ಪಂಚ ರಾಜ್ಯಗಳ ಚುನಾವಣೆ 2023 : 2 ರಾಜ್ಯಗಳಲ್ಲಿ ಬಿಜೆಪಿ, 2 ರಾಜ್ಯಗಳಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ, 1ರಲ್ಲಿ ಅತಂತ್ರ ಎಂದು ಎಕ್ಸಿಟ್ ಪೋಲ್ ಗಳ ಭವಿಷ್ಯ

ಮಧ್ಯಪ್ರದೇಶ ಮತ್ತು ರಾಜಸ್ಥಾನದಲ್ಲಿ ಬಿಜೆಪಿಗೆ ಲಾಭವಾಗಲಿದೆ ಹಾಗೂ ಛತ್ತೀಸ್‌ಗಢ ಮತ್ತು ತೆಲಂಗಾಣದಲ್ಲಿ ಕಾಂಗ್ರೆಸ್‌ಗೆ ಮುನ್ನಡೆ ಸಿಗಲಿದೆ ಎಂದು ಎಂದು ಗುರುವಾರ ಪ್ರಕಟವಾದ ಬಹುತೇಕ ಎಕ್ಸಿಟ್ ಪೋಲ್‌ಗಳು ಭವಿಷ್ಯ ನುಡಿದಿವೆ. ಮಿಜೋರಾಂನಲ್ಲಿ ಅತಂತ್ರ ವಿಧಾನಸಭೆಯ ಬಗ್ಗೆ ಹೇಳಿವೆ ಎಂದು ಸೂಚಿಸಿವೆ.
230 ಸದಸ್ಯ ಬಲದ ಮಧ್ಯಪ್ರದೇಶ ವಿಧಾನಸಭೆಯಲ್ಲಿ ಬಿಜೆಪಿ ಅಧಿಕಾರದಲ್ಲಿದ್ದರೆ, 200 ಸದಸ್ಯ ಬಲದ ರಾಜಸ್ಥಾನ ಮತ್ತು 90 ಸದಸ್ಯ ಬಲದ ಛತ್ತೀಸ್‌ಗಢದಲ್ಲಿ ಕಾಂಗ್ರೆಸ್ ಆಡಳಿತ ನಡೆಸುತ್ತಿದೆ. ತೆಲಂಗಾಣದಲ್ಲಿ ಕೆ.ಚಂದ್ರಶೇಖರ್ ರಾವ್ ನೇತೃತ್ವದ ಭಾರತ್ ರಾಷ್ಟ್ರ ಸಮಿತಿ (ಬಿಆರ್‌ಎಸ್) 10 ವರ್ಷಗಳಿಂದ ಅಧಿಕಾರದಲ್ಲಿದೆ ಮತ್ತು ಮಿಜೋರಾಂನಲ್ಲಿ ಎಂಎನ್‌ಎಫ್ ಸರ್ಕಾರದಲ್ಲಿದೆ. ಐದು ರಾಜ್ಯಗಳಿಗೆ ನವೆಂಬರ್ 7 ಹಾಗೂ ನವೆಂಬರ್ 30 ರ ನಡುವೆ ಚುನಾವಣೆಗಳು ನಡೆದಿದ್ದು, ಡಿಸೆಂಬರ್ 3 ರಂದು ಮತ ಎಣಿಕೆ ನಡೆಯಲಿದೆ.
ಮಧ್ಯಪ್ರದೇಶದಲ್ಲಿ ಬಿಜೆಪಿಗೆ ಮುನ್ನಡೆ ಸಾಧ್ಯತೆ….
ಟುಡೇಸ್ ಚಾಣಕ್ಯ, ಮಧ್ಯಪ್ರದೇಶದಲ್ಲಿ ಬಿಜೆಪಿಗೆ ಭಾರೀ ಗೆಲುವಿನ ಭವಿಷ್ಯ ನುಡಿದಿದ್ದು, ಬಿಜೆಪಿ 151 (ಪ್ಲಸ್ ಅಥವಾ ಮೈನಸ್ 12 ಸ್ಥಾನಗಳು) ಮತ್ತು ಕಾಂಗ್ರೆಸ್ 74 (ಪ್ಲಸ್ ಅಥವಾ ಮೈನಸ್ 12 ಸ್ಥಾನಗಳು) ಪಡೆಯುತ್ತದೆ ಎಂದು ಭವಿಷ್ಯ ನುಡಿದಿದೆ. ಇಂಡಿಯಾ ಟುಡೇ-ಆಕ್ಸಿಸ್ ಮೈ ಇಂಡಿಯಾವು 140-162 ಸ್ಥಾನಗಳನ್ನು ಗೆಲ್ಲಬಹುದು ಎಂದು ಹೇಳಿದೆ. ಕಾಂಗ್ರೆಸ್‌ 68-90 ಸ್ಥಾನಗಳನ್ನು ಗೆಲ್ಲಬಹುದು ಎಂದು ಹೇಳಿದೆ. ಇಂಡಿಯಾ ಟವಿ-ಸಿಎನ್‌ಎಕ್ಸ್‌ 140-159 ಸ್ಥಾನಗಳನ್ನು ಗೆಲ್ಲಬಹುದು ಹಾಗೂ ಕಾಂಗ್ರೆಸ್‌ 70-89 ಸ್ಥಾನಗಳನ್ನು ಗೆಲ್ಲಬಹುದು ಎಂದು ಹೇಳಿದೆ.
ಜನ್ ಕಿ ಬಾತ್ ಎಕ್ಸಿಟ್ ಪೋಲ್ ಬಿಜೆಪಿ 100-123 ಸ್ಥಾನಗಳನ್ನು ಮತ್ತು ಕಾಂಗ್ರೆಸ್ 102- 125 ಸ್ಥಾನಗಳನ್ನು ಪಡೆಯಲಿದೆ ಎಂದು ಭವಿಷ್ಯ ನುಡಿದಿದೆ. ರಿಪಬ್ಲಿಕ್ ಟಿವಿ-ಮ್ಯಾಟ್ರಿಜ್ ಬಿಜೆಪಿ 118-130 ಸೀಟುಗಳು ಮತ್ತು ಕಾಂಗ್ರೆಸ್‌ಗೆ 97-107 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ ಎಂದು ಹೇಳಿದೆ. ಬಿಜೆಪಿ 106-116 ಮತ್ತು ಕಾಂಗ್ರೆಸ್ 111-121 ಪಡೆಯಲಿದೆ ಎಂದು ಟಿವಿ9 ಭಾರತ ವರ್ಷ ಪೋಲ್‌ಸ್ಟ್ರಾಟ್ ಹೇಳಿದೆ.
Jist-TIF-NAI ಎಕ್ಸಿಟ್‌ ಪೋಲ್‌ ಮಧ್ಯಪ್ರದೇಶದಲ್ಲಿ ಬಿಜೆಪಿಯ 102-119 ಗೆಲ್ಲಬಹುದು, ಕಾಂಗ್ರೆಸ್ 107-124 ಸ್ಥಾನಗಳನ್ನು ಗೆಲ್ಲಬಹುದು ಭವಿಷ್ಯ ನುಡಿದಿದೆ. ಎನ್ಡಿಟಿವಿ ಪೋಲ್ಸ್‌ ಆಫ್‌ ಪೋಲ್‌ ಬಿಜೆಪಿ 124, ಕಾಂಗ್ರೆಸ್‌ 102 ಸ್ಥಾನಗಳನ್ನು ಗೆಲ್ಲಬಹುದು ಎಂದು ಹೇಳಿದೆ.

ಪ್ರಮುಖ ಸುದ್ದಿ :-   ಬಾಬಾ ರಾಮದೇವ ಕಂಪನಿ ತಯಾರಿಸಿದ 14 ಔಷಧಗಳ ತಯಾರಿಕಾ ಪರವಾನಗಿ ಅಮಾನತು ಮಾಡಿದ ಉತ್ತರಾಖಂಡ ಸರ್ಕಾರ

ರಾಜಸ್ಥಾನದಲ್ಲಿ ಬಿಜೆಪಿಗೆ ಸರಳ ಬಹುಮತ ಸಾಧ್ಯತೆ…
ರಾಜಸ್ಥಾನದಲ್ಲಿ ಹೆಚ್ಚಿನ ಸಮೀಕ್ಷೆಗಳು ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದು ಭವಿಷ್ಯ ನುಡಿದಿದೆ. ಜನ್ ಕಿ ಬಾತ್ ಸಮೀಕ್ಷೆ ಬಿಜೆಪಿಗೆ 100-122 ಮತ್ತು 62-85 ಮತ್ತು ಕಾಂಗ್ರೆಸ್‌ಗೆ 62-85, ಟಿವಿ9 ಭಾರತ ವರ್ಷ- ಪೋಲ್‌ಸ್ಟ್ರಾಟ್ ಬಿಜೆಪಿಗೆ 100-110 ಮತ್ತು ಕಾಂಗ್ರೆಸ್‌ಗೆ 90-100 ಸ್ಥಾನಗಳು ಸಿಗಲಿವೆ ಎಂದು ಭವಿಷ್ಯ ನುಡಿದಿದೆ. ಟೈಮ್ಸ್ ನೌ ಇಟಿಜಿ ಸಮೀಕ್ಷೆಯು ರಾಜಸ್ಥಾನದಲ್ಲಿ ಬಿಜೆಪಿಗೆ 108-128 ಮತ್ತು ಕಾಂಗ್ರೆಸ್‌ 56-72 ಸ್ಥಾನಗಳನ್ನು ಗೆಲ್ಲಬಹುದು ಎಂದು ಭವಿಷ್ಯ ನುಡಿದಿದೆ.
ಆದರೆ ಇಂಡಿಯಾ ಟುಡೇ-ಆಕ್ಸಿಸ್ ಮೈ ಇಂಡಿಯಾ ತೀವ್ರ ಪೈಪೋಟಿಯ ಮುನ್ಸೂಚನೆ ನೀಡಿದ್ದು, ಕಾಂಗ್ರೆಸ್‌ಗೆ 86-106 ಸ್ಥಾನಗಳು, ಬಿಜೆಪಿಗೆ 80-100 ಸ್ಥಾನಗಳು ಮತ್ತು ಇತರರು 9-18 ಸ್ಥಾನಗಳನ್ನು ಗೆಲ್ಲಬಹುದು ಎಂದು ಹೇಳಿದೆ. Jist-TIF-NAI ಸಮೀಕ್ಷೆಯು ಬಿಜೆಪಿ 110 ಸ್ಥಾನಗಳು ಮತ್ತು ಕಾಂಗ್ರೆಸ್‌ಗೆ 70 ಸ್ಥಾನಗಳು ಸಿಗಬಹುದು ಎಂದು ಹೇಳಿದೆ. ಮಾರ್ಟ್ರೈಝ್‌ ಸಮೀಕ್ಷೆಯು ಬಿಜೆಪಿ 115-130 ಕಾಂಗ್ರೆಸ್‌ 65-75 ಸ್ಥಾನಗಳನ್ನು ಗೆಲ್ಲಬಹುದು ಎಂದು ಹೇಳಿದೆ. ಸಿವೋಟರ್‌ ಬಿಜೆಪಿ 94-114 ಹಾಗೂ ಕಾಂಗ್ರೆಸ್‌ 71-91 ಸ್ಥಾನಗಳನ್ನು ಗೆಲ್ಲಲಿದೆ ಎಂದು ತೋರಿಸಿದೆ.

ಛತ್ತೀಸ್‌ಗಢದಲ್ಲಿ ಕಾಂಗ್ರೆಸ್‌ ಮತ್ತೆ ಅಧಿಕಾರಕ್ಕೆ ಬರುವ ಸಾಧ್ಯತೆ….
ಛತ್ತೀಸ್‌ಗಢದಲ್ಲಿ ಕಾಂಗ್ರೆಸ್‌ ಮತ್ತೆ ಅಧಿಕಾರ ಉಳಿಸಿಕೊಳ್ಳುವ ಸಾಧ್ಯತೆ ಕಂಡುಬರುತ್ತಿದೆ ಎಂದು ಹೆಚ್ಚಿನ ಸಮೀಕ್ಷೆಗಳು ಹೇಳಿದೆ. ಎಬಿಪಿ ನ್ಯೂಸ್-ಸಿ ವೋಟರ್ ಬಿಜೆಪಿಗೆ 36-48 ಸ್ಥಾನಗಳನ್ನು -ಕಾಂಗ್ರೆಸ್‌ 41-53 ಸ್ಥಾನಗಳನ್ನು ಗೆಲ್ಲಬಹುದು ಎಂದು ಹೇಳಿದೆ. ಇಂಡಿಯಾ ಟುಡೇ-ಆಕ್ಸಿಸ್ ಮೈ ಇಂಡಿಯಾ ಬಿಜೆಪಿಗೆ 36-46 ಸ್ಥಾನಗಳು ಮತ್ತು ಕಾಂಗ್ರೆಸ್‌ಗೆ 40-50 ಸ್ಥಾನಗಳನ್ನು ಗೆಲ್ಲಬಹುದು ಎಂದು ಭವಿಷ್ಯ ನುಡಿದಿದೆ. ಇಂಡಿಯಾ ಟಿವಿ-ಸಿಎನ್‌ಎಕ್ಸ್ ಬಿಜೆಪಿಗೆ 30-40 ಸೀಟುಗಳು ಮತ್ತು ಕಾಂಗ್ರೆಸ್‌ಗೆ 46-56 ಸ್ಥಾನಗಳನ್ನು ಸಿಗಬಹುದು ಎಂದು ಹೇಳಿದೆ. ಜನ್ ಕಿ ಬಾತ್ ಪ್ರಕಾರ ಬಿಜೆಪಿ 34-45 ಮತ್ತು ಕಾಂಗ್ರೆಸ್ 42-53 ಸ್ಥಾನಗಳನ್ನು ಪಡೆಯಲಿದೆ. ಟುಡೇಸ್ ಚಾಣಕ್ಯ ಬಿಜೆಪಿಗೆ 33 ಸ್ಥಾನಗಳು (ಪ್ಲಸ್-ಮೈನಸ್ 8 ಸ್ಥಾನಗಳು) ಮತ್ತು ಕಾಂಗ್ರೆಸ್ ಸ್ಪಷ್ಟ ಬಹುಮತ 57 ಸ್ಥಾನಗಳನ್ನು (ಪ್ಲಸ್-ಮೈನಸ್ 8) ಗಳಿಸಲಿದೆ ಎಂದು ಭವಿಷ್ಯ ನುಡಿದಿದೆ

ಪ್ರಮುಖ ಸುದ್ದಿ :-   ಟಿ20 ವಿಶ್ವಕಪ್ ಕ್ರಿಕೆಟ್‌ 2024 : 15 ಆಟಗಾರರ ಭಾರತದ ತಂಡ ಪ್ರಕಟ ; ಕೆಎಲ್ ರಾಹುಲ್ ಗೆ ಕೊಕ್

ತೆಲಂಗಾಣದಲ್ಲಿ ಕಾಂಗ್ರೆಸ್‌ ಮುಂದೆ….
. ತೆಲಂಗಾಣದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬರುವುದು ನಿಚ್ಚಳವಾಗಿದೆ ಎಂದು ಬಹುತೇಕ ಸಮೀಕ್ಷೆಗಳು ಹೇಳಿವೆ. ಇಂಡಿಯಾ ಟಿವಿ-ಸಿಎನ್‌ಎಕ್ಸ್ ಕಾಂಗ್ರೆಸ್‌ 63-79, ಬಿಆರ್‌ಎಸ್‌ 31-47, ಬಿಜೆಪಿ 2-4 ಮತ್ತು ಎಐಎಂಐಎಂ 5-7 ಸೀಟುಗಳನ್ನು ಗೆಲ್ಲಬಹುದು ಎಂದು ಭವಿಷ್ಯ ನುಡಿದಿದೆ. ಕಾಂಗ್ರೆಸ್‌ಗೆ 48-64 ಸ್ಥಾನಗಳು ಸಿಗಲಿದೆ ಎಂದು ಜನ್ ಕೀ ಬಾತ್ ಮುನ್ಸೂಚನೆ ನೀಡಿದೆ. ಅದು BRS 40-55, ಬಿಜೆಪಿ 7-13 ಮತ್ತು AIMIM 4-7 ಸ್ಥಾನಗಳನ್ನು ಪಡೆಯಲಿದೆ ಎಂದು ಹೇಳಿದೆ.
ಕಾಂಗ್ರೆಸ್ 58-68, ಬಿಆರ್‌ಎಸ್ 46-56, ಬಿಜೆಪಿ 4-9 ಮತ್ತು ಎಐಎಂಐಎಂ 5-9 ಸ್ಥಾನಗಳನ್ನು ಪಡೆಯಲಿದೆ ಎಂದು ರಿಪಬ್ಲಿಕ್ ಟಿವಿ-ಮ್ಯಾಟ್ರಿಜ್ ಭವಿಷ್ಯ ನುಡಿದಿದೆ. ಟಿವಿ9 ಭಾರತ ವರ್ಷ ಪೋಲ್‌ಸ್ಟ್ರಾಟ್ ಕಾಂಗ್ರೆಸ್‌ಗೆ 49-59 ಸ್ಥಾನಗಳನ್ನು ನೀಡಿದರೆ ಬಿಆರ್‌ಎಸ್ 48-58 ಸ್ಥಾನಗಳನ್ನು ಪಡೆಯಲಿದೆ ಎಂದು ಹೇಳಿದೆ.
ಮಿಜೋರಾಂನಲ್ಲಿ ಅತಂತ್ರ…
ಮಿಜೋರಾಂನಲ್ಲಿ ಅತಂತ್ರ ಫಲಿತಾಂಶ ಬರಲಿದೆ ಎಂದು ಬಹುತೇಕ ಎಲ್ಲ ಸಮೀಕ್ಷೆಗಖು ಹೇಳಿವೆ. ಇಂಡಿಯಾ ಟಿವಿ-ಸಿಎನ್‌ಎಕ್ಸ್ ಎಂಎನ್‌ಎಫ್ 14-18, ಝಡ್‌ಪಿಎಂ 12-16, ಕಾಂಗ್ರೆಸ್ 8-10 ಮತ್ತು ಬಿಜೆಪಿ 0-2 ಎಂದು ಹೇಳಿದರೆ, ಎಬಿಪಿ ನ್ಯೂಸ್-ಸಿ ವೋಟರ್ ಎಂಎನ್‌ಎಫ್ 15-21, ಝಡ್‌ಪಿಎಂ 12-18 ಮತ್ತು ಕಾಂಗ್ರೆಸ್ 2-8. ಎಂಎನ್‌ಎಫ್‌ಗೆ 10-14 ಸ್ಥಾನಗಳು ಪಡೆಯಲಿವೆ ಎಂದು ಭವಿಷ್ಯ ನುಡಿದಿದೆ. ಜಿಪಿಎಂ 15-25 ಸ್ಥಾನಗಳು, ಕಾಂಗ್ರೆಸ್‌ಗೆ 5-9 ಮತ್ತು ಬಿಜೆಪಿ 0-2 ಸ್ಥಾನಗಳನ್ನು ಪಡೆಯಲಿದೆ ಎಂದು ಜನ್ ಕಿ ಬಾತ್ ಹೇಳಿದೆ.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement