ಟ್ರಂಪ್ ಹತ್ಯೆ ಮಾಡಿದವರಿಗೆ ₹96 ಕೋಟಿ ಬಹುಮಾನ ನೀಡುವುದಾಗಿ ಘೋಷಿಸಿದ ಇರಾನ್ ಬೆಂಬಲಿತ ಇರಾಕಿನ ಬಂಡುಕೋರರ ಗುಂಪು

ಬಾಗ್ದಾದ್/ವಾಷಿಂಗ್ಟನ್ :  ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಹತ್ಯೆ ಮಾಡುವವರಿಗೆ 10 ಮಿಲಿಯನ್ ಅಮೆರಿಕನ್ ಡಾಲರ್ (ಸುಮಾರು ₹96.6 ಕೋಟಿ) ಬಹುಮಾನ ನೀಡುವುದಾಗಿ ಇರಾನ್ ಬೆಂಬಲಿತ ಸಶಸ್ತ್ರ ಹೋರಾಟಗಾರರ ಸಂಘಟನೆಗಳ ಒಕ್ಕೂಟವಾದ ಇಸ್ಲಾಮಿಕ್ ರೆಸಿಸ್ಟೆನ್ಸ್ ಇನ್ ಇರಾಕ್ (Islamic Resistance in Iraq–IRI) ಘೋಷಿಸಿದೆ. 2020ರಲ್ಲಿ ನಡೆದ ಅಮೆರಿಕದ ಡ್ರೋನ್ ದಾಳಿಯಲ್ಲಿ ಇರಾನ್‌ನ ಹಿರಿಯ … Continued

ಇರಾಕಿನ ಬಾಗ್ದಾದಿನಲ್ಲಿ ಅಮೆರಿಕದ ಪ್ರಶಸ್ತಿ ಪುರಸ್ಕೃತ ಪತ್ರಕರ್ತೆಯ ಅಪಹರಣ: ದೃಶ್ಯ ಸಿಸಿಟಿವಿಯಲ್ಲಿ ಸೆರೆ

ಬಾಗ್ದಾದ್: ಇರಾಕ್ ರಾಜಧಾನಿ ಬಾಗ್ದಾದ್‌ನಲ್ಲಿ ಅಮೆರಿಕದ ಖ್ಯಾತ ಸ್ವತಂತ್ರ ಪತ್ರಕರ್ತೆ ಶೆಲ್ಲಿ ಕಿಟಲ್ಸನ್ (Shelly Kittleson) ಅವರನ್ನು ಸಶಸ್ತ್ರ ದುಷ್ಕರ್ಮಿಗಳು ಹಾಡುಹಗಲೇ ಅಪಹರಿಸಿದ್ದಾರೆ. ಈ ಘಟನೆಯನ್ನು ಇರಾಕ್‌ನ ಆಂತರಿಕ ಸಚಿವಾಲಯ ಖಚಿತಪಡಿಸಿದ್ದು, ದೇಶಾದ್ಯಂತ ಬಿಗಿ ಭದ್ರತೆ ಹಾಗೂ ಶೋಧ ಕಾರ್ಯಾಚರಣೆ ಆರಂಭಿಸಲಾಗಿದೆ. ಬಾಗ್ದಾದ್‌ನ ಜನನಿಬಿಡ ರಸ್ತೆಯಲ್ಲಿ ಶೆಲ್ಲಿ ಅವರು ಪ್ರಯಾಣಿಸುತ್ತಿದ್ದ ವಾಹನವನ್ನು ಅಡ್ಡಗಟ್ಟಿದ ಶಸ್ತ್ರಸಜ್ಜಿತ ವ್ಯಕ್ತಿಗಳು, … Continued

2000 ವರ್ಷಗಳ ನಂತರ ಪತ್ತೆಯಾದ ʼಅಲೆಕ್ಸಾಂಡರ್ ದಿ ಗ್ರೇಟ್ʼ ನಿರ್ಮಿಸಿದ್ದ ‘ಕಣ್ಮರೆಯಾಗಿದ್ದ ನಗರ’..!

ಜಗತ್ತನ್ನೇ ಗೆಲ್ಲ ಹೊರಟಿದ್ದ ಗ್ರೀಕ್ ಚಕ್ರವರ್ತಿ ಅಲೆಕ್ಸಾಂಡರ್ ದಿ ಗ್ರೇಟ್ ಸ್ಥಾಪಿಸಿದನೆನ್ನಲಾದ, ಶತಮಾನಗಳಿಂದ ಮಣ್ಣಿನಡಿಯಲ್ಲಿ ಹೂತುಹೋಗಿದ್ದ ಐತಿಹಾಸಿಕ ನಗರವೊಂದನ್ನು ಪುರಾತತ್ವ ಶಾಸ್ತ್ರಜ್ಞರು ಪತ್ತೆಹಚ್ಚಿದ್ದಾರೆ. ದಕ್ಷಿಣ ಇರಾಕ್‌ನ ಟೈಗ್ರಿಸ್ ನದಿಯ ದಡದಲ್ಲಿರುವ ಈ ನಗರವನ್ನು ‘ಅಲೆಕ್ಸಾಂಡ್ರಿಯಾ’ ಎಂದು ಗುರುತಿಸಲಾಗಿದೆ. ಸುಮಾರು ಕ್ರಿ.ಪೂ. 4ನೇ ಶತಮಾನದಲ್ಲಿ ನಿರ್ಮಾಣವಾಗಿದ್ದ ಈ ನಗರವು ಕಾಲಕ್ರಮೇಣ ಇತಿಹಾಸದ ಪುಟಗಳಿಂದ ಮರೆಯಾಗಿತ್ತು. ಕಳೆದ ದಶಕದಿಂದಲೂ … Continued

ವೀಡಿಯೊಗಳು..| ಅಮೆರಿಕ ದಾಳಿಗೆ ಪ್ರತಿ ದಾಳಿ : ಕತಾರ್, ಇರಾಕಿನಲ್ಲಿನ ಅಮೆರಿಕದ ಸೇನಾ ನೆಲೆಗಳ ಮೇಲೆ ಕ್ಷಿಪಣಿ ದಾಳಿ ನಡೆಸಿದ ಇರಾನ್‌

ಮಧ್ಯಪ್ರಾಚ್ಯ ಮತ್ತಷ್ಟು ಉದ್ವಿಗ್ನಗೊಂಡಿದ್ದು, ಇರಾನ್ ಸೋಮವಾರ ತನ್ನ ಪರಮಾಣು ಸೌಲಭ್ಯಗಳ ಮೇಲಿನ ಅಮೆರಿಕದ ವಾಯುದಾಳಿಗೆ ಪ್ರತೀಕಾರವಾಗಿ ಅಮೆರಿಕದ ನೆಲೆಗಳ ಮೇಲೆ ಕ್ಷಿಪಣಿ ದಾಳಿ ನಡೆಸಿದೆ. ಇರಾನ್‌ ಸೋಮವಾರ ಕತಾರ್ ಮತ್ತು ಇರಾಕ್‌ನಲ್ಲಿರುವ ಅಮೆರಿಕದ ಮಿಲಿಟರಿ ನೆಲೆಗಳ ಮೇಲೆ ಕ್ಷಿಪಣಿಗಳನ್ನು ಹಾರಿಸಿದೆ. ಇರಾನ್ ಕತಾರ್‌ನಲ್ಲಿರುವ ಅಮೆರಿಕದ ಸೇನಾ ನೆಲೆಗಳ ಮೇಲೆ ಆರು ಕ್ಷಿಪಣಿಗಳನ್ನು ಹಾರಿಸಿತು ಎಂದು ಇಸ್ರೇಲಿ … Continued

ವೀಡಿಯೊ…| ವೈಮಾನಿಕ ದಾಳಿಯಲ್ಲಿ ಐಸಿಸ್‌ ಭಯೋತ್ಪಾದಕ ಗುಂಪಿನ ನಂ.2 ನಾಯಕನ್ನು ಕೊಂದು ಹಾಕಿದ ಅಮೆರಿಕ

ನವದೆಹಲಿ: ಇರಾಕಿನ ಗುಪ್ತಚರ ಮತ್ತು ಭದ್ರತಾ ಪಡೆಗಳ ಸಮನ್ವಯದಲ್ಲಿ, ಇರಾಕ್‌ನ ಅಲ್ ಅನ್ಬರ್ ಪ್ರಾಂತ್ಯದಲ್ಲಿ ನಡೆಸಿದ ವೈಮಾನಿಕ ದಾಳಿಯಲ್ಲಿ “ಅಬು ಖದೀಜಾ” ಎಂದೂ ಕರೆಯಲ್ಪಡುವ ಇಸ್ಲಾಮಿಕ್ ಸ್ಟೇಟ್ (ISIS)ನ ನಂ.2 ನಾಯಕನಾದ ಅಬ್ದುಲ್ಲಾ ಮಕ್ಕಿ ಮುಸ್ಲಿಹ್ ಅಲ್-ರಿಫಾಯಿಯನ್ನು ಕೊಂದಿರುವುದಾಗಿ ಅಮೆರಿಕ ಘೋಷಿಸಿದೆ. ಅಬು ಖದೀಜಾ ಇಸ್ಲಾಮಿಕ್ ಸ್ಟೇಟ್ (ISIS) ಭಯೋತ್ಪಾದಕ ಗುಂಪಿನ ಜಾಗತಿಕ ಕಾರ್ಯಾಚರಣೆಗಳ ಮುಖ್ಯಸ್ಥನಾಗಿದ್ದ … Continued

ಹೆಣ್ಣುಮಕ್ಕಳ ಮದುವೆಯ ವಯಸ್ಸನ್ನು 9ಕ್ಕೆ ಇಳಿಸುವ ಹೊಸ ಕಾನೂನು ಇರಾಕ್‌ ಸಂಸತ್ತಿನಲ್ಲಿ ಮಂಡನೆ…!

ಹೆಣ್ಣುಮಕ್ಕಳ ಕಾನೂನುಬದ್ಧ ವಿವಾಹ ವಯಸ್ಸನ್ನು 9 ವರ್ಷಕ್ಕೆ ಮತ್ತು ಗಂಡುಮಕ್ಕಳಿಗೆ 15 ವರ್ಷಕ್ಕೆ ಇಳಿಸುವ ವಿವಾದಾತ್ಮಕ ಮಸೂದೆಯನ್ನು ಇರಾಕ್ ಸಂಸತ್ತಿನಲ್ಲಿ ಮಂಡಿಸಲಾಗಿದೆ. ಕರಡು ಮಸೂದೆಯು ಕೌಟುಂಬಿಕ ವ್ಯವಹಾರಗಳ ಬಗ್ಗೆ ನಿರ್ಧರಿಸಲು ಧಾರ್ಮಿಕ ಅಧಿಕಾರಿಗಳು ಅಥವಾ ನ್ಯಾಯಾಂಗವನ್ನು ಆಯ್ಕೆ ಮಾಡಲು ನಾಗರಿಕರಿಗೆ ಅವಕಾಶ ನೀಡುತ್ತದೆ. ಇದಕ್ಕೆ ತೀವ್ರ ಕಳವಳ ವ್ಯಕ್ತವಾಗಿದೆ. ದೇಶದಲ್ಲಿನ ಹಾಲಿ ಕಾಯ್ದೆ ಕಾನೂನುಬದ್ಧ ವಿವಾಹದ … Continued

ಅಮೆರಿಕದ ಸೇನಾ ನೆಲೆಯ ಮೇಲೆ ʼಜೆಲ್ಲಿಫಿಶ್ʼ ತರಹದ ಗುರುತಿಸಲಾಗದ ಹಾರುವ ವಸ್ತು (UFO)ವಿನ ವಿಲಕ್ಷಣ ವೀಡಿಯೊ ಭಾರೀ ವೈರಲ್‌ | ವೀಕ್ಷಿಸಿ

ಅಚ್ಚರಿಪಡುವ ಬಹಿರಂಗಪಡಿಸುವಿಕೆಯಲ್ಲಿ, ಅಮೆರಿಕದ ಮಿಲಿಟರಿ ನೆಲೆಯ ಮೇಲೆ ಸುಳಿದಾಡುತ್ತಿರುವ ಗುರುತಿಸಲಾಗದ ಹಾರುವ ವಸ್ತು (UFO)ವನ್ನು ಸೆರೆಹಿಡಿಯಲಾಗಿದೆ ಎಂದು ಹೇಳಿಕೊಳ್ಳುವ ವೀಡಿಯೊವೊಂದು ಸಾಮಾಜಿಕ ಮಾಧ್ಯಮದಲ್ಲಿ ಅಬ್ಬರಿಸಿದೆ. ಆರಂಭದಲ್ಲಿ ಕಲಾವಿದ ಮತ್ತು ಚಲನಚಿತ್ರ ನಿರ್ಮಾಪಕ ಜೆರೆಮಿ ಕಾರ್ಬೆಲ್ ಅವರು ಇನ್ಸ್ಟಾಗ್ರಾಂ(Instagram) ನಲ್ಲಿ ಹಂಚಿಕೊಂಡ ತುಣುಕನ್ನು X ಸೇರಿದಂತೆ ವಿವಿಧ ವೇದಿಕೆಗಳಲ್ಲಿ ತ್ವರಿತವಾಗಿ ಹರಡಿತು. ವಿಚಿತ್ರವಾದ ಕಪ್ಪು ಮತ್ತು ಬಿಳಿ … Continued

ಇರಾಕ್‌ನ ಮದುವೆ ಹಾಲ್‌ನಲ್ಲಿ ಭೀಕರ ಅಗ್ನಿ ಅವಘಡ : 114 ಮಂದಿ ಸಾವು

ಮೋಸುಲ್: ಇರಾಕ್‌ ಉತ್ತರ ಭಾಗದಲ್ಲಿ ಕ್ರೈಸ್ತ ಧರ್ಮೀಯರ ಮದುವೆ ಸಮಾರಂಭದಲ್ಲಿ ಉಂಟಾದ ಅಗ್ನಿ ಅನಾಹುತದಲ್ಲಿ ಕನಿಷ್ಠ 114 ಮಂದಿ ಮೃತಪಟ್ಟಿದ್ದಾರೆ ಹಾಗೂ 150 ಮಂದಿ ಗಾಯಗೊಂಡಿದ್ದು, ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇರಾಕಿನ ನಿನೆವಾಹ್ ಪ್ರಾಂತ್ಯದ ಹಂದಾನಿಯಾ ಪ್ರದೇಶದಲ್ಲಿನ ಸಭಾಂಗಣದಲ್ಲಿ ದುರ್ಘಟನೆ ಸಂಭವಿಸಿದೆ. ಮದುವೆ ಹಾಲ್‌ನಿಂದ ಭಾರಿ ದಟ್ಟನೆಯ … Continued

ಇರಾಕ್ ನಲ್ಲಿ ಬಾಂಬ್ ಸ್ಫೋಟ: ೩೦ಕ್ಕೂ ಅಧಿಕ ಮಂದಿ ಸಾವು

ಬಾಗ್ದಾದ್: ಈದ್ ಹಬ್ಬದ ಹಿನ್ನೆಲೆಯಲ್ಲಿ ಹೆಚ್ಚು ಜನರು ಸೇರಿದ್ದ ಮಾರುಕಟ್ಟೆಯಲ್ಲಿ ಬಾಂಬ್ ಸ್ಪೋಟಗೊಂಡು ೩೦ಕ್ಕೂ ಅಧಿಕ ಜನರು ಮೃತಪಟ್ಟು ನೂರಕ್ಕೂ ಅಧಿಕ ಜನರು ಗಂಭೀರವಾಗಿ ಗಾಯಗೊಂಡ ಘಟನೆ ಇರಾಕ್ ರಾಜಧಾನಿ ಬಾಗ್ದಾದ್ ನ ಉಪನಗರ ಸದರ್ ಸಿಟಿಯಲ್ಲಿನ ಮಾರುಕಟ್ಟೆಯಲ್ಲಿ ಮಂಗಳವಾರ ಸಂಭವಿಸಿದೆ. ಈ ಬಾಂಬ್ ಸ್ಫೋಟದ ಹೊಣೆಯನ್ನು ಇಸ್ಲಾಮಿಕ್ ಸ್ಟೇಟ್ ಹೊತ್ತಿದ್ದು, ಅಬು ಹಮ್ಜಾ ಅಲ್-ಇರಾಕಿ … Continued