ಪಾಕಿಸ್ತಾನದಿಂದ ಹಿಡಿದು ಅಮೆರಿಕದವರೆಗೆ ಜಗತ್ತು ʼಭಾರತʼವನ್ನು ಹೇಗೆ ನೋಡುತ್ತದೆ ? 36 ದೇಶಗಳ ಸಮೀಕ್ಷೆಯಲ್ಲಿ ಬಹಿರಂಗ

ನವದೆಹಲಿ: ಜಗತ್ತು ಭಾರತವನ್ನು ಹೇಗೆ ನೋಡುತ್ತದೆ? ಪ್ಯೂ ರಿಸರ್ಚ್ ಸೆಂಟರ್ ನಡೆಸಿದ 2026ರ ‘ಸ್ಪ್ರಿಂಗ್ ಗ್ಲೋಬಲ್ ಅಟಿಟ್ಯೂಡ್ಸ್ ಸರ್ವೇ’ಯ ಅಂಕಿ-ಅಂಶಗಳು ಜಗತ್ತಿನ ಹಲವಾರು ದೇಶಗಳು ಭಾರತವನ್ನು ಹೇಗೆ ನೋಡುತ್ತವೆ ಎಂಬುದನ್ನು ವೈವಿಧ್ಯಮಯವಾಗಿ ತೋರಿಸಿವೆ. ವರದಿಯ ಪ್ರಕಾರ, ಫೆಬ್ರವರಿ 9ರಿಂದ ಮೇ 13, 2026ರವರೆಗೆ 36 ದೇಶಗಳಲ್ಲಿ 42,092 ಜನರನ್ನು ಒಳಗೊಂಡ ಸಮೀಕ್ಷೆಯಲ್ಲಿ, ಸರಾಸರಿ 45% ಮಂದಿ … Continued

ಕ್ರಿಕೆಟ್‌ | ಭಾರತದ ತಂಡಕ್ಕೆ ಮತ್ತೊಬ್ಬ ದ್ರಾವಿಡ್‌ ಎಂಟ್ರಿ : ಭಾರತದ ಅಂಡರ್-19 ತಂಡಕ್ಕೆ ರಾಹುಲ್‌ ದ್ರಾವಿಡ್‌ ಕಿರಿಯ ಪುತ್ರ ಆಯ್ಕೆ

ಭಾರತೀಯ ಕ್ರಿಕೆಟ್‌ನ ದಿಗ್ಗಜ ಹಾಗೂ ಮಾಜಿ ನಾಯಕ ರಾಹುಲ್ ದ್ರಾವಿಡ್ ಅವರ ಕಿರಿಯ ಪುತ್ರ, ವಿಕೆಟ್‌ಕೀಪರ್-ಬ್ಯಾಟರ್ ಅನ್ವಯ ದ್ರಾವಿಡ್ ಮುಂದಿನ ತಿಂಗಳು ಶ್ರೀಲಂಕಾ ವಿರುದ್ಧ ನಡೆಯಲಿರುವ ಏಕದಿನ ಸರಣಿಗಾಗಿ ಪ್ರಕಟಿಸಲಾದ ಭಾರತ ಅಂಡರ್-19 ತಂಡಕ್ಕೆ ಆಯ್ಕೆಯಾಗಿದ್ದಾರೆ. ಎಸ್‌. ಶ್ರೀಧರನ್ ನೇತೃತ್ವದ ಜೂನಿಯರ್ ಕ್ರಿಕೆಟ್ ಆಯ್ಕೆ ಸಮಿತಿಯು ಗುರುವಾರ ಈ ಸರಣಿಗಾಗಿ ಏಕದಿನ ಮತ್ತು ಟೆಸ್ಟ್ (ಮಲ್ಟಿ-ಡೇ) … Continued

ಮಾನಹಾನಿ ಸುದ್ದಿ : ಕರ್ನಾಟಕ ಹೈಕೋರ್ಟ್​ ಮೆಟ್ಟಿಲೇರಿದ ಶ್ರೀಲಂಕಾ ಸುಪ್ರೀಂಕೋರ್ಟ್‌ ನ್ಯಾಯಮೂರ್ತಿ

ಬೆಂಗಳೂರು : ಶ್ರೀಲಂಕಾದ ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿ ಎಎಚ್‌ಎಂ ದಿಲೀಪ ನವಾಜ್‌ ಅವರು ತನ್ನ ವಿರುದ್ಧದ ಎಲ್ಲ ಮಾನಹಾನಿ ಸುದ್ದಿ/ಲೇಖನ ಮತ್ತು ಯುಆರ್‌ಎಲ್‌ಗಳನ್ನು ತೆಗೆದುಹಾಕುವಂತೆ ಕೋರಿ ಕರ್ನಾಟಕ ಹೈಕೋರ್ಟಿಗೆ ಅರ್ಜಿ ಸಲ್ಲಿಸಿದ್ದಾರೆ. ಶ್ರೀಲಂಕಾದ ನ್ಯಾಯಮೂರ್ತಿ ದಿಲೀಪ ನವಾಜ್‌ ಅವರು ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸಚಿನ್‌ ಶಂಕರ ಮಗದುಮ್‌ ಅವರ ಏಕಸದಸ್ಯ ಪೀಠ ಈ … Continued

ಟಿ20 ವಿಶ್ವಕಪ್ 2026 : ಸೂಪರ್ 8ರ ಪಂದ್ಯಗಳ ವೇಳಾಪಟ್ಟಿಯ ವಿವರ

ಕೊಲಂಬೊ: ಬುಧವಾರ ಕೊಲಂಬೊದಲ್ಲಿ ನಡೆದ ತನ್ನ ಕೊನೆಯ ಗ್ರೂಪ್ ಎ ಪಂದ್ಯದಲ್ಲಿ ಪಾಕಿಸ್ತಾನ ತಂಡವು ನಮೀಬಿಯಾವನ್ನು ಸೋಲಿಸಿದ ನಂತರ ಟಿ20 ವಿಶ್ವಕಪ್ ಸೂಪರ್ 8 ಹಂತ ಪ್ರವೇಶಿಸಿದ ತಂಡಗಳು ನಿರ್ಧಾರವಾಗಿದೆ. ಗ್ರೂಪ್ ಎ ಯಿಂದ,  ಹಾಲಿ ಚಾಂಪಿಯನ್ ಭಾರತ ಮತ್ತು ಪಾಕಿಸ್ತಾನ ಸೂಪರ್‌ 8ರ ಹಂತ ಪ್ರವೇಶಿವೆ. ಗ್ರೂಪ್ ಬಿ ಯಿಂದ ಶ್ರೀಲಂಕಾ ಮತ್ತು ಜಿಂಬಾಬ್ವೆ … Continued

ಟಿ20 ವಿಶ್ವಕಪ್ 2026: ಭಾರತ ವಿರುದ್ಧದ ಪಂದ್ಯ ಬಹಿಷ್ಕರಿಸಬೇಡಿ : ಪಾಕಿಸ್ತಾನಕ್ಕೆ ‘2009ರ ಲಾಹೋರ್ ದಾಳಿ’ ನೆನಪಿಸಿದ ಶ್ರೀಲಂಕಾ

ಕೊಲಂಬೊ: 2026ರ ಟಿ20 ವಿಶ್ವಕಪ್‌ನ ಸಹ-ಆತಿಥೇಯ ರಾಷ್ಟ್ರವಾಗಿರುವ ಶ್ರೀಲಂಕಾ, ಫೆಬ್ರವರಿ 15ರಂದು ಕೊಲಂಬೊದಲ್ಲಿ ನಡೆಯಲಿರುವ ಭಾರತದ ವಿರುದ್ಧದ ಲೀಗ್ ಹಂತದ ಪಂದ್ಯವನ್ನು ಬಹಿಷ್ಕರಿಸುವ ತನ್ನ ನಿರ್ಧಾರವನ್ನು ಮರುಪರಿಶೀಲಿಸುವಂತೆ ಪಾಕಿಸ್ತಾನಕ್ಕೆ ಅಧಿಕೃತವಾಗಿ ವಿನಂತಿಸಿದೆ. ಪಾಕಿಸ್ತಾನ ಸರ್ಕಾರವು ತನ್ನ ರಾಷ್ಟ್ರೀಯ ತಂಡವು ಟೂರ್ನಿಯಲ್ಲಿ ಭಾಗವಹಿಸಲಿದೆ, ಆದರೆ ಭಾರತದ ವಿರುದ್ಧದ ಪಂದ್ಯವನ್ನು ಮಾತ್ರ ಆಡುವುದಿಲ್ಲ ಎಂದು ಘೋಷಿಸಿದೆ. ಈ ಹಿನ್ನೆಲೆಯಲ್ಲಿ … Continued

ಚಂಡಮಾರುತದಿಂದ ನಲುಗಿದ ಶ್ರೀಲಂಕಾ ಪುನರ್‌ ನಿರ್ಮಾಣಕ್ಕೆ ₹4,000 ಕೋಟಿ ಪ್ಯಾಕೇಜ್‌ ಘೋಷಿಸಿದ ಭಾರತ

ಕೊಲೊಂಬೊ: ‘ನೆರೆಹೊರೆಯವರಿಗೆ ಮೊದಲ ಆದ್ಯತೆ’ (Neighbourhood First) ಮತ್ತು  ʼಮಹಾಸಾಗರʼ (MAHASAGAR) ನೀತಿಗಳ ಅಡಿಯಲ್ಲಿ ಶ್ರೀಲಂಕಾ ಭಾರತಕ್ಕೆ ಅತ್ಯಂತ ಪ್ರಮುಖವಾಗಿದೆ ಎಂದು ವಿದೇಶಾಂಗ ಸಚಿವ ಎಸ್. ಜೈಶಂಕರ್ ಹೇಳಿದ್ದಾರೆ. ‘ಡಿತ್ವಾ’ (Ditwah) ಚಂಡಮಾರುತದಿಂದ ತತ್ತರಿಸಿರುವ ದ್ವೀಪ ರಾಷ್ಟ್ರಕ್ಕೆ ನೆರವಾಗಲು ಭಾರತ ಮುಂದಡಿ ಇಟ್ಟಿರುವುದು ಸಹಜ ಪ್ರಕ್ರಿಯೆ ಎಂದು ಅವರು ತಿಳಿಸಿದ್ದಾರೆ. ಮಂಗಳವಾರ ಶ್ರೀಲಂಕಾ ಅಧ್ಯಕ್ಷ ಅನುರ … Continued

ಶ್ರೀಲಂಕಾಕ್ಕೆ ಅವಧಿ ಮೀರಿದ ಪರಿಹಾರ ಸಾಮಗ್ರಿ ಕಳುಹಿಸಿತೇ ಪಾಕಿಸ್ತಾನ..? ಫೋಟೋಗಳು ವೈರಲ್ ; ವ್ಯಾಪಕ ಟೀಕೆ

ಭೀಕರ ‘ದಿತ್ವಾ’ ಚಂಡಮಾರುತದಿಂದ ತತ್ತರಿಸಿರುವ ಶ್ರೀಲಂಕಾದಲ್ಲಿ ಪಾಕಿಸ್ತಾನವು ಕಳುಹಿಸಿದ ಆಹಾರ ಸಾಮಗ್ರಿಗಳು ಚರ್ಚೆಗೆ ಒಳಗಾಗಿದೆ. ಸಹಾಯದ ಸಂಕೇತವಾಗಿ ಪಾಕಿಸ್ತಾನ ಕಳುಹಿಸಿದ ಪರಿಹಾರ ಸಾಮಗ್ರಿಗಳ ಬಗ್ಗೆ ಆಕ್ಷೇಪ ವ್ಯಕ್ತವಾಗಿದ್ದು, ಆನ್‌ಲೈನ್‌ನಲ್ಲಿ ಹರಿದಾಡುತ್ತಿರುವ ಫೋಟೋಗಳಲ್ಲಿ ಆಹಾರ ಮತ್ತು ಇತರ ಸರಬರಾಜು ಮಾಡಿದ ಸಾಮಗ್ರಿಗಳು ಅವಧಿ ಮೀರಿದಂತೆ (Expiry Date) ಕಂಡುಬಂದಿರುವುದು ಕೋಲಾಹಲಕ್ಕೆ ಕಾರಣವಾಗಿದೆ. ಇದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್‌ … Continued

ಅಪರೂಪದ ವೀಡಿಯೊ…| ಶ್ರೀಲಂಕಾ ಭೀಕರ ಪ್ರವಾಹ: ಉಕ್ಕಿದ ನದಿಯಲ್ಲಿ ಸಿಲುಕಿದ್ದ ಆನೆ ಬೆನ್ನೇರಿ ಕುಳಿತು ಜೀವ ಉಳಿಸಿಕೊಂಡ ಚಿರತೆ…!

ಶ್ರೀಲಂಕಾ: ದಿತ್ವಾ ಚಂಡುಮಾರುತದಿಂದಾಗಿ ಶ್ರೀಲಂಕಾದಾದ್ಯಂತ ಭೀಕರ ಪ್ರವಾಹಗಳು ಸೃಷ್ಟಿಯಾಗಿದ್ದು, ಈವರೆಗೆ 123 ಜನ ಸಾವಿಗೀಡಾಗಿದ್ದಾರೆ ಹಾಗೂ 130 ಜನ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಭೀಕರ ಪ್ರವಾಹದ ಪರಿಣಾಮ ಈ ವನ್ಯಜೀವಿಗಳ ಮೇಲೆಯೂ ಆಗಿದ್ದು, ಬದುಕುಳಿಯಲು ಹತಾಶ ಪ್ರಯತ್ನ ಮಾಡುವ ಪರಿಸ್ಥಿತಿ ಎದುರಾಗಿದೆ. ಇಂತಹ ಭೀಕರ ಪ್ರವಾಹದಲ್ಲಿ ಸೆರೆ ಸಿಕ್ಕ ಅಪರೂಪದ ಹಾಗೂ ಅಷ್ಟೇ ಹೃದಯ ತಟ್ಟುವ … Continued

ಏಷ್ಯಾ ಕಪ್ ಕ್ರಿಕೆಟ್‌ 2025 : ಶ್ರೀಲಂಕಾ-ಅಪಘಾನಿಸ್ತಾನದ ನಡುವೆ ಪಂದ್ಯ ನಡೆಯುತ್ತಿರುವಾಗಲೇ ಶ್ರೀಲಂಕಾ ಆಟಗಾರನ ತಂದೆ ನಿಧನ

ಅಬುಧಾಬಿ : ಗುರುವಾರ ನಡೆದ ಏಷ್ಯಾ ಕಪ್ 2025 ರ ಅಫ್ಘಾನಿಸ್ತಾನ ವಿರುದ್ಧದ ಪಂದ್ಯದ ವೇಳೆ ಶ್ರೀಲಂಕಾ ಕ್ರಿಕೆಟಿಗ ದುನಿತ್ ವೆಲ್ಲಾಲ ಅವರಿಗೆ ವೈಯಕ್ತಿಕ ದುರಂತದ ಸುದ್ದಿಯೊಂದು ಬಂದಿದೆ. ಅಬುಧಾಬಿಯ ಶೇಖ್ ಜಾಯೆದ್ ಕ್ರೀಡಾಂಗಣದಲ್ಲಿ ನಡೆದ ಏಷ್ಯಾ ಕಪ್ ಗ್ರೂಪ್ ಬಿ ಪಂದ್ಯದಲ್ಲಿ ಶ್ರೀಲಂಕಾ ತಂಡ ಅಫ್ಘಾನಿಸ್ತಾನ ವಿರುದ್ಧ ಜಯ ಸಾಧಿಸಿದರೂ ಸ್ಪಿನ್ನರ್ ದುನಿತ್ ವೆಲ್ಲಾಲ … Continued

ಕ್ರಿಕೆಟ್‌..| ಏಷ್ಯಾ ಕಪ್ 2025ರ ವೇಳಾಪಟ್ಟಿ ಪ್ರಕಟ : ಸೆಪ್ಟೆಂಬರ್ 14ಕ್ಕೆ ಭಾರತ-ಪಾಕಿಸ್ತಾನ ಪಂದ್ಯ

ನವದೆಹಲಿ : ಸೆಪ್ಟೆಂಬರ್ 9 ರಂದು ಪ್ರಾರಂಭವಾಗಿ ಸೆಪ್ಟೆಂಬರ್ 28ರ ವರೆಗೆ ನಡೆಯಲಿರುವ ಏಷ್ಯಾ ಕಪ್‌-2025ರ ಪಂದ್ಯಗಳ ಪೂರ್ಣ ವೇಳಾಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಸೆಪ್ಟೆಂಬರ್ 14 ರಂದು ಭಾರತ ಮತ್ತು ಪಾಕಿಸ್ತಾನ ತಂಡಗಳು ಪರಸ್ಪರ ಮುಖಾಮುಖಿಯಾಗಲಿವೆ. ಕಾಶ್ಮೀರದ ಪಹಲ್ಗಾಮ್ ಭಯೋತ್ಪಾದನಾ ದಾಳಿಯ ನಂತರ ಈ ಎರಡು ರಾಷ್ಟ್ರಗಳ ನಡುವಿನ ಮೊದಲ ಪಂದ್ಯ ಇದಾಗಿದೆ. ಭಾರತ ಮತ್ತು … Continued