ವಿಡಿಯೊಗಳು : ಕಾಡಾನೆ ಕತ್ತಿನಲ್ಲಿ ಸಿಕ್ಕಿಕೊಂಡ ಟ್ರ್ಯಾಕ್ಟರ್ ಟೈರ್ ! ವಿಡಿಯೊ ವೈರಲ್‌ ಬೆನ್ನಲ್ಲೇ ಆನೆ ಕತ್ತಿನಿಂದ ಟೈರ್ ತೆಗೆದ ಅರಣ್ಯ ಇಲಾಖೆ

ಗುವಾಹತಿ : ಅಸ್ಸಾಂನ ಗೋಲಾಘಾಟ್ ಜಿಲ್ಲೆಯ ನುಮಾಲಿಗಢ ಸಮೀಪದ ಬೋಕಿಯಾಲ್ ಪ್ರದೇಶದ ಚಹಾ ತೋಟದಲ್ಲಿ ಕುತ್ತಿಗೆಯ ಸುತ್ತ ಟ್ರ್ಯಾಕ್ಟರ್ ಟೈರ್ ಸಿಲುಕಿಕೊಂಡಿರುವ ಕಾಡಾನೆಯೊಂದು ಸಂಚರಿಸುತ್ತಿರುವುದು ಕಂಡುಬಂದಿದ್ದು, ಈ ಅಪರೂಪದ ದೃಶ್ಯ ಸ್ಥಳೀಯರಲ್ಲಿ ಆತಂಕ ಮೂಡಿಸಿದ್ದವು. ಗುರುವಾರ ಮೊರೊಂಗಿ ಅರಣ್ಯ ಪ್ರದೇಶದಲ್ಲಿ ಈ ಆನೆ ಆಹಾರ ಅರಸುತ್ತಾ ಚಹಾ ತೋಟದ ಮೂಲಕ ಸಾಗುತ್ತಿರುವುದು ಗಮನಕ್ಕೆ ಬಂದಿದೆ. ಕುತ್ತಿಗೆಯ … Continued

ವಿಡಿಯೊ | ಕೇರಳಂ ದೇವಾಲಯಗಳಲ್ಲಿ ರೊಚ್ಚಿಗೆದ್ದ ಆನೆಗಳಿಂದ ದಾಳಿ : ಇಬ್ಬರು ಸಾವು ; ಕಾರು, ಸ್ಕೂಟರ್‌ ಜಖಂ

ತಿರುವನಂತಪುರಂ: ಕೇರಳದ ದೇವಾಲಯಗಳಲ್ಲಿ ನಡೆಯುತ್ತಿದ್ದ ಉತ್ಸವದ ವೇಳೆ ಶುಕ್ರವಾರ (ಮೇ 1) ಎರಡು ಪ್ರತ್ಯೇಕ ಆನೆ ದಾಳಿ ಪ್ರಕರಣಗಳು ಸಂಭವಿಸಿದ್ದು, ಇಬ್ಬರು ಮೃತಪಟ್ಟಿದ್ದಾರೆ. ಎರ್ನಾಕುಲಂ ಮತ್ತು ತ್ರಿಶ್ಶೂರು ಜಿಲ್ಲೆಗಳಲ್ಲಿ ನಡೆದ ಈ ಭೀಕರ ಘಟನೆಗಳಲ್ಲಿ ಓರ್ವ ಲಾರಿ ಚಾಲಕ ಹಾಗೂ ಒಬ್ಬ ಯುವ ಮಾವುತ ಪ್ರಾಣ ಕಳೆದುಕೊಂಡಿದ್ದು, ಹಲವರು ಗಾಯಗೊಂಡಿದ್ದಾರೆ. ಈ ದುರಂತಗಳು ಧಾರ್ಮಿಕ ಆಚರಣೆಗಳಲ್ಲಿ … Continued

ಮರ ಕಡಿಯುವುದನ್ನು ತಡೆಯಲು ಜೆಸಿಬಿ ಯಂತ್ರವನ್ನೇ ತಡೆದು ನಿಲ್ಲಿಸಿದ ಆನೆ ; ವಿಡಿಯೋ ವೈರಲ್ !

ಅಭಿವೃದ್ಧಿ ಮತ್ತು ಪರಿಸರದ ನಡುವಿನ ಸಂಘರ್ಷಕ್ಕೆ ಹಿಡಿದ ಕನ್ನಡಿಯಂತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಮರಗಳನ್ನು ಕಡಿಯಲು ಬಂದ ಜೆಸಿಬಿ ಯಂತ್ರದ ಮುಂದೆ ಒಂಟಿ ಆನೆಯೊಂದು ದಿಟ್ಟವಾಗಿ ನಿಂತು ಪ್ರತಿರೋಧ ತೋರುತ್ತಿರುವ ದೃಶ್ಯ ನೆಟ್ಟಿಗರ ಕಣ್ಣು ಒದ್ದೆಯಾಗುವಂತೆ ಮಾಡಿದೆ. ಸಾಮಾಜಿಕ ಜಾಲತಾಣ ‘X’ ನಲ್ಲಿ ಹರಿದಾಡುತ್ತಿರುವ ಈ ವಿಡಿಯೋದಲ್ಲಿ, ಕಾಡಿನ ನಡುವೆ ಮರಗಳನ್ನು … Continued

ವೀಡಿಯೊ..| ದೇವಾಲಯದ ಉತ್ಸವದ ವೇಳೆ ಆಘಾತಕಾರಿ ಘಟನೆ ; ವ್ಯಕ್ತಿಯನ್ನು ಸೊಂಡಿಲಿನಿಂದ ಎತ್ತಿ ಎಸೆದ ಆನೆ

 ತ್ರಿಶೂರ್ : ಕೇರಳದ ತ್ರಿಶೂರ್ ಜಿಲ್ಲೆಯ ಅನ್ನಮನದ ಮಹಾದೇವ ದೇವಸ್ಥಾನದ ಉತ್ಸವದ ವೇಳೆ ಆನೆಯೊಂದು ಹಠಾತ್ತನೆ ಆಕ್ರಮಣಕಾರಿಯಾಗಿ ವರ್ತಿಸಿ,  ವ್ಯಕ್ತಿಯೊಬ್ಬರನ್ನು ಸೊಂಡಿಲಿನಿಂದ ಎತ್ತಿ ಬಿಸಾಡಿದ ಘಟನೆ ಗುರುವಾರ ನಡೆದಿದೆ. ದೇವಸ್ಥಾನದ ಆವರಣದಲ್ಲಿ ಮೆರವಣಿಗೆಗಾಗಿ ಆನೆಯನ್ನು ಸಿಂಗರಿಸಿ ನಿಲ್ಲಿಸಲಾಗಿತ್ತು. ದೇವರ ವಿಗ್ರಹವನ್ನು ಆನೆಯ ಮೇಲೆ ಪ್ರತಿಷ್ಠಾಪಿಸಲು ಸಿದ್ಧತೆ ನಡೆಸುತ್ತಿದ್ದಾಗ, ಮಾವುತನು ಅರ್ಚಕರೊಬ್ಬರಿಗೆ ಆನೆಯ ಮೇಲೆ ಹತ್ತಲು ಸಹಾಯ … Continued

ವೀಡಿಯೊ | ಕಾಡಿನ ಬಾಯಾರಿಕೆ : ನೀರಿನ ಹೊಂಡದ ಬಳಿ ಸಿಂಹ-ಆನೆ ಮುಖಾಮುಖಿ ; ಮುಂದೇನಾಯ್ತು ನೋಡಿ…

ವನ್ಯಲೋಕ ಎನ್ನುವುದು ಬಣ್ಣಿಸಲಾಗದ ವಿಸ್ಮಯಗಳ ಗೂಡು. ಅಲ್ಲಿ ಹಸಿವು ಎಷ್ಟು ಸತ್ಯವೋ, ಬಾಯಾರಿಕೆಯೂ ಅಷ್ಟೇ ದೊಡ್ಡ ಸತ್ಯ. ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವಿಡಿಯೋವೊಂದು ನಿಸರ್ಗದ ವಿಚಿತ್ರ ಸ್ನೇಹ ಮತ್ತು ಶೌರ್ಯದ ಮುಖಾಮುಖಿಯನ್ನು ನಮಗೆ ಪರಿಚಯಿಸುತ್ತಿದೆ. ಆಫ್ರಿಕಾದ ಸುಡುಬಿಸಿಲಿನ ನಡುವೆ ಒಂದು ನೀರಿನ ಹೊಂಡ. ಅಲ್ಲಿಗೆ ಸುಸ್ತಾಗಿ ಬಂದ ಸಿಂಹಿಣಿಯೊಂದು ಹೊಂಡದ ಮರೆಯಲ್ಲಿ ಅಡಗಿ … Continued

ಅಪರೂಪದ ವೀಡಿಯೊ…| ಶ್ರೀಲಂಕಾ ಭೀಕರ ಪ್ರವಾಹ: ಉಕ್ಕಿದ ನದಿಯಲ್ಲಿ ಸಿಲುಕಿದ್ದ ಆನೆ ಬೆನ್ನೇರಿ ಕುಳಿತು ಜೀವ ಉಳಿಸಿಕೊಂಡ ಚಿರತೆ…!

ಶ್ರೀಲಂಕಾ: ದಿತ್ವಾ ಚಂಡುಮಾರುತದಿಂದಾಗಿ ಶ್ರೀಲಂಕಾದಾದ್ಯಂತ ಭೀಕರ ಪ್ರವಾಹಗಳು ಸೃಷ್ಟಿಯಾಗಿದ್ದು, ಈವರೆಗೆ 123 ಜನ ಸಾವಿಗೀಡಾಗಿದ್ದಾರೆ ಹಾಗೂ 130 ಜನ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಭೀಕರ ಪ್ರವಾಹದ ಪರಿಣಾಮ ಈ ವನ್ಯಜೀವಿಗಳ ಮೇಲೆಯೂ ಆಗಿದ್ದು, ಬದುಕುಳಿಯಲು ಹತಾಶ ಪ್ರಯತ್ನ ಮಾಡುವ ಪರಿಸ್ಥಿತಿ ಎದುರಾಗಿದೆ. ಇಂತಹ ಭೀಕರ ಪ್ರವಾಹದಲ್ಲಿ ಸೆರೆ ಸಿಕ್ಕ ಅಪರೂಪದ ಹಾಗೂ ಅಷ್ಟೇ ಹೃದಯ ತಟ್ಟುವ … Continued

ರಸ್ತೆಗೆ ಹತ್ತಲು ಸಾಧ್ಯವಾಗದ ಆನೆ ಮರಿ ನೆರವಿಗೆ ಬಂದ ತಾಯಿ-ಮತ್ತೊಂದು ಆನೆ ; ಹೃದಯಸ್ಪರ್ಶಿ ವೀಡಿಯೊ ವೈರಲ್‌…

ಆನೆಗಳು ಭೂಮಿಯ ಮೇಲಿನ ಅತ್ಯಂತ ಸಾಮಾಜಿಕ ಮತ್ತು ಬುದ್ಧಿವಂತ ಪ್ರಾಣಿಗಳಲ್ಲಿ ಒಂದಾಗಿವೆ. ಅವುಗಳು ಮಾತೃಪ್ರಧಾನ ಹಿಂಡುಗಳಲ್ಲಿ (Matriarchal Herds) ಬದುಕುತ್ತವೆ. ಇಲ್ಲಿ ಅತ್ಯಂತ ವಯಸ್ಸಾದ ಮತ್ತು ಹಿರಿಯ ಹೆಣ್ಣಾನೆ ಇಡೀ ಗುಂಪಿಗೆ ಮಾರ್ಗದರ್ಶನ ನೀಡುತ್ತದೆ. ನೀರು ಮತ್ತು ಆಹಾರಕ್ಕೆ ದಾರಿ ತೋರಿಸುವುದು, ಮರಿಗಳನ್ನು ರಕ್ಷಿಸುವುದು ಮತ್ತು ವಲಸೆ ಹೋಗುವ ಮಾರ್ಗಗಳು, ಅಪಾಯಗಳು ಹಾಗೂ ಬದುಕುಳಿಯುವಿಕೆಯ ಜ್ಞಾನವನ್ನು … Continued

ಜಾರ್ಖಂಡದಲ್ಲಿ 40 ಲಕ್ಷ ರೂ.ಗೆ ಖರೀದಿಸಿದ್ದ ಆನೆ ಕಳುವು ಮಾಡಿ ಬಿಹಾರದಲ್ಲಿ 27 ಲಕ್ಷ ರೂ.ಗೆ ಮಾರಾಟ…!

ಮೇದಿನಿನಗರ (ಜಾರ್ಖಂಡ್): ಜಾರ್ಖಂಡದ ಪಲಮು ಜಿಲ್ಲೆಯಿಂದ ಕದ್ದು 27 ಲಕ್ಷ ರೂ.ಗಳಿಗೆ ಮಾರಾಟ ಮಾಡಲಾಗಿತ್ತು ಎನ್ನಲಾದ ಹೆಣ್ಣು ಆನೆಯನ್ನು ಬಿಹಾರದ ಚಪ್ರಾ ಜಿಲ್ಲೆಯಲ್ಲಿ ಪತ್ತೆಹಚ್ಚಿ ರಕ್ಷಿಸಲಾಗಿದೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ. ಉತ್ತರ ಪ್ರದೇಶದ ಮಿರ್ಜಾಪುರ ನಿವಾಸಿ ನರೇಂದ್ರಕುಮಾರ ಶುಕ್ಲಾ ಅವರು ಸೆಪ್ಟೆಂಬರ್ 12 ರಂದು ಜಾರ್ಖಂಡ್‌ನ ಪಲಮು ಜಿಲ್ಲೆಯ ಚುಕುರ್ ಪ್ರದೇಶದಿಂದ ‘ಜಯಮತಿ’ ಎಂಬ … Continued

ವೀಡಿಯೊ…| ನೀರಿನ ಟ್ಯಾಂಕಿಗೆ ಬಿದ್ದ ಆನೆಯನ್ನು ಸುರಕ್ಷಿತವಾಗಿ ಹೊರತಂದ ಅರಣ್ಯ ಇಲಾಖೆ ಸಿಬ್ಬಂದಿ

ನೀರಿನ ಟ್ಯಾಂಕ್‌ಗೆ ಬಿದ್ದಿದ್ದ ಆನೆಯನ್ನು ರಕ್ಷಿಸಿದ ಹೃದಯಸ್ಪರ್ಶಿ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್‌ ಆಗುತ್ತಿದೆ. ಐಎಎಸ್ ಅಧಿಕಾರಿ ಸುಪ್ರಿಯಾ ಸಾಹು ಹಂಚಿಕೊಂಡ 29 ಸೆಕೆಂಡುಗಳ ಕ್ಲಿಪ್‌ನಲ್ಲಿ ತಮಿಳುನಾಡು ಅರಣ್ಯ ಇಲಾಖೆ ಸಿಬ್ಬಂದಿ ನೀರಿನ ಟ್ಯಾಂಕ್ ನಲ್ಲಿ ಬಿದ್ದಿದ್ದ ಆನೆಯನ್ನು ಪಾರು ಮಾಡಲು ಟ್ಯಾಂಕ್‌ ಒಡೆದು ಆನೆಗೆ ಹೊರಬರಲು ದಾರಿ ಮಾಡಿಕೊಡಲು ಪ್ರಯತ್ನಿಸಿರುವುದನ್ನು ವೀಡಿಯೊ ತೋರಿಸುತ್ತದೆ. ಆನೆ … Continued

ವೀಡಿಯೊಗಳು..| ‘ಡ್ರ್ಯಾಗನ್ – ಆನೆ ಒಟ್ಟಿಗೆ ಬರುವುದು, ಸ್ನೇಹಿತರಾಗುವುದು ಅತ್ಯಗತ್ಯ’: ಭಾರತ-ಚೀನಾ ದ್ವಿಪಕ್ಷೀಯ ಸಭೆಯಲ್ಲಿ ಪ್ರಧಾನಿ ಮೋದಿಗೆ ಚೀನಾ ಅಧ್ಯಕ್ಷ ಕ್ಸಿ

ನವದೆಹಲಿ: ಟಿಯಾಂಜಿನ್‌ನಲ್ಲಿ ನಡೆದ ಎಸ್‌ಸಿಒ (SCO) ಶೃಂಗಸಭೆಯ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗಿನ ದ್ವಿಪಕ್ಷೀಯ ಸಭೆಯಲ್ಲಿ ಭಾರತ ಮತ್ತು ಚೀನಾ “ಒಟ್ಟಿಗೆ ಬರುವುದು” ಮತ್ತು “ಸ್ನೇಹಿತರಾಗುವುದು” ಅಗತ್ಯ ಎಂದು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಭಾನುವಾರ ಒತ್ತಿ ಹೇಳಿದ್ದಾರೆ. ಭಾರತವು ನವದೆಹಲಿ-ಬೀಜಿಂಗ್ ಸಂಬಂಧಗಳನ್ನು “ದೀರ್ಘಕಾಲೀನ ದೃಷ್ಟಿಕೋನ” ದಿಂದ ನಿಭಾಯಿಸಬೇಕೆಂದು ಚೀನಾ ಅಧ್ಯಕ್ಷ ಕ್ಸಿ ಕರೆ … Continued