ವಿಡಿಯೊ | ಹಾಡಹಗಲೇ ಶಸ್ತ್ರಸಜ್ಜಿತರಿಂದ ಚಿನ್ನಾಭರಣ ಅಂಗಡಿ ದರೋಡೆ ; ಚಿನ್ನ-ನಗದು ಲೂಟಿ, ಹಲವು ಸುತ್ತು ಗುಂಡು ಹಾರಿಸಿ ಪರಾರಿ…!

ಪಾಲ್ಘರ್ : ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯ ದಹಾನು ಪಟ್ಟಣದ ಜನನಿಬಿಡ ಮಾರುಕಟ್ಟೆ ಪ್ರದೇಶದಲ್ಲಿರುವ ಪ್ರಮುಖ ಆಭರಣ ಅಂಗಡಿಯೊಂದಕ್ಕೆ ಮಾಸ್ಕ್‌ ಧರಿಸಿದ್ದಮೂವರು ಶಸ್ತ್ರಸಜ್ಜಿತ ದರೋಡೆಕೋರರು ಸೋಮವಾರ ಮಧ್ಯಾಹ್ನ ನುಗ್ಗಿ ಚಿನ್ನಾಭರಣ ಹಾಗೂ ನಗದು ದೋಚಿ, ಹಲವು ಸುತ್ತು ಗುಂಡು ಹಾರಿಸಿ ಪರಾರಿಯಾಗಿರುವ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ದರೋಡೆ ದೃಶ್ಯಗಳು ಆಭರಣ ಅಂಗಡಿಯ ಸಿಸಿಟಿವಿ … Continued

ವಿಡಿಯೋ | ಥಾರ್‌ಗೆ ಹಗ್ಗಕಟ್ಟಿ ಎಟಿಎಂ ಎಳೆದೊಯ್ದು ಹಣ ದೋಚಿ ರಸ್ತೆಯಲ್ಲೇ ಯಂತ್ರ ಎಸೆದು ಕಳ್ಳರು ಪರಾರಿ

ಬಾಲಾಸೋರ್ : ಒಡಿಶಾದ ಬಾಲಾಸೋರ್ ಜಿಲ್ಲೆಯ ಖೈರಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಶನಿವಾರ ಮುಂಜಾನೆ ಎಟಿಎಂ ದರೋಡೆ ಪ್ರಕರಣವೊಂದು ಬೆಳಕಿಗೆ ಬಂದಿದೆ. ದುಷ್ಕರ್ಮಿಗಳ ತಂಡ ಎಟಿಎಂ ಯಂತ್ರವನ್ನು ಕಪ್ಪು ಬಣ್ಣದ ಥಾರ್ (Thar) ವಾಹನಕ್ಕೆ ಹಗ್ಗ ಕಟ್ಟಿ ಎಳೆದಿದ್ದಾರೆ. ಅದು ಕಿತ್ತುಬಂದ ನಂತರ ಅದರೊಳಗಿನ ಹಣವನ್ನು ದೋಚಿ ಪರಾರಿಯಾಗಿದೆ. ಇಡೀ ಘಟನೆ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, … Continued

ವಿಡಿಯೋ | ಚಿನ್ನ, ಹಣ ದೋಚಿ ಮಹಿಳೆಯನ್ನು ಬಾವಿಗೆ ತಳ್ಳಿದ ದುಷ್ಕರ್ಮಿ; 21 ಗಂಟೆಗಳ ಕಾಲ ಸಾವಿನೊಂದಿಗೆ ಹೋರಾಡಿ ಬದುಕುಳಿದ ಮಹಿಳೆ

ಕರೀಂನಗರ (ತೆಲಂಗಾಣ) :  ಕೃಷಿ ಬಾವಿಯೊಳಗೆ ಬಿದ್ದಿದ್ದ 55 ವರ್ಷದ ಮಹಿಳೆಯೊಬ್ಬರು ಜೀವ ಉಳಿಸಿಕೊಳ್ಳಲು ಸುಮಾರು 20–21 ಗಂಟೆಗಳ ಕಾಲ ಹರಸಾಹಸ ನಡೆಸಿ ಬದುಕುಳಿದಿರುವ ಘಟನೆ ತೆಲಂಗಾಣದ ಕರೀಂನಗರ ಜಿಲ್ಲೆಯ ನುಸ್ತುಲಾಪುರ ಗ್ರಾಮದಲ್ಲಿ ಬೆಳಕಿಗೆ ಬಂದಿದೆ. ಮಹಿಳೆಯನ್ನು ದರೋಡೆ ಮಾಡಿ ಆಕೆ ತನ್ನನ್ನು ಗುರುತಿಸಬಹುದು ಎಂಬ ಭಯದಿಂದ ಆಕೆಯನ್ನು ಬಾವಿಗೆ ತಳ್ಳಿದ ಆರೋಪದ ಮೇಲೆ 21 … Continued

ಐಷಾರಾಮಿ ಜೀವನಕ್ಕಾಗಿ 60 ಕಡೆ ದರೋಡೆ: ಬಿಎಂಡಬ್ಲ್ಯೂ ಕಾರು ಇರುವ ಮಾಜಿ ಐಟಿ ಉದ್ಯೋಗಿಯ ಬಂಧನ…!

ವಿಶಾಖಪಟ್ಟಣ: ಐಷಾರಾಮಿ ಜೀವನದ ವ್ಯಾಮೋಹಕ್ಕೆ ಬಿದ್ದು ವಿಶಾಖಪಟ್ಟಣ ಸೇರಿದಂತೆ ಆಂಧ್ರಪ್ರದೇಶದಾದ್ಯಂತ ಸರಣಿ ಮನೆಗಳ್ಳತನ ನಡೆಸುತ್ತಿದ್ದ 27 ವರ್ಷದ ಮಾಜಿ ಐಟಿ ಉದ್ಯೋಗಿಯನ್ನು ಭಾನುವಾರ ಪೊಲೀಸರು ಬಂಧಿಸಿದ್ದಾರೆ. ಕಳೆದ ಕೆಲವು ತಿಂಗಳುಗಳಿಂದ ಸತತವಾಗಿ ಕೇಳಿಬರುತ್ತಿದ್ದ ರಾತ್ರಿ ವೇಳೆಯ ಕಳ್ಳತನದ ದೂರುಗಳ ಬೆನ್ನತ್ತಿದ ಪೊಲೀಸರು, ಸುದೀರ್ಘ ತನಿಖೆಯ ನಂತರ ಅಚ್ಚಿ ಮಹೇಶ ರೆಡ್ಡಿ ಅಲಿಯಾಸ್ ‘ಸನ್ನಿ’ ಎಂಬಾತನನ್ನು ಸೆರೆಹಿಡಿಯುವಲ್ಲಿ … Continued

ಬೆಂಗಳೂರು : ಕದಿಯಲು ಹೋಗಿ ಸಿಕ್ಕಿಬಿದ್ದ ನಂತ್ರ ತಾನು ಕಳ್ಳತನಕ್ಕೆ ಯತ್ನಿಸಿದ ಮನೆಯವರ ವಿರುದ್ಧವೇ ದೂರು ನೀಡಿದ ಕಳ್ಳ…!

ಬೆಂಗಳೂರು: ಬೆಂಗಳೂರು ಬೀದಿಗಳಲ್ಲಿ ಪ್ರತಿದಿನ ಒಂದಲ್ಲ ಒಂದು ವಿಚಿತ್ರ ಘಟನೆಗಳು ವರದಿಯಾಗುತ್ತಲೇ ಇರುತ್ತವೆ. ಆದರೆ, ಮನೆಯೊಂದಕ್ಕೆ ಕನ್ನ ಹಾಕಲು ಹೋದ ಕಳ್ಳನೊಬ್ಬ, ಸಾರ್ವಜನಿಕರಿಂದ ಏಟು ತಿಂದ ಮೇಲೆ ಸ್ವತಃ ಪೊಲೀಸರ ಬಳಿ ಹೋಗಿ ದೂರು ನೀಡಿದ್ದಾನೆ ಎಂದು ವರದಿಯಾಗಿದೆ.  ವಿಚಿತ್ರವೆಂದರೆ ತಾನು ದರೋಡೆಗೆ ಯತ್ನಿಸುವಾಗ ತನ್ನ ಮೇಲೆ ಹಲ್ಲೆ ನಡೆದಿದೆ ಎಂದು ಆರೋಪಿಸಿ ತಾನು ಕಳ್ಳತನಕ್ಕೆ … Continued

ಬೆಂಗಳೂರು | ಹಾಡಹಗಲೇ ಯುವಕನನ್ನು ಅಡ್ಡಗಟ್ಟಿ 31 ಲಕ್ಷ ರೂ. ದರೋಡೆ ; ದೃಶ್ಯ ಸಿಸಿಟಿವಿಯಲ್ಲಿ ಸೆರೆ

ಬೆಂಗಳೂರು : ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ (Bengaluru) ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದ್ದು, ಹಾಡಹಾಗಲೇ ಸಿನಿಮೀಯ ರೀತಿಯಲ್ಲಿ ವ್ಯಕ್ತಿಯೊಬ್ಬರಿಂದ 31 ಲಕ್ಷ ರುಪಾಯಿಗೂ ಹೆಚ್ಚು ಹಣವನ್ನು ದೋಚಲಾಗಿದೆ. ಬೆಂಗಳೂರಿನ ಬನ್ನೇರುಘಟ್ಟ ಪ್ರದೇಶದಲ್ಲಿ ಭಾನುವಾರ (ಫೆಬ್ರವರಿ 1) ಈ ಘಟನೆ ನಡೆದಿದೆ ಎಂದು ಹೇಳಲಾಗಿದ್ದು, ಸಿಸಿಟಿವಿಯಲ್ಲಿ ಸೆರೆಯಾಗಿದೆ. ಬೈಕಿನಲ್ಲಿ ತೆರಳುತ್ತಿದ್ದ ವ್ಯಕ್ತಿಯನ್ನು ಅಡ್ಡಗಟ್ಟಿದ ದುಷ್ಕರ್ಮಿಗಳ ಗ್ಯಾಂಗ್, ಬರೋಬ್ಬರಿ … Continued

ವೀಡಿಯೊ | ಬೆಂಗಳೂರು : ಆಭರಣ ಅಂಗಡಿಗೆ ನುಗ್ಗಿ ಗನ್ ತೋರಿಸಿ ಚಿನ್ನಾಭರಣ ಲೂಟಿ

ಬೆಂಗಳೂರು: ಬೆಂಗಳೂರಿನ ಹೊರವಲಯದ ನೆಲಮಂಗಲದಲ್ಲಿರುವ ಆಭರಣ ಅಂಗಡಿಯಲ್ಲಿ ಮಂಗಳವಾರ ಶಸ್ತ್ರಸಜ್ಜಿತ ದರೋಡೆಕೋರರು ಹಗಲು ಹೊತ್ತಿನಲ್ಲಿ ದರೋಡೆ ನಡೆಸಿದ್ದಾರೆ ಎಂದು ವರದಿಯಾಗಿದೆ. ರಾಷ್ಟ್ರೀಯ ಹೆದ್ದಾರಿ ಬಳಿಯ ದಾಸನಪುರದಲ್ಲಿರುವ ರಾಮದೇವ ಜ್ಯುವೆಲ್ಲರಿಯಲ್ಲಿ ಸಂಜೆ ಸುಮಾರು 5:30 ರ ಸುಮಾರಿಗೆ ಈ ಘಟನೆ ನಡೆದಿದೆ ಎಂದು ಹೇಳಲಾಗಿದೆ. ಸಿಸಿಟಿವಿ ದೃಶ್ಯಗಳಲ್ಲಿ ಮೂವರು ಅಪರಿಚಿತ ವ್ಯಕ್ತಿಗಳು ದ್ವಿಚಕ್ರ ವಾಹನದಲ್ಲಿ ಅಂಗಡಿಗೆ ಬರುತ್ತಿರುವುದು … Continued

ಬೆಂಗಳೂರು ಹಣದ ವಾಹನ ದರೋಡೆ ಪ್ರಕರಣ ಭೇದಿಸಿದ ಪೊಲೀಸರು : 5.76 ಕೋಟಿ ರೂ. ವಶ, 3 ಪ್ರಮುಖ ಆರೋಪಿಗಳ ಬಂಧನ

ಬೆಂಗಳೂರು: ಬೆಂಗಳೂರಿನಲ್ಲಿ ನಡೆದ ಹೈ-ಪ್ರೊಫೈಲ್ ಎಟಿಎಂ ನಗದು ವಾಹನ ದರೋಡೆ ಪ್ರಕರಣವನ್ನು ಬೆಂಗಳೂರು ಪೊಲೀಸರು ಭೇದಿಸಿದ್ದು, ಘಟನೆ ಸಂಭವಿಸಿದ 60 ಗಂಟೆಗಳ ಒಳಗೆ ಮೂವರು ಪ್ರಮುಖ ಆರೋಪಿಗಳನ್ನು ಬಂಧಿಸಿ 5.76 ಕೋಟಿ ರೂ. ಹಣವನ್ನು ವಶಪಡಿಸಿಕೊಂಡಿದ್ದಾರೆ. ಮಂಗಳವಾರ ನಡೆದಿದ್ದ ಈ ದರೋಡೆ, ಸಿಎಂಎಸ್ (CMS) ಸಂಸ್ಥೆಯು ನಿರ್ವಹಿಸುವ 7.11 ಕೋಟಿ ರೂ. ನಗದನ್ನು ಹೊತ್ತೊಯ್ಯುತ್ತಿದ್ದ ವಾಹನದಲ್ಲಿ … Continued

ಬೆಂಗಳೂರಲ್ಲಿ ಹಾಡಹಗಲೇ 7 ಕೋಟಿ ರೂ. ದರೋಡೆ ; ಎಟಿಎಂಗೆ ಹಣ ತುಂಬುವ ವಾಹನದಿಂದ ಹಣ ದೋಚಿದ ಗ್ಯಾಂಗ್…!

ಬೆಂಗಳೂರು: ಬೆಂಗಳೂರಿನಲ್ಲಿ ಬುಧವಾರ ಹಾಡಹಗಲೇ ಭಾರೀ ದರೋಡೆ ನಡೆದಿದ್ದು, ಕೇಂದ್ರ ಸರ್ಕಾರದ ತೆರಿಗೆ ಅಧಿಕಾರಿಗಳು ಎಂದು ಹೇಳಿಕೊಂಡ ದುಷ್ಕರ್ಮಿಗಳು ಎಟಿಎಂಗೆ ಹಣ ತುಂಬುವ ವಾಹನವನ್ನು ತಡೆದು ₹7 ಕೋಟಿ ಹಣದೊಂದಿಗೆ ಪರಾರಿಯಾಗಿದ್ದಾರೆ ಎಂದು ವರದಿಯಾಗಿದೆ. ಜಯನಗರದ ಅಶೋಕ ಸ್ತಂಭದ ಬಳಿ ಈ ಘಟನೆ ನಡೆದಿದ್ದು, ತೆರಿಗೆ ಅಧಿಕಾರಿಗಳಂತೆ ನಟಿಸಿದ ಕಳ್ಳರು “ದಾಖಲೆಗಳನ್ನು ಪರಿಶೀಲಿಸಬೇಕು ಮತ್ತು ನಗದು … Continued

ಮುರುಡೇಶ್ವರ : ವ್ಯಕ್ತಿ ಮೇಲೆ ಹಲ್ಲೆ ನಡೆಸಿ ₹ 1 ಲಕ್ಷ ಮೌಲ್ಯದ ಚಿನ್ನದ ಸರ ದೋಚಿದ ತೃತೀಯಲಿಂಗಿಗಳು…

ಭಟ್ಕಳ : ಸ್ಕೂಟಿಗೆ ಪೆಟ್ರೋಲ್ ತುಂಬಿಸಿಕೊಂಡು ಮನೆಗೆ ಮರಳುತ್ತಿದ್ದ ಕಾಲೇಜು ಸಿಬ್ಬಂದಿಯೊಬ್ಬರನ್ನು ಅಡ್ಡಗಟ್ಟಿದ ನಾಲ್ವರು ಮಂಗಳಮುಖಿಯರ ಗುಂಪೊಂದು ಅಂದಾಜು 1 ಲಕ್ಷ ರೂಪಾಯಿ ಮೌಲ್ಯದ ಚಿನ್ನದ ಸರವನ್ನು ಸುಲಿಗೆ ಮಾಡಿ ಪರಾರಿಯಾದ ಘಟನೆ ಭಾನುವಾರ ರಾತ್ರಿ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಮುರ್ಡೇಶ್ವರದ ರೈಲ್ವೇ ನಿಲ್ದಾಣದ ಬಳಿ ನಡೆದಿದೆ ಎಂದು ವರದಿಯಾಗಿದೆ. ಮಾವಳ್ಳಿ ನಿವಾಸಿ, … Continued