ಎನ್‌ಕೌಂಟರ್‌ನಲ್ಲಿ 4 ನಕ್ಸಲರನ್ನು ಹೊಡೆದುರುಳಿಸಿದ ಭದ್ರತಾ ಪಡೆಗಳು, ಓರ್ವ ಪೊಲೀಸ್‌ ಹುತಾತ್ಮ

ರಾಯ್ಪುರ : ಶನಿವಾರ ಸಂಜೆ ಛತ್ತೀಸ್‌ಗಢದ ಅಬುಜ್‌ಮದ್‌ನಲ್ಲಿ ಭದ್ರತಾ ಪಡೆಗಳೊಂದಿಗೆ ಗಂಟೆಗಳ ಕಾಲ ನಡೆದ ಗುಂಡಿನ ಚಕಮಕಿಯಲ್ಲಿ ಕನಿಷ್ಠ ನಾಲ್ವರು ನಕ್ಸಲರು ಹತರಾಗಿದ್ದಾರೆ. ಮತ್ತು ಪೊಲೀಸ್ ಪೇದೆಯೊಬ್ಬರು ಹುತಾತ್ಮರಾಗಿದ್ದಾರೆ ಎಂದು ವರದಿಯಾಗಿದೆ. ಮೃತ ನಕ್ಸಲರ ದೇಹಗಳನ್ನು ವಶಕ್ಕೆ ಪಡೆಯಲಾಗಿದೆ. ಸ್ಥಳದಲ್ಲಿ ಎಕೆ-47, ಎಸ್‌ಎಲ್‌ಆರ್ ಮತ್ತು ಇತರ ಸ್ವಯಂಚಾಲಿತ ಶಸ್ತ್ರಾಸ್ತ್ರಗಳು ಸೇರಿದಂತೆ ಅಪಾರ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ. ಶನಿವಾರ … Continued

ನಟಿ ಸನ್ನಿ ಲಿಯೋನ್‌ ಹೆಸರಿನಲ್ಲಿ ಸರ್ಕಾರಿ ಯೋಜನೆಯಿಂದ ಪ್ರತಿ ತಿಂಗಳು 1000 ರೂ. ಪಡೆಯುತ್ತಿದ್ದ ವ್ಯಕ್ತಿ…!

ರಾಯಪುರ: ಛತ್ತೀಸ್‌ಗಢದಲ್ಲಿ ವಂಚಕನೊಬ್ಬ ನಟಿ ಸನ್ನಿ ಲಿಯೋನ್ ಹೆಸರಿನಲ್ಲಿ ಆನ್‌ಲೈನ್ ಖಾತೆ ತೆರೆದು ಸರ್ಕಾರದ ಯೋಜನೆಯಡಿ ಪ್ರತಿ ತಿಂಗಳು 1,000 ರೂ. ಹಣ ಪಡೆಯುವಲ್ಲಿ ಯಶಸ್ವಿಯಾಗಿದ್ದಾನೆ. ಛತ್ತೀಸ್‌ಗಢ ಸರ್ಕಾರವು ಮಹತಾರಿ ವಂದನ್ ಯೋಜನೆಯಡಿಯಲ್ಲಿ ರಾಜ್ಯದ ವಿವಾಹಿತ ಮಹಿಳೆಯರಿಗೆ ಪ್ರತಿ ತಿಂಗಳು 1,000 ರೂ. ಸಹಾಯಧನ ನೀಡುತ್ತದೆ. ಇದನ್ನು ನಟಿ ಸನ್ನಿಲಿಯೋನ್‌ ಹೆಸರಿನಲ್ಲಿ ನಕಲಿ ಖಾತೆ ತೆರದು … Continued

ಜೀವಂತ ಕೋಳಿಮರಿ ನುಂಗಿದ ವ್ಯಕ್ತಿ ಸಾವು ; ಆದ್ರೆ ದೇಹದೊಳಗೆ ಬದುಕುಳಿದ ಕೋಳಿಮರಿ…!!

ವಿಚಿತ್ರ ಘಟನೆಯೊಂದರಲ್ಲಿ ಛತ್ತೀಸ್‌ಗಢದ ವ್ಯಕ್ತಿಯೊಬ್ಬ ಜೀವಂತ ಕೋಳಿಮರಿಯನ್ನು ನುಂಗಿ ಉಸಿರುಗಟ್ಟಿ ಸಾವಿಗೀಡಾಗಿದ್ದಾನೆ. ಆದರೆ ವಿಚಿತ್ರವೆಂದರೆ ಆತ ನುಂಗಿದ ಕೋಳಿಮರಿ ದೇಹದೊಳಗೆ ಜೀವಂತವಾಗಿ ಪತ್ತೆಯಾಗಿದೆ…! ಗ್ರಾಮಸ್ಥರ ಪ್ರಕಾರ ಇದು ನಿಗೂಢ ಕ್ಷುದ್ರ ಆಚರಣೆ ಭಾಗವಾಗಿ ನಡೆದ ವಿದ್ಯಮಾನವಾಗಿದೆ. ಛತ್ತೀಸ್‌ಗಢದ ಅಂಬಿಕಾಪುರದ ಚಿಂಡ್ಕಾಲೋ ಗ್ರಾಮದ ಆನಂದ ಯಾದವ ಎಂಬ 35 ವರ್ಷದ ವ್ಯಕ್ತಿ, ಸ್ನಾನ ಮುಗಿಸಿ ಬಂದ ಸ್ವಲ್ಪ … Continued

10 ನಕ್ಸಲರನ್ನು ಹೊಡೆದುರುಳಿಸಿದ ಭದ್ರತಾ ಪಡೆ

ರಾಯ್ಪುರ: ಛತ್ತೀಸ್‌ಗಡದಲ್ಲಿ ನಡೆದ ಕಾರ್ಯಾಚರಣೆಯಲ್ಲಿ 10 ನಕ್ಸಲರನ್ನು ಹೊಡೆದುರುಳಿಸಲಾಗಿದೆ. ಸುಕ್ಮಾ ಜಿಲ್ಲೆಯಲ್ಲಿ ಈ ಎನ್‌ಕೌಂಟರ್‌ ನಡೆದಿದ್ದು, ಈ ವೇಳೆ ಹತ ನಕ್ಸಲರಿಂದ ಭಾರೀ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಕ್ಕೆ ಪಡೆಯಲಾಗಿದೆ. ನಕ್ಸಲೀಯರು ಒಡಿಶಾ ಮೂಲಕ ಛತ್ತೀಸ್‌ಗಢ ಪ್ರವೇಶಿಸುತ್ತಿದ್ದಾರೆ ಎಂಬ ಗುಪ್ತಚರ ಮಾಹಿತಿ ಮೇರೆಗೆ ಜಿಲ್ಲಾ ಮೀಸಲು ಪಡೆ (ಡಿಆರ್‌ಜಿ) ಕಾರ್ಯಾಚರಣೆ ಆರಂಭಿಸಿದೆ. ಇಂದು, ಶುಕ್ರವಾರ ಬೆಳ್ಳಂ ಬೆಳಗ್ಗೆ … Continued

ಸ್ನೇಹಿತನನ್ನು ಪ್ರಕರಣದಲ್ಲಿ ಸಿಲುಕಿಸಲು ವಿಮಾನಗಳಿಗೆ ಬಾಂಬ್‌ ಬೆದರಿಕೆ ಹಾಕಿದ್ದ ಅಪ್ರಾಪ್ತ…!

ಮುಂಬೈ: ಸೋಮವಾರದಿಂದ ವಿವಿಧ ವಿಮಾನಯಾನ ಸಂಸ್ಥೆಗಳಿಗೆ ಸರಣಿ ಬಾಂಬ್ ಬೆದರಿಕೆಗಳನ್ನು ಹಾಕಿದ್ದ ಹಿನ್ನೆಲೆಯಲ್ಲಿ ಮುಂಬೈ ಪೊಲೀಸರು ಅಪ್ರಾಪ್ತ ವಯಸ್ಕನನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಬಾಂಬ್ ಬೆದರಿಕೆಗಳಿಂದಾಗಿ ಕೆಲವು ವಿಮಾನಗಳನ್ನು ದೂರದ ಕೆನಡಾದ ವಿಮಾನ ನಿಲ್ದಾಣಕ್ಕೂ ತಿರುಗಿಸಲಾಗಿತ್ತು. ಹುಡುಗನು ತನ್ನ ಸ್ನೇಹಿತನೊಬ್ಬನನ್ನು ಬಂಧನಕ್ಕೆ ಒಳಗಾಗುವಂತೆ ಮಾಡಬೇಕು ಎಂದು ಬಯಸಿ ಬಾಂಬ್‌ ಬೆದರಿಕೆಗಳನ್ನು ಹಾಕಿದ್ದ ಎಂದು ಹೇಳಲಾಗಿದೆ ಎಂದು ಪೊಲೀಸರು … Continued

ವೀಡಿಯೊ..| ಪೊಲೀಸ್‌ ಕುಟುಂಬದ ಹತ್ಯೆಯ ಘಟನೆಯ ನಂತರ ಉಪವಿಭಾಗೀಯ ಅಧಿಕಾರಿಯನ್ನು ಬೆನ್ನಟ್ಟಿದ ಉದ್ರಿಕ್ತ ಗುಂಪು…!

ಆಘಾತಕಾರಿ ಘಟನೆಯೊಂದರಲ್ಲಿ, ಉದ್ರಿಕ್ತ ಗುಂಪೊಂದು ಸೋಮವಾರ ಛತ್ತೀಸ್‌ಗಢದ ಸೂರಜ್‌ಪುರದಲ್ಲಿ ಉಪವಿಭಾಗೀಯ ಮ್ಯಾಜಿಸ್ಟ್ರೇಟ್ (ಎಸ್‌ಡಿಎಂ) ಅವರನ್ನು ಥಳಿಸಲು ಪ್ರಯತ್ನಿಸಿದೆ. ಆದರೆ, ಸ್ಥಳದಲ್ಲಿದ್ದ ಪೊಲೀಸ್ ಸಿಬ್ಬಂದಿ ಹಿರಿಯ ಅಧಿಕಾರಿಯನ್ನು ಪಾರು ಮಾಡಿದ್ದಾರೆ. ಸುದ್ದಿ ಸಂಸ್ಥೆ ಐಎಎನ್‌ಎಸ್ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಎಕ್ಸ್‌ನಲ್ಲಿ ಹಂಚಿಕೊಂಡ ದೃಶ್ಯಗಳ ಪ್ರಕಾರ, ಜನಸಂದಣಿಯನ್ನು ನಿಯಂತ್ರಿಸಲು ಘಟನಾ ಸ್ಥಳದಲ್ಲಿದ್ದ ಹಿರಿಯ ಅಧಿಕಾರಿಯ ಹಿಂದೆ ಉದ್ರಿಕ್ತ ಗುಂಪು … Continued

ಸಿಖ್ಖರ ಭಾವನೆಗಳಿಗೆ ಧಕ್ಕೆ ತಂದ ಆರೋಪ ; ರಾಹುಲ್‌ ಗಾಂಧಿ ವಿರುದ್ಧ 3 ಎಫ್‌ಐಆರ್‌ ದಾಖಲು

ರಾಯ್ಪುರ : ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಇತ್ತೀಚಿನ ಅಮೆರಿಕ ಭೇಟಿಯ ವೇಳೆ ನೀಡಿದ ಹೇಳಿಕೆಗಳು  ಸಿಖ್ ಸಮುದಾಯದ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದೆ ಎಂದು ಆರೋಪಿಸಿ ಛತ್ತೀಸ್‌ಗಢದಲ್ಲಿ ರಾಹುಲ್‌ ಗಾಂಧಿಯವರ ಮೇಲೆ ಮೂರು ಎಫ್‌ಐಆರ್‌ಗಳನ್ನು ದಾಖಲಿಸಲಾಗಿದೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ. ರಾಜಧಾನಿ ರಾಯ್ಪುರದ ಸಿವಿಲ್ ಲೈನ್ಸ್ ಪೊಲೀಸ್ ಠಾಣೆಯಲ್ಲಿ ಒಂದು ಮತ್ತು ಬಿಲಾಸ್‌ಪುರ … Continued

ಎನ್‌ಕೌಂಟರ್‌ನಲ್ಲಿ ಎಂಟು ನಕ್ಸಲೀಯರ ಹತ್ಯೆ, ಓರ್ವ ಭದ್ರತಾ ಸಿಬ್ಬಂದಿ ಹುತಾತ್ಮ

ನವದೆಹಲಿ : ಶನಿವಾರ (ಜೂನ್ 15) ಛತ್ತೀಸ್‌ಗಢದ ಅಬುಜ್ಮದ್ ಪ್ರದೇಶದಲ್ಲಿ ಭದ್ರತಾ ಪಡೆಗಳೊಂದಿಗೆ ನಡೆದ ಎನ್‌ಕೌಂಟರ್‌ನಲ್ಲಿ ಕನಿಷ್ಠ ಎಂಟು ನಕ್ಸಲೀಯರು ಹತರಾಗಿದ್ದಾರೆ. ಹಾಗೂ ಭದ್ರತಾ ಸಿಬ್ಬಂದಿ ಹುತಾತ್ಮರಾಗಿದ್ದಾರೆ. ನಾರಾಯಣಪುರ, ಕಂಕೇರ್, ದಾಂತೇವಾಡ ಮತ್ತು ಕೊಂಡಗಾಂವ್ ಎಂಬ ನಾಲ್ಕು ಜಿಲ್ಲೆಗಳ ಭದ್ರತಾ ಸಿಬ್ಬಂದಿಯ ಜಂಟಿ ತಂಡವು ನಕ್ಸಲ್ ವಿರೋಧಿ ಕಾರ್ಯಾಚರಣೆಯಲ್ಲಿ ತೊಡಗಿದ್ದಾಗ ಅಬುಜ್ಮದ್ ಅರಣ್ಯದಲ್ಲಿ ಶನಿವಾರ ಬೆಳಿಗ್ಗೆ … Continued

ಎನ್‌ಕೌಂಟರ್‌ನಲ್ಲಿ ಏಳು ನಕ್ಸಲೀಯರು ಹತ

ರಾಯ್ಪುರ: ಛತ್ತೀಸ್‌ಗಢದ ನಾರಾಯಣಪುರ-ಬಿಜಾಪುರ ಅಂತರ ಜಿಲ್ಲಾ ಗಡಿಯ ಅರಣ್ಯದಲ್ಲಿ ಗುರುವಾರ ಭದ್ರತಾ ಸಿಬ್ಬಂದಿಯೊಂದಿಗೆ ನಡೆದ ಎನ್‌ಕೌಂಟರ್‌ನಲ್ಲಿ ಏಳು ನಕ್ಸಲೀಯರು ಹತರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಭದ್ರತಾ ಸಿಬ್ಬಂದಿಯ ಜಂಟಿ ತಂಡವು ನಕ್ಸಲ್ ವಿರೋಧಿ ಕಾರ್ಯಾಚರಣೆಯಲ್ಲಿ ತೊಡಗಿದ್ದಾಗ ಗುರುವಾರ ಬೆಳಿಗ್ಗೆ 11 ಗಂಟೆ ಸುಮಾರಿಗೆ ಗುಂಡಿನ ಚಕಮಕಿ ನಡೆಯಿತು ಎಂದು ನಾರಾಯಣಪುರ ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ) ಪ್ರಭಾತಕುಮಾರ … Continued

ಮೊಬೈಲ್ ನಲ್ಲಿ ಹುಡುಗರ ಜೊತೆ ಹರಟೆ ಬೇಡ ಅಂದಿದ್ದಕ್ಕೆ ಅಣ್ಣನನ್ನೇ ಕೊಡಲಿಯಿಂದ ಹೊಡೆದು ಕೊಂದ 14 ವರ್ಷದ ಬಾಲಕಿ…!

ರಾಜನಂದಗಾಂವ್ : ಬುದ್ದಿವಾದ ಹೇಳಿದ್ದಕ್ಕೆ 14 ವರ್ಷದ ಬಾಲಕಿಯೊಬ್ಬಳು ಅಣ್ಣನನ್ನೇ ಕೊಲೆ ಮಾಡಿದ ಭಯಾನಕ ಘಟನೆ ಛತ್ತೀಸ್ ಗಡದ ಖೈರಗಢ-ಚುಯಿಖಾದನ್-ಗಂಡೈ (ಕೆಸಿಜಿ) ಜಿಲ್ಲೆಯಲ್ಲಿ ನಡೆದಿದೆ. ಮೊಬೈಲ್ ಫೋನ್‌ನಲ್ಲಿ ಮಾತನಾಡಿದ್ದಕ್ಕಾಗಿ ಬುದ್ಧಿವಾದ ಹೇಳಿದ ನಂತರ ತನ್ನ ಅಣ್ಣನನ್ನು ಕೊಡಲಿಯಿಂದ ಹೊಡೆದು ಕೊಂದಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಶುಕ್ರವಾರ ಚುಯಿಖಾಡನ್ ಪೊಲೀಸ್ ಠಾಣಾ ವ್ಯಾಪ್ತಿಯ ಅಮ್ಲಿದಿಹ್ಕಲಾ ಗ್ರಾಮದಲ್ಲಿ ನಡೆದ … Continued