ವೀಡಿಯೊ..| ನಿಲ್ದಾಣದಲ್ಲಿ ಕುಳಿತಿದ್ದ ಪ್ರಯಾಣಿಕನ ಮೇಲೆ ಹರಿದ ಬಸ್‌ ; ಪವಾಡಸದೃಶ ರೀತಿಯಲ್ಲಿ ಪಾರಾದ ಪ್ರಯಾಣಿಕ…!

ಕೇರಳದ ಟರ್ಮಿನಲ್ ಬಸ್‌ ಸ್ಟ್ಯಾಂಡ್‌ನಲ್ಲಿ ಕುಳಿತಿದ್ದಾಗ ಬಸ್ ಡಿಕ್ಕಿ ಹೊಡೆದರೂ ಯುವಕನೊಬ್ಬ ಪವಾಡಸದೃಶ ರೀತಿಯಲ್ಲಿ ಬದುಕುಳಿದಿದ್ದಾನೆ. ಘಟನೆಯ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇಡುಕ್ಕಿ ಜಿಲ್ಲೆಯ ಕುಮಲಿ ಮೂಲದ ವಿಷ್ಣು ಎಂದು ಗುರುತಿಸಲಾದ ವ್ಯಕ್ತಿ ಡಿಸೆಂಬರ್ 1 ರಂದು ಕಟ್ಟಪ್ಪನ ಹೊಸ ಬಸ್ ನಿಲ್ದಾಣ ಟರ್ಮಿನಲ್‌ನಲ್ಲಿ ಬಸ್‌ಗಾಗಿ ಕಾಯುತ್ತಿದ್ದಾಗ ಈ ಘಟನೆ ನಡೆದಿದೆ. ವೀಡಿಯೋದಲ್ಲಿ, … Continued

ವೀಡಿಯೊ..| ಚಂಡಮಾರುತ ಪೀಡಿತ ಪ್ರದೇಶಕ್ಕೆ ಭೇಟಿ ನೀಡಿದ ತಮಿಳುನಾಡು ಸಚಿವರ ಮೇಲೆ ಕೆಸರು ಎರಚಿದ ಜನರು…!

ಚೆನ್ನೈ: ಫೆಂಗಲ್ ಚಂಡಮಾರುತದ ನಂತರ “ಅಸಮರ್ಪಕ” ಪರಿಹಾರ ಕ್ರಮಗಳ ವಿರುದ್ಧ ಪ್ರತಿಭಟಿಸಿದ ಜನರು ವಿಲ್ಲುಪುರಂ ಜಿಲ್ಲೆಯ ಪ್ರವಾಹ ಪೀಡಿತ ಪ್ರದೇಶಕ್ಕೆ ಭೇಟಿ ನೀಡಿದ ತಮಿಳುನಾಡು ಕ್ಯಾಬಿನೆಟ್ ಸಚಿವ ಕೆ. ಪೊನ್ಮುಡಿ ಅವರ ಮೇಲೆ ಕೆಸರು ಎರಚಿಸಿದ ಘಟನೆ ನಡೆದಿದೆ ಎಂದು ವರದಿಯಾಗಿದೆ. ವರದಿಗಳ ಪ್ರಕಾರ, ತಿರುಚಿರಾಪಳ್ಳಿ-ಚೆನ್ನೈ ರಸ್ತೆಯ ಇರುವೇಲ್ಪಟ್ಟು ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಕೋಪಗೊಂಡ … Continued

ವೀಡಿಯೊ..| ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಅತ್ಯದ್ಭುತ ಕ್ಯಾಚ್‌ ಹಿಡಿದ ಗ್ಲೆನ್ ಫಿಲಿಪ್ಸ್ ; ‘ಕ್ರಿಕೆಟ್‌ ಸೂಪರ್‌ಮ್ಯಾನ್’ ಎಂದ ಅಭಿಮಾನಿಗಳು..!

ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡದ ಆಟಗಾರ ಗ್ಲೆನ್ ಫಿಲಿಪ್ಸ್ ಹಿಡಿದ ಕ್ಯಾಚ್ ಎಲ್ಲರನ್ನೂ ಬೆರಗಾಗಿಸಿದೆ. ಕ್ರೈಸ್ಟ್ ಚರ್ಸ್​​ನ ಹ್ಯಾಗ್ಲಿ ಓವಲ್ ಮೈದಾನದಲ್ಲಿ ನಡೆಯುತ್ತಿರುವ ಟೆಸ್ಟ್‌ ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ಬೌಲಿಂಗ್ ಆಯ್ದುಕೊಂಡಿತು. ಅದರಂತೆ ಮೊದಲು ಬ್ಯಾಟ್ ಮಾಡಿದ ನ್ಯೂಜಿಲೆಂಡ್ ಪ್ರಥಮ ಇನಿಂಗ್ಸ್​​ನಲ್ಲಿ 348 ರನ್ ಕಲೆಹಾಕಿದೆ. ನಂತರ ಬ್ಯಾಟಿಂಗ್‌ಗೆ ಇಳಿದ … Continued

ವೀಡಿಯೊ..| ಮಂಡ್ಯ ; ಅಪರೂಪದ ವಿದ್ಯಮಾನ : ಮೂರು ಕರುಗಳಿಗೆ ಜನ್ಮ ನೀಡಿದ ಹಸು…!

ಮಂಡ್ಯ: ಸಾಮಾನ್ಯವಾಗಿ ಹಸುಗಳು ಒಂದು ಸಲಕ್ಕೆ ಒಂದೇ ಕರುವಿಗೆ ಜನ್ಮವನ್ನು ನೀಡುತ್ತವೆ. ಆದರೆ ಅಪರೂಪದ ವಿದ್ಯಮಾನದಲ್ಲಿ ಕೆಲವು ಕಡೆಗಳಲ್ಲಿ ಅವಳಿ ಕರುಗಳಿಗೆ ಜನ್ಮ ನೀಡಿದ ಉದಾಹರಣೆಗಳೂ ಇವೆ. ಆದರೆ ಹಸು ಮೂರು ಕರುಗಳಿಗೆ ಜನ್ಮ ನೀಡಿದ ವಿದ್ಯಮಾನ ಅಪರದಲ್ಲಿ ಅಪರೂಪದ ವಿದ್ಯಮಾನ ಎಂದೇ ಹೇಳಬಹುದು. ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಡಿಂಕಾ ಗ್ರಾಮದ ನಿವಾಸಿ ಕಂಠಿ … Continued

ವೀಡಿಯೊ..| ಪಾಕಿಸ್ತಾನ | ನಮಾಜ್ ಮಾಡುತ್ತಿದ್ದ ವ್ಯಕ್ತಿಯನ್ನು 25 ಅಡಿ ಎತ್ತರದ ಕಂಟೈನರ್‌ ನಿಂದ ಕೆಳಕ್ಕೆ ದೂಡಿದ ಸೇನೆ

ಪಾಕಿಸ್ತಾನದ ಇಸ್ಲಾಮಾಬಾದ್‌ನಲ್ಲಿ ಆತಂಕಕಾರಿ ಘಟನೆಯೊಂದರಲ್ಲಿ ಭದ್ರತಾ ಪಡೆಗಳು ಪ್ರಾರ್ಥನೆ ಮಾಡುತ್ತಿದ್ದ ವ್ಯಕ್ತಿಯೊಬ್ಬನನ್ನು 25 ಅಡಿ ಎತ್ತರದ ಸರಕು ಸಾಗಣೆ ಕಂಟೈನರ್‌ ನಿಂದ ವ್ಯಕ್ತಿಯೊಬ್ಬನನ್ನು ಕೆಳಕ್ಕೆ ತಳ್ಳಿವೆ. ತನ್ನ ಅಧಿಕಾರಾವಧಿಯಲ್ಲಿ 140 ಮಿಲಿಯನ್ ರೂಪಾಯಿಗೂ ಹೆಚ್ಚು ಮೌಲ್ಯದ ಉಡುಗೊರೆಗಳನ್ನು ಮಾರಾಟ ಮಾಡಿದ ಆರೋಪದ ಮೇಲೆ 2023 ರ ಆಗಸ್ಟ್‌ನಿಂದ ಜೈಲಿನಲ್ಲಿರುವ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರನ್ನು … Continued

ಗುಂಡ್ಲುಪೇಟೆ | ಆನೆ ಮರಿ ಬೇಟೆಗೆ ಹೊಂಚು ಹಾಕಿದ್ದ ಹುಲಿ ಮೇಲೆ ತಾಯಿ ಆನೆ ದಾಳಿ : ವೀಡಿಯೊ ವೈರಲ್

ಚಾಮರಾಜನಗರ : ಆನೆಯ ಮರಿಯೊಂದರ ಬೇಟೆ ಮಾಡಲು ಹೊಂಚು ಹಾಕಿದ್ದ ಹುಲಿ ಮೇಲೆ ತಾಯಿ ಆನೆ ದಾಳಿಗೆ ಮುಂದಾದಾಗ ಹುಲಿರಾಯ ಅಲ್ಲಿಂದ ಕಾಲ್ಕಿತ್ತ ಘಟನೆ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಅಭಯಾರಣ್ಯದಲ್ಲಿ ನಡೆದಿದೆ. ಇದರ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ಈಗ ವೈರಲ್ ಆಗಿದೆ. ಬಂಡೀಪುರ ಅಭಯಾರಣ್ಯ ಸಫಾರಿ ಜೋನ್ ನಲ್ಲಿ ತಾಯಿ ಆನೆ ತನ್ನ ಮರಿ ಜೊತೆಯಲ್ಲಿದ್ದ … Continued

ವೀಡಿಯೊ..| ಕಂಡಕಂಡವರಿಗೆ ತಿವಿದು ಗಾಯಗೊಳಿಸಿದ ಗೂಳಿ ; 15 ಜನರಿಗೆ ಗಾಯ : 3 ತಾಸು ಕಾರ್ಯಾಚರಣೆ ನಂತರ ಸೆರೆ…!

ನವದೆಹಲಿ : ಉತ್ತರ ಪ್ರದೇಶದ ಜಲಾಲಾಬಾದ್ ಪಟ್ಟಣದಲ್ಲಿ ಗೂಳಿಗೆ ಜನರು ಭಯಭೀತರಾಗಿದ್ದಾರೆ. ದಾರಿತಪ್ಪಿ ಬಂದ ಗೂಳಿಯೊಂದು ಜನರನ್ನು ಬೆನ್ನಟ್ಟುವುದು, ಕೊಂಬುಗಳಿಂದ ತಿವಿಯುವುದು ಮತ್ತು ಜನರನ್ನು ಎತ್ತಿ ಒಗೆಯುವುದನ್ನು ಮಾಡಿದೆ. ಈ ರೊಚ್ಚಿಗೆದ್ದ ಗೂಳಿ ಕಂಡವರನ್ನೆಲ್ಲ ತಿವಿದಿದ್ದು, ಸುಮಾರು 15 ಜನರನ್ನು ಗಂಭೀರವಾಗಿ ಗಾಯಗೊಳಿಸಿದೆ ಎಂದು ಹೇಳಲಾಗಿದೆ. ಜಲಾಲಾಬಾದ್ ಪಟ್ಟಣದಲ್ಲಿ, ದಟ್ಟಣೆಯ ಮಧ್ಯೆ ಗೂಳಿಯೊಂದು ವ್ಯಕ್ತಿಯನ್ನು ಹಿಂಬಾಲಿಸುತ್ತಿರುವುದು … Continued

ವೀಡಿಯೊ..| ಕುದುರೆ ಮೇಲೆ ಮೆರವಣಿಗೆಯಲ್ಲಿ ಹೊರಟಿದ್ದ ವರನ ಕೊರಳಲ್ಲಿದ್ದ ನೋಟಿನ ಹಾರ ಕದ್ದೊಯ್ದ ಮಿನಿಟ್ರಕ್‌ ಚಾಲಕ ; ಸಿನಿಮೀಯ ರೀತಿ ಬೆನ್ನಟ್ಟಿ ಹಿಡಿದ ಮದುಮಗ..!

ಸಿನೆಮಾದಲ್ಲಿ ಮಾತ್ರ ಕಾಣಬಹುದಾದ ದೃಶ್ಯದಂತೆ  ಉತ್ತರ ಪ್ರದೇಶದ ಮೀರತ್‌ನಿಂದ ವರದಿಯಾದ ಘಟನೆಯೊಂದರಲ್ಲಿ ಕುದುರೆ ಮೇಲೆ ಮೆರವಣಿಗೆಯಲ್ಲಿ ಸಾಗುತ್ತಿದ್ದ ವರನೊಬ್ಬನಿಗೆ ಹಾಕಿದ್ದ ನೋಟುಗಳ ಮಾಲೆಯನ್ನು ದೋಚಿರುವ ಘಟನೆ ವರದಿಯಾಗಿದ್ದು, ನಂತರ ಮಿನಿಟ್ರಕ್‌ನಲ್ಲಿ ಸಾಗುತ್ತಿದ್ದ ಕಳ್ಳನನ್ನು ವರನೇ ಬೆನ್ನಟ್ಟಿ ಹಿಡಿದಿದ್ದಾನೆ…! ಇದರಿಂದ ಮದುವೆ ಮೆರವಣಿಗೆಯಲ್ಲಿ ಕೆಲ ಕಾಲ ಗೊಂದಲ ಉಂಟಾಗಿತ್ತು. ಉತ್ತರ ಪ್ರದೇಶದ ಮೀರತ್‌ನಲ್ಲಿ ವರನಿಗೆ ಹಾಕಿದ್ದ ನೋಟುಗಳ … Continued

ವೀಡಿಯೊ..| ಓಲಾ ಸರ್ವೀಸ್‌ ಕೇಂದ್ರ ಕೊಟ್ಟ ಬಿಲ್‌ ನೋಡಿ ಶೋ ರೂಂ ಮುಂದೆಯೇ ಓಲಾ ಇ-ಸ್ಕೂಟರ್‌ ಅನ್ನು ಸುತ್ತಿಗೆಯಿಂದ ಒಡೆದು ಹಾಕಿದ ಗ್ರಾಹಕ…!

ಕೋಪಗೊಂಡ ಓಲಾ ಎಲೆಕ್ಟ್ರಿಕ್ ಗ್ರಾಹಕರೊಬ್ಬರು ಕಂಪನಿಯ ಶೋರೂಂ ಮುಂದೆಯೇ ಸುತ್ತಿಗೆಯಿಂದ ಬಡಿದು ತನ್ನ ಓಲಾ ಸ್ಕೂಟರ್ ಅನ್ನು ಒಡೆದು ಹಾಕಿದ ಘಟನೆಯ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ವಾಹನವನ್ನು ಖರೀದಿಸಿದ ಕೇವಲ ಒಂದು ತಿಂಗಳ ನಂತರ ಸೇವಾ ಕೇಂದ್ರವು ನೀಡಿದ 90,000 ರೂ.ಗಳ ಬೃಹತ್ ಬಿಲ್‌ ನೋಡಿ ಹತಾಶೆಯಿಂದ ವ್ಯಕ್ತಿಯ ಆಕ್ರೋಶವು ಸ್ಪೋಟಗೊಂಡಿದೆ ಎಂದು … Continued

ವೀಡಿಯೊ…| ಚುನಾವಣೆಯಲ್ಲಿ ಗೆಲುವು ; ವಿಜಯೋತ್ಸವದ ವೇಳೆ ಒಮ್ಮೆಗೇ ಹೊತ್ತಿ ಉರಿದ ಬೆಂಕಿ, ಹಲವರಿಗೆ ಗಾಯ

ಬೆಳಗಾವಿ: ಬೆಳಗಾವಿಗೆ ಹೊಂದಿಕೊಂಡಿರುವ ಮಹಾರಾಷ್ಟ್ರದ ಚಂದಗಢ ವಿಧಾನಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದ ಶಿವಾಜಿ ಪಾಟೀಲ ಅವರ ವಿಜಯೋತ್ಸವದ ವೇಳೆ ಅವಘಡ ಸಂಭವಿಸಿದೆ. ಅವಘಡದಲ್ಲಿ ಮೆರವಣಿಗೆಯಲ್ಲಿದ್ದ ಕೆಲ ಮಹಿಳೆಯರಿಗೂ ಗಾಯಗಳಾಗಿವೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಘಟನೆಯ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಕರ್ನಾಟಕದ ಗಡಿಭಾಗವಾದ ಮಹಾರಾಷ್ಟ್ರದ ಚಂದಗಢ ವಿಧಾನಸಭಾ ಕ್ಷೇತ್ರದಿಂದ ಜಯಗಳಿಸಿದ್ದ … Continued