ವೀಡಿಯೊ..| ಬೋಂಡಿ ಬೀಚ್ ದಾಳಿ ; ಬೇರೆಯವರ ಜೀವ ಉಳಿಸಲು ಶೂಟರನನ್ನು ತಡೆಯಲು ಪ್ರಯತ್ನಿಸಿ ಪ್ರಾಣತೆತ್ತ ವೃದ್ಧ ದಂಪತಿ
ಸಿಡ್ನಿ: ಆಸ್ಟ್ರೇಲಿಯಾದ ಪ್ರಸಿದ್ಧ ಬಾಂಡಿ ಬೀಚ್ನಲ್ಲಿ ಭಾನುವಾರ ನಡೆದ ಭೀಕರ ಗುಂಡಿನ ದಾಳಿಯ ಸಂದರ್ಭದಲ್ಲಿ, ವೃದ್ಧ ದಂಪತಿ ತಮ್ಮ ಪ್ರಾಣವನ್ನು ಪಣಕ್ಕಿಟ್ಟು ದಾಳಿಕೋರನನ್ನು ತಡೆಯಲು ಪ್ರಯತ್ನಿಸಿದ ವೀಡಿಯೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಈ ಡ್ಯಾಶ್ಕ್ಯಾಮ್ (Dashcam) ವೀಡಿಯೊದಲ್ಲಿ, ವೃದ್ಧ ದಂಪತಿ ರಸ್ತೆಯ ಬದಿಯಲ್ಲಿ ಬಂದೂಕುಧಾರಿ ದಾಳಿಕೋರನೊಂದಿಗೆ ಹೋರಾಡುತ್ತಿರುವುದು ಕಂಡುಬಂದಿದೆ. ಶಾರ್ಟ್ಸ್ ಮತ್ತು ಲ್ಯಾವೆಂಡರ್ ಬಣ್ಣದ ಟಿ-ಶರ್ಟ್ … Continued