ್ರಿಯಾಗೆ ಕ್ಷಮಾದಾನ ಇಲ್ಲ: ಯೆಮನ್‌ನಲ್ಲಿ ಕೇರಳದ ನರ್ಸ್‌ನಿಂದ ಹತ್ಯೆಗೀಡಾದ ವ್ಯಕ್ತಿಯ ಸಹೋದರ

ನವದೆಹಲಿ: 2017 ರಲ್ಲಿ ಕೇರಳದ ನರ್ಸ್ ನಿಮಿಷಾ ಪ್ರಿಯಾ ಅವಳಿಂದ ಕೊಲೆಯಾದ ತಲಾಲ್ ಅಬ್ದೋ ಮೆಹದಿ ಸಹೋದರ ಅಬ್ದೆಲ್ಫತ್ತಾ ಮೆಹದಿ ಹಾಗೂ ಅವರ ಕುಟುಂಬದವರು ಯಾವುದೇ ಕ್ಷಮಾದಾನ ಅಥವಾ ಪರಿಹಾರದ ಪ್ರಸ್ತಾಪವನ್ನು ಸ್ವೀಕರಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಜುಲೈ 14 ರಂದು ಬಿಬಿಸಿ ಅರೇಬಿಕ್‌ಗೆ ನೀಡಿದ ಸಂದರ್ಶನದಲ್ಲಿ, ಮೆಹದಿ ಕುಟುಂಬದ ‘ಕಿಸಾಸ್’ – ಷರಿಯಾ ಕಾನೂನಿನ ಪ್ರಕಾರ … Continued

ಜಾರಿಗೆ 24 ತಾಸು ಇರುವಾಗ ಯೆಮನ್‌ನಲ್ಲಿ ಕೇರಳದ ನರ್ಸ್ ಮರಣದಂಡನೆ ದಿನಾಂಕ ಮುಂದೂಡಿಕೆ

ನವದೆಹಲಿ: ಕೇರಳದ ನಿಮಿಷಾ ಪ್ರಿಯಾಳ ಮರಣದಂಡನೆಯನ್ನು ಯೆಮೆನ್‌ನಲ್ಲಿ ಮುಂದೂಡಲಾಗಿದ್ದು, ಕಿರುಕುಳ ನೀಡುತ್ತಿದ್ದ ವ್ಯಕ್ತಿಯನ್ನು ಕೊಂದ ಆರೋಪದ ಮೇಲೆ ಸ್ಥಳೀಯ ಅಧಿಕಾರಿಗಳಿಂದ ಮರಣದಂಡನೆ ಶಿಕ್ಷೆಗೆ ಗುರಿಯಾಗಿದ್ದ ಕೇರಳದ ನರ್ಸ್ ಅನ್ನು ಉಳಿಸಲು ಕೊನೆಯ ಪ್ರಯತ್ನವಾಗಿ ಮಾತುಕತೆಗಳು ನಡೆಯುತ್ತಿವೆ. ನಿಮಿಷಾ ಪ್ರಿಯಾಳ ಮರಣದಂಡನೆಯನ್ನು ಜುಲೈ 16ಕ್ಕೆ ನಿಗದಿಪಡಿಸಲಾಗಿತ್ತು, ಆದರೆ  ಕನಿಷ್ಠ ಜುಲೈ 16ಕ್ಕೆ  ಅವಳನ್ನು ಗಲ್ಲೇಗೇರಿಸುವುದಿಲ್ಲ ಎಂಬ ಮಾಹಿತಿ … Continued

ಯೆಮೆನ್‌ನಲ್ಲಿ ಮರಣದಂಡನೆ ಶಿಕ್ಷೆಗೆ ಗುರಿಯಾದ ಕೇರಳ ನರ್ಸ್‌ ಗೆ ಜುಲೈ 16ರಂದು ಗಲ್ಲು

ನವದೆಹಲಿ: ಯೆಮನ್‌ನಲ್ಲಿ ಮರಣದಂಡನೆ ಶಿಕ್ಷೆಗೆ ಗುರಿಯಾಗಿರುವ ಕೇರಳದ 37 ವರ್ಷದ ನರ್ಸ್ ನಿಮಿಷಾ ಪ್ರಿಯಾ ಅವರನ್ನು ಜುಲೈ 16 ರಂದು ದೇಶದಲ್ಲಿ ಗಲ್ಲಿಗೇರಿಸಲಾಗುತ್ತದೆ ಎಂದು ಮಾಧ್ಯಮ ವರದಿಗಳು ಮಂಗಳವಾರ ತಿಳಿಸಿವೆ. ಯೆಮನ್ ಪ್ರಜೆ ತಲಾಲ್ ಅಬ್ದೋ ಮೆಹದಿ ಎಂಬವರನ್ನು ಕೊಲೆ ಮಾಡಿದ ಆರೋಪದ ಮೇಲೆ ಪ್ರಿಯಾಗೆ ಮರಣದಂಡನೆ ವಿಧಿಸಲಾಗಿದೆ. ಯೆಮನ್‌ನಲ್ಲಿ ವಿದೇಶಿ ಪ್ರಜೆಗಳಿಗೆ ಕಾನೂನುಬದ್ಧ ಅವಶ್ಯಕತೆಯಾಗಿರುವ … Continued

ಭಟ್ಕಳ | ಆಸ್ತಿಗಾಗಿ ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣ ; ಮಗನಿಗೆ ಗಲ್ಲು ಶಿಕ್ಷೆ, ಅಪ್ಪನಿಗೆ ಜೀವಾವಧಿ ಶಿಕ್ಷೆ ಪ್ರಕಟ

ಕಾರವಾರ: ಉತ್ತರ ಜಿಲ್ಲೆಯ ಭಟ್ಕಳ ತಾಲೂನಿಲ್ಲಿ ನಡೆದ ಒಂದೇ ಕುಟುಂಬದ ನಾಲ್ವರನ್ನು ಬರ್ಬರವಾಗಿ ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಪರಾಧಿಯೊಬ್ಬನಿಗೆ ಮರಣ ದಂಡನೆ, ಇನ್ನೊಬ್ಬ ಅಪರಾಧಿಗೆ ಜೀವಾವಧಿ ಶಿಕ್ಷೆ ವಿಧಿಸಿ ಜಿಲ್ಲಾ ನ್ಯಾಯಾಲಯ ತೀರ್ಪು ನೀಡಿದೆ. ಭಟ್ಕಳ ತಾಲೂಕಿನ ಹಾಡವಳ್ಳಿಯ ಗ್ರಾಮದ ವಿನಯ ಶ್ರೀಧರ ಭಟ್ಟನಿಗೆ ಮರಣದಂಡನೆ ಶಿಕ್ಷೆ ವಿಧಿಸಲಾಗಿದೆ. ಆತನ ತಂದೆ ಶ್ರೀಧರ ಭಟ್ಟನಿಗೆ … Continued

ಪ್ರವಾಹದ ಪರಿಸ್ಥಿತಿ ನಿಭಾಯಿಸಲು ವಿಫಲ ; 30 ಅಧಿಕಾರಿಗಳನ್ನು ಗಲ್ಲಿಗೇರಿಸಿದ ಉತ್ತರ ಕೊರಿಯಾ..!

ಸಿನುಜು : ವಿನಾಶಕಾರಿ ಪ್ರವಾಹ ಮತ್ತು ಭೂಕುಸಿತಗಳನ್ನು ತಡೆಗಟ್ಟುವಲ್ಲಿ ವಿಫಲವಾದ ಕಾರಣಕ್ಕೆ ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜೊಂಗ್ ಉನ್ ಅವರು 30 ಅಧಿಕಾರಿಗಳಿಗೆ ಮರಣದಂಡನೆ ವಿಧಿಸಲು ಆದೇಶಿಸಿದ್ದಾರೆ ಎಂದು ಹಲವಾರು ದಕ್ಷಿಣ ಕೊರಿಯಾದ ಮಾಧ್ಯಮಗಳು ವರದಿ ಮಾಡಿವೆ. ವಿನಾಶಕಾರಿ ಪ್ರವಾಹ ಮತ್ತು ಭೂಕುಸಿತಗಳು ಸರಿಸುಮಾರು 1,000 ಸಾವುಗಳಿಗೆ ಕಾರಣವಾಗಿವೆ ಎಂದು ವರದಿಯಾಗಿದೆ. ದಕ್ಷಿಣ ಕೊರಿಯಾದ … Continued

ರಂಜಿತ್ ಶ್ರೀನಿವಾಸ್ ಹತ್ಯೆ ಪ್ರಕರಣದಲ್ಲಿ 15 ಪಿಎಫ್‌ಐ ಸದಸ್ಯರಿಗೆ ಮರಣದಂಡನೆ ವಿಧಿಸಿದ ನ್ಯಾಯಾಧೀಶರಿಗೆ ಬೆದರಿಕೆ : ನಾಲ್ವರ ಬಂಧನ

ಅಲಪ್ಪುಳ: ಬಿಜೆಪಿ ಮುಖಂಡ ರಂಜಿತ್ ಶ್ರೀನಿವಾಸ್ ಹತ್ಯೆ ಪ್ರಕರಣದಲ್ಲಿ 15 ಪಿಎಫ್‌ಐ ಕಾರ್ಯಕರ್ತರಿಗೆ ಮರಣದಂಡನೆ ವಿಧಿಸಿದ ಮಾವೇಲಿಕ್ಕರ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ-ಐ ನ್ಯಾಯಾಧೀಶರಾದ ಶ್ರೀದೇವಿ ವಿ.ಜಿ. ಅವರಿಗೆ ಬೆದರಿಕೆ ಹಾಕಿದ ಆರೋಪದಡಿ ನಾಲ್ವರನ್ನು ಜಿಲ್ಲಾ ಪೊಲೀಸರು ಗುರುವಾರ ಬಂಧಿಸಿದ್ದಾರೆ. ಮನ್ನಂಚೇರಿಯ ಕುಂಬಳತುವೇಲಿಯ ನಜೀರ್ ಮೋನ್ (47), ತಿರುವನಂತಪುರಂನ ಮಂಗಳಪುರಂನ ರಫಿ ಬಿ, 38, … Continued