ನೆಹರು ಹಿಂದಿಕ್ಕಿ ಭಾರತದಲ್ಲಿ ಅತಿ ದೀರ್ಘಾವಧಿ ಅಧಿಕಾರ ನಡೆಸಿದ ‘ಚುನಾಯಿತ ಪ್ರಧಾನಿ’ ಎಂಬ ಮೈಲಿಗಲ್ಲು ಸ್ಥಾಪಿಸಿದ ಪ್ರಧಾನಿ ಮೋದಿ

 ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಅವರು ಇಂದು (10 ಜೂನ್ 2026)  ಭಾರತದ ರಾಜಕೀಯ ಇತಿಹಾಸದಲ್ಲೇ ಅತ್ಯಂತ ದೀರ್ಘಾವಧಿಗೆ ಸೇವೆ ಸಲ್ಲಿಸಿದ ‘ಚುನಾಯಿತ ಪ್ರಧಾನಿ’ ಎಂಬ ಅಭೂತಪೂರ್ವ ಮೈಲಿಗಲ್ಲನ್ನು ಸ್ಥಾಪಿಸಿದ್ದಾರೆ. ಇದರೊಂದಿಗೆ ಅವರು ಭಾರತದ ಪ್ರಥಮ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರು ಅವರ ಹೆಸರಿನಲ್ಲಿದ್ದ ಸುದೀರ್ಘಾವಧಿಯ ದಾಖಲೆಯನ್ನು ಮುರಿದಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು … Continued

ಪಾಕಿಸ್ತಾನದ ಪರಮಾಣು ಸ್ಥಾವರದ ಮೇಲೆ ದಾಳಿ ಮಾಡಲು ಇಂದಿರಾ ಗಾಂಧಿ ಒಪ್ಪಿಗೆ ನೀಡಿರಲಿಲ್ಲ : ಅಮೆರಿಕದ ಮಾಜಿ ಸಿಐಎ ಅಧಿಕಾರಿ

ವಾಷಿಂಗ್ಟನ್ ಡಿಸಿ: ಪಾಕಿಸ್ತಾನದ ಪರಮಾಣು ಬಾಂಬ್‌ ಮಹತ್ವಾಕಾಂಕ್ಷೆಯನ್ನು ತಡೆಯಲು, 1980 ರ ದಶಕದ ಆರಂಭದಲ್ಲಿ ಪಾಕಿಸ್ತಾನದ ಕಹೂಟಾ (Kahuta) ಪರಮಾಣು ಘಟಕದ ಮೇಲೆ ಬಾಂಬ್ ದಾಳಿ ನಡೆಸಲು ಭಾರತ ಮತ್ತು ಇಸ್ರೇಲ್ ಜಂಟಿಯಾಗಿ ನಡೆಸಲು ಪ್ರಸ್ತಾಪಿಸಿದ್ದ ರಹಸ್ಯ ಕಾರ್ಯಾಚರಣೆಯು “ಅನೇಕ ಸಮಸ್ಯೆಗಳನ್ನು ಪರಿಹರಿಸಬಹುದಿತ್ತು” ಎಂದು ಸಿಐಎ (CIA) ಯ ಮಾಜಿ ಅಧಿಕಾರಿ ರಿಚರ್ಡ್ ಬಾರ್ಲೋ ಅವರು … Continued

ಬ್ಲೂ ಸ್ಟಾರ್ ಕಾರ್ಯಾಚರಣೆ ಒಂದು ‘ತಪ್ಪು’ ನಿರ್ಧಾರವಾಗಿತ್ತು ; ಇಂದಿರಾ ಗಾಂಧಿ ತಮ್ಮ ಪ್ರಾಣವನ್ನೇ ತೆತ್ತರು : ಪಿ ಚಿದಂಬರಂ

 ಕಸೌಲಿ (ಹಿಮಾಚಲ ಪ್ರದೇಶ): ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಆದೇಶದ ಮೇರೆಗೆ 1984ರಲ್ಲಿ ಅಮೃತಸರದ ಗೋಲ್ಡನ್ ಟೆಂಪಲ್‌ನಿಂದ ಉಗ್ರರನ್ನು ಹೊರಹಾಕಲು ನಡೆಸಿದ ‘ಆಪರೇಷನ್ ಬ್ಲೂ ಸ್ಟಾರ್’ ಒಂದು “ತಪ್ಪು ಮಾರ್ಗ”ವಾಗಿತ್ತು. ಈ ತಪ್ಪಿಗೆ ಕಾಂಗ್ರೆಸ್ ನಾಯಕಿ ಇಂದಿರಾ ಗಾಂಧಿಯವರು ತಮ್ಮ ಪ್ರಾಣವನ್ನೇ ತೆತ್ತರು ಎಂದು ಮಾಜಿ ಕೇಂದ್ರ ಸಚಿವ ಪಿ. ಚಿದಂಬರಂ ಹೇಳಿದ್ದಾರೆ. ಆದಾಗ್ಯೂ, ಈ … Continued

ಇಂದಿರಾ ಗಾಂಧಿ ದಾಖಲೆ ಮುರಿದ ನರೇಂದ್ರ ಮೋದಿ ; ಅತಿ ಹೆಚ್ಚು ಕಾಲ ಕಾರ್ಯನಿರ್ವಹಿಸಿದ ಪ್ರಧಾನಿಗಳ ಪಟ್ಟಿಯಲ್ಲಿ ಈಗ 2ನೇ ಸ್ಥಾನ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಪ್ರಧಾನಿ ಹುದ್ದೆಯಲ್ಲಿ ಶುಕ್ರವಾರ(ಜುಲೈ 25)ಕ್ಕೆ ನಿರಂತರವಾಗಿ 4,078 ದಿನಗಳನ್ನು ಪೂರೈಸುವ ಮೂಲಕ ಮಾಜಿ ಪ್ರಧಾನಿ ದಿವಂಗತ ಇಂದಿರಾ ಗಾಂಧಿ ಸತತ 4,077 ದಿನಗಳ ಕಾಲ ಪ್ರಧಾನಿಯಾಗಿ ಕಾರ್ಯನಿರ್ವಹಿಸಿದ್ದ ದಾಖಲೆಯನ್ನು ಮುರಿದಿದ್ದಾರೆ. ದಿವಂಗತ ಇಂದಿರಾ ಗಾಂಧಿ ಅವರು ಜನವರಿ 24, 1966 ರಿಂದ ಮಾರ್ಚ್ 24, 1977 ರವರೆಗೆ ಸತತ … Continued

ಸಾವರ್ಕರ ವಿರುದ್ಧದ ಹೇಳಿಕೆ: ರಾಹುಲ್ ಗಾಂಧಿಗೆ ಸುಪ್ರೀಂ ಕೋರ್ಟ್ ತರಾಟೆ

ನವದೆಹಲಿ; ಸ್ವಾತಂತ್ರ್ಯ ಸೇನಾನಿ ವಿನಾಯಕ ದಾಮೋದರ ಸಾವರ್ಕರ (ವೀರ್‌ ಸವಾರ್ಕರ) ಅವರು ಬ್ರಿಟಿಷರ ಅನುಯಾಯಿಯಾಗಿದ್ದು, ಅವರು ಬ್ರಿಟಿಷರಿಂದ ಪಿಂಚಣಿ ಪಡೆಯುತ್ತಿದ್ದರು ಎಂದು ಹೇಳಿದ್ದಕ್ಕಾಗಿ ಲೋಕಸಭೆ ವಿಪಕ್ಷದ ನಾಯಕ ರಾಹುಲ್ ಗಾಂಧಿ ಅವರನ್ನು ಸುಪ್ರೀಂ ಕೋರ್ಟ್ ಶುಕ್ರವಾರ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ. ಸ್ವಾತಂತ್ರ್ಯ ಹೋರಾಟಗಾರ ಸಾವರ್ಕರ್ ವಿರುದ್ಧ ರಾಹುಲ್ ಗಾಂಧಿ ಹೇಳಿಕೆ ಬೇಜವಾಬ್ದಾರಿಯಿಂದ ಕೂಡಿದ್ದು ಇದೇ ರೀತಿಯ … Continued

75 ಬಾರಿ ಸಂವಿಧಾನ ಬದಲಾಯಿಸಿರುವ ಕಾಂಗ್ರೆಸ್…ಅದಕ್ಕೆ ತುರ್ತು ಪರಿಸ್ಥಿತಿ ಕಳಂಕ ಅಳಿಸಿಹಾಕಲು ಸಾಧ್ಯವಿಲ್ಲ ; ಪ್ರಧಾನಿ ಮೋದಿ ವಾಗ್ದಾಳಿ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸಂವಿಧಾನ ರಚನೆಕಾರರು ಭಾರತದ ವಿವಿಧತೆಯಲ್ಲಿ ಏಕತೆಯ ಬಲವನ್ನು ಆಚರಿಸಿದರೆ, ಕೆಲವರು ವಿಭಿನ್ನ ಮಾರ್ಗವನ್ನು ಆರಿಸಿಕೊಂಡರು ಎಂದು ಹೇಳಿದ್ದಾರೆ. “ಸಂವಿಧಾನವನ್ನು ಅಳವಡಿಸಿಕೊಳ್ಳುವ ಬದಲು, ಅವರು (ಕಾಂಗ್ರೆಸ್) ಅಪಶ್ರುತಿ ಮತ್ತು ನಕಾರಾತ್ಮಕತೆಯ ಬೀಜಗಳನ್ನು ಬಿತ್ತಿದ್ದಾರೆ” ಎಂದು ಸಂವಿಧಾನದ ಚರ್ಚೆಗೆ ಉತ್ತರಿಸಿದ ಪ್ರಧಾನಿ ಲೋಕಸಭೆಯಲ್ಲಿ … Continued

ವೀಡಿಯೊ..| ತುರ್ತು ಪರಿಸ್ಥಿತಿಯನ್ನು ʼಕರಾಳ ಅವಧಿʼ ಎಂದ ಕರೆದ ಸ್ಪೀಕರ್ ಓಂ ಬಿರ್ಲಾ; 2 ನಿಮಿಷ ಮೌನ : ವಿಪಕ್ಷಗಳ ಪ್ರತಿಭಟನೆ, ಸದನ ಮುಂದೂಡಿಕೆ

ನವದೆಹಲಿ: ಇಂದು, ಬುಧವಾರ ಲೋಕಸಭೆ ಸ್ಪೀಕರ್ (Lok Sabha Speaker) ಆಗಿ ಎನ್​ಡಿಎ ಅಭ್ಯರ್ಥಿ ಓಂ ಬಿರ್ಲಾ (Om Birla) ಮರು ಆಯ್ಕೆಯಾಗಿ ನಂತರ ಎನ್​ಡಿಎ ಮತ್ತು ವಿಪಕ್ಷಗಳ ಇಂಡಿಯಾ ಮೈತ್ರಿಕೂಟದ ನಾಯಕರ ನಡುವೆ ಪರಿಸ್ಪರ ನಗು ಮತ್ತು ಹಸ್ತಲಾಘವಗಳು ನಡೆದವು. ಆದರೆ ಬಳಿಕ ಮಾತನಾಡಿದ ಸ್ಪೀಕರ್ ಓಂ ಬಿರ್ಲಾ 1975 ರಲ್ಲಿ ತುರ್ತು ಪರಿಸ್ಥಿತಿ … Continued

ಇಂದಿರಾ ಗಾಂಧಿಯನ್ನು ‘ಭಾರತ ಮಾತೆ’, ಮಾರ್ಕ್ಸ್‌ವಾದಿ ನಾಯಕನನ್ನು ತಮ್ಮ ʼರಾಜಕೀಯ ಗುರುʼ ಎಂದು ಬಣ್ಣಿಸಿದ ಕೇಂದ್ರದ ಬಿಜೆಪಿ ಸಚಿವ..!

ತ್ರಿಶೂರ್ : ಕೇಂದ್ರ ಸಚಿವ ಮತ್ತು ತ್ರಿಶೂರ್ ಸಂಸದ ಹಾಗೂ ನಟ ಸುರೇಶ ಗೋಪಿ ಅವರು ಶನಿವಾರ ಮಾಜಿ ಪ್ರಧಾನಿ ಇಂದಿರಾ ಗಾಂಧಿ “ಭಾರತದ ಮಾತೆ”‌ ಇದ್ದಂತೆ ಮತ್ತು ಕಾಂಗ್ರೆಸ್ ಮಾಜಿ ಮುಖ್ಯಮಂತ್ರಿ ದಿವಂಗತ ಕೆ. ಕರುಣಾಕರನ್ “ಧೈರ್ಯಶಾಲಿ ಆಡಳಿತಗಾರ” ಎಂದು ಬಣ್ಣಿಸಿದ್ದಾರೆ. ಕೇರಳದ  ಮಾರ್ಕ್ಸ್‌ವಾದಿ ಹಿರಿಯ ಇ.ಕೆ. ನಾಯನಾರ್ ತಮ್ಮ “ರಾಜಕೀಯ ಗುರುಗಳು” ಎಂದು … Continued

ಭಾರತದಲ್ಲಿ ದೀರ್ಘ ಕಾಲ ಪ್ರಧಾನಿಯಾದವರಲ್ಲಿ ಮೋದಿಗೆ 3ನೇ ಸ್ಥಾನ; ಉಳಿದ ನಾಲ್ವರು ಇವರೇ ನೋಡಿ…

ಬಿಜೆಪಿ ನೇತೃತ್ವದ ಮೈತ್ರಿಕೂಟವು ಲೋಕಸಭೆಯಲ್ಲಿ ಬಹುಮತಕ್ಕೆ ಬೇಕಾದ 272 ಸ್ಥಾನಗಳನ್ನು ದಾಟಿದ್ದರೂ, ವಿಪಕ್ಷಗಳ ಇಂಡಿಯಾ ಮೈತ್ರಿಕೂಟವು ಏಕಪಕ್ಷೀಯವಾಗಿ ಇದ್ದಂತೆ ತೋರುತ್ತಿದ್ದ ಚುನಾವಣೆಯನ್ನು “ಕಾಂಟೆ ಕಿ ಟಕ್ಕರ್” ಆಗಿ ಪರಿವರ್ತಿಸುವಲ್ಲಿ ಯಶಸ್ವಿಯಾಗಿದೆ. ಕಳೆದ ಎರಡು ಚುನಾವಣೆಗಳಿಗಿಂತ ಭಿನ್ನವಾಗಿ, ಜೂನ್ 4 ರ ಮಂಗಳವಾರದ ಮತ ಎಣಿಕೆಯ ಪ್ರಕಾರ, ಸಂಸತ್ತಿನ 543 ಸ್ಥಾನಗಳ ಲೋಕಸಭೆಯಲ್ಲಿ 272 ಬಹುಮತದ ಸಂಖ್ಯೆಯನ್ನು … Continued

ತಾಯಿಯ ಸಂಪತ್ತು ಉಳಿಸಿಕೊಳ್ಳಲು ಪಿತ್ರಾರ್ಜಿತ ತೆರಿಗೆ ಕಾನೂನು ರದ್ದುಗೊಳಿಸಿದ ರಾಜೀವ ಗಾಂಧಿ : ಪ್ರಧಾನಿ ಮೋದಿ ಆರೋಪ

ಮೊರೆನಾ : ಇಂದಿರಾ ಗಾಂಧಿ ಅವರ ಹತ್ಯೆ ಬಳಿಕ ಅವರಿಗೆ ಸೇರಿದ ಆಸ್ತಿಗಳು ಹಾಗೂ ಕುಟುಂಬದ ಸ್ವತ್ತುಗಳು ಸರ್ಕಾರದ ವಶ ಆಗುವುದನ್ನು ತಪ್ಪಿಸಿ ಆಸ್ತಿ ಉಳಿಸಿಕೊಳ್ಳುವ ಸಲುವಾಗಿ ಮಾಜಿ ಪ್ರಧಾನಿ ದಿವಂಗತ ರಾಜೀವ ಗಾಂಧಿ ಅವರು ಪಿತ್ರಾರ್ಜಿತ ತೆರಿಗೆ ಕಾನೂನು ರದ್ದು ಮಾಡಿದರು ಎಂದು ಪ್ರಧಾನಿ ಮೋದಿ ಆರೋಪಿಸಿದ್ದಾರೆ. ಈಗ ಕಾಂಗ್ರೆಸ್ ಮತ್ತೆ ಪಿತ್ರಾರ್ಜಿತ ತೆರಿಗೆ … Continued