ಭಾರತ vs ನ್ಯೂಜಿಲೆಂಡ್: ಏಕದಿನ ಪಂದ್ಯದಲ್ಲಿ ದ್ವಿಶತಕ ಬಾರಿಸಿದ ಶುಭಮನ್ ಗಿಲ್ : ಈ ಸಾಧನೆ ಮಾಡಿದ ಅತ್ಯಂತ ಕಿರಿಯ ಬ್ಯಾಟರ್

ಹೈದರಾಬಾದ್‌ : ಬುಧವಾರ ಹೈದರಾಬಾದ್‌ನಲ್ಲಿ ನಡೆದ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮೊದಲ ಏಕದಿನ ಪಂದ್ಯದಲ್ಲಿ ಭಾರತದ ಆರಮಭಿಕ ಆಟಗಾರ ಶುಭಮನ್ ಗಿಲ್ ಅವರು ಕೇವಲ 145 ಎಸೆತಗಳಲ್ಲಿ ತಮ್ಮ ಚೊಚ್ಚಲ ದ್ವಿಶತಕವನ್ನು ಸಿಡಿಸಿದ್ದಾರೆ. ಈ ಮೂಲಕ ಶುಭಮನ್ ಗಿಲ್ ಏಕದಿನ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ದ್ವಿಶತಕ ಬಾರಿಸಿದ ಅತ್ಯಂತ ಕಿರಿಯ ಬ್ಯಾಟರ್ ಎನಿಸಿಕೊಂಡರು. ಸಚಿನ್ ತೆಂಡೂಲ್ಕರ್, … Continued

ಭಾರತ್ ಜೋಡೋ ಯಾತ್ರೆಯಲ್ಲಿ ರಾಹುಲ್ ಗಾಂಧಿ ಜೊತೆ ಹೆಜ್ಜೆ ಹಾಕಿದ ಬಾಲಿವುಡ್‌ ನಟಿ ಪೂಜಾ ಭಟ್ | ವೀಕ್ಷಿಸಿ

ಹೈದರಾಬಾದ್‌: ಕಾಂಗ್ರೆಸ್‌ನ ಭಾರತ್ ಜೋಡೋ ಯಾತ್ರೆ ತೆಲಂಗಾಣದಲ್ಲಿ ನಡೆಯುತ್ತಿದ್ದು, ರಾಹುಲ್ ಗಾಂಧಿ ಹೈದರಾಬಾದ್ ನಗರದಿಂದ ಇಂದಿನ ಪಾದಯಾತ್ರೆ ಆರಂಭಿಸಿದ್ದಾರೆ. ಇಂದಿನ ಭಾರತ ಜೋಡೋ ಪಾದಯಾತ್ರೆಗೆ ಬಾಲಿವುಡ್‌ ನಟಿ ಪೂಜಾ ಭಟ್ ಕೂಡ ಸೇರಿಕೊಂಡಿದ್ದಾರೆ. ಕಾಂಗ್ರೆಸ್ ಕೂಡ ಟ್ವೀಟ್ ಮಾಡಿ ಪೂಜಾ ಭಟ್ ಯಾತ್ರೆಯಲ್ಲಿ ರಾಹುಲ್‌ ಜೊತೆ ಜೆಜ್ಜೆ ಹಾಕುತ್ತಿರುವ ಚಿತ್ರಗಳನ್ನು ಹಂಚಿಕೊಂಡಿದೆ. ಪ್ರತಿದಿನ ಹೊಸ ಇತಿಹಾಸ … Continued

ತೆಲಂಗಾಣ ಸಿಎಂರಿಂದ ನಾಳೆ ರಾಷ್ಟ್ರೀಯ ಪಕ್ಷ ಘೋಷಣೆ : ಶಾಸಕರ ಜೊತೆ ಹೈದರಾಬಾದ್ ತೆರಳಿದ ಹೆಚ್​ಡಿಕೆ

posted in: ರಾಜ್ಯ | 0

ಬೆಂಗಳೂರು: ಕೆ.ಚಂದ್ರಶೇಖರ ರಾವ್‌ ಭಾರತ ರಾಷ್ಟ್ರ ಸಮಿತಿ ಪಕ್ಷ ಸ್ಥಾಪನೆ ಮಾಡಲಿರುವ ಹಿನ್ನೆಲೆ 20 ಶಾಸಕರ ಜೊತೆ ವಿಶೇಷ ವಿಮಾನದ ಮೂಲಕ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹೈದರಾಬಾದ್​ಗೆ ತೆರಳಿದ್ದಾರೆ. ನಾಳೆ ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ನೂತನ ರಾಷ್ಟ್ರೀಯ ಪಕ್ಷ ಘೋಷಣೆ ಮಾಡಲಿದ್ದಾರೆ. ಆ ಕಾರ್ಯಕ್ರಮದಲ್ಲಿ ಕುಮಾರಸ್ವಾಮಿ ಭಾಗಿಯಾಗಲಿದ್ದಾರೆ. ಪಕ್ಷ ಸ್ಥಾಪನೆ ಬಗ್ಗೆ ಕೆಲ … Continued

ಹೈದರಾಬಾದ್: ನವರಾತ್ರಿ ಪೆಂಡಾಲ್‌ನಲ್ಲಿ ದುರ್ಗಾ ದೇವಿಯ ಮೂರ್ತಿಗೆ ಹಾನಿ ಮಾಡಿದ ಇಬ್ಬರು ಬುರ್ಖಾಧಾರಿ ಮಹಿಳೆಯರ ಬಂಧನ

ಹೈದರಾಬಾದ್: ಇಲ್ಲಿನ ಪೂಜಾ ಮಂಟಪದಲ್ಲಿ ಪ್ರತಿಷ್ಠಾಪನೆ ಮಾಡಲಾಗಿದ್ದ ದುರ್ಗಾ ಮಾತೆಯ ವಿಗ್ರಹಕ್ಕೆ ಹಾನಿ   ಮಾಡಿದ ಆರೋಪದ ಮೇಲೆ ಬುರ್ಖಾ ಧರಿಸಿದ್ದ ಇಬ್ಬರು ಮಹಿಳೆಯರನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ. ಈ ಘಟನೆಯು ಮುಂಜಾನೆ ಸಂಭವಿಸಿದ್ದು, ಇಪ್ಪತ್ತರ ಹರೆಯದವರೆಂದು ಹೇಳಲಾದ ಇಬ್ಬರು ಮಹಿಳೆಯರು, ಹೈದರಾಬಾದ್‌ನ ಖೈರತಾಬಾದ್‌ನಲ್ಲಿ ಪೂಜಾ ಮಂಟಪಕ್ಕೆ ನುಗ್ಗಿ ದುರ್ಗಾ ದೇವಿಯ ವಿಗ್ರಹವನ್ನು … Continued

ಬೆಕ್ಕು ಕೂಗಿದ್ದರಿಂದ ಸಿಟ್ಟಿಗೆದ್ದ ಅಪ್ರಾಪ್ತ ಬಾಲಕ ಬೆಕ್ಕು ಸಾಕಿದವನನ್ನೇ ಕೊಂದ…!

ಹೈದರಾಬಾದ್: ಬೆಕ್ಕಿನ ನಿರಂತರ ಕೂಗಾಟದಿಂದ ಸಿಟ್ಟಾದ ಅಪ್ರಾಪ್ತ ಬಾಲಕನೊಬ್ಬ ಸಾಕು ಬೆಕ್ಕಿನ ಮನೆಯವನಿಗೆ ಬೆಂಕಿ ಹಚ್ಚಿರುವ ಘಟನೆ ನಡೆದಿದೆ. ಮಾಲಕ ಸಾವಿಗೀಡಾಗಿದ್ದು, ಮಾಲಕನ ಸ್ನೇಹಿತ ಶನಿವಾರ ನಗರದ ಬಂಜಾರ ಹಿಲ್ಸ್ ಪೊಲೀಸರಿಗೆ ದೂರು ನೀಡಿದಾಗ ಘಟನೆ ಬೆಳಕಿಗೆ ಬಂದಿದೆ. ವರದಿಗಳ ಪ್ರಕಾರ, ರಂಗಾರೆಡ್ಡಿ ಜಿಲ್ಲೆಯ ಕೋತೂರು ಮಂಡಲದ ನಲ್ಲಾಪುರದ ಹರೀಶ್ವರ್ ರೆಡ್ಡಿ ಅಲಿಯಾಸ್ ಚಿಂಟು (20) … Continued

ಖ್ಯಾತ ಟೇಬಲ್ ಟೆನ್ನಿಸ್ ಆಟಗಾರ್ತಿಗೆ ಸಾಮಾಜಿಕ ಜಾಲ ತಾಣದಲ್ಲಿ ಕಿರುಕುಳ: ಆರೋಪಿ ಬಂಧನ

ಹೈದರಾಬಾದ್: ಖ್ಯಾತ ಟೇಬಲ್​ ಟೆನ್ನಿಸ್​ ಆಟಗಾರ್ತಿ ನೈನಾ ಜೈಸ್ವಾಲ್​ ಅವರಿಗೆ ಸಾಮಾಜಿಕ ಜಾಲತಾಣದಲ್ಲಿ ಅಶ್ಲೀಲ ಸಂದೇಶ ಕಳುಹಿಸುತ್ತಿದ್ದ ಆರೋಪಿಯನ್ನು ಹೈದರಾಬಾದ್​ನ ಸೈಬರ್​ ಕ್ರೈಂ ಪೊಲೀಸರು ಶನಿವಾರ ಬಂಧಿಸಿದ್ದಾರೆ. ಶ್ರೀಕಾಂತ್​ ಎಂಬಾತನೇ ಬಂಧಿತ ಆರೋಪಿಯಾಗಿದ್ದಾನೆ. ಈತ ಟ್ವಿಟರ್‍ ಮತ್ತು ಇನ್‌ಸ್ಟಾಗ್ರಾಂನಲ್ಲಿ ನೈನಾ ಅವರಿಗೆ ಅಶ್ಲೀಲವಾಗಿ ಸಂದೇಶಗಳನ್ನು ಕಳುಹಿಸುತ್ತಿದ್ದ. ನೈನಾ ಹಲವು ಬಾರಿ ಈತನಿಗೆ ಎಚ್ಚರಿಕೆ ನೀಡಿದ ಹೊರತಾಗಿಯೂ … Continued