ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಶುಭಾಶಯಗಳು

ತಮ್ಮ ಸುತ್ತಲಿನ ʼಹೆಚ್ಚಿನ ಭದ್ರತೆ’ ಬಗ್ಗೆ ಒಮ್ಮೆ ಆಕ್ಷೇಪಿಸಿದ್ದ ಸಲ್ಮಾನ್ ರಶ್ದಿ : ವರದಿ

ನ್ಯೂಯಾರ್ಕ್‌ : ಇಲ್ಲಿ ನಡೆದ ಸಾಹಿತ್ಯ ಕಾರ್ಯಕ್ರಮವೊಂದರಲ್ಲಿ ವೇದಿಕೆಯ ಮೇಲೆಯೇ ನುಗ್ಗಿ ದಾಳಿಕೋರನಿಂದ ಚೂರಿ ಇರಿತಕ್ಕೆ ಒಳಗಾದ ಸಲ್ಮಾನ್ ರಶ್ದಿ ಈ ಹಿಂದೆ ತಮಗೆ ಹೆಚ್ಚಿನ ಭದ್ರತೆ ನೀಡಿದ್ದರ ಬಗ್ಗೆ ಆಕ್ಷೇಪಿಸಿದ್ದರು ಎಂದು ಶನಿವಾರ ಮಾಧ್ಯಮವೊಂದು ವರದಿ ಮಾಡಿದೆ. “ದಿ ಸೈಟಾನಿಕ್ ವರ್ಸಸ್” ಬರೆದ ನಂತರ ವರ್ಷಗಳ ಕಾಲ ಇಸ್ಲಾಮಿಸ್ಟ್ ಸಾವಿನ ಬೆದರಿಕೆಗಳನ್ನು ಎದುರಿಸಿದ ಭಾರತದ … Continued

ಭಾರತದ ಒತ್ತಡದ ನಂತರ ಚೀನಾ ಹಡಗು ತನ್ನ ಬಂದರಿಗೆ ಬರುವುದನ್ನು ಅನಿರ್ದಿಷ್ಟವಾಗಿ ಮುಂದೂಡಲು ಚೀನಾಕ್ಕೆ ಹೇಳಿದ ಶ್ರೀಲಂಕಾ: ವರದಿ

ಕೊಲಂಬೊ: ಭಾರತದ ತೀವ್ರ ಒತ್ತಡದ ಹಿನ್ನೆಲೆಯಲ್ಲಿ ಹಡಗು ಬರುವುದನ್ನು ಅನಿರ್ದಿಷ್ಟಾವಧಿಗೆ ಮುಂದೂಡುವಂತೆ ಶ್ರೀಲಂಕಾ ಚೀನಾವನ್ನು ಕೇಳಿಕೊಂಡಿದೆ ಎಂದು ಅಧಿಕೃತ ಮೂಲಗಳು ಶನಿವಾರ ತಿಳಿಸಿವೆ. ಯುವಾನ್ ವಾಂಗ್ 5, ಚೀನಾದ ಜಿಯಾಂಗ್‌ಯಿನ್ ಬಂದರಿನಿಂದ ಪ್ರಯಾಣಿಸುತ್ತಿದೆ ಮತ್ತು ಗುರುವಾರ ಚೀನಾ-ಚಾಲಿತ ಶ್ರೀಲಂಕಾದ ಹಂಬಂಟೋಟಾ ಬಂದರಿಗೆ ಬರಲಿದೆ ಎಂದು ವಿಶ್ಲೇಷಣಾ ವೆಬ್‌ಸೈಟ್ ಮರೈನ್‌ಟ್ರಾಫಿಕ್ ತಿಳಿಸಿದೆ. ಇದನ್ನು ಸಮೀಕ್ಷಾ ನೌಕೆ ಎಂದು … Continued

ತೈವಾನ್ ಅಧಿಕೃತ ಪ್ರಮುಖ ಕ್ಷಿಪಣಿ ಉತ್ಪಾದನೆ ಉಸ್ತುವಾರಿ ಅಧಿಕಾರಿ ಹೋಟೆಲ್‌ನಲ್ಲಿ ಶವವಾಗಿ ಪತ್ತೆ : ವರದಿ

ತೈಪೆ: ತೈವಾನ್ ರಕ್ಷಣಾ ಸಚಿವಾಲಯದ ಸಂಶೋಧನೆ ಮತ್ತು ಅಭಿವೃದ್ಧಿ ಘಟಕದ ಉಪ ಮುಖ್ಯಸ್ಥರು ಶನಿವಾರ ಬೆಳಗ್ಗೆ ಹೋಟೆಲ್ ಕೊಠಡಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ ಎಂದು ಅಧಿಕೃತ ಕೇಂದ್ರ ಸುದ್ದಿ ಸಂಸ್ಥೆ ತಿಳಿಸಿದೆ. ಸೇನಾ ಸ್ವಾಮ್ಯದ ನ್ಯಾಷನಲ್ ಚುಂಗ್-ಶಾನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ ಅಂಡ್ ಟೆಕ್ನಾಲಜಿಯ ಉಪ ಮುಖ್ಯಸ್ಥ ಔ ಯಾಂಗ್ ಲಿ-ಹಸಿಂಗ್ ಅವರು ಶನಿವಾರ ಬೆಳಗ್ಗೆ ದಕ್ಷಿಣ … Continued

ಕೇರಳದ ನಟ ಶರತ್ ಚಂದ್ರನ್ ಶವವಾಗಿ ಪತ್ತೆ : ವರದಿ

ತಿರುವನಂತಪುರಂ: ಕೇರಳದ ಯುವ ನಟ ಶರತ್ ಚಂದ್ರನ್ ಶುಕ್ರವಾರ ಶವವಾಗಿ ಪತ್ತೆಯಾಗಿದ್ದಾರೆ ಎಂದು ಚಿತ್ರರಂಗದ ಮೂಲಗಳು ತಿಳಿಸಿವೆ. 37 ವರ್ಷ ವಯಸ್ಸಿನ ನಟ ಅವರು ತಮ್ಮ “ಅಂಗಮಾಲಿ ಡೈರೀಸ್” ಚಲನಚಿತ್ರದೊಂದಿಗೆ ಪ್ರಾಮುಖ್ಯತೆಯನ್ನು ಪಡೆದರು ಮತ್ತು ಅವರ ಇತರ ಜನಪ್ರಿಯ ಚಲನಚಿತ್ರಗಳು “ಕೂಡೆ”, “ಒರು ಮೆಕ್ಸಿಕನ್ ಅಪರಾತ” ಸೇರಿದಂತೆ ಕೆಲವನ್ನು ಹೆಸರಿಸಬಹುದು. ನಟ ಅಂತೋನಿ ವರ್ಗೀಸ್ ಅವರು … Continued

ತೆಲಂಗಾಣ: ಸಚಿವ ಕೆಟಿಆರ್ ಜನ್ಮದಿನದ ಸಂಭ್ರಮಾಚರಣೆಗೆ ಗೈರಾದ ಕಾರಣಕ್ಕೆ ನಾಲ್ವರು ಪೌರಕಾರ್ಮಿಕರು ಅಮಾನತು…!

ಹೈದರಾಬಾದ್‌: ಜುಲೈ 24 ರಂದು ನಡೆದ ಸಚಿವ ಕೆ. ತಾರಕ ರಾಮರಾವ್ ಅವರ ಜನ್ಮದಿನದ ಸಮಾರಂಭಕ್ಕೆ ಹಾಜರಾಗದ ತೆಲಂಗಾಣದ ಬೆಳ್ಳಂಪಲ್ಲಿ ಮುನ್ಸಿಪಲ್ ಕಮಿಷನ್‌ನ ನಾಲ್ವರು ಪೌರಕಾರ್ಮಿಕರಿಗೆ ಅಮಾನತು ಪತ್ರವನ್ನು ನೀಡಲಾಗಿದೆ. ಬೆಳ್ಳಂಪಲ್ಲಿ ಸರ್ಕಾರಿ ಆಸ್ಪತ್ರೆಯಲ್ಲಿ ಈ ಕಾರ್ಯಕ್ರಮವನ್ನು ಮುನ್ಸಿಪಲ್ ಕೌನ್ಸಿಲ್ ಆಯೋಜಿಸಿತ್ತು. ಪೌರಾಯುಕ್ತರು ಜುಲೈ 25 ರಂದು ನಾಲ್ವರು ನೌಕರರಿಗೆ ನೋಟಿಸ್ ಜಾರಿ ಮಾಡಿದ್ದು, ಗೈರುಹಾಜರಾದ … Continued

ರೋಶನಿ ನಾಡರ್ ಭಾರತದ ಶ್ರೀಮಂತ ಮಹಿಳೆ; ಸ್ವಯಂ ನಿರ್ಮಿತ ಶ್ರೀಮಂತ ಮಹಿಳೆಯರಲ್ಲಿ ಫಲ್ಗುಣಿ ನಾಯರ್‌ಗೆ ಅಗ್ರಸ್ಥಾನ: ವರದಿ

ನವದೆಹಲಿ: ಎಚ್‌ಸಿಎಲ್‌ (HCL) ಟೆಕ್ನಾಲಜೀಸ್‌ನ ಅಧ್ಯಕ್ಷೆ ರೋಶನಿ ನಾಡರ್ ಮಲ್ಹೋತ್ರಾ ಅವರು ಭಾರತದ ಅತ್ಯಂತ ಶ್ರೀಮಂತ ಮಹಿಳೆಯಾಗಿ ತಮ್ಮ ಸ್ಥಾನವನ್ನು ಉಳಿಸಿಕೊಂಡಿದ್ದಾರೆ, 2021 ರಲ್ಲಿ ಅವರ ನಿವ್ವಳ ಮೌಲ್ಯ 54 ಪ್ರತಿಶತದಷ್ಟು ಜಿಗಿದು 84,330 ಕೋಟಿ ರೂ.ಗಳಾಗಿದೆ. ಸುಮಾರು ಒಂದು ದಶಕದ ಹಿಂದೆ ಸೌಂದರ್ಯ-ಕೇಂದ್ರಿತ ಬ್ರಾಂಡ್ ನೈಕಾ ಪ್ರಾರಂಭಿಸಲು ತನ್ನ ಹೂಡಿಕೆಯ ಬ್ಯಾಂಕಿಂಗ್ ವೃತ್ತಿಯನ್ನು ತೊರೆದ … Continued

ರಾಜ್ಯಪಾಲರ ಹುದ್ದೆ, ರಾಜ್ಯಸಭಾ ಸದಸ್ಯತ್ವದ ಭರವಸೆ : 100 ಕೋಟಿ ರೂ.ಗಳನ್ನು ವಂಚಿಸಲು ಯೋಜಿಸಿದ್ದ ಜಾಲ ಭೇದಿಸಿದ ಸಿಬಿಐ-ವರದಿ

ನವದೆಹಲಿ: ರಾಜ್ಯಪಾಲರ ಹುದ್ದೆ ಹಾಗೂ ರಾಜ್ಯಸಭೆಗೆ ಟಿಕೆಟ್‌ ಕೊಡಿಸುವುದಾಗಿ ಹೇಳಿ ಸ್ಥಾನಗಳ ಭರವಸೆ ನೀಡಿ ಜನರಿಗೆ 100 ಕೋಟಿ ರೂ. ವಂಚಿಸುವ ಸಂಚು ರೂಪಿಸಿದ್ದ ಜಾಲವನ್ನು ಕೇಂದ್ರೀಯ ತನಿಖಾ ದಳ (ಸಿಬಿಐ) ಭೇದಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ ಎಂದು ವರದಿಯಾಗಿದೆ. ಅಧಿಕಾರಿಗಳ ಪ್ರಕಾರ, ಪ್ರಕರಣಕ್ಕೆ ಸಂಬಂಧಿಸಿದಂತೆ ಶೋಧ ನಡೆಸಲಾಗಿದ್ದು, ಗ್ಯಾಂಗ್‌ನ ನಾಲ್ವರನ್ನು ಬಂಧಿಸಲಾಗಿದೆ. ಸಿಬಿಐ ಪ್ರಕಾರ, … Continued

ಮೈಕ್ರೋ ಸಾಫ್ಟ್ ಟೀಮ್ಸ್‌ ಸ್ಥಗಿತ, ಸಾವಿರಾರು ಬಳಕೆದಾರರಿಗೆ ಪ್ರವೇಶಿಸಲು ಸಾಧ್ಯವಾಗುತ್ತಿಲ್ಲ : ವರದಿ

ವಾಷಿಂಗ್ಟನ್: ಮೈಕ್ರೋಸಾಫ್ಟ್ ಕಾರ್ಪ್‌ನ ಮೆಸೇಜಿಂಗ್ ಅಪ್ಲಿಕೇಶನ್ MS ಟೀಮ್ಸ್‌ ಗುರುವಾರ ಸಾವಿರಾರು ಬಳಕೆದಾರರಿಗೆ ಸ್ಥಗಿತಗೊಂಡಿವೆ ಎಂದು ಔಟ್ಟೇಜ್ ಟ್ರ್ಯಾಕಿಂಗ್ ವೆಬ್‌ಸೈಟ್ ತಿಳಿಸಿದೆ. ಮೈಕ್ರೋಸಾಫ್ಟ್ ಕಾರ್ಪೊರೇಶನ್‌ನ ಎಂಎಸ್ ಟೀಮ್ಸ್ ಆ್ಯಪ್‌ನಲ್ಲಿ ತಾಂತ್ರಿಕ ಸಮಸ್ಯೆ ಕಂಡುಬಂದಿದ್ದು, ಅದನ್ನು ಗುರುವಾರ ಬೆಳಗ್ಗೆಯಿಂದ ಸಾವಿರಾರು ಬಳಕೆದಾರರು ಬಳಸಲು ಸಾಧ್ಯವಾಗುತ್ತಿಲ್ಲ ಎಂದು ವರದಿಗಳು ಹೇಳಿವೆ. ಮೈಕ್ರೊಸಾಫ್ಟ್ ಟೀಮ್ಸ್ ಅನ್ನು ವಿಶ್ವದಾದ್ಯಂತ ಸಾವಿರಾರು ಬಳಕೆದಾರರಿಗೆ … Continued

ಗುಜರಾತಿನಲ್ಲಿ ಹೆಚ್ಚು ಹರಡು ಕೊರೊನಾ ವೈರಸ್‌ನ ‘XE’ ತಳಿ ಪತ್ತೆ: ವರದಿ

ನವದೆಹಲಿ: ಸದ್ಯ ವಿದೇಶಗಳಲ್ಲಿ ಕಾಣಿಸಿಕೊಂಡಿರುವ ಕೊರೊನಾ ವೈರಸ್ಸಿ ಒಮಿಕ್ರಾನ್‌ ರೂಪಾಂತರಿಯ ಹೈಬ್ರಿಡ್‌ ವೈರಸ್‌ ಎಕ್ಸ್ ಇ ಸೋಂಕು ಗುಜರಾತ್‍ನಲ್ಲಿ ವ್ಯಕ್ತಿಯೊಬ್ಬನಿಗೆ ಕಾಣಿಸಿಕೊಂಡಿದೆ ಎಂದು ವರದಿಗಳು ತಿಳಿಸಿವೆ. ಮೂರು ದಿನಗಳ ಹಿಂದೆಯಷ್ಟೇ ಮುಂಬೈನಲ್ಲಿ ಇದೇ ಮಾದರಿಯ ಸೋಂಕು ವ್ಯಕ್ತಿಯೊಬ್ಬರಲ್ಲಿ ಕಾಣಿಸಿಕೊಂಡಿತ್ತು. ಆದರೆ ದೃಢಪಟ್ಟಿರಲಿಲ್ಲ. ಈಗ ಗುಜರಾತ್‍ನಲ್ಲಿ ಕಾಣಿಸಿಕೊಂಡಿದೆ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಹೊಸ ಮಾದರಿಯ ಎಕ್ಸ್ … Continued

ಕೊರೊನಾ ಸಾಂಕ್ರಾಮಿಕದ ಮಧ್ಯೆ ಆಫೀಸ್‌ ಲೀಸ್‌ ಜನವರಿ-ಮಾರ್ಚ್‌ನಲ್ಲಿ ಶೇ.36 ಕುಸಿತ: ವರದಿ

ಕೊವಿಡ್‌-19 ಸಾಂಕ್ರಾಮಿಕ ರೋಗದಿಂದಾಗಿ ಕಡಿಮೆ ಬೇಡಿಕೆಯ ಮೇರೆಗೆ ಈ ವರ್ಷದ ಜನವರಿ-ಮಾರ್ಚ್ ಅವಧಿಯಲ್ಲಿ ಏಳು ಪ್ರಮುಖ ನಗರಗಳಲ್ಲಿ ಕಚೇರಿ ಜಾಗದ ನಿವ್ವಳ ಲೀಸ್‌ (ಗುತ್ತಿಗೆ) ಶೇಕಡಾ 36 ರಷ್ಟುಕುಸಿತವಾಗಿದ್ದು, 5.5 ದಶಲಕ್ಷ ಚದರ ಅಡಿಗಳಿಗೆ ತಲುಪಿದೆ ಎಂದು ಆಸ್ತಿ ಸಲಹೆಗಾರ ಜೆಎಲ್ಎಲ್ ಇಂಡಿಯಾ ತಿಳಿಸಿದೆ. ಆದಾಗ್ಯೂ, ಕಚೇರಿ ಬಾಡಿಗೆ ಸ್ಥಿರವಾಗಿದೆ ಎಂದು ಹೇಳಿದೆ. ಏಳು ಪ್ರಮುಖ … Continued