ಚೀನಾದಲ್ಲಿ ಕೋವಿಡ್ ರೂಪಾಂತರದ ಹೊಸ ಅಲೆ : ಜೂನ್‌ನಲ್ಲಿ 6.5 ಕೋಟಿ ಪ್ರಕರಣ ದಾಖಲಾಗುವ ನಿರೀಕ್ಷೆ

ಚೀನಾದಲ್ಲಿ ಏಪ್ರಿಲ್‌ನಿಂದ ಇಲ್ಲಿ ಕೊರೊನಾ ಪ್ರಕರಣಗಳು ನಿರಂತರವಾಗಿ ಹೆಚ್ಚುತ್ತಿವೆ. ಈ ತಿಂಗಳ ಅಂತ್ಯದ ವೇಳೆಗೆ ಪ್ರತಿ ವಾರ 4 ಕೋಟಿ ಪ್ರಕರಣಗಳು ಪತ್ತೆಯಾಗಬಹುದು ಎಂದು ಹೇಳಲಾಗುತ್ತಿದೆ. ಅಷ್ಟೇ ಅಲ್ಲ, ಜೂನ್‌ನಲ್ಲಿ ಈ ಕೊರೊನಾ ಅಲೆ ಉತ್ತುಂಗಕ್ಕೇರಲಿದೆ. ಹಾಗೂ ಪ್ರತಿ ವಾರ 6.5 ಕೋಟಿ ಕೋವಿಡ್ ಸೋಂಕುಗಳು ಕಂಡುಬರಬಹುದು ಎಂದು ನಿರೀಕ್ಷಿಸಲಾಗಿದೆ. ಚೀನಾದ ಅಧಿಕಾರಿಗಳು ಜೂನ್‌ನಲ್ಲಿ ಉತ್ತುಂಗಕ್ಕೇರುವ … Continued

ವಿಶ್ವದ ಸೋಶಿಯಲ್‌ ಮೀಡಿಯಾ ರಾಜಧಾನಿಯಾಗಿ ಹೊರಹೊಮ್ಮಿದ ಯುಎಇ, ಫೇಸ್ಬುಕ್ ಬಳಕೆಯಲ್ಲಿ ನಂಬರ್ 1 : ಭಾರತದ ಸ್ಥಾನ ಎಷ್ಟು ಗೊತ್ತಾ..?

ನವದೆಹಲಿ : ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ವಿಶ್ವದ ಸಾಮಾಜಿಕ ಜಾಲತಾಣದ ರಾಜಧಾನಿ ಎಂದು ಇತ್ತೀಚಿನ ಅಧ್ಯಯನವು ತೋರಿಸಿದೆ. ಬಹುತೇಕ ಎಲ್ಲಾ ನಿವಾಸಿಗಳು ಫೇಸ್‌ಬುಕ್‌ (Facebook) ಖಾತೆ ಹೊಂದಿರುವುದರಿಂದ ದೇಶವು ಪರಿಪೂರ್ಣ ಸ್ಕೋರ್ ಗಳಿಸಿದೆ. ಪ್ರಾಕ್ಸಿರಾಕ್ ಪ್ರಕಟಿಸಿದ ಅಧ್ಯಯನವು ದೇಶದಲ್ಲಿ ಬಳಸಲಾಗುವ ಸಾಮಾಜಿಕ ವೇದಿಕೆಗಳ ಸರಾಸರಿ ಸಂಖ್ಯೆ ಮತ್ತು ಫೇಸ್‌ಬುಕ್ ಬಳಸುವ ಜನಸಂಖ್ಯೆಯ ಶೇಕಡಾವಾರು ಪ್ರಮಾಣವನ್ನು … Continued

ತಿಹಾರ್ ಜೈಲಿನೊಳಗೆ ಗ್ಯಾಂಗ್‌ಸ್ಟರ್ ಹತ್ಯೆ ಪ್ರಕರಣ : ತಮಿಳುನಾಡಿನ 7 ಪೊಲೀಸರ ಅಮಾನತು-ವರದಿ

ನವದೆಹಲಿ: ಮೇ 2 ರಂದು ತಿಹಾರ ಜೈಲಿನೊಳಗೆ ವಿರೋಧಿ ಗ್ಯಾಂಗ್‌ ಗ್ಯಾಂಗ್‌ಸ್ಟರ್ ತಿಲ್ಲು ತಾಜ್‌ಪುರಿಯ ಹತ್ಯೆಯ ಸಂದರ್ಭದಲ್ಲಿ ತಿಹಾರ್ ಜೈಲಿನಲ್ಲಿ ಕರ್ತವ್ಯದಲ್ಲಿದ್ದ ತಮಿಳುನಾಡು ವಿಶೇಷ ಪೊಲೀಸ್ (ಟಿಎನ್‌ಎಸ್‌ಪಿ) ನ ಏಳು ಪೊಲೀಸ್ ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ. ಕೊಲೆ ನಡೆದಾಗ ಏನೂ ಮಾಡದೆ ಸುಮ್ಮನೆ ನಿಂತಿದ್ದರು ಎಂಬ ಕಾರಣಕ್ಕೆ ಅವರನ್ನು ತಮಿಳುನಾಡಿಗೆ ವಾಪಸ್ ಕಳುಹಿಸಲಾಗಿತ್ತು. ಎನ್‌ಡಿಟಿವಿ ಪ್ರಕಾರ, ದೆಹಲಿ … Continued

ಬ್ಯಾಂಕ್‌ ಉದ್ಯೋಗಿಗಳಿಗೆ ವಾರಕ್ಕೆ 5 ದಿನ ಕೆಲಸದ ಪ್ರಸ್ತಾಪ : ಶೀಘ್ರದಲ್ಲೇ ಕೇಂದ್ರದಿಂದ ಅಧಿಸೂಚನೆ ಸಾಧ್ಯತೆ-ವರದಿ

ನವದೆಹಲಿ: ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳ ಕೆಲಸದ ಅವಧಿ ಸದ್ಯದಲ್ಲಿಯೇ ಬದಲಾಗಲಿದೆ. ವಾರಕ್ಕೆ 5 ದಿನ ಕೆಲಸ ಮತ್ತು 2 ದಿನ ರಜೆ ಪದ್ಧತಿಯನ್ನು ಜಾರಿಗೆ ತರಬೇಕು ಎನ್ನುವ ಬ್ಯಾಂಕ್‌ ನೌಕರರ ಬೇಡಿಕೆಯನ್ನು ಕೇಂದ್ರ ಸರಕಾರ ಗಂಭೀರವಾಗಿ ಪರಿಗಣಿಸಿದೆ. ಈ ಹೊಸ ಪದ್ಧತಿ ಜಾರಿಗೆ ಹಣಕಾಸು ಸಚಿವಾಲಯವು ಸದ್ಯದಲ್ಲೇ ಅಧಿಸೂಚನೆ ಹೊರಡಿಸುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ. … Continued

ಇಡೀ ಯುರೋಪ್​ಗೆ ಅತ್ಯಧಿಕ ಸಂಸ್ಕರಿತ ತೈಲ ಪೂರೈಕೆದಾರನಾಗಿ ಹೊರಹೊಮ್ಮಿದ ಭಾರತ….!

ನವದೆಹಲಿ: ವಿಶ್ಲೇಷಣಾ ಸಂಸ್ಥೆ ಕೆಪಿಎಲ್‌ಇಆರ್‌ (Kpler) ಅಂಕಿಅಂಶಗಳ ಪ್ರಕಾರ ಭಾರತವು ಈ ತಿಂಗಳು ಯುರೋಪಿನ ಅತ್ಯಂತ ದೊಡ್ಡ ಸಂಸ್ಕರಿತ ಇಂಧನ ಪೂರೈಕೆದಾರನಾಗಿ ಹೊರಹೊಮ್ಮಿದೆ. ಹಾಗೂ ಇದೇವೇಳೆ ರಷ್ಯಾದ ಕಚ್ಚಾ ತೈಲವನ್ನು ಏಕಕಾಲದಲ್ಲಿ ದಾಖಲೆ ಪ್ರಮಾಣದಲ್ಲಿ ಖರೀದಿಸುತ್ತಿದೆ. ರಷ್ಯಾದ ತೈಲ ನಿಷೇಧದ ನಂತರ ಭಾರತದ ಕಚ್ಚಾ ತೈಲ ಉತ್ಪನ್ನಗಳ ಮೇಲೆ ಯುರೋಪ್ ಅವಲಂಬನೆ ಹೆಚ್ಚಾಗಿದೆ. Kpler’s ದತ್ತಾಂಶದ … Continued

173 ವರ್ಷಗಳಲ್ಲಿ ಅತಿ ಹೆಚ್ಚು ತಾಪಮಾನ ದಾಖಲಾದ ವರ್ಷಗಳಲ್ಲಿ 2022ಕ್ಕೆ 5ನೇ ಸ್ಥಾನ, 2023 ಇನ್ನೂ ಬಿಸಿಯಾಗಿರಬಹುದು: ವರದಿ

ನವದೆಹಲಿ: 2022ರಲ್ಲಿ ಅತಿಹೆಚ್ಚು ತಾಪಮಾನ ದಾಖಲಾಗಿದ್ದು, ಇದು ಜಾಗತಿಕವಾಗಿ ಅತಿಹೆಚ್ಚು ಸರಾಸರಿ ಉಷ್ಣಾಂಶ ದಾಖಲಾದ ವರ್ಷಗಳ ಪಟ್ಟಿಯಲ್ಲಿ ಐದನೇ ಸ್ಥಾನ ಪಡೆದಿದೆ ಎಂದು ವಿಶ್ವ ಹವಾಮಾನ ಸಂಸ್ಥೆ (ಡಬ್ಲ್ಯುಎಂಒ) ವರದಿ ಹೇಳಿದೆ. 2022ರಲ್ಲಿ ಜಾಗತಿಕ ಸರಾಸರಿ ಉಷ್ಣಾಂಶಕ್ಕಿಂತ 1.15 ಡಿಗ್ರಿ ಸೆಲ್ಸಿಯಸ್‌ ಹೆಚ್ಚು ಸರಾಸರಿ ಉಷ್ಣಾಂಶ ದಾಖಲಾಗಿದೆ. 1850ರಿಂದ ದಾಖಲಾಗಿರುವ ಜಾಗತಿಕ ಉಷ್ಣಾಂಶದ ದತ್ತಾಂಶಗಳ ಪ್ರಕಾರ … Continued

ವಿದೇಶಿ ವಿನಿಮಯ ಉಲ್ಲಂಘನೆ : ಬಿಬಿಸಿ ಇಂಡಿಯಾ ವಿರುದ್ಧ ಪ್ರಕರಣ ದಾಖಲಿಸಿದ ಇ.ಡಿ-ವರದಿ

ನವದೆಹಲಿ: ವಿದೇಶಿ ವಿನಿಮಯ ಕಾಯ್ದೆ ಉಲ್ಲಂಘನೆಗಾಗಿ ಸುದ್ದಿ ಪ್ರಸಾರಕ ಬಿಬಿಸಿ ಇಂಡಿಯಾ ವಿರುದ್ಧ ಜಾರಿ ನಿರ್ದೇಶನಾಲಯ (ಇಡಿ) ಫೆಮಾ ಪ್ರಕರಣ ದಾಖಲಿಸಿದೆ ಎಂದು ಅಧಿಕೃತ ಮೂಲಗಳು ಗುರುವಾರ ತಿಳಿಸಿವೆ ಎಂದು ವರದಿಯೊಂದು ತಿಳಿಸಿದೆ. ಫೆಡರಲ್ ತನಿಖಾ ಸಂಸ್ಥೆಯು ವಿದೇಶಿ ವಿನಿಮಯ ನಿರ್ವಹಣಾ ಕಾಯಿದೆಯ (FEMA) ನಿಬಂಧನೆಗಳ ಅಡಿಯಲ್ಲಿ ಕೆಲವು ಕಂಪನಿಯ ಕಾರ್ಯನಿರ್ವಾಹಕರ ದಾಖಲೆಗಳು ಮತ್ತು ಹೇಳಿಕೆಗಳನ್ನು … Continued

ಏಷ್ಯಾ ಕಪ್ ಬೆಳವಣಿಗೆ ಬಗ್ಗೆ ಅತೃಪ್ತಿ : ಭಾರತದಲ್ಲಿ ನಡೆಯುವ ವಿಶ್ವಕಪ್ ಕ್ರಿಕೆಟ್‌ ಪಂದ್ಯಗಳಲ್ಲಿ ಪಾಕಿಸ್ತಾನ ಆಡುವುದು ಡೌಟು-ವರದಿ

ನವದೆಹಲಿ: ಒಂದು ಮೂಲದ ಪ್ರಕಾರ, ಪಾಕಿಸ್ತಾನದಲ್ಲಿ ನಡೆಯಲಿರುವ ಏಷ್ಯಾ ಕಪ್ 2023 ರಲ್ಲಿ ಭಾರತದ ತಂಡಕ್ಕೆ ಪಾಲ್ಗೊಳ್ಳಲು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ)ಯು ಅವಕಾಶ ನೀಡದಿದ್ದರೆ ಈ ವರ್ಷದ ಕೊನೆಯಲ್ಲಿ ಭಾರತದಲ್ಲಿ ನಡೆಯಲಿರುವ ಐಸಿಸಿ ಕ್ರಿಕೆಟ್ ವಿಶ್ವಕಪ್ 2023 ರಲ್ಲಿ ಭಾಗವಹಿಸುವುದಿಲ್ಲ ಎಂದು ಪಾಕಿಸ್ತಾನ ಬೆದರಿಕೆ ಹಾಕಿದೆ. ಮೂಲವೊಂದರ ಪ್ರಕಾರ ಪಾಕಿಸ್ತಾನವು ಪಂದ್ಯಗಳನ್ನು ಬಾಂಗ್ಲಾದೇಶ … Continued

ಸ್ವಯಂ ಘೋಷಿತ ಖಾಲಿಸ್ತಾನಿ ನಾಯಕ ಅಮೃತಪಾಲ್ ಸಿಂಗ್ ಪರಾರಿಯಾಗುವ ಮೊದಲು ಗುರುದ್ವಾರಕ್ಕೆ ನುಗ್ಗಿ ಬಂದೂಕು ತೋರಿಸಿ ಆಹಾರ-ಬಟ್ಟೆಗೆ ಬೇಡಿಕೆಯಿಟ್ಟಿದ್ದ : ವರದಿ

ನವದೆಹಲಿ: ಪರಾರಿಯಾದ ಸ್ವಯಂ ಘೋಷಿತ ಖಾಲಿಸ್ತಾನಿ ನಾಯಕ ಅಮೃತಪಾಲ್ ಸಿಂಗ್ ಮಾರ್ಚ್ 18 ರಂದು ಪರಾರಿಯಾದ ನಂತರ ಜಲಂಧರ್ ಬಳಿಯ ಗುರುದ್ವಾರದಲ್ಲಿ ಆಹಾರ ಮತ್ತು ಬಟ್ಟೆಗಳನ್ನು ನೀಡುವಂತೆ ಅಲ್ಲಿದ್ದ ಜನರಿಗೆ ಬೆದರಿಕೆ ಹಾಕಿದ್ದ ಎಂದು ವರದಿಯಾಗಿದೆ. ಅಮೃತಪಾಲ್ ಸಿಂಗ್ ನನ್ನು ಬಂಧಿಸಲು ಪಂಜಾಬ್ ಪೊಲೀಸರು ನಡೆಸಿದ ಬೃಹತ್ ಶೋಧ ಕಾರ್ಯಾಚರಣೆಯು ಬುಧವಾರ ಐದನೇ ದಿನಕ್ಕೆ ಕಾಲಿಟ್ಟಿದೆ. … Continued

ಖಾಲಿಸ್ತಾನ್‌ ಪ್ರತಿಪಾದಕ ಅಮೃತಪಾಲ್ ಸಿಂಗ್ ದುಬೈ ತೊರೆದು ಭಾರತಕ್ಕೆ ಹಿಂತಿರುಗಿದ್ದರ ಹಿಂದಿನ ಮೆದುಳೇ ಪಾಕಿಸ್ತಾನದ ಐಎಸ್‌ಐ : ವರದಿ

ನವದೆಹಲಿ: ಪಂಜಾಬ್‌ನಲ್ಲಿ ಭಯೋತ್ಪಾದನೆಯನ್ನು ಪುನರುಜ್ಜೀವನಗೊಳಿಸುವ ಉದ್ದೇಶದಿಂದ ಸಾಗರೋತ್ತರ ಸಿಖ್ ಪ್ರತ್ಯೇಕತಾವಾದಿಗಳ ಸಹಾಯದಿಂದ, ಪಾಕಿಸ್ತಾನದ ಬೇಹುಗಾರಿಕಾ ಸಂಸ್ಥೆ ಐಎಸ್‌ಐ ಅಮೃತಪಾಲ್ ಸಿಂಗ್‌ನನ್ನು ದುಬೈನಿಂದ ಭಾರತಕ್ಕೆ ಕಳುಹಿಸಿದ್ದರ ಹಿಂದಿನ ಮೆದುಳಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 30 ವರ್ಷ ವಯಸ್ಸಿನ ಅಮೃತಪಾಲ್ ಸಿಂಗ್‌, ದುಬೈನಲ್ಲಿ ಟ್ರಕ್ ಚಾಲಕನಾಗಿದ್ದ. ಆದರೆ ಐಎಸ್‌ಐ, ಭಾರತದ ಹೊರಗೆ ನೆಲೆಸಿರುವ ಖಾಲಿಸ್ತಾನ್ ಬೆಂಬಲಿಗರ ಸಹಾಯದಿಂದ, ಪಂಜಾಬ್ … Continued