ಮೂರು ವರ್ಷಗಳಿಂದ ಉಳಿಸುತ್ತ ಬಂದ ₹10ರ ನಾಣ್ಯಗಳಿಂದ ₹1.23 ಲಕ್ಷದ ಹೋಂಡಾ ಆಕ್ಟಿವಾ ಖರೀದಿಸಿದ ವ್ಯಕ್ತಿ !

ಮಂಚೇರಿಯಲ್‌ (ತೆಲಂಗಾಣ): ದಿನನಿತ್ಯದ ಖರ್ಚಿನಲ್ಲಿ ಸಿಗುವ ಚಿಲ್ಲರೆ ಹಣವನ್ನು ಉಳಿಸುತ್ತ ಹೋದರೆ ದೊಡ್ಡ ಕನಸನ್ನೂ ನನಸಾಗಿಸಬಹುದು ಎಂಬುದಕ್ಕೆ ತೆಲಂಗಾಣದ ಮಂಚೇರಿಯಲ್‌ ಜಿಲ್ಲೆಯ ಲಕ್ಸೆಟ್ಟಿಪೇಟ್‌ನ 51 ವರ್ಷದ ಪಾದ್ರಿ ಬಿ. ರವಿ ಜೋಸೆಫ್‌ ಅವರೇ ಉದಾಹರಣೆ. ಸತತ ಮೂರು ವರ್ಷಗಳ ಕಾಲ ₹10ರ ನಾಣ್ಯಗಳನ್ನು ಸಂಗ್ರಹಿಸಿದ ಅವರು, ಒಟ್ಟು ₹1.23 ಲಕ್ಷ ಮೊತ್ತದ ನಾಣ್ಯಗಳನ್ನು ನೀಡಿ ಹೊಸ … Continued

ತೆಲಂಗಾಣ ಕಾಂಗ್ರೆಸ್‌ನಲ್ಲಿ ಬಿರುಗಾಳಿ : ಮಗಳ ಮಾತಿಗೆ ತಾಯಿಯ ಸಚಿವ ಸ್ಥಾನಕ್ಕೆ ಕುತ್ತು: ರೇವಂತ ರೆಡ್ಡಿ ಸಂಪುಟದಿಂದ ದಿಢೀರ್ ವಜಾ !

ಹೈದರಾಬಾದ್: ತೆಲಂಗಾಣ ಕಾಂಗ್ರೆಸ್ ಸರ್ಕಾರದ ಆಂತರಿಕ ಭಿನ್ನಮತ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಮುಖ್ಯಮಂತ್ರಿ ರೇವಂತ್ ರೆಡ್ಡಿ ಅವರು ಅರಣ್ಯ ಸಚಿವೆ ಕೊಂಡ ಸುರೇಖಾ ಅವರನ್ನು ಸಚಿವ ಸಂಪುಟದಿಂದ ತಕ್ಷಣದಿಂದ ಜಾರಿಗೆ ಬರುವಂತೆ ವಜಾಗೊಳಿಸಿದ್ದಾರೆ. ಈ ಕುರಿತು ಶಿಫಾರಸು ಪತ್ರವನ್ನು ರಾಜ್ಯಪಾಲ ಶಿವಪ್ರತಾಪ ಶುಕ್ಲಾ ಅವರಿಗೆ ಕಳುಹಿಸಿಕೊಡಲಾಗಿದೆ. ಕೊಂಡ ಸುರೇಖಾ ಅವರ ಮಗಳು ಮುಖ್ಯಮಂತ್ರಿ ರೇವಂತ ರೆಡ್ಡಿ … Continued

ತೆಲಂಗಾಣ ಎಂಜಿನಿಯರ್ ಮನೆ ಮೇಲೆ ಎಸಿಬಿ ದಾಳಿ: ಅಂದಾಜು ₹150 ಕೋಟಿ ಮೌಲ್ಯದ ಆಸ್ತಿ ಪತ್ತೆ

ಹೈದರಾಬಾದ್ : ತೆಲಂಗಾಣದಲ್ಲಿ ಆದಾಯಕ್ಕಿಂತ ಅಧಿಕ ಆಸ್ತಿ (Disproportionate Assets–DA) ಪ್ರಕರಣಕ್ಕೆ ಸಂಬಂಧಿಸಿದಂತೆ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಬುಧವಾರ ನಡೆಸಿದ ದಾಳಿಯಲ್ಲಿ ಸರ್ಕಾರಿ ಎಂಜಿನಿಯರ್ ಒಬ್ಬರ ಬಳಿ ಅಂದಾಜು ₹100ರಿಂದ ₹150 ಕೋಟಿ ಮೌಲ್ಯದ ಆಸ್ತಿಪಾಸ್ತಿಗಳು ಪತ್ತೆಯಾಗಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಪತ್ತೆಯಾದ ಆಸ್ತಿಗಳಲ್ಲಿ ವಸತಿ ಫ್ಲ್ಯಾಟ್‌ಗಳು, ವಾಣಿಜ್ಯ ಕಟ್ಟಡಗಳು, ನಿರ್ಮಾಣ ಹಂತದಲ್ಲಿರುವ ಅಪಾರ್ಟ್‌ಮೆಂಟ್, ಚಿನ್ನಾಭರಣ, … Continued

ಜಾಮೀನಿನ ಬಳಿಕ ಪೋಕ್ಸೋ ಆರೋಪಿಯಿಂದ ಭೀಕರ ಪ್ರತೀಕಾರ : ಪತ್ನಿ, ಮಕ್ಕಳು, ಅತ್ಯಾಚಾರ ಸಂತ್ರಸ್ತೆ-ಆಕೆಯ ಕುಟುಂಬದ ಹತ್ಯೆ

ಹೈದರಾಬಾದ್‌ : ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯಲ್ಲಿ ನಡೆದ ಬೆಚ್ಚಿಬೀಳಿಸುವ ಘಟನೆಯಲ್ಲಿ, ಅತ್ಯಾಚಾರ ಆರೋಪ ಎದುರಿಸುತ್ತಿದ್ದ 35 ವರ್ಷದ ವ್ಯಕ್ತಿಯೊಬ್ಬ ತನ್ನ ಪತ್ನಿ ಮತ್ತು ಇಬ್ಬರು ಮಕ್ಕಳನ್ನು ಕೊಲೆಗೈದು, ಬಳಿಕ ತನ್ನ ವಿರುದ್ಧ ಪೋಕ್ಸೋ (POCSO) ಪ್ರಕರಣ ದಾಖಲಿಸಿದ್ದ 17 ವರ್ಷದ ಅಪ್ರಾಪ್ತ ಹುಡುಗಿ ಹಾಗೂ ಆಕೆಯ ತಾಯಿ ಮತ್ತು ಅಜ್ಜಿಯನ್ನೂ ಹತ್ಯೆಗೈದಿರುವ ಘಟನೆ ನಡೆದಿದೆ. ಆರೋಪಿ … Continued

₹300 ಕೋಟಿ ಬೇನಾಮಿ ಆಸ್ತಿ ಗಳಿಸಿದ ಆರೋಪ : ತೆಲಂಗಾಣದ ಉನ್ನತ ಪೊಲೀಸ್ ಅಧಿಕಾರಿ ಎಸಿಬಿ ಬಲೆಗೆ

ಹೈದರಾಬಾದ್ : ಆದಾಯಕ್ಕೆ ಮೀರಿದ ಆಸ್ತಿ (Disproportionate Assets) ಹೊಂದಿರುವ ಆರೋಪದಡಿ ದಾಖಲಾಗಿದ್ದ ಪ್ರಕರಣದಲ್ಲಿ ತೆಲಂಗಾಣ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಸೋಮವಾರ ಸಂಜೆ ಪೊಲೀಸ್ ಕಂಪ್ಯೂಟರ್ ಸರ್ವಿಸಸ್‌ (ಪಿಸಿಎಸ್‌) ಡಿಎಸ್‌ಪಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಸಂಕಿರೆಡ್ಡಿ ಭೀಮ ರೆಡ್ಡಿಯನ್ನು ಹೈದರಾಬಾದ್‌ನಲ್ಲಿ ಬಂಧಿಸಿದೆ. ಆದಾಯ ಮೂಲಗಳನ್ನು ಮೀರಿ ಸುಮಾರು 300 ಕೋಟಿ ರೂಪಾಯಿ ಅಕ್ರಮ ಆಸ್ತಿ ಪತ್ತೆಯಾದ … Continued

ವಿಡಿಯೋ | ಚಿನ್ನ, ಹಣ ದೋಚಿ ಮಹಿಳೆಯನ್ನು ಬಾವಿಗೆ ತಳ್ಳಿದ ದುಷ್ಕರ್ಮಿ; 21 ಗಂಟೆಗಳ ಕಾಲ ಸಾವಿನೊಂದಿಗೆ ಹೋರಾಡಿ ಬದುಕುಳಿದ ಮಹಿಳೆ

ಕರೀಂನಗರ (ತೆಲಂಗಾಣ) :  ಕೃಷಿ ಬಾವಿಯೊಳಗೆ ಬಿದ್ದಿದ್ದ 55 ವರ್ಷದ ಮಹಿಳೆಯೊಬ್ಬರು ಜೀವ ಉಳಿಸಿಕೊಳ್ಳಲು ಸುಮಾರು 20–21 ಗಂಟೆಗಳ ಕಾಲ ಹರಸಾಹಸ ನಡೆಸಿ ಬದುಕುಳಿದಿರುವ ಘಟನೆ ತೆಲಂಗಾಣದ ಕರೀಂನಗರ ಜಿಲ್ಲೆಯ ನುಸ್ತುಲಾಪುರ ಗ್ರಾಮದಲ್ಲಿ ಬೆಳಕಿಗೆ ಬಂದಿದೆ. ಮಹಿಳೆಯನ್ನು ದರೋಡೆ ಮಾಡಿ ಆಕೆ ತನ್ನನ್ನು ಗುರುತಿಸಬಹುದು ಎಂಬ ಭಯದಿಂದ ಆಕೆಯನ್ನು ಬಾವಿಗೆ ತಳ್ಳಿದ ಆರೋಪದ ಮೇಲೆ 21 … Continued

ಪೋಕ್ಸೋ ಪ್ರಕರಣ : ಪೊಲೀಸರ ಮುಂದೆ ಶರಣಾದ ಕೇಂದ್ರ ಸಚಿವ ಬಂಡಿ ಸಂಜಯ ಪುತ್ರ

 ಕೇಂದ್ರ ಸಚಿವ ಬಂಡಿ ಸಂಜಯಕುಮಾರ ಪುತ್ರ ಭಗೀರಥ  ಸಾಯಿ ಶನಿವಾರ ಪೊಲೀಸರ ಮುಂದೆ ಶರಣಾಗಿದ್ದಾನೆ. ಪೋಕ್ಸೋ ಪ್ರಕರಣದ ಆರೋಪಿಯಾಗಿರುವ ಬಂಡಿ ಭಗೀರಥನಿಗೆ ಮಧ್ಯಂತರ ಪರಿಹಾರ ನೀಡಲು ತೆಲಂಗಾಣ ಹೈಕೋರ್ಟ್ ನಿರಾಕರಿಸಿದ ನಂತರ, ಅವರ ತಂದೆ ಹಾಗೂ ಕೇಂದ್ರಸಚುವ ಬಂಡಿ ಸಂಜಯಕುಮಾರ ಶನಿವಾರ ತಮ್ಮ ಮಗನಿಗೆ ಪೊಲೀಸರ ಮುಂದೆ ಹಾಜರಾಗಿ ತನಿಖೆಗೆ ಸಹಕರಿಸುವಂತೆ ಸೂಚಿಸಿದ್ದರು. ಅದರ ನಂತರ … Continued

ಮಾಂಸಾಹಾರದ ಅಡುಗೆ ವಿಚಾರಕ್ಕೆ ಜಗಳ; ಪತಿಯನ್ನೇ ಕಡಿದು ಕೊಂದ ಪತ್ನಿ

ಕಾಮರೆಡ್ಡಿ (ತೆಲಂಗಾಣ): ಮಾಂಸಾಹಾರಿ ಅಡುಗೆ ಮಾಡುವ ವಿಚಾರವಾಗಿ ತಡರಾತ್ರಿ ನಡೆದ ಜಗಳ ವಿಕೋಪಕ್ಕೆ ತಿರುಗಿ, ಪತ್ನಿಯೇ ತನ್ನ ಪತಿಯನ್ನು ಕೊಡಲಿಯಿಂದ ಕೊಚ್ಚಿ ಕೊಂದಿರುವ ಭೀಕರ ಘಟನೆ ತೆಲಂಗಾಣದ ಕಾಮರೆಡ್ಡಿ ಜಿಲ್ಲೆಯಲ್ಲಿ ನಡೆದಿದೆ ಎಂದು ವರದಿಯಾಗಿದೆ. ತೆಲಂಗಾಣದ ಕಾಮರೆಡ್ಡಿ ಜಿಲ್ಲೆಯ ಬಾಡಿಗೆ ಮನೆಯೊಂದರಲ್ಲಿ ವಾಸವಿದ್ದ ಕೊಡಂಡ ಶಿವಾಜಿ ಮತ್ತು ಲಕ್ಷ್ಮೀ ದಂಪತಿ ನಡುವೆ ನಡೆದ ಜಗಳದಲ್ಲಿ ಘಟನೆ … Continued

ಹೊಸ ರಾಜಕೀಯ ಪಕ್ಷ ಘೋಷಿಸಿದ ಕವಿತಾ: ಬಿಆರ್‌ಎಸ್ ತೊರೆದು ಟಿಆರ್‌ಎಸ್’ ಪಕ್ಷ ಸ್ಥಾಪನೆ

ಹೈದರಾಬಾದ್: ತೆಲಂಗಾಣದ ಮಾಜಿ ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್ (ಕೆಸಿಆರ್) ಅವರ ಪುತ್ರಿ ಕಲ್ವಕುಂಟ್ಲ ಕವಿತಾ ಅವರು ತಮ್ಮ ತಂದೆಯ ನೇತೃತ್ವದ ಭಾರತ ರಾಷ್ಟ್ರ ಸಮಿತಿ (BRS)ಪಕ್ಷದಿಂದ ಅಧಿಕೃತವಾಗಿ ಹೊರಬಂದು, ‘ತೆಲಂಗಾಣ ರಾಷ್ಟ್ರ ಸೇನಾ’ (TRS) ಎಂಬ ಹೊಸ ರಾಜಕೀಯ ಪಕ್ಷವನ್ನು ಸ್ಥಾಪಿಸಿದ್ದಾರೆ. ಮೇಡ್ಚಲ್ ಜಿಲ್ಲೆಯ ಮುನಿರಾಬಾದ್‌ನಲ್ಲಿ ನಡೆದ ಬೃಹತ್ ಸಮಾವೇಶದಲ್ಲಿ ಸಹಸ್ರಾರು ಬೆಂಬಲಿಗರ ಸಮ್ಮುಖದಲ್ಲಿ … Continued

ಆರ್ಥಿಕ ಮುಗ್ಗಟ್ಟು..? ನಿವೃತ್ತ ನೌಕರರ ಬಾಕಿ ಹಣ ನೀಡಲು ಸಚಿವರ ವೇತನ 50% ಕಡಿತಕ್ಕೆ ನಿರ್ಧರಿಸಿದ ತೆಲಂಗಾಣ ಸರ್ಕಾರ…!

ಹೈದರಾಬಾದ್: ನಿವೃತ್ತ ಸರ್ಕಾರಿ ನೌಕರರ ಬಾಕಿ ಇರುವ ನಿವೃತ್ತಿ ವೇತನ ಮತ್ತು ಇತರ ಸೌಲಭ್ಯಗಳನ್ನು ನೀಡಲು ತೆಲಂಗಾಣ ಸರ್ಕಾರವು ಮುಖ್ಯಮಂತ್ರಿ ಮತ್ತು ಸಚಿವರ ವೇತನದಲ್ಲಿ 50% ಕಡಿತಗೊಳಿಸಲು ಗುರುವಾರದ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಮುಖ್ಯಮಂತ್ರಿ ಎ. ರೇವಂತ್ ರೆಡ್ಡಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯ ನಂತರ ಮಾಹಿತಿ ನೀಡಿದ ಸಚಿವ ಪೊಂಗುಲೇಟಿ ಶ್ರೀನಿವಾಸ ರೆಡ್ಡಿ, “ಎಲ್ಲಾ … Continued