ನೀರಿನ ಟ್ಯಾಂಕಿಗೆ ಹಾರಿ ವ್ಯಕ್ತಿ ಆತ್ಮಹತ್ಯೆ : 3-4 ದಿನ ಅದೇ ನೀರು ಕುಡಿದ ಗ್ರಾಮಸ್ಥರು..

ಬೀದರ: ತಾಲೂಕಿನ ಅಣದೂರು ಗ್ರಾಮದಲ್ಲಿ ವ್ಯಕ್ತಿಯೊಬ್ಬ ಓವರ್ ಹೆಡ್ ನೀರಿನ ಟ್ಯಾಂಕಿಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳಕಿಗೆ ಬಂದಿದ್ದು, ಅದೇ ಟ್ಯಾಂಕ್‌ ನೀರನ್ನು ಮೂರ್ನಾಲ್ಕು ದಿನಗಳಿಂದ ಗ್ರಾಮಸ್ಥರು ಕುಡಿದಿದ್ದಾರೆ…! ಗ್ರಾಮದ ರಾಜಕುಮಾರ ಎಂಬವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಓವರ್ ಟ್ಯಾಂಕ್ ಏರಿ ಅದರೊಳಗಿನ ನೀರಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆ ಮಾಡಿಕೊಂಡ ಮೂರು ದಿನಗಳ ಬಳಿಕ … Continued

ಹಾಲ್ ಟಿಕೆಟ್ ಅನ್ನೇ ತಿಂದುಹಾಕಿದ ಕುರಿ : ಮನನೊಂದು ಆತ್ಮಹತ್ಯೆಗೆ ಯತ್ನಿಸಿದ 9ನೇ ತರಗತಿ ವಿದ್ಯಾರ್ಥಿನಿ

ಬೀದರ : 9ನೇ ತರಗತಿಯ ಬೋರ್ಡ್‌ ಪರೀಕ್ಷೆಯ ಪ್ರವೇಶ ಪತ್ರ (ಹಾಲ್ ಟಿಕೆಟ್)ವನ್ನು ಕುರಿ ತಿಂದ ಕಾರಣ ಮನನೊಂದು ವಿದ್ಯಾರ್ಥಿನಿಯೊಬ್ಬಳು ಬೇಸರಪಟ್ಟು ಆಕೆ ಆತ್ಮಹತ್ಯೆಗೆ ಮುಂದಾದ ಘಟನೆ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಗೋಕುಳ ಗ್ರಾಮದಲ್ಲಿ ಸೋಮವಾರ ತಡರಾತ್ರಿ ನಡೆದಿದೆ ಎಂದು ವರದಿಯಾಗಿದೆ. ಪೂಜಾ ಮಾರುತಿ ಮೇತ್ರೆ (14) ಆತ್ಮಹತ್ಯೆಗೆ ಪ್ರಯತ್ನ ಪಟ್ಟ ವಿದ್ಯಾರ್ಥಿನಿ ಎಂದು ಗುರುತಿಸಲಾಗಿದೆ. … Continued

ಔರಾದ್ ಬಳಿ ಪೊಲೀಸರ ಭರ್ಜರಿ ಕಾರ್ಯಾಚರಣೆ : 15.50 ಕೋಟಿ ಮೌಲ್ಯದ ಗಾಂಜಾ ವಶ

ಬೀದರ : ಜಿಲ್ಲೆಯ ಔರಾದ ತಾಲೂಕಿನ ವನಮಾರಪಳ್ಳಿ ಬಳಿ ಆಂಧ್ರಪ್ರದೇಶದಿಂದ ಕರ್ನಾಟಕದ ಮೂಲಕ ಅಕ್ರಮವಾಗಿ ಮಹಾರಾಷ್ಟ್ರಕ್ಕೆ ಸಾಗಿಸುತ್ತಿದ್ದ 15.50ಕೋಟಿ ರೂ. ಮೌಲ್ಯದ 1596 ಕೆ.ಜಿ ಗಾಂಜಾವನ್ನು ಪೊಲೀಸರು ಜಪ್ತಿ ಮಾಡಿಕೊಂಡ ಘಟನೆ ಶನಿವಾರ ರಾತ್ರಿ ನಡೆದಿದೆ ಎಂದು ವರದಿಯಾಗಿದೆ. ಆಂಧ್ರಪ್ರದೇಶದಿಂದ ಮಹಾರಾಷ್ಟ್ರಕ್ಕೆ ಸಾಗಿಸುವಾಗ ಔರಾದಿನ ವನಮಾರಪಳ್ಳಿ ಚೆಕ್‍ಪೋಸ್ಟ್‌ ನಲ್ಲಿ ತಪಾಸಣೆ ನಡೆಸಿದಾಗ ಗಾಂಜಾ ಇರುವುದು ಪತ್ತೆಯಾಗಿದೆ. … Continued

ಕಾರು ಹರಿದು ಒಂದೂವರೆ ವರ್ಷದ ಮಗು ಸಾವು

ಬೀದರ : ನಗರದ ಹಾರೂರಗೇರಿಯ ಡಾ. ಗುರುಪಾದಪ್ಪ ನಾಗಮಾರಪಳ್ಳಿ ಆಸ್ಪತ್ರೆ ಎದುರುಗಡೆ ಆಟವಾಡುತ್ತಿದ್ದ ಒಂದೂವರೆ ವರ್ಷದ ಮಗುವಿನ ಮೇಲೆ ಕಾರು ಹರಿದು ಮಗು ಮೃತಪಟ್ಟ ಘಟನೆ ನಡೆದಿದೆ ಎಂದು ವರದಿಯಾಗಿದೆ. ಮೃತ ಬಾಲಕನನ್ನು ಸಂಗೀತಾ ಹಾಗೂ ಸತೀಷ ಪಾಟೀಲ ದಂಪತಿ ಪುತ್ರ ಬಸವಚೇತನ ಎಂದು ಗುರುತಿಸಲಾಗಿದೆ. ಕಾರು ಚಾಲಕ ಮೊಬೈಲ್ ನಲ್ಲಿ ಮಾತನಾಡುತ್ತ ಕಾರು ಚಲಾಯಿಸಸುತ್ತಿದ್ದ, … Continued

ಬೀದರ : ಎಮ್ಮೆ ಕದ್ದು ಪರಾರಿಯಾಗಿದ್ದ ಆರೋಪಿ ಬರೋಬ್ಬರಿ 58 ವರ್ಷಗಳ ನಂತರ ಸಿಕ್ಕಿಬಿದ್ದ….!

ಬೀದರ: ಬರೋಬ್ಬರಿ 58 ವರ್ಷಗಳಿಂದ ತಲೆ ಮರೆಸಿಕೊಂಡಿದ್ದ ಎಮ್ಮೆ ಕಳವು ಪ್ರಕರಣದ ಆರೋಪಿಯನ್ನು ಪೊಲೀಸರು ಕೊನೆಗು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. 58 ವರ್ಷಗಳ ಹಿಂದೆ ಎಮ್ಮೆ ಕಳುವು ಮಾಡಿದ್ದ ಆರೋಪಿ ಗಣಪತಿ ವಿಠ್ಠಲ ವಾಗ್ದಾರೆ(77) ಎಂಬಾತನನ್ನು ಮೆಹಕರ್‌ ಠಾಣೆ ಪೊಲೀಸರು ಸೋಮವಾರ ಬಂಧಿಸಿದ್ದಾರೆ. 1965ರ ಏಪ್ರಿಲ್ 25ರಂದು ಬೀದರಿನ ಮೆಹಕರ್‌ ಪೊಲೀಸ್‌ ಠಾಣೆಯಲ್ಲಿ 2 ಎಮ್ಮೆ 1 … Continued

ಔರಾದ : ಹಳ್ಳದಲ್ಲಿ ಕೊಚ್ಚಿ ಹೋದ ತಾಯಿ, ಇಬ್ಬರು ಮಕ್ಕಳ ಶವ ಪತ್ತೆ

ಬೀದರ: ಭಾರಿ ಮಳೆಯಿಂದ ಹಳ್ಳದಲ್ಲಿ ಕೊಚ್ಚಿಹೋಗಿದ್ದ ಜಿಲ್ಲೆಯ  ಔರಾದ ತಾಲೂಕಿನ ಹೆಡಗಾಪುರ ಗ್ರಾಮದ ಮೂವರ ಮೃತದೇಹ ಪತ್ತೆಯಾಗಿದೆ. ಭಾನುವಾರ ಸಂಜೆ ಈ ದುರ್ಘಟನೆ ನಡೆದಿತ್ತು. ಹೊಲದಿಂದ ಮನೆಗೆ ಹೋಗುವಾಗ ಭಾರಿ ಮಳೆಗೆ ಹಳ್ಳದ ಮೇಲೆ ನೀರು ಹರಿಯುತ್ತಿತ್ತು,ನೀರು ಕಡಿಮೆ ಇದ್ದ ಕಾರಣ ಸೇತುವೆ ದಾಟಲು ಹೋದಾಗ ಒಮ್ಮಲೇ ಹಳಕ್ಕೆ ಪ್ರವಾಹ ಬಂದು ಒಂದೇ ಕುಟುಂಬದ ನಾಲ್ವರು … Continued

ಕರ್ನಾಟಕ ವಿಧಾನಸಭೆ ಚುನಾವಣೆ : ಕಾಂಗ್ರೆಸ್ ಕಾರ್ಯಕರ್ತನಿಗೆ ಚಾಕು ಇರಿತ

ಬೀದರ: ಕಾಂಗ್ರೆಸ್ ಅಭ್ಯರ್ಥಿ ಈಶ್ವರ್ ಖಂಡ್ರೆ ಪರವಾಗಿ ಪ್ರಚಾರ ಮಾಡುತ್ತಿದ್ದ ಕಾರ್ಯಕರ್ತನಿಗೆ ಚಾಕು ಇರಿದು ಗಾಯಗೊಳಿಸಿದ ಘಟನೆ ಬೀದರ ಜಿಲ್ಲೆಯ ಭಾಲ್ಕಿ ಪಟ್ಟಣದಲ್ಲಿ ಶನಿವಾರ ತಡರಾತ್ರಿ ನಡೆದಿದೆ ಎಂದು ವರದಿಯಾಗಿದೆ. ಗಾಯಗೊಂಡ ಯುವಕನನ್ನು ಹೈದರಾಬಾದ್‌ ಆಸ್ಪತ್ರೆಗೆ ದಾಖಲಿಸಲಾಗಿದೆ. ಭಾಲ್ಕಿ ತಾಲೂಕಿನ ಮಾವಿನಹಳ್ಳಿ ಗ್ರಾಮದ ಗಣೇಶ ಶಾಲಿವಾನ ಯರಬಾಗೆ (23) ಎಂಬ ಯುವಕ ಭಾಲ್ಕಿ ಪಟ್ಟಣದ ಇಶಾನ್ … Continued

ಬೀದರ : ಹಸುಗೂಸುಗಳಿಗೆ ವಿಷವುಣಿಸಿ ನೇಣು ಬಿಗಿದುಕೊಂಡು ತಾಯಿ ಆತ್ಮಹತ್ಯೆ

ಬೀದರ : ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ತಾಯಿಯೊಬ್ಬಳು ತನ್ನ ಇಬ್ಬರು ಮಕ್ಕಳನ್ನು ಕೊಂದು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೀದರ್ ಜಿಲ್ಲೆಯ ಬಾಲ್ಕಿ ತಾಲೂಕಿನ ನಿಲಮನಹಳ್ಳಿ ತಾಂಡಾದಲ್ಲಿ ನಡೆದ ವರದಿಯಾಗಿದೆ. 25 ವರ್ಷದ ಮೀರಾಬಾಯಿ ಎಂಬವರು ತನ್ನ ಮೂರು ಮತ್ತು ಎರಡು ವರ್ಷದ ಮಕ್ಕಳಿಗೆ ವಿಷವುಣಿಸಿ ನಂತರ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಹೇಳಲಾಗಿದೆ. ಮೀರಾಬಾಯಿ ತನ್ನಮಕ್ಕಳಾದ … Continued

ಕರ್ನಾಟಕದ ದಾವಣಗೆರೆ, ಹೊಸಪೇಟೆ, ಶಿವಮೊಗ್ಗ, ಬೀದರ್, ಗದಗದಲ್ಲಿ ಜಿಯೋ 5ಜಿ ಸೇವೆಗೆ ಚಾಲನೆ

ಬೆಂಗಳೂರು: ದಾವಣಗೆರೆ, ಹೊಸಪೇಟೆ, ಶಿವಮೊಗ್ಗ, ಬೀದರ, ಗದಗ-ಬೆಟಗೇರಿ (ಕರ್ನಾಟಕ), ಕಾಕಿನಾಡ, ಕರ್ನೂಲ್ (ಆಂಧ್ರಪ್ರದೇಶ), ಸಿಲ್ಚಾರ್ (ಅಸ್ಸಾಂ), ಮಲಪ್ಪುರಂ ಸೇರಿದಂತೆ 16 ನಗರಗಳಲ್ಲಿ ರಿಲಯನ್ಸ್ ಜಿಯೋ ಮಂಗಳವಾರ (ಜನವರಿ 17ರ ತನ್ನ ಟ್ರೂ 5G ಸೇವೆಗಳನ್ನು ಪ್ರಾರಂಭಿಸುವುದಾಗಿ ಘೋಷಿಸಿದೆ. ಇದರಲ್ಲಿ ಪಾಲಕ್ಕಾಡ್, ಕೊಟ್ಟಾಯಂ, ಕಣ್ಣೂರು (ಕೇರಳ), ತಿರುಪ್ಪೂರ್ (ತಮಿಳುನಾಡು), ನಿಜಾಮಾಬಾದ್, ಖಮ್ಮಂ (ತೆಲಂಗಾಣ), ಮತ್ತು ಬರೇಲಿ (ಉತ್ತರ … Continued

ಬೀದರ: ಭೀಕರ ರಸ್ತೆ ಅಫಘಾತದಲ್ಲಿ ಆರು ಕೂಲಿಕಾರ್ಮಿಕ ಮಹಿಳೆಯರು ಸಾವು

ಬೀದರ: ಟ್ರಕ್ ಹಾಗೂ ಆಟೋ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಕೂಲಿ ಕೆಲಸ ಮುಗಿಸಿಕೊಂಡು ಮನೆಗೆ ಹಿಂದಿರುಗುತ್ತಿದ್ದ ಐವರು ಮಹಿಳೆಯರು ಮೃತಪಟ್ಟ ಘಟನೆ ಬೀದರ ಜಿಲ್ಲೆಯ ಚಿಟಗುಪ್ಪಾ ತಾಲೂಕಿನ ಬೆಮ್ಮಳಖೇಡ ಗ್ರಾಮದ ಬಳಿ ಘಟನೆ ನಡೆದ ಬಗ್ಗೆ ವರದಿಯಾಗಿದೆ. ಒಬ್ಬ ಮಹಿಳೆ ಸ್ಥಳದಲ್ಲೇ ಮೃತಪಟ್ಟರೆ ಐವರು  ಮಹಿಳೆಯರು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಸಾವಿಗೀಡಾದ್ದಾರೆ. ಇನ್ನುಳಿದ … Continued