ವೀಡಿಯೊ..| ಬೋಂಡಿ ಬೀಚ್ ದಾಳಿ ; ಬೇರೆಯವರ ಜೀವ ಉಳಿಸಲು ಶೂಟರನನ್ನು ತಡೆಯಲು ಪ್ರಯತ್ನಿಸಿ ಪ್ರಾಣತೆತ್ತ ವೃದ್ಧ ದಂಪತಿ

ಸಿಡ್ನಿ: ಆಸ್ಟ್ರೇಲಿಯಾದ ಪ್ರಸಿದ್ಧ ಬಾಂಡಿ ಬೀಚ್‌ನಲ್ಲಿ ಭಾನುವಾರ ನಡೆದ ಭೀಕರ ಗುಂಡಿನ ದಾಳಿಯ ಸಂದರ್ಭದಲ್ಲಿ, ವೃದ್ಧ ದಂಪತಿ ತಮ್ಮ ಪ್ರಾಣವನ್ನು ಪಣಕ್ಕಿಟ್ಟು ದಾಳಿಕೋರನನ್ನು ತಡೆಯಲು ಪ್ರಯತ್ನಿಸಿದ ವೀಡಿಯೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಈ ಡ್ಯಾಶ್‌ಕ್ಯಾಮ್ (Dashcam) ವೀಡಿಯೊದಲ್ಲಿ, ವೃದ್ಧ ದಂಪತಿ ರಸ್ತೆಯ ಬದಿಯಲ್ಲಿ ಬಂದೂಕುಧಾರಿ ದಾಳಿಕೋರನೊಂದಿಗೆ ಹೋರಾಡುತ್ತಿರುವುದು ಕಂಡುಬಂದಿದೆ. ಶಾರ್ಟ್ಸ್ ಮತ್ತು ಲ್ಯಾವೆಂಡರ್ ಬಣ್ಣದ ಟಿ-ಶರ್ಟ್ … Continued

ಬಾಂಡಿ ಬೀಚ್‌ ಭೀಕರ ಗುಂಡಿನ ದಾಳಿ : ಆರೋಪಿ ಸಾಜಿದ್ ಅಕ್ರಮ್ ಹೈದರಾಬಾದ್ ಮೂಲದವನು ; ತೆಲಂಗಾಣ ಪೊಲೀಸರು

ಹೈದರಾಬಾದ್: ಆಸ್ಟ್ರೇಲಿಯಾದ ಸಿಡ್ನಿಯ ಬಾಂಡಿ ಬೀಚ್‌ನಲ್ಲಿ ನಡೆದ ಭೀಕರ ಗುಂಡಿನ ದಾಳಿಯ ಪ್ರಮುಖ ಆರೋಪಿಗಳಲ್ಲಿ ಒಬ್ಬನಾದ ಸಾಜಿದ್ ಅಕ್ರಮ್ ಮೂಲತಃ ಹೈದರಾಬಾದ್‌ನವನು ಎಂದು ತೆಲಂಗಾಣ ಪೊಲೀಸರು ಮಂಗಳವಾರ ತಿಳಿಸಿದ್ದಾರೆ. ಈ ಮೊದಲು ಮಾಧ್ಯಮಗಳು ಈತ ಪಾಕಿಸ್ತಾನಿ ಪ್ರಜೆ ಎಂದು ವರದಿ ಮಾಡಿದ್ದವು, ಆದರೆ ಪೊಲೀಸರು ಈಗ ಆ ವರದಿಗಳನ್ನು ಸ್ಪಷ್ಟವಾಗಿ ನಿರಾಕರಿಸಿದ್ದಾರೆ. ಕಳೆದ ಭಾನುವಾರ ಸಿಡ್ನಿಯ … Continued

ವೀಡಿಯೊ..| ಬಾಂಡಿ ಬೀಚ್‌ನಲ್ಲಿ ಗುಂಡಿನ ದಾಳಿ :12 ಸಾವು, ಧೈರ್ಯ ತೋರಿ ಉಗ್ರನ ರೈಫಲ್ ಕಸಿದು ಆತನಿಗೇ ಗುರಿಯಿಟ್ಟ ವ್ಯಕ್ತಿ !

ಸಿಡ್ನಿ: ಆಸ್ಟ್ರೇಲಿಯಾದ ಸಿಡ್ನಿಯಲ್ಲಿರುವ ಪ್ರಸಿದ್ಧ ಬಾಂಡಿ ಬೀಚ್‌ನಲ್ಲಿ ಭಾನುವಾರ( ಡಿಸೆಂಬರ್‌ 14) ಸಂಜೆ ಸುಮಾರು 6:30ರ (ಸ್ಥಳೀಯ ಕಾಲಮಾನ) ಸುಮಾರಿಗೆ ನಡೆದ ಭೀಕರ ಗುಂಡಿನ ದಾಳಿಯಿಂದಾಗಿ 12 ಜನರು ಸಾವಿಗೀಡಾಗಿದ್ದಾರೆ ಎಂದು ವರದಿಯಾಗಿದೆ. ಇಬ್ಬರು ಬಂದೂಕುಧಾರಿಗಳು ಮನಸ್ಸೋ ಇಚ್ಛೆ ಗುಂಡು ಹಾರಿಸಿದ್ದು, ಸತ್ತವರಲ್ಲಿ ಓರ್ವ ಬಂದೂಕುಧಾರಿ ಸೇರಿದ್ದಾರೆ ಎಂದು ಹೇಳಲಾಗಿದೆ. ಇನ್ನೊಬ್ಬ ಆರೋಪಿಯ ಗಾಯಗೊಂಡಿದ್ದು, ಆತನನ್ನು … Continued