ಅಂಕೋಲಾ : ಖಾಸಗಿ ಬಸ್‌ ಪಲ್ಟಿ ; ಓರ್ವ ಸಾವು, 20ಕ್ಕೂ ಹೆಚ್ಚು ಮಂದಿಗೆ ಗಾಯ

ಕಾರವಾರ: ಬಳ್ಳಾರಿಯಿಂದ ಗೋವಾಕ್ಕೆ ತೆರಳುತ್ತಿದ್ದ ಸೀಬರ್ಡ್ ಸಂಸ್ಥೆಯ ಖಾಸಗಿ ಸ್ಲೀಪರ್ ಬಸ್ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದ್ದು, ಓರ್ವ ಪ್ರಯಾಣಿಕ ಮೃತಪಟ್ಟು 20ಕ್ಕೂ ಹೆಚ್ಚು ಮಂದಿ ಗಾಯಗೊಂಡ ಘಟನೆ ಉತ್ತರ ಕನ್ನಡ ಜಿಲ್ಲೆ ಅಂಕೋಲಾ ತಾಲೂಕಿನ ಅಡ್ಲೂರು ಕಂಚಿನ ಬಾಗಿಲಿನ ಸಮೀಪ ರಾಷ್ಟ್ರೀಯ ಹೆದ್ದಾರಿ 52ರಲ್ಲಿ ಶನಿವಾರ ಬೆಳಗಿನ ಜಾವ ಸಂಭವಿಸಿದೆ ಎಂದು ವರದಿಯಾಗಿದೆ. ಅಪಘಾತದ … Continued

ಬೈಂದೂರು : ಟ್ಯಾಂಕರ್‌ಗೆ ಪ್ರವಾಸಿ ಬಸ್ ಡಿಕ್ಕಿ ; ಇಬ್ಬರು ಸಾವು, ಹಲವರಿಗೆ ಗಾಯ

ಉಡುಪಿ:  ಟ್ಯಾಂಕರ್‌ ಹಾಗೂ ಪ್ರವಾಸಿ ಬಸ್‌ ನಡುವೆ ನಡೆದ ಡಿಕ್ಕಿಯಲ್ಲಿ ಇಬ್ಬರು ವಿದ್ಯಾರ್ಥಿಗಳು ಮೃತಪಟ್ಟು, ಹಲವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಜಿಲ್ಲೆಯ (Udupi Bus Accident) ಬೈಂದೂರು ತಾಲೂಕಿನ ತ್ರಾಸಿ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ದುರ್ಘಟನೆ ನಡೆದಿದೆ ಎಂದು ವರದಿಯಾಗಿದೆ. ರಸ್ತೆ ಬದಿ ನಿಂತಿದ್ದ ಟ್ಯಾಂಕರ್‌ಗೆ ಅತಿ ವೇಗದಲ್ಲಿ ಬಂದ ಬಸ್ ಡಿಕ್ಕಿ ಹೊಡೆದಿದ್ದು, … Continued

ಶಿರಸಿ : ಎರಡು ಬಸ್‌ಗಳ ನಡುವೆ ಡಿಕ್ಕಿ ; ಹಲವರಿಗೆ ಗಾಯ

ಶಿರಸಿ : ಉತ್ತರ ಕನ್ನಡ ಜಿಲ್ಲೆಯ ಶಿರಸಿ-ಕುಮಟಾ ಹೆದ್ದಾರಿಯಲ್ಲಿ ಕೊಳಗಿಬೀಸ್ ಬಳಿ ಎರಡು ಬಸ್‌ಗಳ ನಡುವೆ ಶುಕ್ರವಾರ ಮುಖಾಮುಖಿ ಡಿಕ್ಕಿ ಸಂಭವಿಸಿದ್ದು, ಸುಮಾರು 15ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಾಯಗಳಾಗಿವೆ ಎಂದು ವರದಿಯಾಗಿದೆ. ಭಟ್ಕಳದಿಂದ ಹುಬ್ಬಳ್ಳಿ ಮಾರ್ಗವಾಗಿ ಮುದ್ದೆಬಿಹಾಳಕ್ಕೆ ಹೋಗುತ್ತಿದ್ದ ಎನ್‌ಡಬ್ಲ್ಯುಕೆಆರ್‌ಟಿಸಿ ಬಸ್‌ ಮತ್ತು ಶಿರಸಿ ಕಡೆಯಿಂದ ಹೋಗುತ್ತಿದ್ದ ಖಾಸಗಿ ಬಸ್‌ ನಡುವೆ ಡಿಕ್ಕಿ ಸಂಭವಿಸಿದ್ದು, ಡಿಕ್ಕಿಯ … Continued

ವೀಡಿಯೊ | ಹಾವೇರಿ : ಬಸ್‌ ನಿಲ್ದಾಣದ ಪ್ಲಾಟ್​ಫಾರ್ಮಿಗೆ ನುಗ್ಗಿದ ಬಸ್‌ ; ಮಗು ಸಾವು, ನಾಲ್ವರಿಗೆ ಗಾಯ

ಹಾವೇರಿ: ಹಾವೇರಿ: ನಗರದ ಕೇಂದ್ರ ಬಸ್ ನಿಲ್ದಾಣದಲ್ಲಿ ಕಾರಿಡಾರ್‌ಗೆ ನುಗ್ಗಿ ಬಸ್ ಡಿಕ್ಕಿ ಹೊಡೆದಿದ್ದರಿಂದ ತೀವ್ರವಾಗಿ ಗಾಯಗೊಂಡ ಎರಡೂ ವರ್ಷದ ಮಗು ಮೃತಪಟ್ಟ ದುರ್ಘಟನೆ ನಡೆದಿದೆ ಎಂದು ವರದಿಯಾಗಿದೆ. ಈ ದುರ್ಘಟನೆಯಲ್ಲಿ ಇನ್ನೂ ನಾಲ್ವರು ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಹಾವೇರಿ-ಲಕ್ಷ್ಮೇಶ್ವರ ಬಸ್‌ ಅತಿವೇಗದಲ್ಲಿ ಬಸ್ ನಿಲ್ದಾಣಕ್ಕೆ ನುಗ್ಗಿ, ಪ್ಲಾಟ್‌ ಫಾರ್ಮ್‌ಗೆ ನುಗ್ಗಿ ಮುಂದೆ … Continued

ಭದ್ರಾವತಿ : ನಿಯಂತ್ರಣ ತಪ್ಪಿ ಹಳ್ಳಕ್ಕೆ ಬಿದ್ದ ಬಸ್‌ ; 30ಕ್ಕೂ ಹೆಚ್ಚು ಜನರಿಗೆ ಗಾಯ

ಶಿವಮೊಗ್ಗ :ಖಾಸಗಿ ಬಸ್ಸೊಂದು ಚಾಲಕನ ನಿಯಂತ್ರಣ ತಪ್ಪಿ ಸೇತುವೆಯಿಂದ ಕೆಳಕ್ಕೆ ಹಳ್ಳದಲ್ಲಿ ಬಿದ್ದು ೩೦ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡ ಘಟನೆ ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಎಂದು ವೀರಪುರ ಗ್ರಾಮದ ಕಾಗೆಹಳ್ಳ ಎಂಬಲ್ಲಿ ನಡೆದಿದೆ ಎಂದು ವರದಿಯಾಗಿದೆ. ಬಸ್ಸು ನಿಯಂತ್ರಣ ಕಳೆದುಕೊಂಡು ಸೇತುವೆಯ ತಡೆಗೋಡೆಗೆ (Railing) ಡಿಕ್ಕಿ ಹೊಡೆದು ನಂತರ ಕೆಳಕ್ಕೆ ಬಿದ್ದಿದೆ ಎನ್ನಲಾಗಿದೆ. 10ಕ್ಕೂ … Continued

ವೀಡಿಯೊ : ಎಲ್ಲರೂ ನೋಡನೋಡುತ್ತಿದ್ದಂತೆ ನದಿಗೆ ಬಿದ್ದು ಮುಳುಗಿದ ಬಸ್ ; 24 ಪ್ರಯಾಣಿಕರು ಸಾವು

ಢಾಕಾ: ಬಾಂಗ್ಲಾದೇಶದ ರಾಜಬರಿ ಜಿಲ್ಲೆಯಲ್ಲಿ ಬುಧವಾರ ಸಂಜೆ ಸಂಭವಿಸಿದ ಭೀಕರ ಬಸ್ ಅಪಘಾತದಲ್ಲಿ ಕನಿಷ್ಠ 24 ಜನರು ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ. ಪ್ರಯಾಣಿಕರಿದ್ದ ಬಸ್ಸೊಂದು ಫೆರ್ರಿ (ಸಾರಿಗೆ ದೋಣಿ) ಹತ್ತಲು ಪ್ರಯತ್ನಿಸುತ್ತಿದ್ದಾಗ ನಿಯಂತ್ರಣ ತಪ್ಪಿ ಪದ್ಮಾ ನದಿಗೆ ಬಿದ್ದು ಮುಳುಗಿದ್ದರಿಂದ ಈ ದುರ್ಘಟನೆ ಸಂಭವಿಸಿದೆ. ಮಾರ್ಚ್ 25, ಬುಧವಾರ ಸಂಜೆ ಸುಮಾರು 5:15ರ ಸುಮಾರಿಗೆ ರಾಜಬರಿ … Continued

ಭೀಕರ ರಸ್ತೆ ಅಪಘಾತ : ಲಾರಿ-ಬಸ್ ಡಿಕ್ಕಿ, 14 ಪ್ರಯಾಣಿಕರು ಸಜೀವ ದಹನ, 23 ಮಂದಿಗೆ ಗಾಯ

ಅಮರಾವತಿ : ಆಂಧ್ರಪ್ರದೇಶದ ಮಾರ್ಕಾಪುರಂ ಜಿಲ್ಲೆಯ ರಾಯವರಂ ಬಳಿ ಗುರುವಾರ ಬೆಳಿಗ್ಗೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಕನಿಷ್ಠ 14 ಜನರು ಸಜೀವ ದಹನವಾಗಿದ್ದು, 23 ಮಂದಿ ತೀವ್ರವಾಗಿ ಗಾಯಗೊಂಡಿದ್ದಾರೆ. ಪ್ರಯಾಣಿಕರಿದ್ದ ಖಾಸಗಿ ಬಸ್ ಮತ್ತು ಟಿಪ್ಪರ್ ಲಾರಿ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ ಪರಿಣಾಮ ಎರಡೂ ವಾಹನಗಳಲ್ಲಿ ಬೆಂಕಿ ಹೊತ್ತಿಕೊಂಡು ಈ ದುರಂತ ಸಂಭವಿಸಿದೆ. … Continued

ಸೌದಿ ಅರೇಬಿಯಾದ ಮದೀನಾ ಬಳಿ ಬಸ್-ಟ್ಯಾಂಕರ್ ಡಿಕ್ಕಿ: 42 ಭಾರತೀಯರು ಮೃತಪಟ್ಟಿರುವ ಶಂಕೆ

ಮದೀನಾ: ಉಮ್ರಾ ಯಾತ್ರಾರ್ಥಿಗಳನ್ನು ಹೊತ್ತೊಯ್ಯುತ್ತಿದ್ದ ಬಸ್ ಡೀಸೆಲ್ ಟ್ಯಾಂಕರ್‌ಗೆ ಡಿಕ್ಕಿ ಹೊಡೆದ ಪರಿಣಾಮ ಕನಿಷ್ಠ 42 ಜನರು ಸಾವಿಗೀಡಾಗಿರುವ ಶಂಕೆ ವ್ಯಕ್ತವಾಗಿದೆ. ಈ ದುರಂತವು ಸೌದಿ ಅರೇಬಿಯಾದ ಮದೀನಾ ಬಳಿ ಸಂಭವಿಸಿದ್ದು, ಸೌದಿ ಅರೇಬಿಯಾದ ಸ್ಥಳೀಯ ಮಾಧ್ಯಮಗಳ ಪ್ರಕಾರ, ಮೃತಪಟ್ಟವರಲ್ಲಿ ಹೆಚ್ಚಿನವರು ಭಾರತೀಯ ಪ್ರಜೆಗಳು ಎಂದು ನಂಬಲಾಗಿದೆ. ಬಸ್ ಮಕ್ಕಾದಿಂದ ಮದೀನಾಗೆ ತೆರಳುತ್ತಿದ್ದಾಗ, ಭಾರತೀಯ ಕಾಲಮಾನ … Continued

ಭೀಕರ ಅಪಘಾತ : ಜಲ್ಲಿ ಲಾರಿ ಬಸ್‌ ಡಿಕ್ಕಿ ; 20 ಮಂದಿ ಸಾವು

ಹೈದರಾಬಾದ್: ಇಂದು (ಸೋಮವಾರ) (ನವೆಂಬರ್ 3)‌ ಬೆಳಿಗ್ಗೆ ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಹೈದರಾಬಾದ್-ಬಿಜಾಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ಭೀಕರ ರಸ್ತೆ ಅಪಘಾತದಲ್ಲಿ ಕನಿಷ್ಠ 20 ಜನರು ಸಾವಿಗೀಡಾಗಿದ್ದಾರೆ ಎಂದು ವರದಿಯಾಗಿದೆ. ಬಸ್‌ಗೆ ಜಲ್ಲಿಕಲ್ಲು ತುಂಬಿದ್ದ ಟ್ರಕ್ ಡಿಕ್ಕಿ ಹೊಡೆದ ಪರಿಣಾಮ ಈ ಅಪಘಾತ ಸಂಭವಿಸಿದೆ. ತೆಲಂಗಾಣ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (TSRTC) ಗೆ ಸೇರಿದ ಈ … Continued

ಹೈದರಾಬಾದ್-ಬೆಂಗಳೂರು ಬಸ್ಸಿನಲ್ಲಿ ಬೆಂಕಿ ; 19 ಜನರು ಸಾವು

ಕರ್ನೂಲ್ (ಆಂಧ್ರಪ್ರದೇಶ): ಶುಕ್ರವಾರ ಮುಂಜಾನೆ ಆಂಧ್ರಪ್ರದೇಶದ ಕರ್ನೂಲ್‌ನಲ್ಲಿ ಐಷಾರಾಮಿ ಬಸ್ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಬೆಂಕಿ ಹೊತ್ತಿಕೊಂಡು 19 ಜನರು ಸಾವಿಗೀಡಾಗಿದ್ದಾರೆ ಎಂದು ವರದಿಯಾಗಿದೆ. ಹೈದರಾಬಾದ್‌ನಿಂದ ಬೆಂಗಳೂರಿಗೆ ಹೋಗುತ್ತಿದ್ದ ಬಸ್‌ನಲ್ಲಿ 43 ಜನರಿದ್ದರು. ಕರ್ನೂಲ್ ಜಿಲ್ಲೆಯ ಉಲ್ಲಿಂದಕೊಂಡ ಬಳಿ ಬಸ್ ಅಪಘಾತ ಸಂಭವಿಸಿದೆ. ಬಸ್ ಮಧ್ಯರಾತ್ರಿ ಸುಮಾರಿಗೆ ಹೈದರಾಬಾದಿನಿಂದ ತನ್ನ ಪ್ರಯಾಣವನ್ನು ಪ್ರಾರಂಭಿಸಿತು … Continued