8 ಗಂಟೆಗಳ ಕಾಲ ನಡೆದ ಎನ್‌ಕೌಂಟರ್‌ನಲ್ಲಿ 13 ಮಾವೋವಾದಿಗಳ ಹತ್ಯೆ

ರಾಯ್ಪುರ: ಛತ್ತೀಸ್‌ಗಢದ ಬಿಜಾಪುರದಲ್ಲಿ ಎಂಟು ಗಂಟೆಗಳ ಕಾಲ ನಡೆದ ಭದ್ರತಾ ಎನ್‌ಕೌಂಟರ್‌ನಲ್ಲಿ ಹತರಾದ ಮಾವೋವಾದಿಗಳ ಸಾವಿನ ಸಂಖ್ಯೆ 13 ಕ್ಕೆ ಏರಿದೆ. ಬುಧವಾರ ಬೆಳಿಗ್ಗೆ ಸಿಬ್ಬಂದಿ ಮತ್ತೆ ಮೂರು ಮೃತದೇಹಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮಂಗಳವಾರ ಬೆಳಗ್ಗೆ 6 ಗಂಟೆಗೆ ಭದ್ರತಾ ಸಿಬ್ಬಂದಿಯ ಜಂಟಿ ತಂಡವು ಲೆಂಡಾ ಗ್ರಾಮದ ಅರಣ್ಯದಲ್ಲಿ ನಕ್ಸಲ್ ವಿರೋಧಿ ಕಾರ್ಯಾಚರಣೆ … Continued

ಇಸ್ರೇಲ್-ಹಮಾಸ್ ಯುದ್ಧ : ತಪ್ಪಾಗಿ ತಿಳಿದು ಮೂವರು ಇಸ್ರೇಲಿ ಒತ್ತೆಯಾಳುಗಳನ್ನು ಕೊಂದ ಇಸ್ರೇಲಿ ಪಡೆಗಳು

ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್) ಉತ್ತರ ಗಾಜಾದ ಶೆಜೈಯಾ ಪ್ರದೇಶದಲ್ಲಿ ನಡೆದ ಹೋರಾಟದ ಸಮಯದಲ್ಲಿ ತಮಗೆ ಬೆದರಿಕೆ ಎಂದು ತಪ್ಪಾಗಿ ಗುರುತಿಸಿ ಮೂವರು ಇಸ್ರೇಲಿ ಒತ್ತೆಯಾಳುಗಳ ಮೇಲೆ ಗುಂಡು ಹಾರಿಸಿದರು ಎಂದು ಮಿಲಿಟರಿ ವಕ್ತಾರ ಡೇನಿಯಲ್ ಹಗರಿ ಶುಕ್ರವಾರ ಹೇಳಿದ್ದಾರೆ. “ಸೈನಿಕರು ಆತ್ಮಹತ್ಯಾ ಬಾಂಬರ್‌ಗಳು ಸೇರಿದಂತೆ ಅನೇಕ ಭಯೋತ್ಪಾದಕರನ್ನು ಎದುರಿಸಿದ ಪ್ರದೇಶದಲ್ಲಿ ಈ ಘಟನೆ ನಡೆದಿದೆ … Continued

ಹೊನ್ನಾವರ : ಟಿಪ್ಪರ್ ಹಾಯ್ದು ವ್ಯಕ್ತಿ ಸಾವು, ಇಬ್ಬರಿಗೆ ಗಾಯ

ಹೊನ್ನಾವರ : ಟಿಪ್ಪರ್ ಹಾಯಿಸಿ ವ್ಯಕ್ತಿಯೊಬ್ಬನನ್ನು ಸಾಯಿಸಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಅರೆಅಂಗಡಿಯ ಜನತಾ ಕಾಲೋನಿಯ ಬಳಿ ಮಂಗಳವಾರ ರಾತ್ರಿ ನಡೆದಿದೆ. ಇನ್ನಿಬ್ಬರು ಗಾಯಗೊಂಡಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅರೆಅಂಗಡಿಯ ಓಲ್ವಿನ್ ರವಿ ಲೋಬೋ ಎಂಬವರು ಸಾವಿಗೀಡಾಗಿದ್ದಾರೆ. ಸಾಲ್ಕೋಡಿನಲ್ಲಿ ವಾಸವಿರುವ ಕುಮಟಾ ತಾಲೂಕಿನ ಕೋನಳ್ಳಿ ಮೂಲದ ಜನಾರ್ಧನ ನಾಯ್ಕ ಹಾಗೂ ಹೊಸಾಕುಳಿಯ … Continued

ವೈಮಾನಿಕ ದಾಳಿಯಲ್ಲಿ ಅಕ್ಟೋಬರ್ 7ರ ದಾಳಿಯ ಪ್ರಮುಖ, ಹಮಾಸ್ ಉನ್ನತ ಕಮಾಂಡರ್ ಸಾವು-ಇಸ್ರೇಲ್‌ ; ನಿರಾಶ್ರಿತರ ಶಿಬಿರದ ಮೇಲೆ ದಾಳಿ, 50 ನಾಗರಿಕರ ಸಾವು-ಹಮಾಸ್‌

ಅಕ್ಟೋಬರ್ 7 ರಂದು ಇಸ್ರೇಲ್ ಮೇಲೆ ನಡೆದ ಕ್ರೂರ ಹಠಾತ್ ದಾಳಿಗೆ ಕಾರಣವಾದ ಉನ್ನತ ಹಮಾಸ್ ಕಮಾಂಡರ್ ಇಬ್ರಾಹಿಂ ಬಿಯಾರಿಯನ್ನು ಗಾಜಾದ ಮೇಲಿನ ವೈಮಾನಿಕ ದಾಳಿಯಲ್ಲಿ ಕೊಲ್ಲಲಾಗಿದೆ ಎಂದು ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್) ಬುಧವಾರ ಪ್ರಕಟಿಸಿದೆ. ಇಸ್ರೇಲಿ ಯುದ್ಧವಿಮಾನಗಳು ಗಾಜಾ ಪಟ್ಟಿಯಲ್ಲಿರುವ ನಿರಾಶ್ರಿತರ ಶಿಬಿರದ ಮೇಲೆ ಬಾಂಬ್ ದಾಳಿ ನಡೆಸಿದ್ದರಿಂದ ಕನಿಷ್ಠ 50 ಪ್ಯಾಲೆಸ್ತೀನಿಯನ್ನರು … Continued

ಲಷ್ಕರ್-ಎ-ಜಬ್ಬಾರ್ ಭಯೋತ್ಪಾದಕ ಸಂಘಟನೆ ಸಂಸ್ಥಾಪಕ, ಮಸೂದ್ ಅಜರ್ ಆಪ್ತ ದಾವೂದ್ ಮಲಿಕ್ ಪಾಕಿಸ್ತಾನದಲ್ಲಿ ಹತ್ಯೆ: ವರದಿ

ಇಸ್ಲಾಮಾಬಾದ್‌ :  ಭಾರತ ವಿರೋಧಿ ಭಯೋತ್ಪಾದನಾ ಕಾರ್ಯಾಚರಣೆಗೆ ಮತ್ತೊಂದು ದೊಡ್ಡ ಹೊಡೆತವಾಗಿ, ಲಷ್ಕರ್-ಎ-ಜಬ್ಬಾರ್ ಭಯೋತ್ಪಾದಕ ಸಂಘಟನೆಯ ಸಂಸ್ಥಾಪಕ ಮತ್ತು ಭಾರತದ ʼಮೋಸ್ಟ್‌ ವಾಂಟೆಡ್ʼ ಭಯೋತ್ಪಾದಕ ಮಸೂದ್ ಅಜರ್‌ನ ಆಪ್ತ ಸಹಾಯಕ ದಾವೂದ್ ಮಲಿಕ್ ಎಂಬಾತ ಪಾಕಿಸ್ತಾನದ ಉತ್ತರ ವಜೀರಿಸ್ತಾನ್‌ನಲ್ಲಿ ಅಪರಿಚಿತ ಬಂದೂಕುಧಾರಿಗಳಿಂದ ಹತ್ಯೆಗೀಡಾಗಿದ್ದಾನೆ ಎಂದು ವರದಿಗಳು ತಿಳಿಸಿವೆ. ಡಾನ್ ವರದಿಯ ಪ್ರಕಾರ, ಶುಕ್ರವಾರ ಉತ್ತರ ವಜಿರಿಸ್ತಾನ್ … Continued

ಇಸ್ರೇಲ್-ಹಮಾಸ್ ಯುದ್ಧ : ಈವರೆಗೆ ಕನಿಷ್ಠ 15 ಪತ್ರಕರ್ತರು ಸಾವು; ವರದಿ

ಇಸ್ರೇಲ್-ಹಮಾಸ್ ಸಂಘರ್ಷದ ಆರಂಭದಿಂದಲೂ, ನೂರಾರು ಪತ್ರಕರ್ತರು, ವರದಿಗಾರರು, ಛಾಯಾಗ್ರಾಹಕರು ಮತ್ತು ವೀಡಿಯೊಗ್ರಾಫರ್‌ಗಳು ಯುದ್ಧದ ಬಗ್ಗೆ ವರದಿ ಮಾಡಲು ಮುಂಚೂಣಿಯಲ್ಲಿದ್ದಾರೆ. ಆದಾಗ್ಯೂ, ಅವರ ಕೆಲಸವನ್ನು ಮಾಡಲು ಅವರು ಭಾರೀ ಬೆಲೆ ತೆರಬೇಕಾಗಿದೆ. ಇಸ್ರೇಲ್ ಮತ್ತು ಹಮಾಸ್ ನಡುವಿನ ಸಂಘರ್ಷ ಪ್ರಾರಂಭವಾದಾಗಿನಿಂದ ಕನಿಷ್ಠ 15 ಪತ್ರಕರ್ತರು ಮೃತಪಟ್ಟಿದ್ದಾರೆ ಎಂದು ಕಮಿಟಿ ಟು ಪ್ರೊಟೆಕ್ಟ್‌ ಜರ್ನಲಿಸ್ಟ್‌ (Committee to Protect … Continued

24 ತಾಸಿನಲ್ಲಿ ಹಮಾಸ್‌ನ ಇಬ್ಬರು ನಾಯಕರ ಕೊಂದ ಇಸ್ರೇಲ್ : ಕ್ರೂರ ದಾಳಿ ನೇತೃತ್ವ ವಹಿಸಿದ್ದ ಮತ್ತೊಬ್ಬ ಹಮಾಸ್ ಕಮಾಂಡರನ ಹತ್ಯೆ

ಟೆಲ್‌ ಅವೀವ್‌ : ನೂರಾರು ಜೀವಗಳನ್ನು ಬಲಿತೆಗೆದುಕೊಂಡ ಇಸ್ರೇಲ್ ಮೇಲಿನ ಕ್ರೂರ ದಾಳಿಯ ನೇತೃತ್ವ ವಹಿಸಿದ್ದ ಹಮಾಸ್ ಕಮಾಂಡರ್ ಮತ್ತು ಹಮಾಸ್‌ ಗುಂಪಿನ ‘ನುಖ್ಬಾ’ ಕಮಾಂಡೋ ಪಡೆಯ ನಾಯಕ ಅಲಿ ಖಾದಿಯನ್ನು ಕೊಂದಿರುವುದಾಗಿ ಇಸ್ರೇಲಿ ವಾಯುಪಡೆ ಹೇಳಿದೆ. ಶಿನ್ ಬೆಟ್ ಭದ್ರತಾ ಸಂಸ್ಥೆ ಮತ್ತು ಮಿಲಿಟರಿ ಗುಪ್ತಚರ ನಿರ್ದೇಶನಾಲಯದ ಜಂಟಿ ಗುಪ್ತಚರ ಪ್ರಯತ್ನಗಳ ಭಾಗವಾಗಿ ಡ್ರೋನ್ … Continued

ಇಸ್ರೇಲ್-ಹಮಾಸ್‌ ಯುದ್ಧ : ಇಸ್ರೇಲಿ ವೈಮಾನಿಕ ದಾಳಿಯಲ್ಲಿ ʼಹಮಾಸ್ ವೈಮಾನಿಕ ಪಡೆಗಳ ಮುಖ್ಯಸ್ಥʼ ಸಾವು; ಇಸ್ರೇಲ್‌ ಮಿಲಿಟರಿ

ಇಸ್ರೇಲ್ ರಕ್ಷಣಾ ಪಡೆಗಳು ಶನಿವಾರ ಗಾಜಾ ಪಟ್ಟಿಯಲ್ಲಿ ಹಮಾಸ್ ಭಯೋತ್ಪಾದಕ ಗುಂಪಿನ ಹಿರಿಯ ಕಮಾಂಡ್‌ ನನ್ನು ರಾತ್ರಿಯ ವೈಮಾನಿಕ ದಾಳಿಯಲ್ಲಿ ಕೊಂದಿರುವುದಾಗಿ ಹೇಳಿದೆ ಎಂದು ದಿ ಟೈಮ್ಸ್ ಆಫ್ ಇಸ್ರೇಲ್ ವರದಿ ಮಾಡಿದೆ. ಇಸ್ರೇಲ್ ರಕ್ಷಣಾ ಪಡೆಗಳ ಪ್ರಕಾರ, ವೈಮಾನಿಕ ದಾಳಿಯ ವೇಳೆ ಹಮಾಸ್‌ನ ವೈಮಾನಿಕ ದಾಳಿಯ ಮುಖ್ಯಸ್ಥ ಮುರಾದ್ ಅಬು ಮುರಾದ್‌ನನ್ನು ಕೊಲ್ಲಲ್ಪಟ್ಟಿದ್ದಾನೆ. ಹಮಾಸ್‌ … Continued

ಪಠಾಣಕೋಟ್ ದಾಳಿ ಮಾಸ್ಟರ್ ಮೈಂಡ್ ಶಾಹಿದ್ ಲತೀಫ್ ಪಾಕಿಸ್ತಾನದಲ್ಲಿ ಅಪರಿಚಿತ ಬಂದೂಕುಧಾರಿಗಳಿಂದ ಹತ್ಯೆ

ಸಿಯಾಲ್‌ಕೋಟ್‌: ಭಾರತದ ಪಠಾಣ್‌ಕೋಟ್ ದಾಳಿಯ ಮಾಸ್ಟರ್‌ಮೈಂಡ್ ಮತ್ತು ಭಾರತದ ಮೋಸ್ಟ್ ವಾಂಟೆಡ್ ಭಯೋತ್ಪಾದಕ ಶಾಹಿದ್ ಲತೀಫ್‌ನನ್ನು ಬುಧವಾರ ಪಾಕಿಸ್ತಾನದ ಸಿಯಾಲ್‌ಕೋಟ್‌ನಲ್ಲಿ ಅಪರಿಚಿತ ದುಷ್ಕರ್ಮಿಗಳು ಗುಂಡಿಕ್ಕಿ ಕೊಂದಿದ್ದಾರೆ ಎಂದು ವರದಿಯಾಗಿದೆ. 41 ವರ್ಷದ ಶಾಹಿದ್ ಲತೀಫ್ ನಿಷೇಧಿತ ಭಯೋತ್ಪಾದಕ ಸಂಘಟನೆ ಜೈಶ್-ಎ-ಮೊಹಮ್ಮದ್ (ಜೆಇಎಂ) ಸದಸ್ಯ ಮತ್ತು ಜನವರಿ 2, 2016 ರಂದು ನಡೆದ ಪಠಾಣ್‌ಕೋಟ್ ದಾಳಿಯ ಪ್ರಮುಖ … Continued

ರೈಲಿನಲ್ಲಿ ಮಹಿಳಾ ಪೋಲೀಸ್ ಮೇಲೆ ಮಾರಣಾಂತಿಕ ಹಲ್ಲೆ ಪ್ರಕರಣ : ಪೊಲೀಸರಿಗೆ ಬೇಕಾಗಿದ್ದ ಆರೋಪಿ ಎನ್‌ಕೌಂಟರ್‌ನಲ್ಲಿ ಸಾವು

ಅಯೋಧ್ಯಾ : ಕಳೆದ ತಿಂಗಳು ರೈಲು ಕಂಪಾರ್ಟ್‌ಮೆಂಟ್‌ನಲ್ಲಿ “ರಕ್ತದ ಮಡುವಿನಲ್ಲಿ” ಬಿದ್ದಿದ್ದ ಮಹಿಳಾ ಪೋಲೀಸ್ ಮೇಲೆ ದಾಳಿ ಮಾಡಿದ ಆರೋಪದ ಇಬ್ಬರು ವ್ಯಕ್ತಿಗಳಲ್ಲಿ ಒಬ್ಬರು ಶುಕ್ರವಾರ ಅಯೋಧ್ಯೆಯಲ್ಲಿ ಪೊಲೀಸ್ ಎನ್‌ಕೌಂಟರ್‌ನಲ್ಲಿ ಕೊಲ್ಲಲ್ಪಟ್ಟ. ಎನ್‌ಕೌಂಟರ್ ವೇಳೆ ಇತರ ಇಬ್ಬರು ವ್ಯಕ್ತಿಗಳಿಗೆ ಗುಂಡು ತಗುಲಿದ್ದು, ಸದ್ಯ ಚಿಕಿತ್ಸೆ ಪಡೆಯುತ್ತಿದ್ದಾರೆ. ಉತ್ತರ ಪ್ರದೇಶ ಪೊಲೀಸ್ ಮತ್ತು ಲಕ್ನೋ ವಿಶೇಷ ಕಾರ್ಯಪಡೆ … Continued