ವಿಜಯಪುರ : 27 ವರ್ಷಗಳಿಂದ ತಲೆಮರೆಸಿಕೊಂಡಿದ್ದ 58 ಮಂದಿ ಸಾವಿಗೀಡಾಗಿದ್ದ ಕೊಯಮತ್ತೂರು ಸ್ಫೋಟದ ಆರೋಪಿ ಬಂಧನ

ವಿಜಯಪುರ :  ಸಾದಿಕ್ ಅಲಿಯಾಸ್ ಟೈಲರ್ ರಾಜಾ ಎಂಬಾತನನ್ನು ತಮಿಳುನಾಡು ಪೊಲೀಸರು ಬಂಧಿಸಿದ್ದಾರೆ. 27 ವರ್ಷಗಳಿಂದ ಬಂಧನದಿಂದ ತಪ್ಪಿಸಿಕೊಳ್ಳುತ್ತಿದ್ದ ಶಂಕಿತನನ್ನು ಅಂತಿಮವಾಗಿ ಭಯೋತ್ಪಾದನಾ ನಿಗ್ರಹ ದಳ ಮತ್ತು ಕೊಯಮತ್ತೂರು ನಗರ ಪೊಲೀಸರ ಜಂಟಿ ತಂಡವು ವಿಶ್ವಾಸಾರ್ಹ ಗುಪ್ತಚರ ಮಾಹಿತಿಯ ಆಧಾರದ ಮೇಲೆ ಬಂಧಿಸಿದೆ. 58 ಜನರ ಸಾವು ಹಾಗೂ 250 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದ … Continued

‘ಮಕ್ಕಳು ನನ್ನನ್ನು ಅವಮಾನಿಸಿದರು…’: ನೊಂದ ನಿವೃತ್ತ ಸೇನಾಧಿಕಾರಿಯಿಂದ ದೇವಸ್ಥಾನಕ್ಕೆ 4 ಕೋಟಿ ರೂ. ಮೌಲ್ಯದ ಆಸ್ತಿ ದಾನ

ಅಚ್ಚರಿಯ ನಡೆಯಲ್ಲಿ, ತಮ್ಮ ಹೆಣ್ಣುಮಕ್ಕಳು ಪಿತ್ರಾರ್ಜಿತ ಆಸ್ತಿಗಾಗಿ ತಮ್ಮನ್ನು ಅವಮಾನಿಸಿದ್ದಾರೆ ಎಂಬ ಆರೋಪಿಸಿದ ನಂತರ 65 ವರ್ಷದ ನಿವೃತ್ತ ಸೇನಾಧಿಕಾರಿಯೊಬ್ಬರು ತಮಿಳುನಾಡಿನ ತಿರುವಣ್ಣಾಮಲೈ ಜಿಲ್ಲೆಯ ಅರುಲ್ಮಿಗು ರೇಣುಗಾಂಬಳ್ ಅಮ್ಮನ್ ದೇವಸ್ಥಾನಕ್ಕೆ 4 ಕೋಟಿ ರೂ. ಮೌಲ್ಯದ ಆಸ್ತಿಯನ್ನು ದಾನ ಮಾಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ತಮ್ಮ ಹೆಣ್ಣುಮಕ್ಕಳಿಂದ ವರ್ಷಗಳಿಂದ ಕಡೆಗಣಿಸಲ್ಪಟ್ಟ ನಂತರ ತೀವ್ರವಾಗಿ ನೊಂದು ನಿವೃತ್ತ … Continued

ರಾಜ್ಯಸಭೆ ಪ್ರವೇಶಿಸಲು ಸಿದ್ಧರಾದ ನಟ ಕಮಲ ಹಾಸನ್‌

ಚೆನ್ನೈ: ಅಭಿಜಾತ ನಟ ಮತ್ತು ರಾಜಕಾರಣಿ ಕಮಲ್ ಹಾಸನ್ ರಾಜ್ಯಸಭೆ ಪ್ರವೇಶಿಸಲು ಸಜ್ಜಾಗಿದ್ದಾರೆ. ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ನೇತೃತ್ವದ ಡಿಎಂಕೆ ರಾಜ್ಯಸಭಾ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಅದರಲ್ಲಿ ಕಮಲ್ ಹಾಸನ್ ಅವರ ಮಕ್ಕಳ್ ನೀಧಿ ಮಯ್ಯಮ್ (ಎಂಎನ್ಎಂ)ಪಕ್ಕಕ್ಕೆ ಡಿಎಂಕೆ ಕೋಟಾದ ಒಂದು ಸ್ಥಾನವನ್ನು ಮೀಸಲಿಡಲಾಗಿದೆ. ಡಿಎಂಕೆಯು ಪಿ ವಿಲ್ಸನ್ ಅವರನ್ನು ಎರಡನೇ ಅವಧಿಗೆ … Continued

ಮುಟ್ಟಾಗಿದ್ದ ವಿದ್ಯಾರ್ಥಿನಿಯನ್ನು ತರಗತಿಯಿಂದ ಹೊರಗೆ ಕೂಡ್ರಿಸಿ ಪರೀಕ್ಷೆ ಬರೆಸಿದ ಶಿಕ್ಷಕರು…!

ಕೊಯಮತ್ತೂರು : ಮುಟ್ಟಾಗಿದ್ದಕ್ಕೆ ವಿದ್ಯಾರ್ಥಿನಿಯೊಬ್ಬಳನ್ನು ಶಿಕ್ಷಕರು ತರಗತಿಯಿಂದ ಹೊರಗೆ ಕೂಡ್ರಿಸಿ ಪರೀಕ್ಷೆ ಬರೆಸಿರುವ ಘಟನೆ ತಮಿಳುನಾಡಿನ ಖಾಸಗಿ ಶಾಲೆಯೊಂದರಲ್ಲಿ ನಡೆದಿದೆ ಎಂದು ವರದಿಯಾಗಿದೆ. 8ನೇ ತರಗತಿ ವಿದ್ಯಾರ್ಥಿನಿ ಶಾಲೆಗೆ ಬಂದ ಬಳಿಕ ಮುಟ್ಟು ಕಾಣಿಸಿಕೊಂಡಿತ್ತು. ಈ ಬಗ್ಗೆ ಆಕೆ ಪ್ರಾಂಶುಪಾಲರ ಬಳಿ ಹೇಳಿಕೊಂಡಾಗ ಅವರು ಶಾಲೆಯ ಹೊರಗಡೆ ಕುಳಿತುಕೊಂಡು ಪರೀಕ್ಷೆ ಬರೆಯುವಂತೆ ಸೂಚಿಸಿದ್ದಾರೆ. ಈ ಸಂಬಂಧ … Continued

ವೀಡಿಯೊ | ಆಹಾರ ಹುಡುಕಿಕೊಂಡು ಸೀದಾ ಮನೆಗೇ ನುಗ್ಗಿದ ಕಾಡಾನೆ ; ಮುಂದಾಗಿದ್ದೇನೆಂದರೆ….

ಕೊಯಮತ್ತೂರು : ತಮಿಳುನಾಡಿನ ಕೊಯಮತ್ತೂರಿನಲ್ಲಿ ಶನಿವಾರ (ಜನವರಿ 18) ರಾತ್ರಿ ಕಾಡಾನೆಯೊಂದು ಮನೆಯೊಂದಕ್ಕೆ ನುಗ್ಗಲು ಯತ್ನಿಸಿದ ಭಯಾನಕ ಘಟನೆ ನಡೆದಿದೆ. ಅನಿರೀಕ್ಷಿತ ಅತಿಥಿಯ ಭೇಟಿಯಿಂದ ಮನೆಯೊಳಗಿದ್ದ ಜನರು ಭಯಭೀತರಾಗಿದ್ದರು. ಈ ಘಟನೆಯನ್ನು ಮನೆಯವರೇ ವೀಡಿಯೊ ಮಾಡಿದ್ದು, ಘಟನೆಯ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಅದೃಷ್ಟವಶಾತ್ ಆನೆ ಮನೆಯೊಳಗೆ ನುಗ್ಗದ ಕಾರಣ ಯಾರಿಗೂ ಹಾನಿಯಾಗಿಲ್ಲ, ಬಾಗಿಲ ಬಳಿಯೇ … Continued

ವೀಡಿಯೊ…| ತಮಗೆ ತಾವೇ ಆರು ಬಾರಿ ಚಾವಟಿಯಿಂದ ಹೊಡೆದುಕೊಂಡ ಬಿಜೆಪಿ ತಮಿಳುನಾಡು ಮುಖ್ಯಸ್ಥ ಅಣ್ಣಾಮಲೈ…!

ಚೆನ್ನೈ: ತಮಿಳುನಾಡು ಬಿಜೆಪಿ ಅಧ್ಯಕ್ಷ ಕೆ ಅಣ್ಣಾಮಲೈ ಶುಕ್ರವಾರ ಬೆಳಗ್ಗೆ ತಮಗೆ ತಾವೇ ಬಾರುಕೋಲಿನಿಂದ ಹೊಡೆದುಕೊಂಡಿದ್ದಾರೆ. ವೀಡಿಯೊದಲ್ಲಿ, ಅಣ್ಣಾಮಲೈ ಅವರು ಹಸಿರು ಲುಂಗಿಯಲ್ಲಿ ಶರ್ಟ್ ಇಲ್ಲದೆ, ಕೈಯಲ್ಲಿ ದೊಡ್ಡ ಚಾವಟಿಯೊಂದಿಗೆ ನಿಂತಿದ್ದಾರೆ. ಅವರು ಆರು ಬಾರಿ ತಮ್ಮನ್ನು ತಾವೇ ಚಾವಟಿಯಿಂದ ಹೊಡೆದುಕೊಂಡಿದ್ದಾರೆ. ಏಳನೇ ಬಾರಿಗೆ ಚಾವಟಿಯಿಂದ ಹೊಡೆದುಕೊಳ್ಳುವಾಗ ಅವರ ಬೆಂಬಲಿಗನೊಬ್ಬ ಓಡಿಹೋಗಿ ನಿಲ್ಲಿಸಿದ್ದಾನೆ. 2026 ರ … Continued

ವೀಡಿಯೊ..| ತರಗತಿಯಲ್ಲಿ ಪಾಠ ಕೇಳುತ್ತಿದ್ದಾಗಲೇ ಕುಸಿದು ಬಿದ್ದು ವಿದ್ಯಾರ್ಥಿನಿ ಸಾವು ; ಶಾಕಿಂಗ್‌ ದೃಶ್ಯ ಸಿಸಿಟಿವಿಯಲ್ಲಿ ಸೆರೆ

ದುರಂತ ಘಟನೆಯೊಂದರಲ್ಲಿ, ತಮಿಳುನಾಡಿನ ರಾಣಿಪೇಟ್‌ನಲ್ಲಿ 9 ನೇ ತರಗತಿಯ ವಿದ್ಯಾರ್ಥಿ ತರಗತಿಯ ಸಮಯದಲ್ಲಿ ಪಾಠ ಕೇಳುತ್ತಿರುವಾಗ ಕುಳಿತಲ್ಲೇ ಕುಸಿದು ಸಾವಿಗೀಡಾಗಿದ್ದಾರೆ. ಚೆನ್ನೈ-ಬೆಂಗಳೂರು ಹೆದ್ದಾರಿಯಲ್ಲಿರುವ ಖಾಸಗಿ ಶಾಲೆಯೊಂದರಲ್ಲಿ ಡಿಸೆಂಬರ್ 10ರಂದು ಬೆಳಿಗ್ಗೆ 11:30 ರ ಸುಮಾರಿಗೆ ಈ ಘಟನೆ ನಡೆದಿದೆ ಎಂದು ವರದಿಯಾಗಿದ್ದು, ಘಟನೆಯ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. 14 ವರ್ಷದ ಮೃತ ವಿದ್ಯಾರ್ಥಿನಿ ಅದ್ವಿತಾ … Continued

ವಿಶ್ವ ಚೆಸ್ ಚಾಂಪಿಯನ್‌ ಶಿಪ್ ಪ್ರಶಸ್ತಿ ಗೆದ್ದ ಗುಕೇಶಗೆ 5 ಕೋಟಿ ರೂ.ಬಹುಮಾನ ಘೋಷಿಸಿದ ತಮಿಳುನಾಡು ಸರ್ಕಾರ

ಚೆನ್ನೈ: ಭಾರತದ ಈ ಯುವ ಗ್ರ್ಯಾಂಡ್ ಮಾಸ್ಟರ್ ವಿಶ್ವ ಚೆಸ್ ಚಾಂಪಿಯನ್‌ಶಿಪ್ ಪ್ರಶಸ್ತಿಯನ್ನು ಗೆದ್ದು ಇತಿಹಾಸ ನಿರ್ಮಿಸಿದ್ದಾರೆ. ಕೇವಲ 18ನೇ ವಯಸ್ಸಿನಲ್ಲಿ ಈ ಸಾಧನೆ ಮಾಡುವ ಮೂಲಕ ಗುಕೇಶ ಅವರು ಅತ್ಯಂತ ಕಿರಿಯ ವಯಸ್ಸಿನ ಚೆಸ್‌ ವಿಶ್ವ ಚಾಂಪಿಯನ್ ಆಗುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ. ಈ ಐತಿಹಾಸಿಕ ಸಾಧನೆಗೆ ತಮಿಳುನಾಡು ಸರ್ಕಾರ ಗುಕೇಶ ಅವರಿಗೆ 5 … Continued

ಖಾಸಗಿ ಆಸ್ಪತ್ರೆಯಲ್ಲಿ ಬೆಂಕಿ ಅವಘಡ ; ಮಗು ಸೇರಿ 7 ಮಂದಿ ಸಾವು

ಚೆನ್ನೈ : ತಮಿಳುನಾಡಿನ ದಿಂಡಿಗಲ್‌ನಲ್ಲಿರುವ ಪ್ರಮುಖ ಮೂಳೆಚಿಕಿತ್ಸೆಯ ಆಸ್ಪತ್ರೆಯಲ್ಲಿ ಬೆಂಕಿ ಕಾಣಿಸಿಕೊಂಡು ಕನಿಷ್ಠ ಏಳು ರೋಗಿಗಳು ಸಾವಿಗೀಡಾಗಿದ್ದಾರೆ ಮತ್ತು 20 ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಮೃತರಲ್ಲಿ ಒಂದು ಮಗು ಮತ್ತು ಇಬ್ಬರು ಮಹಿಳೆಯರು ಸೇರಿದ್ದಾರೆ ಎನ್ನಲಾಗಿದೆ. ಮೊದಲು ನೆಲ ಅಂತಸ್ತಿನ ರಿಸೆಪ್ಶನ್‌ ಪ್ರದೇಶದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಇದಕ್ಕೆ ಶಾರ್ಟ್ ಸರ್ಕ್ಯೂಟ್ ಕಾರಣ ಎಂದು ಶಂಕಿಸಲಾಗಿದೆ. … Continued

ಭಾರಿ ಮಳೆ ಮುನ್ಸೂಚನೆ; ತಮಿಳುನಾಡಿನ 11 ಜಿಲ್ಲೆಗಳ ಶಾಲೆಗಳಿಗೆ ರಜೆ ಘೋಷಣೆ

ಚೆನ್ನೈ: ಭಾರಿ ಮಳೆಯ ಮುನ್ಸೂಚನೆಯ ಹಿನ್ನೆಲೆಯಲ್ಲಿ ಚೆನ್ನೈ ಮತ್ತು ತಮಿಳುನಾಡಿನ ಇತರ 10 ಜಿಲ್ಲೆಗಳಲ್ಲಿ ಇಂದು, ಗುರುವಾರ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಭಾರತೀಯ ಹವಾಮಾನ ಇಲಾಖೆ (IMD) ನೈಋತ್ಯ ಬಂಗಾಳ ಕೊಲ್ಲಿಯಲ್ಲಿ “ವಾಯುಭಾರ ಕುಸಿತ” ದಿಂದಾಗಿ ತಮಿಳುನಾಡು ಮತ್ತು ಆಂಧ್ರಪ್ರದೇಶಕ್ಕೆ ಭಾರಿ ಮಳೆಯಾಗಲಿದೆ ಎಂದು‌ ಎಚ್ಚರಿಕೆಯನ್ನು ನೀಡಿದೆ. ಚೆನ್ನೈ, ವಿಲ್ಲುಪುರಂ, ತಂಜಾವೂರು, ಮೈಲಾಡುತುರೈ, ಪುದುಕ್ಕೊಟ್ಟೈ, … Continued