ಅಪರೂಪದಲ್ಲಿ ಅಪರೂಪದ ಘಟನೆ…ತನ್ನ ಮರಿ ರಕ್ಷಿಸಲು ದೊಡ್ಡ ಹಾವಿನ ಜೊತೆಯೇ ಹೋರಾಡಿ ಗೆಲುವು ಸಾಧಿಸಿದ ಇಲಿ | ವೀಕ್ಷಿಸಿ

ಅಪಾಯಕಾರಿ ಹಾವನ್ನೇ ಇಲಿ ಸೋಲಿಸುವುದೆಂದರೆ….! ಅದನ್ನು ನಂಬುವುದೇ ಕಷ್ಟ. ಆದರೆ ನಂಬಲೇಬೇಕಾದ ಘಟನೆಯೊಂದು ವೈರಲ್‌ ಆಗಿದೆ. ತನ್ನ ಮರಿಯನ್ನು ರಕ್ಷಿಸಿಕೊಳ್ಳಲು ದೊಡ್ಡ ಹಾವಿನ ಮೇಲೆ ಇಲಿಯೊಂದು ದಾಳಿ ಮಾಡಿ ಹಾವಿನ ಬಾಯಲ್ಲಿದ್ದ ತನ್ನ ಮರಿಯನ್ನು ರಕ್ಷಿಸಿಕೊಳ್ಳುವಲ್ಲಿ ಯಶಸ್ವಿಯಾದ ವೀಡಿಯೊವೊಂದು ಸಾಮಾಜಿ ಜಾಲತಾಣದಲ್ಲಿ ವೈರಲ್‌ ಆಗಿದೆ. ಈ ಇಲಿಯೊಂದು ತನ್ನ ಮರಿಯ ಸಲುವಾಗಿ ಹಾವಿನ ಜೊತೆ ಕಾದಾಟ … Continued

ಉಡುಪಿಯ ಬೀದಿಯಲ್ಲಿ ಹುಲಿವೇಷದವರ ಜೊತೆ ಹೆಜ್ಜೆ ಹಾಕಿ ಗಮನ ಸೆಳೆದ ಪುಟ್ಟ ಬಾಲಕಿ; ಹೃದಯ ಗೆಲ್ಲುವ ಚೂಟಿ ಹುಡುಗಿ | ವೀಕ್ಷಿಸಿ

ಮಕ್ಕಳು ಮತ್ತು ಅವರ ತುಂಟಾಟಗಳನ್ನು ನೋಡಲು ಖುಷಿಯಾಗುತ್ತದೆ. ರಾಜ್ಯದ ಉಡುಪಿಯಲ್ಲಿ ಸಾಂಪ್ರದಾಯಿಕ ನೃತ್ಯದ ಬೀದಿ ಪ್ರದರ್ಶನದ ಸಂದರ್ಭದಲ್ಲಿ ಪುಟ್ಟ ಬಾಲಕಿಯೊಬ್ಬಳು ಪೂರ್ವಸಿದ್ಧತೆಯಿಲ್ಲದ ಹಲಿ ನೃತ್ಯಕ್ಕೆ ಹೆಜ್ಜೆ ಹಾಕುತ್ತಿರುವುದನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡ ವೀಡಿಯೊ ತೋರಿಸುತ್ತದೆ. ಕರಾವಳಿ ಭಾಗದ ದಕ್ಷಿಣ ಕನ್ನಡ, ಉಡುಪಿಯಲ್ಲಿ ಈ ಹುಲಿವೇಷವೆಂಬ ಜನಪದ ನೃತ್ಯ ಬಹಳ ಪ್ರಸಿದ್ಧಿ ಪಡೆದಿದೆ.ವಿಸಿಟ್ ಉಡುಪಿ ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿರುವ … Continued

ಚೀನಾದ ಶಾಂಘೈನಲ್ಲಿ ಲಾಕ್‌ಡೌನ್‌ನಿಂದ ಭದ್ರತಾ ಸಿಬ್ಬಂದಿಯಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿರುವ ಜನಸಮೂಹ | ವೀಕ್ಷಿಸಿ

ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿರುವ ವೀಡಿಯೊವು ಚೀನಾದ ಶಾಂಘೈನಲ್ಲಿರುವ ಐಕಿಯಾ (Ikea) ಅಂಗಡಿಯ ದೃಶ್ಯಗಳನ್ನು ತೋರಿಸುತ್ತದೆ, ಶಾಪರ್‌ಗಳು ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ ಮತ್ತು ಅಧಿಕಾರಿಗಳು ಅವರನ್ನು ನಿರ್ಬಂಧಿಸಲು ಪ್ರಯತ್ನಿಸುತ್ತಿದ್ದಾರೆ. CNN ಪ್ರಕಾರ, ಕೊವಿಡ್‌-19 ಪ್ರಕರಣದ ನಿಕಟ ಸಂಪರ್ಕವನ್ನು ಸ್ಥಳಕ್ಕೆ ಪತ್ತೆಹಚ್ಚಿದ ನಂತರ ಆರೋಗ್ಯ ಅಧಿಕಾರಿಗಳು ಅಂಗಡಿಯನ್ನು ಲಾಕ್‌ಡೌನ್ ಮಾಡಲು ತೆರಳಿದಾಗ ಶನಿವಾರ ಕ್ಸುಹುಯಿ ಜಿಲ್ಲೆಯಲ್ಲಿ ಈ ಘಟನೆ … Continued

ಪುಟ್ಟ ಹುಡುಗಿಯೊಂದಿಗೆ ಕಣ್ಣಾಮುಚ್ಚಾಲೆ ಆಟ ಆಡುವ ಈ ನಾಯಿ | ವೀಕ್ಷಿಸಿ

ಪುಟ್ಟ ಬಾಲಕಿಯೊಬ್ಬಳು ತನ್ನ ಸಾಕು ನಾಯಿಯೊಂದಿಗೆ ಕಣ್ಣಾಮುಚ್ಚಾಲೆ ಆಡುತ್ತಿರುವ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ನಾಯಿಯು ಆ ಬಾಲಕಿ ನೀಡಿದ ನಿರ್ದೇಶನಗಳನ್ನು ಹೇಗೆ ನಿರ್ವಹಿಸುತ್ತದೆ ಎಂಬುದು ಬೆರಗುಗೊಳಿಸುತ್ತದೆ. ಕಣ್ಣು ಮುಚ್ಚಾಲು ಆಟದಲ್ಲಿ ಪುಟ್ಟ ಹುಡುಗಿ ಅಡಗಿಕೊಳ್ಳುವ ವರೆಗೂ ನಾಯಿ ತನ್ನ ಕಣ್ಣುಗಳನ್ನು ಮುಚ್ಚಿಯೇ ಇರುತ್ತದೆ ಮತ್ತು ನಂತರ ಅವಳನ್ನು ಹುಡುಕಲು ಕೋಣೆಗೆ ಹೋಗುತ್ತದೆ. ಈ … Continued

ಚೀನಾದಲ್ಲಿ ಮಹಿಳೆಯನ್ನು ಕೆಳಗೆ ಬೀಳಿಸಿ ಬಲವಂತದಿಂದ ಕೋವಿಡ್ ಪರೀಕ್ಷೆ ಮಾಡುವ ವೀಡಿಯೊ ವೈರಲ್…ವೀಕ್ಷಿಸಿ

ಚೀನಾದ ಜನರು ಕೊರೊನಾ ವೈರಸ್ಸಿಗಿಂತ ಲಾಕ್‌ಡೌನ್‌ಗಳ ಬಗ್ಗೆ ಹೆಚ್ಚು ಭಯಪಡುತ್ತಿದ್ದಾರೆ. ಶಾಂಘೈ ಮತ್ತು ಇತರ ಸ್ಥಳಗಳಿಂದ ಹೊರಹೊಮ್ಮುತ್ತಿರುವ ಹಲವಾರು ವೀಡಿಯೊಗಳಲ್ಲಿ ಇದು ಕಂಡುಬಂದಿದೆ. ಅಂತಹದ್ದೇ ಒಂದು ವೀಡಿಯೊವೊಂದರಲ್ಲಿ ಮಹಿಳೆಯೊಬ್ಬಳನ್ನು ನೆಲಕ್ಕೆ ಕೆಡವಿ ಕೋವಿಡ್‌ ಪರೀಕ್ಷೆ ಮಾಡುತ್ತಿರುವುದನ್ನು ತೋರಿಸುತ್ತದೆ. ವೀಡಿಯೊ ಪ್ರಾರಂಭವಾಗುತ್ತಿದ್ದಂತೆ, ಮಹಿಳೆಯು ಪರೀಕ್ಷಾ ಕೇಂದ್ರದ ನೆಲದ ಮೇಲೆ ಮಲಗಿರುವಂತೆ ಕಾಣುತ್ತಾಳೆ. ಅವಳು ಕಿರುಚುವ ಮತ್ತು ಬಲವಂತದ … Continued

ತನಗಿಂತ ಹತ್ತಿಪ್ಪತ್ತು ಪಟ್ಟು ದೊಡ್ಡ ಹಾವಿನ ಜೊತೆ ಹೋರಾಡಿ ಜೀವ ಉಳಿಸಿಕೊಂಡ ಪುಟ್ಟ ಕಪ್ಪೆಯ ರೋಚಕ ವೀಡಿಯೋ ನೋಡಿ

ವಿಶ್ವಾಸ, ಧೈರ್ಯ ಹಾಗೂ ಪ್ರಯತ್ನದಿಂದ ಎಂಥ ಸವಾಲನ್ನೂ ಎದುರಿಸಬಹುದು ಎಂಬುದನ್ನು ಪುಟ್ಟ ಕಪ್ಪೆಯೊಂದು ಮಾಡಿ ತೋರಿಸಿದೆ. ಈ ಪುಟ್ಟ ಕಪ್ಪೆ ಮಾರುದ್ದ ಹಾವಿನ ವಿರುದ್ಧ ಸತತ ಹೋರಾಟದ ಫಲವಾಗಿ ಸಾವಿನ ದವಡೆಯಲ್ಲಿದ್ದ ತನ್ನ ಪ್ರಾಣ ಉಳಿಸಿಕೊಂಡಿದೆ. ಆ ವೀಡಿಯೊದಲ್ಲಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ತನಗಿಂತ ಹತ್ತಿಪ್ಪತ್ತು ಪಟ್ಟು ದೊಡ್ಡದಾದ ಮತ್ತು ಬಲಶಾಲಿಯಾದ ಹಾವಿನ ಬಾಯಿಗೆ … Continued

ಮರಿಯೊಂದಿಗೆ ಸೀದಾ ಮದುವೆ ಮಂಟಪಕ್ಕೇ ನುಗ್ಗಿದ ಕರಡಿ..ದೃಶ್ಯ ವಿಡಿಯೊದಲ್ಲಿ ಸೆರೆ

ಕಾಡು ಪ್ರಾಣಿಗಳು ವಸತಿ ಪ್ರದೇಶಗಳಿಗೆ ಬರುವುದು ಈಗ ಸಮಾನ್ಯ ಎಂಬಂತಾಗಿದೆ. ಈಗ ಇಂಥದ್ದೇ ಘಟನೆಯೊಂದರಲ್ಲಿ ಛತ್ತೀಸ್‌ಗಢದ ಕಂಕೇರ್‌ನಲ್ಲಿ ನಡೆದ ಮದುವೆಯ ಆರತಕ್ಷತೆ ಪಾರ್ಟಿಗೆ ಕರಡಿಯೊಂದರ (Bear) ಕುಟುಂಬ ದಿಢೀರ್‌ ಆಗಮಿಸಿದೆ.. ಈ ವಿಡಿಯೊದಲ್ಲಿ ತಾಯಿ ಕರಡಿ ಮತ್ತು ಅದರ ಮರಿ ಮದುವೆ ಮನೆಗೆ ಆಗಮಿಸಿ ವೇದಿಕೆಯ ಮೇಲೆ ಅಡ್ಡಾಡುತ್ತಿರುವುದನ್ನು ವಿಡಿಯೊದಲ್ಲಿ ಕಾಣಬಹುದು. ಕರಡಿ ಮಾಡುವ ಕೆಲಸವೆಂದರೆ … Continued

ಮಾನವೀಯತೆಯೆಂದರೆ ಇದೇ ಅಲ್ಲವೇ…ನೀರಿನ ಕೊಳಕ್ಕೆ ಬಿದ್ದು ಒದ್ದಾಡುತ್ತಿದ್ದ ಕಾಗೆಯ ಪ್ರಾಣ ಉಳಿಸಿದ ದೈತ್ಯ ಕರಡಿ-ವೀಕ್ಷಿಸಿ

ಇತ್ತೀಚಿನ ದಿನಗಳಲ್ಲಿ ಅಪಘಾತ ಮತ್ತಿತರ ಘಟನೆಗಳು ಸಂಭವಿಸಿದಾಗ ಅವರಿಗೆ ಸಹಾಯ ಮಾಡಲು ಹಿಂದುಮುಂದು ನೋಡಿದ ಘಟನೆಗಳು ವರದಿಯಾಗುತ್ತಿವೆ. ಆದರೆ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆದ ವಿಡಿಯೊವೊಂದರಲ್ಲಿ ಕರಡಿಯಿಂದ ಸಾವಿನ ದವಡೆಯಲ್ಲಿದ್ದ ಕಾಗೆಯೊಂದಕ್ಕೆ ಸಹಾಯ ಮಾಡಿ ಅದನ್ನು ಪ್ರಾಣಾಪಾಯದಿಂದ ಪಾರು ಮಾಡಿದೆ..! ಈ ವಿಡಿಯೊದಲ್ಲಿ ಕರಡಿ ತೋರಿದ ವರ್ತನೆಗೆ ಮಾನವೀಯತೆಯ ಮೇಲೆ ನಂಬಿಕೆ ಮೂಡುವುದು ಖಂಡಿತ. @Animal_World … Continued

ನಂಬಲಸಾಧ್ಯ ಸಾಹಸ :ಚಲಿಸುವ ರೈಲಿನಡಿಗೆ ಸಿಲುಕಿದ್ದ ಹುಡುಗಿಯ ರಕ್ಷಣೆ ಮಾಡಿದ ವ್ಯಕ್ತಿಗೆ ಪ್ರಶಂಸೆಗಳ ಮಹಾಪೂರ…ದೃಶ್ಯ ವಿಡಿಯೊದಲ್ಲಿ ಸೆರೆ

ಭೋಪಾಲ: ಮಧ್ಯಪ್ರದೇಶದ ಭೋಪಾಲ್‌ನಲ್ಲಿ ರೈಲ್ವೆ ಹಳಿ ಮೇಲೆ ಬಿದ್ದಿದ್ದ ಯುವತಿಯನ್ನು ರಕ್ಷಿಸಲು 37 ವರ್ಷದ ವ್ಯಕ್ತಿಯೊಬ್ಬರು ಅಸಾಧಾರಣ ಧೈರ್ಯ ತೋರಿ ಚಲಿಸುವ ಗೂಡ್ಸ್ ರೈಲಿನ ಮುಂದೆ ಹಾರಿ ಅವಳನ್ನು ರಕ್ಷಿಸಿದ್ದಾನೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಫೆಬ್ರವರಿ 5 ರಂದು ಈ ಘಟನೆ ನಡೆದಿದ್ದು, ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಎಲ್ಲೆಡೆಯಿಂದ ಪ್ರಶಂಸೆ … Continued

ಕೊಚ್ಚಿ ವಿಮಾನ ನಿಲ್ದಾಣ ರಸ್ತೆ ದಾಟಿದ ಹೆಬ್ಬಾವು…ಅದು ರಸ್ತೆ ದಾಟುವವರೆಗೆ ಸಂಚಾರ ಸ್ಥಗಿತ…ದೃಶ್ಯ ವಿಡಿಯೊದಲ್ಲಿ ಸೆರೆ

ಕೊಚ್ಚಿ: ಕೊಚ್ಚಿಯ ಕಲಮಸ್ಸೆರಿಯ ಜನನಿಬಿಡ ಸೀಪೋರ್ಟ್-ವಿಮಾನ ನಿಲ್ದಾಣ ರಸ್ತೆಯಲ್ಲಿ ಭಾನುವಾರ ರಾತ್ರಿ ಬೃಹತ್ ಹೆಬ್ಬಾವು ಕಾಣಿಸಿಕೊಂಡಿದ್ದು, ಇದರಿಂದ ಸ್ವಲ್ಪ ಸಮಯ ಸಂಚಾರ ಸ್ಥಗಿತಗೊಂಡಿದೆ. ಸುಮಾರು ಎರಡು ಮೀಟರಿಗೂ ಹೆಚ್ಚು ಉದ್ದದ ಇಂಡಿಯನ್ ರಾಕ್ ಹೆಬ್ಬಾವು ರಾತ್ರಿ 11.10ರ ಸುಮಾರಿಗೆ ಕೆಎಸ್‌ಇಬಿ ಕಚೇರಿಯ ಸಮೀಪವಿರುವ ವಾಹನದ ದಟ್ಟಣೆಯ ಪ್ರದೇಶದಲ್ಲಿ ನಿಧಾನವಾಗಿ ಸಾಗಿತು. ನೋಡುಗರು ಮತ್ತು ದಾರಿಹೋಕರು ಹಾವಿನ … Continued