ಕನ್ನಡದ ಹಿರಿಯ ನಟ ಬ್ಯಾಂಕ್‌ ಜನಾರ್ಧನ ನಿಧನ

ಬೆಂಗಳೂರು: 500 ಕ್ಕೂ ಹೆಚ್ಚು ಕನ್ನಡ ಸಿನಿಮಾಗಳಲ್ಲಿ ಜನರನ್ನು ನಕ್ಕು-ನಲಿಸಿದ ಹಾಸ್ಯ ನಟ ಬ್ಯಾಂಕ್‌ ಜನಾರ್ಧನ  (76) ನಿಧನರಾಗಿದ್ದಾರೆ. ಮಧ್ಯರಾತ್ರಿ 2:30ರ ಸುಮಾರಿಗೆ ಬೆಂಗಳೂರಿನ ಮಣಿಪಾಲ ಆಸ್ಪತ್ರೆಯಲ್ಲಿ ನಟ ಬ್ಯಾಂಕ್‌ ಜನಾರ್ಧನ್‌ ನಿಧನರಾಗಿದ್ದಾರೆ. ಸುಲ್ತಾನ್‌ ಪಾಳ್ಯದ ನಿವಾಸದಲ್ಲಿರುವ ಅವರ ನಿವಾಸದಲ್ಲಿ ಪಾರ್ಥೀವ ಶರೀರ ಇಡಲಾಗಿದ್ದು, ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಮಧ್ಯಾಹ್ನ 3 – 4 … Continued

ಹಿಂದಿ ಸಿನೆಮಾದ ಖ್ಯಾತ ನಟ-ನಿರ್ದೇಶಕ ಮನೋಜಕುಮಾರ ನಿಧನ

ಮುಂಬೈ: ದಾದಾ ಸಾಹೇಬ ಪ್ರಶಸ್ತಿ ಪುರಸ್ಕೃತ ಹಿಂದಿ ಚಿತ್ರರಂಗದ ಹಿರಿಯ ನಟ ಮತ್ತು ಚಲನಚಿತ್ರ ನಿರ್ದೇಶಕರಾದ ಮನೋಜಕುಮಾರ ನಿಧನರಾಗಿದ್ದಾರೆ. ಅವರಿಗೆ 87 ವರ್ಷ ವಯಸ್ಸಾಗಿತ್ತು. ಮುಂಬೈನ ಕೋಕಿಲಾಬೆನ್ ಧೀರೂಭಾಯಿ ಅಂಬಾನಿ ಆಸ್ಪತ್ರೆಯಲ್ಲಿ ನಟ ಕೊನೆಯುಸಿರೆಳೆದಿದ್ದಾರೆ ಎಂದು ವರದಿಯಾಗಿದೆ. ಮನೋಜಕುಮಾರ ಅವರು ನಿಧನರಾಗಿದ್ದನ್ನು ಅವರ ಪುತ್ರ ಕುನಾಲ್ ಗೋಸ್ವಾಮಿ ದೃಢಪಡಿಸಿದ್ದಾರೆ ಎಂದು ಎಎನ್‌ಐಗೆ ಸುದ್ದಿ ವರದಿ ಮಾಡಿದೆ. … Continued

ಚಿನ್ನ ಕಳ್ಳ ಸಾಗಣೆ ಪ್ರಕರಣ: ನಟಿ ರನ್ಯಾ ರಾವ್‌ ಗೆ ಜಾಮೀನು ನಿರಾಕರಿಸಿದ ನ್ಯಾಯಾಲಯ

ಬೆಂಗಳೂರು : ಚಿನ್ನ ಕಳ್ಳ ಸಾಗಣೆ ಪ್ರಕರಣದಲ್ಲಿ ಬಂಧಿತಳಾಗಿರುವ ನಟಿ ರನ್ಯಾ ರಾವ್‌ಗೆ ಬೆಂಗಳೂರಿನ ಸತ್ರ ನ್ಯಾಯಾಲಯವು ಗುರುವಾರ ಜಾಮೀನು ನಿರಾಕರಿಸಿದೆ. ಆರ್ಥಿಕ ಅಪರಾಧಗಳ ಕುರಿತಾದ ವಿಶೇಷ ನ್ಯಾಯಾಲಯವು ರನ್ಯಾ ಜಾಮೀನು ಅರ್ಜಿ ಆದೇಶವನ್ನು ಮಂಗಳವಾರ ಕಾಯ್ದಿರಿಸಿತ್ತು. ಕಾಯ್ದಿರಿಸಿದ್ದ ಜಾಮೀನು ಆದೇಶವನ್ನು ಬೆಂಗಳೂರಿನ 64ನೇ ಹೆಚ್ಚುವರಿ ಸಿಟಿ ಸಿವಿಲ್‌ ಮತ್ತು ಸತ್ರ ನ್ಯಾಯಾಧೀಶ ಈರಪ್ಪಣ್ಣ ಪವಡಿ … Continued

ಬಾಲಿವುಡ್ ನಟ ಸೋನು ಸೂದ್ ವಿರುದ್ಧ ಬಂಧನ ವಾರಂಟ್

ಲುಧಿಯಾನ : ಆಪಾದಿತ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪಂಜಾಬ್‌ ನ್ಯಾಯಾಲಯವು ಬಾಲಿವುಡ್ ನಟ ಸೋನು ಸೂದ್ ವಿರುದ್ಧ ಬಂಧನ ವಾರಂಟ್ ಹೊರಡಿಸಿದೆ. ಲೂಧಿಯಾನ ಜುಡಿಷಿಯಲ್ ಮ್ಯಾಜಿಸ್ಟ್ರೇಟ್ ರಮಣ್‌ಪ್ರೀತ್ ಕೌರ್ ಅವರು ವಾರಂಟ್ ಹೊರಡಿಸಿದ್ದಾರೆ. ಮೋಹಿತ್ ಶುಕ್ಲಾ ಎಂಬಾತ ತನಗೆ 10 ಲಕ್ಷ ರೂಪಾಯಿ ವಂಚಿಸಿದ್ದಾನೆ ಎಂದು ಆರೋಪಿಸಿ ಲೂಧಿಯಾನ ವಕೀಲ ರಾಜೇಶ ಖನ್ನಾ ಅವರು ದಾಖಲಿಸಿರುವ … Continued

ಯಾಣಕ್ಕೆ ಭೇಟಿ ನೀಡಿದ ನಟ ಶಿವರಾಜಕುಮಾರ ; 29 ವರ್ಷಗಳ ಹಿಂದೆ ನಡೆದ ʼನಮ್ಮೂರ ಮಂದಾರ ಹೂವೆʼ ಸಿನೆಮಾ ಚಿತ್ರೀಕರಣದ ಮೆಲುಕು

ಕಾರವಾರ: ಖ್ಯಾತ ಚಲನಚಿತ್ರ ನಟ ಹ್ಯಾಟ್ರಿಕ್ ಹೀರೋ ಶಿವರಾಜಕುಮಾರ( Shiva Rajkumar) ಇತ್ತೀಚೆಗೆ ಅನಾರೋಗ್ಯದಿಂದ ವಿದೇಶಕ್ಕೆ ಹೋಗಿ ಚಿಕಿತ್ಸೆ ಪಡೆದುಕೊಂಡು ಬಂದಿದ್ದಾರೆ. ಶಸ್ತ್ರಚಿಕಿತ್ಸೆ ಬಳಿಕ ಚೇತರಿಸಿಕೊಂಡಿರುವ ಅವರು ಈಗ ಉತ್ತರ ಕನ್ನಡ ಜಿಲ್ಲೆಯ ಪ್ರವಾಸಿತಾಣವಾಗಿರುವ ಯಾಣ (Yana)ಕ್ಕೆ ಭೇಟಿ ನೀಡಿದ್ದಾರೆ. ಈ ಮೊದಲು ಅವರು 29 ವರ್ಷದ ಹಿಂದೆ ಯಾಣದಲ್ಲಿ ಚಿತ್ರೀಕರಣವಾಗಿದ್ದ ನಮ್ಮೂರ ಮಂದಾರಹೂವೆ ಸಿನಿಮಾ … Continued

ವೀಡಿಯೊಗಳು..| ಬಾಲಿವುಡ್‌ ಬೋಲ್ಡ್‌ ನಟಿ ಈಗ ಸನ್ಯಾಸಿನಿ…! ಮಹಾಕುಂಭದಲ್ಲಿ ಕಿನ್ನರ ಅಖಾರದ ‘ಮಹಾಮಂಡಲೇಶ್ವರ’ ಆದ ನಟಿ ಮಮತಾ ಕುಲಕರ್ಣಿ

ಬಾಲಿವುಡ್‌ನ ಮಾಜಿ ನಟಿ ಮಮತಾ ಕುಲಕರ್ಣಿ ಈಗ ಅಧ್ಯಾತ್ಮದ ಹಾದಿ ಹಿಡಿದಿದ್ದಾರೆ. ಒಂದು ಕಾಲದಲ್ಲಿ ಬಾಲಿವುಡ್‌ನ ಬೋಲ್ಡ್‌ ನಟಿ ಎಂದು ಗುರುತಿಸಿಕೊಂಡಿದ್ದ ಮಮತಾ ಕುಲಕರ್ಣಿ ಈಗ ಕುಂಭಮೇಳದಲ್ಲಿ ಮಹಾಮಂಡಲೇಶ್ವರ ಆಗುವ ಮೂಲಕ ಅಧ್ಯಾತ್ಮಿಕ ಹಾದಿ ಹಿಡಿದಿದ್ದಾರೆ. ಕಿನ್ನರ ಅಖಾಡದಿಂದ ಅವರಿಗೆ ಈ ಬಿರುದು ನೀಡಲಾಗಿದೆ. ಈಗ ಅವರ ಹೆಸರನ್ನೂ ಬದಲಾಯಿಸಲಾಗಿದೆ. ಅವರನ್ನು ಈಗ ಶ್ರೀ ಯಾಮಿನಿ … Continued

ವೀಡಿಯೊ..| ಚಾಕು ಇರಿತದ ಘಟನೆ 6 ದಿನಗಳ ನಂತರ ಮುಂಬೈ ಆಸ್ಪತ್ರೆಯಿಂದ ಡಿಸ್ಚಾರ್ಜ್‌ ಆಗಿ ಮನೆಗೆ ತೆರಳಿದ ಸೈಫ್ ಅಲಿ ಖಾನ್

ಮುಂಬೈ: ನಟ ಸೈಫ್ ಅಲಿ ಖಾನ್ ಅವರು ತಮ್ಮ ಬಾಂದ್ರಾ ಮನೆಯಲ್ಲಿ ಕಳ್ಳತನ ಯತ್ನದ ಸಂದರ್ಭದಲ್ಲಿ ಚಾಕು ದಾಳಿಯಿಂದ ಗಂಭೀರವಾಗಿ ಗಾಯಗೊಂಡ ಆರು ದಿನಗಳ ನಂತರ ಮುಂಬೈನ ಲೀಲಾವತಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. ಅವರು ತಮ್ಮ ಬಾಂದ್ರಾ ಮನೆಗೆ ತೆರಳಿದ್ದು, ಅಲ್ಲಿ ಭಾರೀ ಭದ್ರತೆ ನಿಯೋಜಿಸಲಾಗಿದೆ. ಸೈಫ್‌ ಅಲಿ ಖಾನ್ ಅವರಿಗೆ ಒಂದು ವಾರದವರೆಗೆ ಸಂಪೂರ್ಣ ಬೆಡ್ … Continued

ನಟ ಸೈಫ್ ಅಲಿ ಖಾನ್‌ಗೆ ಇರಿದು ಪರಾರಿಯಾಗಿ ಅಡಗಿದ್ದ ಬಾಂಗ್ಲಾದೇಶಿ ವ್ಯಕ್ತಿಯನ್ನು ಒಂದು ಸುಳಿವನ್ನಾಧರಿಸಿ ಪೊಲೀಸರು ಹಿಡಿದಿದ್ದೇ ರೋಚಕ..!

ಮುಂಬೈ: ಭಾರತಕ್ಕೆ ಅಕ್ರಮವಾಗಿ ಪ್ರವೇಶಿಸಿದ ಮತ್ತು ಬಿಜೋಯ ದಾಸ್ ಎಂಬ ಸುಳ್ಳು ಹೆಸರಿನಲ್ಲಿ ವಾಸಿಸುತ್ತಿದ್ದ ಬಾಂಗ್ಲಾದೇಶದ ಪ್ರಜೆ ಶರೀಫುಲ್ ಇಸ್ಲಾಂ ಶೆಹಜಾದ್ ನನ್ನು ನಟ ಸೈಫ್ ಅಲಿ ಖಾನ್ ಅವರ ಮನೆಗೆ ನುಗ್ಗಿ ಕಳ್ಳತನ ಯತ್ನದ ವೇಳೆ ನಟನ ಮೇಲೆ ಮತ್ತು ಅವರ ಸಿಬ್ಬಂದಿಯ ಮೇಲೆ ಚಾಕುವಿನಿಂದ ದಾಳಿ ಮಾಡಿದ ಆರೋಪದ ಮೇಲೆ ಬಂಧಿಸಲಾಗಿದೆ. ಆರೋಪಿಯ … Continued

ನಟ ಸೈಫ್ ಅಲಿ ಖಾನ್ ಗೆ ಚಾಕುವಿನಿಂದ ಇರಿದ ಪ್ರಕರಣ : ಬಂಧಿತ ಮುಖ್ಯ ಆರೋಪಿ ಶರೀಫುಲ್ ಇಸ್ಲಾಂ ಬಗ್ಗೆ ಈವರೆಗೆ ತಿಳಿದಿದ್ದೇನೆಂದರೆ….

ಮುಂಬೈ: ಬಾಲಿವುಡ್ ನಟ ಸೈಫ್ ಅಲಿ ಖಾನ್ ಅವರ ಮುಂಬೈ ನಿವಾಸದ ಒಳನುಗ್ಗಿ ಅವರನ್ನು ಚಾಕುವಿನಿಂದ ಇರಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯ ಆರೋಪಿ ಬಾಂಗ್ಲಾದೇಶದ ಪ್ರಜೆಯನ್ನು ಬಂಧಿಸಿರುವುದಾಗಿ ಪೊಲೀಸರು ಭಾನುವಾರ ತಿಳಿಸಿದ್ದಾರೆ. ಪ್ರಾಥಮಿಕ ತನಿಖೆಯ ಪ್ರಕಾರ ಶರೀಫುಲ್ ಇಸ್ಲಾಂ ಶೆಹಜಾದ್ ಮೊಹಮ್ಮದ್ ರೋಹಿಲ್ಲಾ ಅಮೀನ್ ಫಕೀರ್ ಎಂಬ ವ್ಯಕ್ತಿಗೆ ತಾನು ಸೈಫ್‌ ಅಲಿ ಖಾನ್ ಅವರ … Continued

ವೀಡಿಯೊ…| ನಟ ಸೈಫ್ ಅಲಿ ಖಾನಗೆ ಚಾಕು ಇರಿತ ; ಪರಾರಿಯಾಗಿರುವ ದಾಳಿಕೋರ ಹೆಡ್‌ಫೋನ್‌ ಖರೀದಿಸಿದ ದೃಶ್ಯ ಸಿಸಿಟಿವಿಯಲ್ಲಿ ಸೆರೆ…

ಮುಂಬೈ: ನಟ ಸೈಫ್ ಅಲಿ ಖಾನ್ ಅವರ ಮನೆಗೆ ಕಳ್ಳತನಕ್ಕೆ ನುಗ್ಗಿ ಸೈಫ್ ಅಲಿ ಖಾನ್ ಅವರಿಗೆ ಚಾಕುವಿನಿಂದ ಇರಿದ ವ್ಯಕ್ತಿಯ ಹೊಸ ದೃಶ್ಯಗಳು ಹೊರಬಿದ್ದಿದೆ, ಘಟನೆ ನಡೆದ ಸುಮಾರು ಆರು ಗಂಟೆಗಳ ನಂತರ ಬೆಳಗ್ಗೆ 9 ಗಂಟೆ ಸುಮಾರಿಗೆ ದಾದರಿನ ಅಂಗಡಿಯೊಂದರಿಂದ ಹೆಡ್‌ಫೋನ್ ಖರೀದಿಸುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಬಾಂದ್ರಾದಲ್ಲಿನ 12 ಅಂತಸ್ತಿನ ಕಟ್ಟಡದ … Continued