ವೀಡಿಯೊ | ಈ ಹಸುವಿನ ಜಾಣ್ಮೆ ನೋಡಿ..: ಸಾಧನ ಬಳಸಿ ತನ್ನ ಮೈ ತುರಿಸಿಕೊಳ್ಳುವ ವಿಶ್ವದ ಮೊದಲ ಗೋವು-ವೀಕ್ಷಿಸಿ

ವಿಯೆನ್ನಾ: ಪ್ರಾಣಿ ಸಾಮ್ರಾಜ್ಯದಲ್ಲಿ ಮನುಷ್ಯನಿಗೆ ಅತ್ಯಂತ ಹತ್ತಿರವಾದ ಮತ್ತು ಸಾಧು ಪ್ರಾಣಿಯೆಂದು ಕರೆಸಿಕೊಳ್ಳುವ ಹಸುಗಳು, ಕೇವಲ ಹಾಲು ನೀಡುವುದಕ್ಕಷ್ಟೇ ಸೀಮಿತವಲ್ಲ, ಅವುಗಳ ಬುದ್ಧಿವಂತಿಕೆ ಅಸಾಧಾರಣವಾದುದು ಎಂಬುದನ್ನು ಆಸ್ಟ್ರಿಯಾದ ‘ವೆರೋನಿಕಾ’ ಎಂಬ ಹಸು ಸಾಬೀತುಪಡಿಸಿದೆ. ಕಡ್ಡಿ, ಕುಂಟೆ ಮತ್ತು ಪೊರಕೆಗಳನ್ನು ಬಳಸಿ ತನ್ನ ಮೈ ತಾನೇ ತುರುಸಿಕೊಳ್ಳುವ ಅಥವಾ ಪರಚಿಕೊಳ್ಳುವ ವೆರೋನಿಕಾ ಹಸುವಿನ ವಿಡಿಯೋ ಈಗ ಸಾಮಾಜಿಕ … Continued

ಮಾಘ ಮೇಳ : 40 ವರ್ಷದಿಂದ ಮುಳ್ಳಿನ ಹಾಸಿಗೆ ಮೇಲೆ ಮಲಗುತ್ತಿರುವ ‘ಕಾಂಟೇ ವಾಲೆ ಬಾಬಾ’ ವೀಡಿಯೊ ವೈರಲ್

 ಪ್ರಯಾಗರಾಜ್: ಉತ್ತರ ಪ್ರದೇಶದ ಪ್ರಯಾಗರಾಜ್‌ನಲ್ಲಿ ನಡೆಯುತ್ತಿರುವ ಪವಿತ್ರ ಮಾಘ ಮೇಳಕ್ಕೆ ಭಕ್ತ ಸಾಗರವೇ ಹರಿದು ಬರುತ್ತಿದೆ. ಗಂಗಾ, ಯಮುನಾ ಮತ್ತು ಸರಸ್ವತಿ ನದಿಗಳ ಸಂಗಮದಲ್ಲಿ ಪುಣ್ಯಸ್ನಾನ ಮಾಡಲು ದಿನನಿತ್ಯ ಲಕ್ಷಾಂತರ ಜನರು ಆಗಮಿಸುತ್ತಿದ್ದಾರೆ. 2025ರ ಮಹಾಕುಂಭದಂತೆಯೇ ಈ ವರ್ಷವೂ ಜನಜಂಗುಳಿ ಕಂಡುಬರುತ್ತಿದೆ. ಈ ನಡುವೆ, ಮೇಳದಲ್ಲಿರುವ ಒಬ್ಬರು ಎಲ್ಲರ ಗಮನ ಸೆಳೆಯುತ್ತಿದ್ದಾರೆ. ಅವರೇ ‘ಕಾಂಟೇ ವಾಲೆ … Continued

ಡಿಜಿಪಿ ರಾಮಚಂದ್ರ ರಾವ್ ವೈರಲ್‌ ವೀಡಿಯೊ; ವರದಿ ನೀಡುವಂತೆ ಗೃಹ ಇಲಾಖೆಗೆ ಸಿಎಂ ಸಿದ್ದರಾಮಯ್ಯ ಸೂಚನೆ

ಬೆಳಗಾವಿ: ಹಿರಿಯ ಐಪಿಎಸ್ ಅಧಿಕಾರಿ, ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ಡಿಜಿಪಿ ರಾಮಚಂದ್ರ ರಾವ್‌ ಅವರು ಕಚೇರಿಯಲ್ಲೇ ಮಹಿಳೆಯೊಂದಿಗೆ ಸರಸವಾಡಿದ್ದಾರೆ  ಎಂಬ ಆರೋಪಿತ ವೀಡಿಯೊ ವೈರಲ್​​ ಆಗಿದ್ದು, ಈ ಕುರಿತು ವರದಿ ನೀಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ  ಸೋಮವಾರ ಗೃಹ ಇಲಾಖೆಗೆ ಸೂಚನೆ ನೀಡಿದ್ದಾರೆ. ಹಿರಿಯ ಪೊಲೀಸ್‌ ಅಧಿಕಾರಿ ಸಮವಸ್ತ್ರದಲ್ಲಿರುವಾಗಲೇ ತಮ್ಮ ಕಚೇರಿಯ ಒಳಗಡೆ ಮಹಿಳೆಯನ್ನು ತಬ್ಬಿಕೊಂಡಿರುವ … Continued

ವೀಡಿಯೊ…| ಭೀಕರ ಕೃತ್ಯ : ಸ್ವಿಗ್ಗಿ ಡೆಲಿವರಿ ಬಾಯ್ ಮೇಲೆ ಪದೇ ಪದೇ ವಾಹನ ಹರಿಸಿದ ವೈದ್ಯ…!

ಗುರುಗ್ರಾಮ: ಕ್ಷುಲ್ಲಕ ಕಾರಣಕ್ಕೆ ಸರ್ಕಾರಿ ವೈದ್ಯರೊಬ್ಬರು ಅಮಲೇರಿದ ಸ್ಥಿತಿಯಲ್ಲಿ ಸ್ವಿಗ್ಗಿ ಡೆಲಿವರಿ ಏಜೆಂಟ್ ಅವರಿಗೆ ತನ್ನ ಎಸ್‌ಯುವಿ ಕಾರನ್ನು ಪದೇ ಪದೇ ಡಿಕ್ಕಿ ಹೊಡೆಸಿದ ಭೀಕರ ಘಟನೆ ಹರ್ಯಾಣದ ಗುರುಗ್ರಾಮದಲ್ಲಿ ನಡೆದಿದೆ. ಘಟನೆಯಲ್ಲಿ ಟಿಂಕು ಪನ್ವಾರ್ ಎಂಬ ಯುವಕ ತೀವ್ರವಾಗಿ ಗಾಯಗೊಂಡಿದ್ದು, ಸದ್ಯ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಹಯಾತಪುರದ ಸೆಕ್ಟರ್ 93ರಲ್ಲಿರುವ ಸ್ವಿಗ್ಗಿ ವೇರ್‌ಹೌಸ್ … Continued

ಕಚೇರಿಯಲ್ಲೇ ಉನ್ನತ ಪೊಲೀಸ್‌ ಅಧಿಕಾರಿ ಸರಸದ ವೀಡಿಯೊ ವೈರಲ್‌ ;ಆರೋಪ ಅಲ್ಲಗಳೆದ ಡಿಜಿಪಿ

ಬೆಂಗಳೂರು: ಕಚೇರಿಯಲ್ಲಿರುವಾಗಲೇ ಕರ್ನಾಟಕ ಪೊಲೀಸ್ ಅಧಿಕಾರಿಯೊಬ್ಬರು ಮಹಿಳೆ ಜೊತೆ ಸರಸವಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಡಿಜಿಪಿ ರಾಮಚಂದ್ರ ರಾವ್‌ (DGP Ramachandra Rao) ಅವರು ಮಹಿಳೆ ಜೊತೆ ಕಚೇರಿಯಲ್ಲೇ ಮಹಿಳೆಯರೊಂದಿಗೆ ಸರಸವಾಡಿದ್ದು ಎನ್ನಲಾದ ವೀಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಇದಕ್ಕೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ರಾಮಚಂದ್ರರಾವ್ ಸದ್ಯ ಡಿಸಿಆರ್ ಇ ಡಿಜಿಪಿಯಾಗಿದ್ದು … Continued

ಎಂಜಿನಿಯರಿಂಗ್ ಅದ್ಭುತ : 600 ಮೀ. ಆಳದ ಪ್ರಪಾತದ ಅಂಚಿನಲ್ಲಿ ನಿರ್ಮಿಸಿದ ‘ಕತ್ತಿಯ ಅಲಗಿನಂತಹ’ ರಸ್ತೆ | ವೀಡಿಯೊ ವೀಕ್ಷಿಸಿ

ರಾತ್ರೋರಾತ್ರಿ ಆಸ್ಪತ್ರೆಗಳನ್ನು ನಿರ್ಮಿಸುವುದರಿಂದ ಹಿಡಿದು, ಕಡಿದಾದ ಪರ್ವತ ಶ್ರೇಣಿಗಳ ಮೇಲೆ ರಸ್ತೆಗಳನ್ನು ನಿರ್ಮಿಸುವವರೆಗೆ ಚೀನಾ ತನ್ನ ಎಂಜಿನಿಯರಿಂಗ್ ಸಾಧನೆಗಳಿಂದ ಜಗತ್ತನ್ನು ಸದಾ ಬೆರಗುಗೊಳಿಸುತ್ತದೆ. ಇದಕ್ಕೆ ಜ್ವಲಂತ ಉದಾಹರಣೆ, ಚೀನಾದ ಚಾಂಗ್‌ಕಿಂಗ್ ಪ್ರಾಂತ್ಯದ ಶಿಝು ಎಂಬಲ್ಲಿರುವ ‘ದಾವೋಬೈಲಿಯಾಂಗ್’ (Daobeiliang) ಸ್ಕೈ ರೋಡ್. ಚೀನೀ ಎಂಜಿನಿಯರ್‌ಗಳ ಕೌಶಲ ಮತ್ತು ನಿಖರತೆಗೆ ಈ ರಸ್ತೆ ಒಂದು ಜೀವಂತ ಸಾಕ್ಷಿಯಾಗಿದೆ. ‘ದಾವೋಬೈಲಿಯಾಂಗ್’ … Continued

ಅಮೆಜಾನ್ ಕಾಡಿನ ‘ಅಪರೂಪದ ಅತಿಥಿಗಳು’: ಮೊದಲ ಬಾರಿಗೆ ಕ್ಯಾಮೆರಾದಲ್ಲಿ ಸೆರೆಯಾದ ಹೊರಜಗತ್ತಿಗೆ ತಿಳಿಯದ ಬುಡಕಟ್ಟು ಸಮುದಾಯ !

ಬ್ರೆಜಿಲ್: ಅಮೆಜಾನ್ ಮಳೆಕಾಡಿನ ಮಧ್ಯದಲ್ಲಿ ವಾಸಿಸುವ, ಹೊರಜಗತ್ತಿನ ಯಾವುದೇ ಸಂಪರ್ಕವಿಲ್ಲದ ಬುಡಕಟ್ಟು ಜನಾಂಗದ ಅತ್ಯಂತ ಸ್ಪಷ್ಟ ಮತ್ತು ರೋಚಕ ದೃಶ್ಯಗಳು ಈಗ ಜಗತ್ತಿನ ಮುಂದೆ ಬಂದಿವೆ. ಖ್ಯಾತ ಪರಿಸರವಾದಿ ಮತ್ತು ಲೇಖಕ ಪಾಲ್ ರೊಸೊಲಿ (Paul Rosolie) ಅವರು ಈ ಹಿಂದೆ ಎಂದೂ ನೋಡಿರದ ಈ ಅಪರೂಪದ ವೀಡಿಯೊವನ್ನು ಇತ್ತೀಚೆಗೆ ಬಿಡುಗಡೆ ಮಾಡಿದ್ದಾರೆ. ಪೋಡ್‌ಕಾಸ್ಟರ್ ಲೆಕ್ಸ್ … Continued

ಇದು ಪವಾಡವೇ…? : ಹನುಮಂತನ ಮೂರ್ತಿಗೆ 36 ತಾಸುಗಳ ಕಾಲ ಪ್ರದಕ್ಷಿಣೆ ಹಾಕಿದ ನಾಯಿ ; ವೀಡಿಯೊ ವೈರಲ್‌…!

ಬಿಜ್ನೋರ್ : ನಂಬಿಕೆ ಮತ್ತು ವಿಜ್ಞಾನದ ನಡುವಿನ ಚರ್ಚೆಗೆ ವೇದಿಕೆಯೊದಗಿಸುವ ವಿಚಿತ್ರ ಘಟನೆಯೊಂದು ಉತ್ತರ ಪ್ರದೇಶದ ಬಿಜ್ನೋರ್ ಜಿಲ್ಲೆಯ ನಗಿನಾ ಎಂಬಲ್ಲಿ ನಡೆದಿದೆ. ಇಲ್ಲಿನ ಹನುಮಂತನ ಮೂರ್ತಿಯೊಂದರ ಸುತ್ತ ನಾಯಿಯೊಂದು ಸತತ 36 ಗಂಟೆಗಳ ಕಾಲ ಪ್ರದಕ್ಷಿಣೆ ಹಾಕಿದ್ದು, ಇದರ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ. ಸ್ಥಳೀಯರ ಪ್ರಕಾರ, ಈ ನಾಯಿಯು ದಣಿವಿಲ್ಲದೆ … Continued

ವೀಡಿಯೊ | ಶಾಲಾ ಭಾಷಣದಲ್ಲಿ ಪಾಕ್‌ ಸೇನೆ ಜೊತೆಗಿನ ನಂಟನ್ನು ಬಹಿರಂಗವಾಗಿ ಒಪ್ಪಿಕೊಂಡ ಎಲ್‌ಇಟಿ ಉಗ್ರ ಸಂಘಟನೆ ಉಪಮುಖ್ಯಸ್ಥ…!

ಪಾಕಿಸ್ತಾನ ಸೇನೆ ಮತ್ತು ಭಯೋತ್ಪಾದಕ ಸಂಘಟನೆಗಳ ನಡುವಿನ ಅಪವಿತ್ರ ಸಂಬಂಧವನ್ನು ಲಷ್ಕರ್-ಎ-ತೈಬಾ (LeT) ಉಪ ಮುಖ್ಯಸ್ಥ ಹಾಗೂ ಪಹಲ್ಗಾಮ್ ಉಗ್ರರ ದಾಳಿಯ ಸಂಚುಕೋರ ಸೈಫುಲ್ಲಾ ಕಸೂರಿ ಬಹಿರಂಗವಾಗಿ ಒಪ್ಪಿಕೊಂಡಿದ್ದಾನೆ. ಈ ಮೂಲಕ ಪಾಕ್ ಸೇನೆಯು ಭಯೋತ್ಪಾದಕರಿಗೆ ಬೆಂಬಲ ನೀಡುತ್ತಿದೆ ಎಂಬ ಭಾರತದ ದಶಕಗಳ ಕಾಲದ ಆರೋಪಕ್ಕೆ ಪುರಾವೆ ಸಿಕ್ಕಂತಾಗಿದೆ. ಪಾಕಿಸ್ತಾನದ ಶಾಲೆಯೊಂದರಲ್ಲಿ ಮಕ್ಕಳನ್ನು ಉದ್ದೇಶಿಸಿ ಮಾತನಾಡಿದ … Continued

‘ಡ್ಯಾಡಿ ಈಸ್ ಬ್ಯಾಕ್’: ಸಿದ್ದರಾಮಯ್ಯ, ಡಿಕೆಶಿ, ಎಚ್.ಡಿ. ಕುಮಾರಸ್ವಾಮಿಯ ಎಐ ವೀಡಿಯೊ ವೈರಲ್…!

ಬೆಂಗಳೂರು: ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿರುವ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರ ಕೃತಕ ಬುದ್ಧಿಮತ್ತೆ (AI) ಸೃಜಿತ ವೀಡಿಯೊವೊಂದು ಈಗ ರಾಜ್ಯ ರಾಜಕಾರಣದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರ ಎಐ ಅವತಾರಗಳನ್ನು ಒಳಗೊಂಡ ಈ ವೀಡಿಯೊ ಸದ್ಯ ಇಂಟರ್ನೆಟ್‌ನಲ್ಲಿ ಸಖತ್ ಸದ್ದು ಮಾಡುತ್ತಿದೆ. ಟ್ವಿಟರ್‌ನಲ್ಲಿ (X) ಫ್ಯಾನ್‌ … Continued