ವಿಡಿಯೋ | ಅಮೆರಿಕದ 2 ಯುದ್ಧ ವಿಮಾನ, ಹೆಲಿಕಾಪ್ಟರ್‌ ಹೊಡೆದುರುಳಿಸಿದ ಇರಾನ್‌ ; 2 ಪೈಲಟ್‌ಗಳ ರಕ್ಷಣೆ, ಒಬ್ಬ ನಾಪತ್ತೆ

ನವದೆಹಲಿ: ಇರಾನ್ ಮತ್ತು ಅಮೆರಿಕ-ಇಸ್ರೇಲ್ ನಡುವಿನ ಯುದ್ಧ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಶುಕ್ರವಾರ ಇರಾನ್ ಪಡೆಗಳು ಅಮೆರಿಕದ ಎರಡು ಅತ್ಯಾಧುನಿಕ ಯುದ್ಧ ವಿಮಾನಗಳನ್ನು ಹೊಡೆದುರುಳಿಸಿವೆ. ಈ ಘಟನೆಯಲ್ಲಿ ಇಬ್ಬರು ಪೈಲಟ್‌ಗಳನ್ನು ರಕ್ಷಿಸಲಾಗಿದ್ದು, ಓರ್ವ ಪೈಲಟ್ ನಾಪತ್ತೆಯಾಗಿದ್ದಾನೆ. ನಾಪತ್ತೆಯಾದ ಪೈಲಟ್‌ಗಾಗಿ ಇರಾನ್ ಮತ್ತು ಅಮೆರಿಕದ ಪಡೆಗಳ ನಡುವೆ ತೀವ್ರ ಶೋಧ ಕಾರ್ಯ ಮತ್ತು ಪೈಪೋಟಿ ಆರಂಭವಾಗಿದೆ. ಸುಮಾರು … Continued

ವಿಡಿಯೋ | ಬೆಚ್ಚಿಬೀಳಿಸುವ ದೃಶ್ಯ : ಬೈಕ್ ಸವಾರನ ಮೇಲೆ ಹಸುವಿನ ಭೀಕರ ದಾಳಿ ; ಜನ ದೊಣ್ಣೆಯಿಂದ ಹೊಡೆದ್ರೂ ಬಿಡದ ಆಕಳು

ರಾಜಕೋಟ : ಆಕಳೊಂದು ದ್ವಿಚಕ್ರ ವಾಹನ ಸವಾರನ ಮೇಲೆ ಭೀಕರವಾಗಿ ದಾಳಿ ಮಾಡಿರುವ ಘಟನೆ ಗುಜರಾತ್‌ನ ರಾಜ್‌ಕೋಟ್ ಜಿಲ್ಲೆಯ ಕೊಟ್ಡಾ ಸಂಗನಿ ತಾಲೂಕಿನ ವೇರಾವಲ್‌ ಗ್ರಾಮದಲ್ಲಿ ನಡೆದಿದೆ. ಸ್ಥಳೀಯರ ಸಮಯಪ್ರಜ್ಞೆಯಿಂದಾಗಿ ವ್ಯಕ್ತಿಯ ಪ್ರಾಣ ಉಳಿದಿದೆಯಾದರೂ, ವ್ಯಕ್ತಿ ತೀವ್ರವಾಗಿ ಗಾಯಗೊಂಡಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿರುವ ದೃಶ್ಯಗಳ ಪ್ರಕಾರ, ವ್ಯಕ್ತಿಯೊಬ್ಬರು ರಸ್ತೆಯಲ್ಲಿ ದ್ವಿಚಕ್ರ ವಾಹನ ಚಲಾಯಿಸಿಕೊಂಡು … Continued

ವಿಡಿಯೋ | ಪತ್ನಿಯಿಂದ ವಿಚ್ಛೇದನ ಸಿಕ್ಕಿದ್ದಕ್ಕೆ 9 ಕಿಮೀ ‘ಸಾಷ್ಟಾಂಗ ನಮಸ್ಕಾರ’ ಹಾಕಿ ವಿಚಿತ್ರ ಹರಕೆ ತೀರಿಸಿದ ಪತಿ…!

ಬಸ್ತಿ (ಉತ್ತರ ಪ್ರದೇಶ): ಸಾಮಾನ್ಯವಾಗಿ ಜನರು ಮದುವೆಯಾಗಲೆಂದೋ ಅಥವಾ ದಾಂಪತ್ಯ ಜೀವನ ಸುಖವಾಗಿರಲೆಂದೋ ದೇವರಿಗೆ ವಿಶೇಷ ಹರಕೆಗಳನ್ನು ಹೊರುತ್ತಾರೆ. ಆದರೆ ಇಲ್ಲೊಬ್ಬ ವ್ಯಕ್ತಿ ತನ್ನ ವಿಚ್ಛೇದನ ಸಿಕ್ಕು ತನ್ನ ದಾಂಪತ್ಯ ಜೀವನ ಅಂತ್ಯಗೊಂಡಿದ್ದಕ್ಕಾಗಿ ಬರೋಬ್ಬರಿ 9 ಕಿಲೋಮೀಟರ್ ದಂಡಾವತ್ ನಮಸ್ಕಾರ (ಸಾಷ್ಟಾಂಗ ನಮಸ್ಕಾರ) ಹಾಕುವ ಮೂಲಕ ವಿಚಿತ್ರ ಹರಕೆ ತೀರಿಸಿದ್ದಾರೆ…! ಉತ್ತರ ಪ್ರದೇಶದ ಬಸ್ತಿ ಜಿಲ್ಲೆಯ … Continued

ವೀಡಿಯೊ | ಹಾವೇರಿ : ಬಸ್‌ ನಿಲ್ದಾಣದ ಪ್ಲಾಟ್​ಫಾರ್ಮಿಗೆ ನುಗ್ಗಿದ ಬಸ್‌ ; ಮಗು ಸಾವು, ನಾಲ್ವರಿಗೆ ಗಾಯ

ಹಾವೇರಿ: ಹಾವೇರಿ: ನಗರದ ಕೇಂದ್ರ ಬಸ್ ನಿಲ್ದಾಣದಲ್ಲಿ ಕಾರಿಡಾರ್‌ಗೆ ನುಗ್ಗಿ ಬಸ್ ಡಿಕ್ಕಿ ಹೊಡೆದಿದ್ದರಿಂದ ತೀವ್ರವಾಗಿ ಗಾಯಗೊಂಡ ಎರಡೂ ವರ್ಷದ ಮಗು ಮೃತಪಟ್ಟ ದುರ್ಘಟನೆ ನಡೆದಿದೆ ಎಂದು ವರದಿಯಾಗಿದೆ. ಈ ದುರ್ಘಟನೆಯಲ್ಲಿ ಇನ್ನೂ ನಾಲ್ವರು ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಹಾವೇರಿ-ಲಕ್ಷ್ಮೇಶ್ವರ ಬಸ್‌ ಅತಿವೇಗದಲ್ಲಿ ಬಸ್ ನಿಲ್ದಾಣಕ್ಕೆ ನುಗ್ಗಿ, ಪ್ಲಾಟ್‌ ಫಾರ್ಮ್‌ಗೆ ನುಗ್ಗಿ ಮುಂದೆ … Continued

ವಿಡಿಯೋ : ಚನ್ನಪಟ್ಟಣ : ವೃದ್ಧೆ ಮೃತದೇಹದ ಮೇಲೆ ಮಲಗಿ ದುಃಖಿಸಿದ ಮಂಗ ; ಅಲ್ಲಿದ್ದವರ ಕಣ್ಣಲ್ಲಿ ನೀರು

ರಾಮನಗರ : ತನ್ನನ್ನು ಪ್ರೀತಿಯಿಂದ ಸಲಹುತ್ತಿದ್ದ ವೃದ್ಧೆಯೊಬ್ಬರ ಅಗಲಿಕೆಗೆ ಮಂಗವೊಂದು ಮರುಗಿದ ರೀತಿಗೆ ಗ್ರಾಮಸ್ಥರು ಕಣ್ಣಿರಾಗಿದ್ದಾರೆ. ತನಗೆ ಪ್ರತಿದಿನ ಹಣ್ಣುಹಂಪಲು ನೀಡುತ್ತಿದ್ದ ವೃದ್ಧೆಯೊಬ್ಬರ ಸಾವಿಗೆ ಮಂಗ ದುಃಖಿಸಿದೆ. ಹಾಗೂ ತನ್ನ ಸಲಹುತ್ತಿದ್ದ ಅಜ್ಜಿಯ ಮೃತದೇಹದ ಮೇಲೆ ಮಲಗಿ ದುಃಖಿಸಿದ ಅಸಾಮಾನ್ಯ ಘಟನೆ ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ಬಿ.ವಿ.ಹಳ್ಳಿ ಎಂಬ ಗ್ರಾಮದಲ್ಲಿ ನಡೆದಿದೆ ಎಂದು ವರದಿಯಾಗಿದೆ. … Continued

ಇರಾಕಿನ ಬಾಗ್ದಾದಿನಲ್ಲಿ ಅಮೆರಿಕದ ಪ್ರಶಸ್ತಿ ಪುರಸ್ಕೃತ ಪತ್ರಕರ್ತೆಯ ಅಪಹರಣ: ದೃಶ್ಯ ಸಿಸಿಟಿವಿಯಲ್ಲಿ ಸೆರೆ

ಬಾಗ್ದಾದ್: ಇರಾಕ್ ರಾಜಧಾನಿ ಬಾಗ್ದಾದ್‌ನಲ್ಲಿ ಅಮೆರಿಕದ ಖ್ಯಾತ ಸ್ವತಂತ್ರ ಪತ್ರಕರ್ತೆ ಶೆಲ್ಲಿ ಕಿಟಲ್ಸನ್ (Shelly Kittleson) ಅವರನ್ನು ಸಶಸ್ತ್ರ ದುಷ್ಕರ್ಮಿಗಳು ಹಾಡುಹಗಲೇ ಅಪಹರಿಸಿದ್ದಾರೆ. ಈ ಘಟನೆಯನ್ನು ಇರಾಕ್‌ನ ಆಂತರಿಕ ಸಚಿವಾಲಯ ಖಚಿತಪಡಿಸಿದ್ದು, ದೇಶಾದ್ಯಂತ ಬಿಗಿ ಭದ್ರತೆ ಹಾಗೂ ಶೋಧ ಕಾರ್ಯಾಚರಣೆ ಆರಂಭಿಸಲಾಗಿದೆ. ಬಾಗ್ದಾದ್‌ನ ಜನನಿಬಿಡ ರಸ್ತೆಯಲ್ಲಿ ಶೆಲ್ಲಿ ಅವರು ಪ್ರಯಾಣಿಸುತ್ತಿದ್ದ ವಾಹನವನ್ನು ಅಡ್ಡಗಟ್ಟಿದ ಶಸ್ತ್ರಸಜ್ಜಿತ ವ್ಯಕ್ತಿಗಳು, … Continued

ಮೈ ಜುಂ ಎನ್ನುವ ವೀಡಿಯೊ | ಆಗಸದಲ್ಲಿ ಅಮೆರಿಕನ್ ಏರ್‌ಲೈನ್ಸ್ ವಿಮಾನ-ಸೇನಾ ಹೆಲಿಕಾಪ್ಟರ್ ಡಿಕ್ಕಿಯ ಭೀಕರ ದೃಶ್ಯ ವೈರಲ್‌

ವಾಷಿಂಗ್ಟನ್: ಕಳೆದ ವರ್ಷ ಅಮೆರಿಕದ ವಾಷಿಂಗ್ಟನ್‌ನ ರೋನಾಲ್ಡ್ ರೇಗನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪ ಸಂಭವಿಸಿದ ಭೀಕರ ವಿಮಾನ ಅಪಘಾತದ ಮೈಮನ ಜುಂ ಎನಿಸುವ ದೃಶ್ಯಗಳು ಈಗ ಬಿಡುಗಡೆಯಾಗಿವೆ. ಅಮೆರಿಕನ್ ಏರ್‌ಲೈನ್ಸ್‌ನ ಪ್ರಯಾಣಿಕರ ವಿಮಾನ ಮತ್ತು ಅಮೆರಿಕ ಭೂಸೇನೆಯ ಬ್ಲ್ಯಾಕ್ ಹಾಕ್ ಹೆಲಿಕಾಪ್ಟರ್ ನಡು ಆಕಾಶದಲ್ಲೇ ಪರಸ್ಪರ ಡಿಕ್ಕಿ ಹೊಡೆದ ಕ್ಷಣದ ವಿಡಿಯೋ ಇದೀಗ ಜಗತ್ತಿನಾದ್ಯಂತ … Continued

ವೀಡಿಯೊ | ನೆಲದಿಂದ ಕೆಲವೇ ಇಂಚುಗಳ ಎತ್ತರದಲ್ಲಿ ನಿಯಂತ್ರಣ ತಪ್ಪಿ ಅಪ್ಪಳಿಸಿದ ಹೆಲಿಕಾಪ್ಟರ್‌

ಕಠ್ಮಂಡು: ನೇಪಾಳದ ರಾಜಧಾನಿ ಕಠ್ಮಂಡುವಿನಿಂದ ಖೋಟಾಂಗ್ ಜಿಲ್ಲೆಗೆ ಶವವೊಂದನ್ನು ಹೊತ್ತು ಸಾಗುತ್ತಿದ್ದ ಏರ್ ಡೈನಾಸ್ಟಿ ಸಂಸ್ಥೆಯ ಹೆಲಿಕಾಪ್ಟರ್ ಬುಧವಾರ ಇಳಿಯುವ ಸಂದರ್ಭದಲ್ಲಿ ಅಪಘಾತಕ್ಕೀಡಾಗಿದೆ. ಖೋಟಾಂಗ್ ಜಿಲ್ಲೆಯ ಬಾಲಬೇಸಿ ಎಂಬಲ್ಲಿನ ಕೃಷಿ ಭೂಮಿಯಲ್ಲಿ ಈ ಘಟನೆ ನಡೆದಿದೆ. ಸ್ಥಳೀಯ ಕಾಲಮಾನ ಸುಮಾರು ಬೆಳಿಗ್ಗೆ 11:51 ಕ್ಕೆ ಈ ಅಪಘಾತ ಸಂಭವಿಸಿದ್ದು, ಈ ವೇಳೆ ಹೆಲಿಕಾಪ್ಟರ್‌ನಲ್ಲಿ ಐವರು ಪ್ರಯಾಣಿಕರಿದ್ದರು. … Continued

ವೀಡಿಯೊ | ರೀಲ್ಸ್‌ ಹುಚ್ಚಿಗೆ ಬಿದ್ದು ತಂದೆಯನ್ನೇ ಮೂಟೆಕಟ್ಟಿ ‘ಕೊರಿಯರ್’ ಮಾಡಲು ಹೋದ ಬೆಂಗಳೂರು ಮಹಿಳೆ : ಮುಂದಾಗಿದ್ದು..?

ಬೆಂಗಳೂರು: ಸಾಮಾಜಿಕ ಜಾಲತಾಣಗಳಲ್ಲಿ ‘ವೈರಲ್’ ಆಗುವ ಹಪಾಹಪಿಗೆ ಬಿದ್ದ ಕುಟುಂಬವೊಂದು, ವಯಸ್ಸಾದ ವ್ಯಕ್ತಿಯನ್ನೇ ಪಾರ್ಸೆಲ್ ಬಾಕ್ಸ್‌ನಲ್ಲಿ ತುರುಕಿ ಕೊರಿಯರ್ ಮಾಡಲು ಯತ್ನಿಸಿದ ಆಘಾತಕಾರಿ ಘಟನೆ ಬೆಂಗಳೂರಿನಲ್ಲಿ ನಡೆದಿದೆ ಎಂದು ವರದಿಯಾಗಿದೆ. ಬೆಂಗಳೂರಿನ ವೈಯಾಲಿಕಾವಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ಬೆಳಕಿಗೆ ಬಂದಿದೆ. ಕಳೆದ ಮಂಗಳವಾರ (ಮಾರ್ಚ್‌ ೧೭) ಮಹಿಳೆ, ಆಕೆಯ ಪತಿ, ಅತ್ತೆ ಮತ್ತು … Continued

ವೀಡಿಯೊ…| ಬೇಜವಾಬ್ದಾರಿಯ ಪರಮಾವಧಿ : ಮಗುವನ್ನು ಸ್ಕೂಟರ್ ಡಿಕ್ಕಿಯಲ್ಲಿ ಮಲಗಿಸಿ ಲಾಕ್‌ ಮಾಡಿ ಗಾಡಿ ಓಡಿಸಿದ ಮಹಿಳೆ…!

ಮಹಿಳೆಯೊಬ್ಬರು ತನ್ನ ಮಗುವನ್ನು ಸ್ಕೂಟರ್‌ನ ಸೀಟ್ ಕೆಳಗಿನ ಸ್ಟೋರೇಜ್ ಕಂಪಾರ್ಟ್‌ಮೆಂಟ್ (ಡಿಕ್ಕಿ) ಒಳಗೆ ಮಲಗಿಸಿ, ಗಾಡಿ ಚಲಾಯಿಸಿಕೊಂಡು ಹೋಗುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದೆ. ಈ ದೃಶ್ಯವನ್ನು ಕಂಡ ಹಲವರು ಮಹಿಳೆಯ ನಡೆಯನ್ನು ಖಂಡಿಸಿದ್ದಾರೆ. ವೈರಲ್ ಆಗಿರುವ ಈ ಕ್ಲಿಪ್‌ನಲ್ಲಿ, ಮಹಿಳೆಯೊಬ್ಬರು ಮನೆಯ ಪ್ರವೇಶ ದ್ವಾರದ ಬಳಿ ನಿಂತಿರುವುದು ಕಂಡುಬರುತ್ತದೆ. ಅವರ ಕೈಯಲ್ಲಿ … Continued