ಮಂಗಳೂರು | ಬಂದೂಕು ತೋರಿಸಿ ಬ್ಯಾಂಕ್‌ ದರೋಡೆ ; ₹10 ಕೋಟಿಗೂ ಹೆಚ್ಚು ಮೌಲ್ಯದ ಚಿನ್ನಾಭರಣ, ನಗದು ದೋಚಿ ಪರಾರಿ

ಮಂಗಳೂರು : ಬೀದರಿನಲ್ಲಿ ಗುರುವಾರ ನಡೆದಿರುವ ಎಟಿಎಂ ವ್ಯಾನ್ ದರೋಡೆ ಪ್ರಕರಣ ನಡೆದ ಮಾರನೇ ದಿನ ಶುಕ್ರವಾರ ಮಂಗಳೂರಿನಲ್ಲೂ ಬ್ಯಾಂಕ್ ದರೋಡೆ ನಡೆದಿದೆ ಎಂದು ವರದಿಯಾಗಿದೆ. ಮಂಗಳೂರು ಹೊರವಲಯದ ಉಳ್ಳಾಲ ತಾಲೂಕಿನ ಕೆ.ಸಿ ರೋಡ್ ಜಂಕ್ಷನ್ ನಲ್ಲಿರುವ ಕೋಟೆಕಾರು ವ್ಯವಸಾಯ ಸೇವಾ ಸಹಕಾರಿ ಸಂಘದ ಶಾಖೆಯಲ್ಲಿ ಹಾಡಹಾಗಲೇ ದರೋಡೆ ನಡೆದಿದ್ದು, ಬ್ಯಾಂಕ್ ಶಾಖೆಗೆ ನುಗ್ಗಿದ ಐವರು … Continued

ನಟ ಸೈಫ್‌ ಅಲಿ ಖಾನ್‌ ಇರಿತದ ಪ್ರಕರಣ ; ಸೈಫ್ ಪುತ್ರ ಜೆಹ್ ಕೋಣೆಗೆ ನುಗ್ಗಿದ ದರೋಡೆಕೋರ ; 1 ಕೋಟಿ ರೂ.ಗೆ ಬೇಡಿಕೆ

ಮುಂಬೈ: ಮನೆಗೆ ನುಗ್ಗಿದ ದರೋಡೆಕೋರನಿಂದ ಚಾಕು ಇರಿತಕ್ಕೆ ಒಳಗಾದ ಬಾಲಿವುಡ್ ನಟ ಸೈಫ್ ಅಲಿ ಖಾನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರ ನಿವಾಸದಲ್ಲಿ ಮಕ್ಕಳ ಕೇರ್‌ಟೇಕರ್ ಅವರು ಪೊಲೀಸರ ಮುಂದೆ ಹೇಳಿಕೆ ನೀಡಿದ್ದು, ತಾನು ಸ್ನಾನಗೃಹದ ಬಳಿ ನೆರಳನ್ನು ಮೊದಲು ಗಮನಿಸಿರುವುದಾಗಿ ಹೇಳಿದ್ದಾಳೆ ಎಂದು ಮೂಲಗಳನ್ನು ಉಲ್ಲೇಖಿಸಿ ನ್ಯೂಸ್ 18 ವರದಿ ಮಾಡಿದೆ. ಮಾಧ್ಯಮಗಳ ವರದಿಗಳ ಪ್ರಕಾರ, … Continued

ಬೀದರ | ಎಟಿಎಂಗೆ ಹಣ ಹಾಕಲು ಬಂದ ಸಿಬ್ಬಂದಿ ಮೇಲೆ ಗುಂಡಿನ ದಾಳಿ, 93 ಲಕ್ಷ ರೂ. ಲೂಟಿ

ಬೀದರ: ಎಟಿಎಂಗೆ ಹಣ ಹಾಕಲು ಬಂದ ಬ್ಯಾಂಕ್ ಸಿಬ್ಬಂದಿ ಮೇಲೆ ಹಾಡಹಗಲೇ ಗುಂಡಿನ ದಾಳಿ ನಡೆದ ಘಟನೆ ಬೀದರಿನ ಎಸ್‌ಬಿಐ ಮುಖ್ಯ ಕಚೇರಿ‌ ಮುಂದೆ ಗುರುವಾರ ನಡೆದಿದೆ. ಎಸ್​ಬಿಐ ಬ್ಯಾಂಕ್​ ಮತ್ತು ಎಟಿಎಂಗೆ ಹಣ ತುಂಬಿಸುವ ಸಂದರ್ಭದಲ್ಲಿ ಈ ದರೋಡೆ ನಡೆದಿದೆ. ಬ್ಯಾಂಕ್‌ಗೆ ಹಣ ತುಂಬಿಸುವುದಕ್ಕೆ ಸಿಬ್ಬಂದಿ ಬಂದ ಸಂದರ್ಭದಲ್ಲಿ ಅವರ ಮೇಲೆ ಗುಂಡು ಹಾರಿಸಿ, … Continued

ನಟ ಸೈಫ್ ಅಲಿ ಖಾನಗೆ 6 ಕಡೆ ಇರಿತ ; ಬೆನ್ನುಮೂಳೆ ಬಳಿ ಗಾಯ

ಮುಂಬೈ : ಖ್ಯಾತ ಬಾಲಿವುಡ್‌ ನಟ ನಟ ಸೈಫ್ ಅಲಿ ಖಾನ್ ಅವರ ಮನೆಗೆ ನುಗ್ಗಿದ ಕಳ್ಳನೊಬ್ಬ ಅವರಿಗೆ ಚಾಕುವಿನಿಂದ ಇರಿದ್ದಿದಾನೆ. ಕಳ್ಳನನ್ನು ತಡೆಯುವ ವೇಳೆ ಕಳ್ಳ ಅವರಿಗೆ ಚಾಕುವಿನಿಂದ ಇರಿದಿದ್ದಾನೆ ಎಂದು ವರದಿ ತಿಳಿಸಿದೆ. ಘಟನೆಯಲ್ಲಿ ನಟ ಸೈಫ್ ಅಲಿ ಖಾನ್‌ಗೆ ಅನೇಕ ಇರಿತದ ಗಾಯಗಳಾಗಿದ್ದು, ಅವರನ್ನು ಚಿಕಿತ್ಸೆಗಾಗಿ ಲೀಲಾವತಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮನೆಗಳ್ಳತನಕ್ಕೆ … Continued

ಟ್ರೇನಿ ಸೇನಾ ಅಧಿಕಾರಿಗಳ ಮೇಲೆ ದಾಳಿ-ಹಲ್ಲೆ ; ಸ್ನೇಹಿತೆ ಮೇಲೆ ಸಾಮೂಹಿಕ ಅತ್ಯಾಚಾರ

ಭೋಪಾಲ್: ಮಧ್ಯಪ್ರದೇಶದ ಇಂದೋರ್‌ನಲ್ಲಿ ಮಂಗಳವಾರ ತಡರಾತ್ರಿ ಇಬ್ಬರು ಯುವ ಸೇನಾ ಅಧಿಕಾರಿಗಳ ಮೇಲೆ ಅಮಾನುಷವಾಗಿ ಹಲ್ಲೆ ನಡೆಸಲಾಗಿದ್ದು, ಅವರ ಸ್ನೇಹಿತೆಯ ಮೇಲೆ ಬಂದೂಕು ತೋರಿಸಿ ಸಾಮೂಹಿಕ ಅತ್ಯಾಚಾರವೆಸಗಲಾಗಿದೆ ಎಂದು ವರದಿಯಾಗಿದೆ. ದಾಳಿಕೋರರು ದರೋಡೆ ಮಾಡುವ ಉದ್ದೇಶದಿಂದ ವಿಹಾರಕ್ಕೆ ಹೊರಟಿದ್ದ ಗುಂಪಿನ ಮೇಲೆ ದಾಳಿ ನಡೆಸಿದ್ದು, ದಾಳಿಕೋರರಲ್ಲಿ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ ಹಾಗೂ ಅವರಲ್ಲಿ ಒಬ್ಬ ಕ್ರಿಮಿನಲ್ … Continued

ವೀಡಿಯೊ | ಧೈರ್ಯ ಅಂದ್ರೆ ಇದಪ್ಪ..: ಪಿಸ್ತೂಲ್‌ ಹಿಡಿದು ಚಿನ್ನದ ಅಂಗಡಿ ಲೂಟಿಗೆ ನುಗ್ಗಿದ್ದ 4 ದರೋಡೆಕೋರರನ್ನು ಹೆದರಿಸಿದ ಒಬ್ಬನೇ ಒಬ್ಬ..!

ಮುಂಬೈ : ಬುಧವಾರ ಥಾಣೆ ನಗರದ ಆಭರಣ ಅಂಗಡಿಯೊಂದರಲ್ಲಿ ದರೋಡೆಗೆ ಯತ್ನಿಸಿದ್ದ ನಾಲ್ವರು ಶಸ್ತ್ರ ಸಜ್ಜಿತ ದರೋಡೆಕೋರರನ್ನು ಕೆಚ್ಚೆದೆಯ ಅಂಗಡಿ ಮಾಲೀಕ ಎದುರಿಸಿ ದರೋಡೆ ಯತ್ನವನ್ನು ವಿಫಲಗೊಳಿಸಿದ್ದಾರೆ. ಅಂಗಡಿಲ್ಲಿ ತಾವೊಬ್ಬರೇ ಇದ್ದರೂ ಹೆದರದೆ ಪಿಸ್ತೂಲು ಹಿಡಿದು ಬಂದಿದ್ದ ನಾಲ್ವರು ದರೋಡೆಕೋರರನ್ನು ಎದುರಿಸಿ ಅವರನ್ನು ದೊಣ್ಣೆಯಿಂದ ಹೊಡೆದು ಗಾಯಗೊಳಿಸಿದ್ದಾರೆ. ದರೋಡೆಕೋರರು ಎರಡು ಮೋಟಾರ್ ಸೈಕಲ್‌ಗಳಲ್ಲಿ ಅಂಗಡಿಗೆ ಬಂದಿದ್ದರು. … Continued

ಮಂಗಳೂರು : ದರೋಡೆ ಕೃತ್ಯ ನಡೆದ 5 ತಾಸಿನಲ್ಲೇ ಚಡ್ಡಿ ಗ್ಯಾಂಗ್‌ ಬಂಧಿಸಿದ ಪೊಲೀಸರು

ಮಂಗಳೂರು : ನಗರದ ಕೋಟೆಕಣಿಯ ಮನೆಗೆ ನುಗ್ಗಿ ಮನೆಮುಂದಿಯನ್ನು ಬೆದರಿಸಿ ದರೋಡೆ ಮಾಡಿದ್ದ ಚಡ್ಡಿ ಗ್ಯಾಂಗ್‌ ಅನ್ನು ಘಟನೆ ನಡೆದ 5 ತಾಸಿನಲ್ಲೇ ಹಡೆಮುರಿ ಕಟ್ಟುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಧಿತ ಆರೋಪಿತರನ್ನು ಮಧ್ಯಪ್ರದೇಶ ಮೂಲದ ರಾಜು ಸಿಂಘಾನಿಯಾ(24), ಮಯೂರ(30), ಬಾಲಿ(22), ಮತ್ತು ವಿಕ್ಕಿ(21) ಎಂದು ಗುರುತಿಸಲಾಗಿದೆ. ಮಂಗಳವಾರ ನಸುಕಿನ 4 ಗಂಟೆಯ ಸುಮಾರಿಗೆ ಉರ್ವಾ ಪೊಲೀಸ್ … Continued

ವೀಡಿಯೊ : 7 ದರೋಡೆಕೋರರ ಗನ್‌ ಶಾಟ್‌ ಎದುರಿಸಿ ₹ 4 ಕೋಟಿ ಚಿನ್ನಾಭರಣ ದರೋಡೆ ವಿಫಲಗೊಳಿಸಿದ ಏಕೈಕ ಪೊಲೀಸ್‌ ಅಧಿಕಾರಿ-ವೀಕ್ಷಿಸಿ

ಕೋಲ್ಕತ್ತಾ : ಕಳೆದ ವಾರ ಪಶ್ಚಿಮ ಬಂಗಾಳದ ರಾಣಿಗಂಜ್‌ನ ಆಭರಣ ಮಳಿಗೆಯೊಂದರಲ್ಲಿ ಏಳು ಸದಸ್ಯರ ದರೋಡೆ ಗ್ಯಾಂಗ್ ನಡೆಸಿದ ₹ 4 ಕೋಟಿ ದರೋಡೆ ಯತ್ನವನ್ನು ಪೊಲೀಸ್ ಅಧಿಕಾರಿಯ ಧೈರ್ಯವು ವಿಫಲಗೊಳಿಸಿದೆ. ಅಂಗಡಿಯ ಹೊರಭಾಗದಲ್ಲಿರುವ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಹಿಡಿದ ದೃಶ್ಯಗಳು ಸಬ್-ಇನ್ಸ್‌ಪೆಕ್ಟರ್ ಮೇಘನಾದ ಮೊಂಡಲ್ ಅವರು ಆಭರಣ ಅಂಗಡಿ ಸಮೀಪದ ವಿದ್ಯುತ್ ಕಂಬದ ಮರೆಯಲ್ಲಿ ನಿಂತು … Continued

ವೀಡಿಯೋ : ರಸ್ತೆಯಲ್ಲಿ ವೀಡಿಯೊ ಶೂಟ್ ಮಾಡುತ್ತಿದ್ದಾಗ ಮಹಿಳೆಯ ಮಂಗಳಸೂತ್ರ ಕಿತ್ತುಕೊಂಡು ಪರಾರಿಯಾದ ಬೈಕ್‌ ಸವಾರ…!

ಉತ್ತರ ಪ್ರದೇಶದ ಗಾಜಿಯಾಬಾದ್ ಜಿಲ್ಲೆಯ ಇಂದಾಪುರಂನಲ್ಲಿ ನಡೆದ ಆಘಾತಕಾರಿ ಘಟನೆಯೊಂದರಲ್ಲಿ, ರಸ್ತೆಬದಿಯಲ್ಲಿ ರೀಲ್ ಶೂಟಿಂಗ್‌ ಮಾಡುತ್ತಿದ್ದಾಗ ಮಹಿಳೆಯೊಬ್ಬರ ಮಂಗಳಸೂತ್ರವನ್ನು ಅಪರಿಚಿತ ಬೈಕ್ ಸವಾರ ದೋಚಿರುವ ಘಟನೆ ನಡೆದಿದೆ. ಬೈಕ್ ಸವಾರ ಮಹಿಳೆಯ ಬಳಿಗೆ ವೇಗವಾಗಿ ಬಂದು ಸರ ಕಿತ್ತುಕೊಂಡು ಕ್ಷಿಪ್ರವಾಗಿ ಪರಾರಿಯಾಗಿದ್ದು, ಈ ಘಟನೆ ವೀಡಿಯೊ ವೈರಲ್‌ ಆಗಿದೆ. ಬೈಕ್ ಸವಾರನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ … Continued

ಬೆಂಗಳೂರು: ಹಾಡಹಗಲೇ ಚಿನ್ನಾಭರಣ ಅಂಗಡಿಗೆ ನುಗ್ಗಿ ಗುಂಡಿನ ದಾಳಿ, ಇಬ್ಬರಿಗೆ ಗಾಯ

ಬೆಂಗಳೂರು: ಬೆಂಗಳೂರಿನಲ್ಲಿ ಹಾಡಹಗಲೇ ಚಿನ್ನಾಭರಣ ಮಳಿಗೆಯೊಂದರ ದರೋಡೆ ಮಾಡುವ ಯತ್ನ ನಡೆದಿದೆ ಎಂದು ವರದಿಯಾಗಿದೆ. ಬೆಂಗಳೂರು ನಗರದ ಕೊಡಿಗೇ ಹಳ್ಳಿಯಲ್ಲಿರುವ ಜ್ಯುವೆಲ್ಲರಿ ಮಳಿಗೆಗೆ ಗುರುವಾರ ಮಧ್ಯಾಹ್ನ ನುಗ್ಗಿದ ದರೋಡೆಕೋರರು ಗುಂಡು ಹಾರಿಸಿದ್ದು, ಇಬ್ಬರು ಗಾಯಗೊಂಡಿದ್ದಾರೆ ಎಂದು ಹೇಳಲಾಗಿದೆ. ಆತಂಕ ಸೃಷ್ಟಿಸಿದರು. ಮಧ್ಯಾಹ್ನದ ಹೊತ್ತಲ್ಲಿ ಚಿನ್ನಾಭರಣ ಮಳಿಗೆಗೆ ನುಗ್ಗಿದ ದರೋಡೆಕೋರರು ಮಳಿಗೆಯ ಮಾಲೀಕರು ಹಾಗೂ ನೌಕರರನ್ನು ಬೆದರಿಸಿ … Continued